ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಆಕಾಶಯಾನವೂ ಆಧ್ಯಾತ್ಮಿಕ ಚಿಂತನೆಯೂ

ಲೇಖನ ಚಂದಕಚರ್ಲ ರಮೇಶ ಬಾಬು ತಲೆಬರಹ ನೋಡಿಯೇ ಇದೇನಪ್ಪ ಇವನು ಯಾವುದನ್ನ ಯಾವುದಕ್ಕೋ ಜೋಡಿಸ ತೊಡಗಿದ್ದಾನೆ ಎನ್ನುತ್ತೀರಾ ! ಕರ್ಮಸಿದ್ಧಾಂತಕ್ಕೂ ನಾವು ಕೈಗೊಳ್ಳುವ ವಿಮಾನಯಾನಕ್ಕೂ ಎಲ್ಲಿಯ ಸಾಪತ್ಯ ವೆನ್ನುತ್ತೀರಾ !. ಏನೋ ಹೇಳಲು ಹೋಗಿ ಏನೋ ಹೇಳ್ತಿದೀನಿ ಅಂತ ಅನ್ನಿಸ್ತಿದೆಯಾ ? ಅದೇನೂ ಅಲ್ಲ. ನಾನು ನಿಮಗೆ ಅನುಭವಗಳ ದೃಷ್ಟಾಂತಗಳನ್ನು ಕೊಡುತ್ತಾ ಹೋದಾಗ ನೀವೇ ಒಪ್ತೀರಾ ! ಆದ್ರೆ ಒಂದು. ಇದು ಹೊಂದೋದು ವಿದೇಶೀ ವಿಮಾನಯಾನಕ್ಕೆ ಮಾತ್ರ.  ಈಗ ನಾವು ಇದರ ಚರ್ಚೆಗೆ ಬರೋಣ. ನೀವು ನಮ್ಮ ದೇಶದ ಯಾವುದೋ ವಿಮಾನ ನಿಲ್ದಾಣದಿಂದ ವಿದೇಶೀಯಾನಕ್ಕೆ ತಯಾರಾಗಿದ್ದೀರಿ. ನಿಮ್ಮನ್ನ ಬೀಳ್ಕೊಡಲು ನಿಮ್ಮವರೆಲ್ಲಾ ಬಂದಿದ್ದಾರೆ. ನಿಮ್ಮನ್ನ ಅಪ್ಪಿಕೊಂಡು ಕನ್ನಡದಲ್ಲೋ ಇಂಗ್ಲೀಷಿನಲ್ಲೋ ಶುಭಯಾತ್ರೆ ಹೇಳುತ್ತಾರೆ. ನೀವು ಒಳಗಡೆಗೆ ಸಾಗುತ್ತೀರಿ ಕೈಬೀಸುತ್ತಾ. ಅವರು ಅಲ್ಲೇನಿಲ್ಲುತ್ತಾರೆ. ಕ್ರಮೇಣ ಅವರು ಕಣ್ಮರೆಯಾಗುತ್ತಾರೆ. ಅಲ್ಲಿಂದ ಮೊದಲಾಗುತ್ತದೆ ನಿಮ್ಮ ಕರ್ಮಕಾಂಡ. ಇಲ್ಲಿಂದ ಹಿಡಿದು ನೀವು ಅದ್ಯಾವುದೋ ದೇಶದ ವಿಮಾನ ನಿಲ್ದಾಣದಲ್ಲಿ ಇಳಿದು ಹೊರಬರುವ ವರೆಗೂ ನಿಮಗಾಗುವ ಅನುಭವ ನಿಮಗೊಂದು ಹೊಸ ಜನ್ಮ ತಾಳಿ ಬಂದಂತೆ ಎಂದು ನನ್ನ ಅನಿಸಿಕೆ. ಈ ಪ್ರಯಾಣದಲ್ಲಿ ನಿಮಗೆ ಸಿಗುವ ಅನುಭವಗಳು ನೀವು ಮಾಡಿದ ಪಾಪ ಪುಣ್ಯಗಳ ಮೇಲೆ ಅಂದರೇ ಕರ್ಮ ಸಿದ್ಧಾಂತದ ಮೇಲೆ ಅವಲಂಬಿಸಿರುತ್ತವೆ ಎಂದು ನನ್ನ ಭಾವನೆ. ಮುಂಚೆ ನಾವೆಲ್ಲಾ ವಿಮಾನಯಾತ್ರೆ ಮಾಡುತ್ತೇವೆಂದು ಎಣಿಸಿದವರಲ್ಲ. ನಮ್ಮ ಚಿಕ್ಕಂದಿನ ದಿನಗಳಲ್ಲಿ ( ನಾನೀಗ ೬೬ ವರ್ಷದವ ) ಮೇಲೆ ಹಾರುತ್ತಿದ್ದ ವಿಮಾನವನ್ನು ತಲೆ ಎತ್ತಿ  ನೋಡುತ್ತಾ ಕೈ ಬೀಸುವುದೊಂದೇ ನಮಗೆ ಗೊತ್ತಿತ್ತು. ನಾವು ಬೀಸುವ ಆ ಕೈ ಅಲ್ಲಿಯವರಿಗೆ ಕಾಣುವುದಿಲ್ಲ ಅಂತ ಸಹ ನಮಗೆ ಆಗ ತಿಳಿದಿರಲಿಲ್ಲ. ಕೆಲಸಕ್ಕೆ ಸೇರಿ ಪದವಿಗಳಲ್ಲಿ ಮೇಲೇರಿ ಒಂದು ಹಂತ ತಲುಪಿದಾಗ ಕಚೇರಿಯ ವತಿಯಿಂದ ವಿಮಾನಯಾನದ ಸವಲತ್ತು ದೊರೆಯಿತು. ಎಷ್ಟೋ ಸರ್ತಿ ನಾನಿರುವ ಹೈದರಾಬಾದಿನಿಂದ  ಬೆಂಗಳೂರು, ಚೆನ್ನೈ, ಮುಂಬೈ, ಕಲಕತ್ತಾ, ಭುವನೇಶ್ವರ್, ದಿಲ್ಲಿ ಮುಂತಾದ ಊರುಗಳಿಗೆ ವಿಮಾನಗಳಲ್ಲಿ ಹೋದದ್ದು ಇದೆ. ಅಲ್ಲೂ ಸಹ ಮೊದಲ ಸಲ ಪ್ರಯಾಣ ಮಾಡುವಾಗ ಕೆಲ ಅನುಭವಗಳಾಗಿದ್ದರೂ ಅವ್ಯಾವೂ ಮೆಲಕು ಹಾಕುವಂಥವುಗಳಾಗಿರಲಿಲ್ಲ. ಮತ್ತೂ ಈ ಥರದ ವೇದಂತ ಧೋರಣಿಯನ್ನು ಅವಲಂಬಿಸುವಷ್ಟು ತೀಕ್ಷ್ಣವಾಗಿರಲಿಲ್ಲ. ನನ್ನ ಮಗಳ ಮದುವೆ ಅಮೆರಿಕಾ ಹುಡುಗನೊಂದಿಗೆ ಆದಾಗ ಮಾತ್ರ ನಮ್ಮ ಅಮೆರಿಕಾ ಪ್ರವಾಸ ಕರಾರು ಆದಂತಿತ್ತು.  