ಸಂಕ್ರಾಂತಿ ಬೆೇಕಿದೆ
ಕವಿತೆ ಸಂಕ್ರಾಂತಿ ಬೆೇಕಿದೆ ಹಸಿದು ಉಸಿರು ಹಿಡಿದುಬದುಕುತ ಅಳುವಮಗುವಿಗೆ ಹಾಲುಣಿಸಲುಮಮತೆಯಸಂಕ್ರಾಂತಿ ಬೇಕಿದೆ ಧಾನ್ಯ ಭೊಗಸೆಯಲಿಟ್ಟುಬತ್ತಿದ ಹೊಟ್ಟೆಬಡಬಾಗ್ನಿಯಲಿಬೇಯುವ ಮನುಜಗೆಮಾನವೀಯತೆಯಸಂಕ್ರಾಂತಿ ಬೇಕಿದೆ ಅಕಾಲ ವೃಷ್ಟಿಗೆಎದೆಒಡ್ಡಿ ಕಾಳುಹೆಕ್ಕಲು ಕಣ್ಣೀರಿಕ್ಕುವನೇತ್ರ ಇಂಗಿದಮನುಕುಲಕೆಬೇಕಿದೆ ಸಂಕ್ರಾಂತಿಸಂಕ್ರಾಂತಿ ಬೇಕಿದೆ ನೆಲಕಚ್ಚಿದ ನೆಗಿಲಉಸಿರು ಹಸಿರಾಗಿಸಿಗುಡಿಸಲುಗಳುಗುಡಿಯನುವಹೃದಯತೆಯ ಸಂಕ್ರಾಂತಿಸಂಕ್ರಾಂತಿ ಬೇಕಿದೆ ಖಾದಿ ಖಾಕಿ ಕಾವಿಯತೊಟ್ಟುಕಪಟತೆಯ ಕೈಯಲ್ಲಿಚೀಲ ತುಂಬುವಭಕ್ಷಕರ ಆತ್ಮಸಾಕ್ಷಿಗೆಸಂಕ್ರಾಂತಿ ಬೇಕಿದೆ ಬಾಳುನೀಡುವಭಾಗ್ಯದಾತೆಯಬರಿಮೈಯಾಗಿಸಿರಕ್ತ ಹೀರುವರಾಕ್ಷಸರ ಸಂಹಾರಕ್ಕೆಸಂಕ್ರಾಂತಿ ಬೇಕಿದೆ ಅಪರಿಮಿತ ಬುದ್ಧಿ ಶಕ್ತಿಯಅಡವಿಟ್ಟು ಆಮಿಷಕೆಅಣು ರೇಣು ತೃಣ ಕಾಷ್ಟಗಳುಕ್ಷಣ ಮಾತ್ರದಲಿಭಸ್ಮವೀಯುವಕ್ರೊರತೆಗೆಸಂಕ್ರಾಂತಿ ಬೇಕಿದೆ ಮನದ ವ್ಯಾಪಾರಕೆಮನುಜ ಕುಲವಿಕ್ರಯಿಸುವಅಮಾನುಶತೆಗೆಬೇಕಿದೆ ಸಂಕ್ರಾಂತಿಸಂಕ್ರಾಂತಿ ಬೇಕಿದೆ ಬದುಕ ಬೇರೆನಿಪನೆಲ ಜಲಮರ ಗಿಡ ಪಶು ಪಕ್ಷಿಗಳಕೊಗಿಗೆ ದನಿ ಎನಿಪ ಸಂಕ್ರಾಂತಿಸಂಕ್ರಾಂತಿ ಬೇಕಿದೆ ಮನುಜಕುಲಕೆ ಬೇಕಿದೆಪ್ರೀತಿ ವಾತ್ಸಲ್ಯಮಾನವೀಯತೆಯಸಂಕ್ರಾಂತಿಸಂಕ್ರಾಂತಿ ಬೇಕಿದೆ ********************************************* ಶಾಂತಲಾ ಮಧು









