ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಬರೆಯಬೇಕಾದ ಹಾಡು…

ಇತಿಹಾಸದ ಯಾವ‌ ಕಾಲ ಘಟ್ಟಕ್ಕೂ
ಆದರ್ಶಗಳಾಗದ
ನಮ್ಮ ನಮ್ಮವರ ಕಥೆಗಳ‌ ಹಿಡಿದು‌
ಕಟ್ಟಬೇಕಿದೆ ಗೆಳೆಯ
ನಮ್ಮ ಒಡಲ ಕುಡಿಗಳಿಗಾದರೂ
ದಾರಿಯಾಗಲೆಂದು

ಬರೆಯಬೇಕಾದ ಹಾಡು… Read Post »

ಕಾವ್ಯಯಾನ

ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ ?

ನೂರಾರು ಕನಸುಗಳನ್ನು ನುಚ್ಚಿನ ಗಡಿಗೆಗೆ ಹಾಕಿ
ಹುಟ್ಟು ತಿರುಗಿಸುವ ಹರೆಯದ ಮಗಳು
ಜೀತಕ್ಕಿದ್ದ ಚೊಚ್ಚಲ ಮಗನನ್ನು ಕಂಡು
ಅಮ್ಮ ಬಿಕ್ಕಳಿಸಲಿಲ್ಲ

ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ ? Read Post »

ಕಾವ್ಯಯಾನ

ಮಾತು ಮತ್ತು ಹೂ

ಕವಿತೆ ಮಾತು ಮತ್ತು ಹೂ ಸಿದ್ಧರಾಮ ಕೂಡ್ಲಿಗಿ ಅವರಿವರು ಆಡಿದ ಮಾತುಗಳನೀಗ ಹೆಕ್ಕುವುದೇ ಒಂದು ಕೆಲಸವಾಗಿದೆ – ಕೆಲವು- ತರಗೆಲೆಗಳಂತೆ ಕಣ್ಣೆದುರೇ ತೂರಿಹೋಗುತ್ತವೆ – ಕೆಲವು- ನೆಲದಾಳದ ಎದೆಯಲಿ ಭದ್ರವಾಗಿ ಕೂತು ಚಿಂತಿಸಿ, ಮೊಳಕೆಯೊಡೆದು ಗಿಡವಾಗುತ್ತವೆ ಕೆಲವು ಹೂವರಳಿಸುತ್ತವೆ ಕೆಲವು ಮುಳ್ಳುಗಳಾಗುತ್ತವೆ – ಕೆಲವಂತೂ- ಹೆಮ್ಮರಗಳಾಗಿ ಬೀಳಲು ಬಿಟ್ಟುಬಿಡುತ್ತವೆ – ಕೆಲವು- ಮಾತುಗಳನ್ನು ಕನ್ನಡಿಯ ಮುಂದೂ ಆಡಿದ್ದೇನೆ ಅದು ಮುಗುಳ್ನಕ್ಕು ಸುಮ್ಮನೆ ನುಂಗಿ ಗೋಡೆಗೆ ಆನಿಕೊಂಡಿದೆ – ಅವರಿವರ ಎದೆಗಳ ಹುದುಲಿನಲ್ಲಿ ಸಿಕ್ಕಿಹಾಕಿಕೊಂಡ ಮಾತುಗಳನ್ನೂ ನಾನೀಗ ಕಿತ್ತು ತೆಗೆಯಬೇಕಿದೆ ಸ್ವಚ್ಛಗೊಳಿಸಿ ತೋರಬೇಕಿದೆ ಹುದುಲು ಪದಗಳದಲ್ಲ ನಿಮ್ಮದೆಂದು – ಕಿಟಕಿಯಾಚೆ ಇರುವ ಹೂ ತಣ್ಣಗೆ ನಗುತಿದೆ ಮಾತುಗಳ ಗೊಡವೆ ನಿನಗೇಕೆ ಬಾ ! ಸುಮ್ಮನೆ ನನ್ನೊಂದಿಗೆ ಮೌನವಾಗಿ ಅರಳು ಎಂದು ***********************************************

ಮಾತು ಮತ್ತು ಹೂ Read Post »

ಕಾವ್ಯಯಾನ

ನಾನೊಂದು… ದ್ವಂದ್ವ.!?

ಅಮೃತ ಅರ್ಪಿಸಿದಾಕ್ಷಣವೇ
ವಿಷ ಕಕ್ಕಬಲ್ಲ ಕಾರ್ಕೂಟಕನೂ ನಾ..!
ಕಾರಣ ನಾ ದ್ವಂದ್ವ.!!
ಹಾಗಾಗಿ ಎಚ್ಚರದಿಂದ ಇರು ನೀ
ನನಗೆ ಅಪರಿಮಿತ ಮುಖವಾಡಗಳಿವೆ!!!

ನಾನೊಂದು… ದ್ವಂದ್ವ.!? Read Post »

You cannot copy content of this page

Scroll to Top