ಹೊರಡಬೇಕೆಂದು ನಿರ್ಧಾರವಾದಾಗ ವೀಸಾ ಅನುಮತಿ ಪಡೆಯಲು ಮಾಡಬೇಕಾದ ಪದ್ಧತಿಗಳ ಬಗ್ಗೆ ನನ್ನ ಮಗಳು ಮತ್ತು ಅಳಿಯ ತುಂಬಾ ಶ್ರದ್ಧೆ ವಹಿಸಿ ಅದಕ್ಕೆ ಬೇಕಾದ ಕ್ರಮದ ಬಗ್ಗೆ ನಮಗೆ ತಿಳಿಸಿ ಹೇಳಿದರು.  ನಮಗೆ ಆ ಪ್ರಶ್ನೋತ್ತರದ ತರಬೇತಿ ನೋಡಿಯೇ ಒಂಥರಾ ಕಳವಳ ಪ್ರಾರಂಭವಾಗಿತ್ತು. ಒಳ್ಳೆ ಪರೀಕ್ಷೆಗೆ ತಯಾರಿ ನಡೆಸಿದ ಹಾಗೆ ನಡೆದಿತ್ತು. ನಡುವಿನಲ್ಲಿ ನನ್ನ ಮಗಳ ಅಣಕು ಸಂದರ್ಶನ ಸಹ ನಡೆದಿತ್ತು.   ವೀಸಾ ಕಚೇರಿಯಲ್ಲಿ ನಡೆದ ಸಂದರ್ಶನದಲ್ಲಿ ಅಲ್ಲಲಿ ಸ್ವಲ್ಪ ತಡವರಿಸಿದರೂ ಮೊದಲನೇ ಸಂದರ್ಶನದಲ್ಲೇ ವೀಸಾ  ಪಡೆಯಲು ಯಶಸ್ವಿಯಾದೆವು. ಅಲ್ಲಿಂದ ಪ್ರಾರಂಭವಾಯಿತು ನಮ್ಮ ಪ್ರಯಾಣದ ಸಿದ್ದತೆ. ನಾವು ಕೊಂಡೊಯ್ಯಬೇಕಾದ ನಾಲ್ಕು ಪೆಟ್ಟಿಗೆಗಳ ಸರಿಯಾದ ಅಳತೆ, ಅವುಗಳ ಒಂದೊಂದರ ಭಾರ, ತೆಗೆದುಕೊಂಡು ಹೋಗಬೇಕಾದ ವಸ್ತುಗಳ ಪಟ್ಟಿ, ಮತ್ತೆ ಅಮೆರಿಕಾಗೆ ತರಬಾರದ ವಸ್ತುಗಳ ಬಗ್ಗೆ ನಮಗೆ ತಿಳಿಹೇಳುತ್ತಾ ಮಗಳು ಅಳಿಯ ನಮಗೆ  ಮನದಟ್ಟು ಮಾಡಿಸಿದರು. ನಾವು ಸಹ ಅಂತರ್ಜಾಲದಲ್ಲಿ ಹುಡುಕಿ, ನಿಷಿದ್ಧವಾದ ವಸ್ತುಗಳನ್ನ ಬಿಟ್ಟು ಉಳಿದದ್ದನ್ನೇ ಕಟ್ಟಿಕೊಂಡೆವು, ಅಥವಾ ಹಾಗೆ ಅಂದುಕೊಂಡೆವು. ಎರಡೆರಡು ಸರ್ತಿ ಸರಿ ನೋಡಿಕೊಂಡು ಸಿದ್ದರಾದೆವು. ಅವರ ಮಾರ್ಗದರ್ಶನದಲ್ಲಿ ಏನೂ ಸಮಸ್ಯೆ ಬರಲಿಕ್ಕಿಲ್ಲ ಎಂದು ಮುಂದುವರೆಸಿದೆವು. ನಾವು ಹೈದರಾಬಾದಿನಿಂದ ಹೊರಟು ದುಬೈನಲ್ಲಿ ವಿಮಾನ ಬದಲಿಸಬೇಕಿತ್ತು.  ಹೈದರಾಬಾದ್ ನಲ್ಲಿ ಮತ್ತೆ ದುಬೈನಲ್ಲಿ ಯಾವುದೇ ತರದ ಅಡಚಣೆಯಾಗಲಿಲ್ಲ. ದುಬೈನಲ್ಲಿ ನಮ್ಮ ಗೇಟ್ ಹುಡುಕಲು ತುಂಬಾ ತಡವಾಗಿ ಏನೂ ತಿನ್ನದೇ ವಿಮಾನದೊಳಗೆ ಹಸಗೊಂಡು ಕೂತು ಅವರು ಯಾವಾಗ ತಿನ್ನಲು ಕೊಡುತ್ತಾರೋ ಎಂದು ಕಾದದ್ದು ಬಿಟ್ಟರೇ ಮತ್ಯಾವ ತೊಂದರೆಯೂ ಆಗಿರಲಿಲ್ಲ. ಸಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿದು  ಅಲ್ಲಿಯ ವಲಸೆ ಬರುವವರನ್ನು ಪ್ರಶ್ನಿಸುವ ಕಿಡಿಕಿಯಲ್ಲಿ ಮತ್ತೆ ಸ್ವಲ್ಪ ತಡವರಸಿ ಉತ್ತರಕೊಟ್ಟು ಕಿಡಿಕಿಯ ಹಿಂದಿನ ಅಧಿಕಾರಿಯ ಕೊಂಕು ನಗೆಯನ್ನು ಸಹಿಸಿ  