ಗಜಲ್
ಗಜಲ್ ಪ್ರಭಾವತಿ ಎಸ್ ದೇಸಾಯಿ ಮಾದಕ ಕಣ್ಣ ನೋಟ ಕಂಡು ಚಂದಿರ ಜೋಲಿ ಹೊಡೆಯುತಿದೆಈ ಸೆರಗಿನ ಚೆಲ್ಲಾಟ ನೋಡಿ ಮೋಡವು ತೇಲಾಡುತಿದೆ ಅವಳ ದೇಹ ಮಾಟ ಅರಿತು ಶಿಲ್ಪಿ ಶಿಲೆಯಲಿ ಕಲೆ ಅರಳಿಸಿದಮೈ ತುಂಬಿದ ಮದದ ರಂಗಿಗೆ ಮದರಂಗಿ ಕೆಂಪು ನಾಚಿತಿದೆ ಒಂದಾಗಿ ಬೆಸೆದ ಮಧುರ ಗಳಿಗೆಯು ಜೊತೆಯಾಗಿದೆ ಸದಾವಿಧಿಯ ಆಟ ಬಲ್ಲವರಾರು ಅಳಿಯದ ನೆನಪು ಕಾಡುತಿದೆ ಹರೆಯದ ವಯಸ್ಸು ಅವಳ ಪಡೆಯುವ ಕನಸು ಕಾಣುತ ಕಳೆದೆಆ ಯೌವನದ ದಿನಗಳನ್ನು ಮುಸ್ಸಂಜೆ ಮೆಲುಕು ಹಾಕುತಿದೆ “ಪ್ರಭೆ”ಯನು ಮರೆಯದ ಹೃದಯ ದಹಿಸುತಿದೆ ವಿರಹ ಜ್ವಾಲೆಯಲಿಮನ ಚಕೋರವಾಗಿ ಬೆಳದಿಂಗಳ ಹನಿ ಕುಡಿಯ ಬಯಸುತಿದೆ ******************************