ನಮ್ಮ ನಾಲ್ಕು ಪೆಟ್ಟಿಗೆಗಳನ್ನ ಟ್ರಾಲಿ ಮೇಲೆ ಕಷ್ಟಪಟ್ಟು ಸೇರಿಸಿ ಅವರು ಹೋಗು ಎಂದ ಕಡೆಗೆ  ಹೊರಟೆವು. ಎಲ್ಲವೂ ಸಲೀಸಾಗಿ ಸಾಗುತ್ತಿದೆ ಎನಿಸಿತ್ತು. ಅದು ಬರೀ ಭ್ರಮೆ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ನಮ್ಮ ಪೆಟ್ಟಿಗೆಗಳು ಕ್ಷಕಿರಣದ ಪರೀಕ್ಷೆಗೆ ಒಳಪಡಬೇಕೆಂದು ಬರೆಯಲಾಗಿತ್ತು. ಮೊದಲನೆ ಸಲ ಅಮೆರಿಕಾಗೆ ಬಂದ ನಮ್ಮಂತ ಹಿರಿಯರ ಪೆಟ್ಟಿಗೆಗಳು ಕಡ್ಡಾಯವಾಗಿ ತಪಾಸನೆಗೊಳಗಾಗುತ್ತವೆ ಅಂತ ನಂತರ ನನ್ನ ಮಗಳು ಹೇಳಿದಳು. ಅಮೆರಿಕದವರಿಗೆ ಭಾರತೀಯರ ಕೌಟುಂಬಿಕ ಒಲವಿನ ಬಗ್ಗೆ ತುಂಬಾ ಗುಮಾನಿಯಂತೆ. ಅದರಲ್ಲೂ ಇಲ್ಲಿಯ ತಿಂಡಿಗಳನ್ನು ತಮ್ಮ ಮಕ್ಕಳ ಸಲುವಾಗಿ ತಂದೇ ತರುತ್ತಾರೆ ಅಂತ ಅವರಿಗೆ ಖಾತರಿಯಂತೆ. ಹಾಗಾಗಿ ತಪಾಸನಾ ಮಶೀನಿಗೆ ಪೆಟ್ಟಿಗೆಗಳನ್ನ ಕಷ್ಟದಿಂದ ಟ್ರಾಲಿಯಿಂದ ಹಾಕಿ ಈಚೆ ಬಂದು ನಿಂತೆವು. ಒಂದೊದೇ ಪೆಟ್ಟಿಗೆಯನ್ನ  ತೆಗೆಯಲು ಹೇಳಿ ಅವುಗಳಳೊಗಿನ ಪದಾರ್ಥಗಳನ್ನು ತಪಾಶಿಸುತ್ತಿದ್ದರು. ನಾವು ಇಲ್ಲಿಂದ ಹೊತ್ತ ಚಟ್ನಿಪುಡಿ, ಉಪ್ಪಿನಕಾಯಿ, ಹಪ್ಪಳ, ಸಿಹಿತಿಂಡಿ ಇವುಗಳೆಲ್ಲಾ ಅವರ ಪರೀಕ್ಷೆಗೆ ಒಳಗಾದವು. ನಮಗೆ ನಮ್ಮ ಮೇಲೆ ಭರವಸೆ. ಅಂಥದ್ದೇನೂ ತಂದಿಲ್ಲವಾದ್ದರಿಂದ ಬೇಗ ಮುಗಿಯಬಹುದೆಂದು. ಕೊನೆಯಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಹಿಡಿದು ಬೆಕ್ಕಿನ ಮರಿಯನ್ನು ಎತ್ತುವ ಹಾಗೆ ಎತ್ತಿ, ನಮಗೆ ತೋರಿಸುತ್ತಾ “ಇದೇನಿದು “ ಎಂದರು ಇಂಗ್ಲೀಷ್ ನಲ್ಲಿ. ಅವರ ಮುಖಚರ್ಯೆ ನೋಡಿದರೇ ನಮ್ಮ ಭಾರತದವರೇ ಎನಿಸಿತು. ನಮ್ಮವರೇ ಆದಕಾರಣ ಅವರನ್ನು ಸಮಜಾಯಿಸಬಹುದು ಎಂದುಕೊಳ್ಳುತ್ತಾ “ ಇದು ಬದರೀನಾರಾಯಣನ ಪ್ರಸಾದ ಮೇಡಮ್ “ ಎಂದೆವು. ಅವರು ಇನ್ನೇನು ನಮ್ಮ ಈ ಸಮಜಾಯಿಷಿಗೆ ಒಪ್ಪೇ ಬಿಡುತ್ತಾರೆ ಎನ್ನುವ ಭರವಸೆ ನಮ್ಮದು. ಆದರೇ ಹಾಗೆ ಆಗಲಿಲ್ಲ. ಅವರು ತಮ್ಮ ಮುಖಭಾವವನ್ನ ಒಂಚೂರೂ ಬದಲಿಸದೇ “ ಸೋ ಆದರೇನಂತೆ . ಇದರಲ್ಲಿರುವುದು ಅಕ್ಕಿ ಮತ್ತು ಕಡಲೇಬೇಳೆ ತಾನೇ ? ಇದು ಅಮೆರಿಕಾಕ್ಕೆ ತರಬಾರದು ಅಂತ ನಿಮಗೆ ಗೊತ್ತಿಲ್ವಾ ?  ಹೀಗೆ ತಂದವರಿಗೆ ಮುನ್ನೂರು ಡಾಲರ್ ಜುರ್ಮಾನೆ ಬೀಳುತ್ತೆ. ಗೊತ್ತಾ ? “ ಎಂದರು. ನಾನು ಸ್ವಲ್ಪ ಅಧಿಕ ಪ್ರಸಂಗತನ ಮಾಡುತ್ತಾ “ ಮ್ಯಾಡಮ್ ! ಬೀಜಗಳು ತರಬಾರದು ಅಂತ ಬರೆದಿದ್ದಾರೆ. ಇವುಗಳು ಬೀಜ ಅಲ್ಲವಲ್ಲ. ಇವುಗಳನ್ನ ಬಿತ್ತಿದರೇ ಮೊಳಕೆ ಬರುವುದಿಲ್ಲ “ ಎಂದೆ. ಅದಕ್ಕವರು ಕೂಲಾಗಿ “ ಇಲ್ಲಿಯ ಸರಕಾರದಲ್ಲಿ ಕೆಲಸ ಮಾಡುವವರು ನೀವೋ ನಾನೋ ? ಇಲ್ಲಿಗೆ ಯಾವುದು ತರಬೇಕು ಯಾವುದು ಬೇಡ ಅಂತ ನಾನು ನಿಮ್ಮಿಂದ ತಿಳಿಯಬೇಕಿಲ್ಲ. ದಿಸೀಜ್ ನಾಟ್ ಅಲೋಡ್ “ ಎನ್ನುತ್ತಾ ಆ ಚೀಲವನ್ನ ಕಸದ ಬುಟ್ಟಿಗೆ ಹಾಕಿದರು. ನನ್ನ ಹೆಂಡತಿ “ ಅಯ್ಯೋ” ಎಂದಳು . “ಪಾಪೀ” ಎನ್ನುವ ಕೂಗು ಅವಳ ಕೊರಳಲ್ಲೇ ಹೂತುಹೋಗಿತ್ತು..  ಅವಳ ಕೈ ಅಮುಕುತ್ತಾ ಅಲ್ಲಲ್ಲಿ ಹರಡಿದ ಉಳಿದ ಸಾಮಾನನ್ನು ಮತ್ತೆ ಪೆಟ್ಟಿಗೆಗಳೊಳಗೆ ಜೋಡಿಸಿ ನಾವು ಹೊರಬಂದೆವು. ನನ್ನ ಹೆಂಡತಿಯಂತೂ  ಪ್ರಸಾದ ಕಸದ ಬುಟ್ಟಿಗೆ ಬಿದ್ದ ಶಾಕಿನಿಂದ ಹೊರಬಂದಿರಲಿಲ್ಲ. ಹೊರಗೆ ಸಿಕ್ಕ ನನ್ನ ಮಗಳು ಮತ್ತು ಅಳಿಯಂದಿರೊಡನೆ “ ನಿಮ್ಮ ಅಮೆರಿಕಾ ಏನ್ ಚೆನ್ನಾಗಿಲ್ಲ. ಅವಳ್ಯಾರೋ ನಮ್ಮದೇಶದವಳೇ ಆದ್ರೂ ಪ್ರಸಾದ ಅಂತ ಹೇಳ್ತಿದ್ರೂ ಕಸದ ಬುಟ್ಟಿಗೆ ಹಾಕಿದ್ಲು. “ ಅಂತ ಹಾರಾಡಿದ್ಲು. ಈಗ ಹೇಳಿ. ಎಲ್ಲಾ ತರ ನಾವು ತರಬೇತಿ ಪಡೆದರೂ ಸಹ ನಮಗೀ ಅನುಭವ ಬೇಕಿತ್ತೇ ? ಅದಕ್ಕೇ ನಾನು ಹೇಳಿದ್ದು. ವಿಮಾನಾಶ್ರಯದ ಒಳಗೆ ಹೊಕ್ಕಾಗಿನಿಂದ ಮತ್ತೆ ಹೊರಗೆ ಬರುವವರೆಗೆನ  ಪ್ರಯಾಣ ನಮ್ಮ ಮಾನವ ಜನ್ಮದ ತರಾ. ಮನುಷ್ಯರಾಗಿ ನಾವು ಏನೆಲ್ಲಾ ಕಷ್ಟ ಸುಖ ಅನುಭವಿಸಿರುತ್ತೇವೋ ಇಲ್ಲಿ ಸಹ ಹಾಗೇನೇ. ಏನೇನು ಅನುಭವ ಕಾದಿರುತ್ತಾವೋ ಗೊತ್ತಾಗುವುದಿಲ್ಲ. ಒಟ್ಟಾರೆ ನಮ್ಮಪುಣ್ಯ. ಅಥವಾ ಪಾಪ  ಅಂತಿಟ್ಕೊಳ್ಳಿ. ಒಂದು ಅನುಭವಕ್ಕೇ ನಾನಿಷ್ಟು ವೇದಾಂತಿಯಾಗಬೇಕಾಗಿಲ್ಲ ಅಂತ ನೀವನ್ನಬಹುದು. ಮುಂದೆ ಕೇಳಿ. ನಾವುಗಳು ಬಂದಮೇಲೆ ನಮ್ಮ ಬೀಗರು ಅಮೆರಿಕಾಕ್ಕೆ ಹೊರಟರು. ನಮ್ಮ ಅನುಭವವನ್ನೆಲ್ಲಾ ಅವರಿಗೆ ತಿಳಿಸಿ, ಅವರಿಗೆ ಟ್ರೈನಿಂಗ್ ಕೊಟ್ಟೆವು. ಅವರು ಇಂಥ ಅನುಭವಕ್ಕೆ ತಯಾರಾಗಿ ಹೋದರು. ಅವರಿಗಾದ ಅನುಭವವೇ ಬೇರೇ. ನಮಗೆ ಮೊಮ್ಮಗಳು ಹುಟ್ಟಿದ್ದರಿಂದ ಅವರು ಮಗುವಿಗೆ ಬೆಳ್ಳಿ ಗೆಜ್ಜೆ, ಕಾಲ್ಗಡಗ, ಉಡಿದಾರ, ಹಾಲುಡಿಗೆ, ಚಂದನದ ಬಟ್ಟಲು ಮೊದಲಾದವುಗಳನ್ನೆಲ್ಲಾ ಹೊತ್ತು ಸಾಗಿದ್ದರು. ನಮ್ಮ ತಪಾಸಣೆಯಲ್ಲಿ ಬಂಗಾರದ ಒಡವೆ ಮತ್ತು ಬೆಳ್ಳಿ ವಸ್ತುಗಳ ಮೇಲೆ ಅವರ ನಿಶಿತ ದೃಷ್ಟಿ ಬಿದ್ದಿರಲಿಲ್ಲ. ಆದರೇ ನಮ್ಮ ಬೀಗರ ಅನುಭವ ಬೇರೇ ಆಗಿತ್ತು. ಅಷ್ಟು ಬೆಳ್ಳಿ ಸಾಮಾನುಗಳನ್ನ ನೋಡಿ “ ನೀವು ಇಷ್ಟು ಸಾಮಾನು ಯಾತಕ್ಕೆ ತಂದಿದೀರಾ ? ಮಾರಾಟಕ್ಕಾ ? “ ಅಂತ ಕೇಳಿದರಂತೆ. ಇವರು ಕಂಗಾಲಾಗಿ ಇಲ್ಲ ಅಂತ ಎಷ್ಟು ಹೇಳಿದರೂ ಕೇಳದೇ ಅವರು ಹೇಳಿಕೆ ಪತ್ರದಲ್ಲಿ ಬರೆದುಕೊಟ್ಟಹಾಗೆ ಅವುಗಳ ತೂಕ ಸರಿಯಾಗಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿದರಂತೆ. ಇದೆಲ್ಲಾ ಆಗಿ ಮುಗಿಯುವಾಗ ಒಂದು ಗಂಟೆ ತಡ. ಎಲ್ಲ ಸೂಟ್ ಕೇಸುಗಳು ಬಾಯಿತೆಗೆದು, ತಮ್ಮ ಮುಂದೆ. ಇಳಿಯುತ್ತಿದ್ದ ಬೆವರು. ಸುಸ್ತಾಗಿ ಹೋದೆವು ಅಂತ ನಮಗೆ ಹೇಳಿದರು. ಈಗ ಹೇಳಿ. ಯಾರ ಯಾರ ಅನುಭವ ಅವರದು. ಯಾರ ಯಾರ ಅನಾನುಕೂಲ ಅವರದು. ಅಲ್ಲವೇ ? ಜೀವನ ಸಹ ಅದೇ ರೀತಿ ಅಲ್ಲವೇ ? ಅವರವರ ಕಷ್ಟ ಸುಖ ಅವರವರು ಮಾಡಿದ ಪುಣ್ಯ ಪಾಪಗಳ ಮೇಲೆ ಆಧಾರಪಟ್ಟಿರುತ್ತೆ. ಅಂದರೇ ಅದೇ ಕರ್ಮ ಸಿದ್ಧಾಂತ. ಸರಿ. ಇವುಗಳಿಗೆ ಪುಷ್ಟಿಕೊಡುವ ಅನುಭವ ಮತ್ತೊಂದು ನನ್ನ ಮಗಳು ಹೇಳಿದ್ದು. ಅದೂ ತಿಳಿಸಿಬಿಡುತ್ತೇನೆ ನಿಮಗೆ. ಅವರ ಸ್ನೇಹಿತೆಯ ತಾಯಿ ಒಬ್ಬರೇ ಬಂದಿಳಿದರಂತೆ ಅಮೆರಿಕಾಗೆ. ಅವರ ಸಾಮಾನನ್ನು ತಪಾಸಿಸುವಾಗ ಆರು ಸುಲಿದ ತೆಂಗಿನಕಾಯಿ ಕಂಡುಬಂದವಂತೆ. ಅವುಗಳನ್ನು ಅವರು ಅಮೆರಿಕದೊಳಗೆ ಬಿಡಲೊಪ್ಪಲಿಲ್ಲವಂತೆ. ಅವರ ವಾದ ಅವುಗಳು ಕೊಳೆಯುವ ಪದಾರ್ಥಗಳು ನಾಟ್ ಅಲೋಡ್ ಎಂದು. ಇವರ ವಾದ ಒಂದೇ ಒಡೆದರೇ ಮಾತ್ರ ಅವುಗಳು ಹಾಳಾಗುತ್ತವೆ. ಅವುಗಳು ಇಡೀಯಾಗಿವೆಯಲ್ಲ. ಅವುಗಳು ಪೆರಿಷಬಲ್ ಅಲ್ಲ ಅಂತ. ಮತ್ತೆ ಅವರ ರಾಮಬಾಣ ವಾದ ಅದೇ “ನಿಮಗ್ಗೊತ್ತಾ ನನಗ್ಗೊತ್ತಾ”  ಅಂತ ಹೇಳಿ ಅವುಗಳನ್ನ ತಮ್ಮ ಪಕ್ಕದಲ್ಲಿದ್ದ ಕ.ಬು.ಗೆ ಹಾಕಿದರಂತೆ. ನಮ್ಮ ಆ ಹಿರಿಯ ಹೆಂಗಸಿನ ವಾದ ಸರಿಯೆನಿಸಿದರೂ ಅವರಿಗೆ ನ್ಯಾಯ ಸಿಕ್ಕಲಿಲ್ಲ. ಜೀವನದಲ್ಲೂ ಹಾಗೇ ಅಲ್ಲವೇ ? ನೀವು ಎಷ್ಟೇ ನಿಯತ್ತಿನಿಂದ ಇದ್ದರೂ ನಿಮಗೆ ಕಷ್ಟ ತಪ್ಪಲ್ಲ. ಆದಕಾರಣ ನಾನು ಹೇಳುವುದು ಎರಡು ವಿಮಾನಾಶ್ರಯಗಳ ನಡುವಿನ ಆ ಪ್ರಯಾಣ ಯಾವ ಜೀವನದ ಪ್ರಯಾಣಕ್ಕಿಂತ ಕಮ್ಮಿ ಏನಲ್ಲ ಅಂತ.                                                 ******************************

ಆಕಾಶಯಾನವೂ ಆಧ್ಯಾತ್ಮಿಕ ಚಿಂತನೆಯೂ Read Post »

ಇತರೆ

ಕಸಾಪಕ್ಕೆ ಮಹಿಳೆ ಅಧ್ಯಕ್ಷರಾಗಬೇಕು

12ನೇ ಶತಮಾನದಿಂದ ಇಲ್ಲಿಯವರೆಗೂ ಮಹಿಳೆಯರಾದ ನಾವು ಪ್ರತಿಯೊಂದು ವಿಷಯದಲ್ಲೂ ಪ್ರತಿಭಟನೆಯ ಮಾಡಿಯೇ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುತ್ತಾ ಬಂದಿದ್ದೇವೆ. ಸಮಾನತೆಯೆಂದು ಎಷ್ಟೇ ಬೊಬ್ಬೆ ಹೊಡೆದರು ಅದರ ಸಂಪೂರ್ಣ ಫಲ ದೊರೆಯುತ್ತಿಲ್ಲ .ಹಾಗಾಗಿ ಮಹಿಳೆಯರು ಒಂದು ಹೆಜ್ಜೆ ಮುಂದೆ ಇಡಬೇಕು .ಇಲ್ಲವೆಂದರೆ ನಮ್ಮನ್ನು ನಾವೇ ಅಂತರ್ಯದಲ್ಲಿ ಅಂಜಿಕೆ ಎಂಬ ಶೋಷಣೆ ಮಾಡಿಕೊಂಡಂತಾಗುತ್ತದೆ . ಡಾಕ್ಟರ್ ಗುರುರಾಜ ಕರ್ಜಗಿ ಅವರು ಹೇಳುವಂತೆ ಚಕ್ರವರ್ತಿ ಆಗಬೇಕೆಂದರೆ ಯಾವುದೇ ಅದೃಷ್ಟದ ಗೆರೆಗಳು ಬೇಕಾಗಿಲ್ಲ .ಆತ್ಮಸ್ಥೈರ್ಯವಿದ್ದರೆ ಸಾಕು . ಆ ಬಲದಿಂದಲೇ ಏನನ್ನು ನಾವು ಗೆಲ್ಲಬಹುದು. ಸಾಮಾಜಿಕವಾಗಿ ,ರಾಜಕೀಯವಾಗಿ ,ಆರ್ಥಿಕವಾಗಿ, ಕೌಟುಂಬಿಕವಾಗಿ ಮಹಿಳೆಯು ಒಂದಲ್ಲ ಒಂದು ರೀತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದಾಳೆ . ಸಾಧನೆ ಮಾಡಿದ ಮಹಿಳೆಯರನ್ನೆಲ್ಲ ಒಮ್ಮೆ ಹಿಂದಿರುಗಿ ನೋಡಿದರೆ ನಮಗೆ ಸಾಲು ಸಾಲುಗಳ ಪಟ್ಟಿಯೇ ಸಿಗುತ್ತದೆ. ಸಮಾಜ ಸೇವೆ ಎಂದ ತಕ್ಷಣ ನೆನಪಿಗೆ ಬರುವುದು ಮದರ ತೆರೇಸಾ . ಬಡವರ, ದಲಿತರ ,ಅನಾರೋಗ್ಯ ಮಕ್ಕಳ ಸೇವೆ ಮಾಡುತ್ತಾ ವಿಶ್ವದಲ್ಲೇ ಗುರುತಿಸಿಕೊಂಡವರು. ಹಾಗೆ ಮೊದಲ ಮಹಿಳಾ ಪ್ರಭಾವಿ ರಾಜಕಾರಣಿ ,ಪ್ರಧಾನಮಂತ್ರಿಯಾಗಿ ಹೊರಹೊಮ್ಮಿದ ಇಂದಿರಾಗಾಂಧಿಯವರು , ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯಾಗಿ ಎಲ್ಲಾ ಮಹಿಳೆಯವರಿಗೂ ಸ್ಫೂರ್ತಿದಾಯಕರಾದ ಕಿರಣ ಬೇಡಿಯವರು, ಈ ಸಂದರ್ಭದಲ್ಲಿ ನಾವು ನೆನೆಯಬಹುದು. ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮೊದಲ ಮಹಿಳಾ ಭೂ ಸೇನಾ ಅಧಿಕಾರಿ ಮೇ ಪ್ರಿಯಾ ಝಿಂಗಲ್ ,ಮಹಿಳಾ ನ್ಯಾಯಾಧೀಶರು ಫಾತಿಮಾ ಬೀವಿ ಹೀಗೆ ಮಹಿಳೆಯರ ಕೊಡುಗೆ ಅಳತೆ ಮಾಡಲು ಸಾಧ್ಯವಿಲ್ಲ. ಹಿಂದಿನ ಕಾಲ ಘಟ್ಟವನ್ನು ಪರಿಗಣಿಸಿದರೆ ಕೆಳದಿ ಚೆನ್ನಮ್ಮ ,ರಾಣಿ ಚೆನ್ನಮ್ಮ, ಲಕ್ಷ್ಮೀಬಾಯಿ ರಾಜ್ಯ ,ದೇಶವೆಂದು ಹೋರಾಟ ನಡೆಸಿದ ಛಲಗಾರ್ತಿಯರು. ಇವರೆಲ್ಲ ತಮ್ಮನ್ನು ತಾವೇ ಜನಸೇವೆಗೆ ಒಪ್ಪಿಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾದವರು . ಮಹಿಳೆಯರ ಸಾಧನೆ ಹೀಗಿರಲು ನೂರು ವರ್ಷಗಳು ಕಳೆದರೂ ಒಂದು ಮಹಿಳೆಯು ಕಸಾಪಕ್ಕೆ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಲಿಲ್ಲ ಎನ್ನುವುದೇ ವಿಪರ್ಯಾಸ . ವಚನಕಾರ್ತಿಯರು ವಚನಗಳ ಮೂಲಕ ತಮ್ಮ ಸೇವೆಯನ್ನು ಅಕ್ಷರ ಲೋಕಕ್ಕೆ ನೀಡುತ್ತಾ ಬಂದಿದ್ದಾರೆ . ಅವುರುಗಳಲ್ಲಿ ಅಕ್ಕಮ್ಮ ,ಅಕ್ಕಮಹಾದೇವಿ, ಗಂಗಮ್ಮ, ಲಕ್ಷ್ಮಮ್ಮರನ್ನು ನೋಡಬಹುದು. ಇಂದು ಗೀತಾ ನಾಗಭೂಷಣ್, ಡಾಕ್ಟರ್ ಅನುಪಮ ನಿರಂಜನ, ಎಂ.ಕೆ ಇಂದಿರಾ, ತ್ರಿವೇಣಿ , ವೈದೇಹಿ ಡಾಕ್ಟರ್ ಅನುಪಮಾ ಇವರೆಲ್ಲ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾದ್ದದು.ಏನೇ ಇರಲಿ ಯಾವುದೇ ಲಿಂಗ, ಮತ , ಜಾತಿ , ಧರ್ಮ, ಇನ್ನಿತರ ಪಂಗಡಕ್ಕೆ ಜೋತು ಬೀಳದೆ ಸಶಕ್ತವೆನಿಸಿದ ಮಹಿಳೆಯೊಬ್ಬಳು ಕಸಾಪಕ್ಕೆ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಬೇಕೆಂದು ನಾವೆಲ್ಲ ಒಂದೇ ಮನಸ್ಸಿನಿಂದ ಪಣತೊಡಬೇಕು. ************************ ಎಂ.ಜಿ.ತಿಲೋತ್ತಮೆ

ಕಸಾಪಕ್ಕೆ ಮಹಿಳೆ ಅಧ್ಯಕ್ಷರಾಗಬೇಕು Read Post »

ಇತರೆ

ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ?

ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ? ಡಾ. ಅಜಿತ್ ಹರೀಶಿ ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ? ಕಸಾಪಕ್ಕೆ ಮಹಿಳೆಯೋರ್ವರು ಅಧ್ಯಕ್ಷರಾಗಲಿ ಎಂಬುದು ಸೂಕ್ತವೇ ಆಗಿದೆ. ಆದರೆ ಕೆಲವು ಅಂಶಗಳನ್ನು ನಾನು ಇಲ್ಲಿ ಈ ಸಂದರ್ಭದಲ್ಲಿ ಚರ್ಚಿಸಲು ಬಯಸುತ್ತೇನೆ. ತುರ್ತುಪರಿಸ್ಥಿತಿಯೇ ಕೊನೆ. ಆನಂತರ ದೊಡ್ಡ ಹೋರಾಟವೇ ಇಲ್ಲದ ಜಿಡ್ಡುಗಟ್ಟಿದ ವಾತಾವರಣ ರಾಜಕೀಯ ವಲಯದಲ್ಲಿ ಸೃಷ್ಟಿಯಾಯಿತು. ಸಾಹಿತ್ಯದಲ್ಲೂ ಬಂಡಾಯ, ದಲಿತ ಹೋರಾಟಗಳ ನಂತರದ ಸ್ಥಿತಿ ನಿಂತ ನೀರೀಗ! ಯಾವುದೇ ಆಗ್ರಹವನ್ನು ಅನುಮಾನದಿಂದ ನೋಡುವ ಪ್ರವೃತ್ತಿ ಇಂದಿನ ದಿನಮಾನಗಳಲ್ಲಿದೆ. ಅದು ಇವತ್ತಿನ ಕಾಲಘಟ್ಟದಲ್ಲಿ ಸಹಜ ಕೂಡ. ಒಂದು ಕ್ಷಣ ಮೈಮರೆತರೂ ಮೋಸ ನಿಶ್ಚಿತ. ಕೆಲವರು ಹಿಡನ್ ಅಜೆಂಡಾ ಹಿಡಿದು ಬಂದು ತಮ್ಮದನ್ನು ಸಾಧಿಸಿಕೊಂಡು ಮರೆಯಾಗುವವರು. ಇದೆಲ್ಲವನ್ನು ಗಮನಿಸಿದರೆ, ಮಹಿಳಾ ಅಧ್ಯಕ್ಷೆ ಅಂತ ಹೊರಟು, ಅದು ಬಲವಾಗುತ್ತಿದ್ದಂತೆ – ಜಾತಿ, ಧರ್ಮಗಳ ಮೇಲೆ ಒಡಕನ್ನು ತೋರಲೂಬಹುದು. ಇದೊಂದು ಪ್ರಜಾಪ್ರಭುತ್ವ ವ್ಯವಸ್ಥೆ, ಇಲ್ಲಿ ಚುನಾವಣೆ ಬೇಡ ಎಂದು ಹೇಳುವುದು ತಪ್ಪಾದೀತು. ಯೋಗ್ಯರು ಎಂಬ ಪ್ರಶ್ನೆ ಬಂದಾಗ ತಕ್ಕಡಿ ಅವರವರದೇ ಆದೀತು. ಹಾಗಾಗಿ ಈಗಿನ ವ್ಯವಸ್ಥೆಯಲ್ಲಿ ಇರುವ ಲೇಖಕಿಯರ ಸಂಘ ಇತ್ಯಾದಿ ಸಂಸ್ಥೆಗಳು, ಸಂಘಟನೆಗಳು ಒಂದೆಡೆ ಕುಳಿತು ಒಂದು ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಒಳಿತು. ಅದನ್ನು ಒಪ್ಪದವರಿಗೆ ಚುನಾವಣೆಯಂತೂ ಇದ್ದೇ ಇದೆ. ನಾನು ಈ ಮಾತನ್ನು ಏಕೆ ಹೇಳುತ್ತಿದ್ದೇನೆ ಎಂದರೆ ಇತ್ತೀಚೆಗೆ ಬಹಳ ಹೋರಾಟಗಳು ಹೈಜಾಕ್ ಆಗಿವೆ. ಅದು ಇಲ್ಲಿ ಆಗದಿರಲಿ. ಇಲ್ಲಿ ಮತದಾರರು ಮುಖ್ಯರಾಗುವುದರಿಂದ ಸಂಘಟನೆಯ ಶಕ್ತಿಯಿರುವ ಮಹಿಳಾ ಸಾಹಿತಿಯೋರ್ವರನ್ನು ಸರ್ವಾನುಮತದಿಂದ ಕಸಾಪದ ಬಹುತೇಕ ಮುಂಚೂಣಿಯಲ್ಲಿರುವ ಮಹಿಳೆಯರು, ಹಿರಿಯರು ಅಭ್ಯರ್ಥಿ ಎಂದು ನಿರ್ಧರಿಸಲಿ. ಒಮ್ಮೆ ಒಮ್ಮತ ಮೂಡಿದರೆ ಮುಂದಿನ ಕೆಲಸ ಸುಲಭ. ಇದು ಕೇವಲ ರಾಜಕೀಯ ಉದ್ದೇಶವನ್ನು ಹೊಂದಿದ್ದರೆ, ಕೆಲವೇ ಜನರ ಪಾಲ್ಗೊಳ್ಳುವಿಕೆ ಇದ್ರೆ ಅಭ್ಯರ್ಥಿತನಕ್ಕೆ ಮೊದಲೇ ಮಕಾಡೆ ಮಲಗುತ್ತದೆ ಎಂಬುದು ನೆನಪಿರಲಿ. ಇನ್ನು ಹಿಂದೆ ಮಹಿಳಾ ಅಧ್ಯಕ್ಷರು ಇರಲಿಲ್ಲ ಎಂಬುದರ ಕುರಿತು ಹೇಳಬೇಕಾದರೆ – ಮೊದಲು ಸ್ಪಷ್ಟ ತಯಾರಿಯೊಂದಿಗೆ ಕಣಕ್ಕಿಳಿಯುವುದು ಮುಖ್ಯವಾಗುತ್ತದೆ. ಕಸಾಪದ ಮತದಾರರು ಪ್ರಬುದ್ಧರಿದ್ದಾರೆ. ಯೋಗ್ಯ ವ್ಯಕ್ತಿ ಅವಿರೋಧವಾಗಿ ಆಯ್ಕೆಯಾದರೆ ಎಲ್ಲರಿಗೂ ಖುಷಿ. ವಿವಾದಿತರು ಅಭ್ಯರ್ಥಿಯಾದರೆ ಕೆಸರೆರಚಾಟ ಮತ್ತು ಚುನಾವಣೆ ನಿಶ್ಚಿತ. ಅಂತಹ ವಾತಾವರಣ ನಿರ್ಮಾಣವಾಗದೇ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಉತ್ತಮ ಮಹಿಳಾ ಸಾಹಿತಿ ಕಸಾಪದ ಅಧ್ಯಕ್ಷ ಪಟ್ಟವನ್ನು ಅಲಂಕರಿಸಲಿ ಮತ್ತು ಅದಕ್ಕೆ ಶೋಭೆ ತರಲಿ ಎನ್ನುವುದು ಈ ಹೊತ್ತಿನ ಆಶಯ. ಡಾ. ಅಜಿತ್ ಹರೀಶಿ

ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ? Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು

ಹೆಣ್ಣು ಸಾಹಿತ್ಯ,ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತೀಕ , ಅಡುಗೆ ಮನೆ ಸೌಟು ಹಿಡಿದಿರಬಹುದಾದ ಹೆಣ್ಣು ತಾಯಿಯಾಗಿ ,ಸೋದರಿಯಾಗಿ ಪತ್ನಿಯಾಗಿ ಸಂಸಾರದ ಕಣ್ಣಾಗಿದ್ದಾಳೆ ,ಸಮಾಜದ ಎಲ್ಲ ರಂಗಗಳಲ್ಲಿ ಸಕ್ರಿಯಳಾಗಿ ಸೈ  ಎನಿಸಿಕೊಂಡಿರುವ ಆಕೆ ವೈದ್ಯಳಾಗಿ .ಯೋಧಳಾಗಿ .ಪ್ರಧಾನಿಯಾಗಿ,ರಾಷ್ಟ್ರಪತಿಯಾಗಿ ತನ್ನ ಸಾಮರ್ಥ್ಯ ಮೆರೆದಿದ್ದಾಳೆ . ಅಲ್ಲದೆ ಪುರುಷರಿಗೆ ಸಮನಾಗಿ ಎಲ್ಲ ಸ್ತರಗಳಲ್ಲಿ ಕಾರ್ಯವೆಸಗುವುದರಲ್ಲಿ ಯಶಸ್ವಿಯಾಗಿದ್ದಾಳೆ. ಸಾಹಿತ್ಯಮತ್ತು ಸಂಸ್ಕಾರಕ್ಕೆ ಅವಳ ಕೊಡುಗೆ ಅಪಾರ,  ಹೆಣ್ಣು ಸಮಾಜದ ಕಣ್ಣು .   ಆದರೆ ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಏಕೊ ಏನೋ ಆಕೆಯನ್ನು ತನ್ನ ಅಧ್ಯಕ್ಷೆಯನ್ನಾಗಿ ಸ್ವೀಕರಿಸಿಲ್ಲ.ಈ ಸಂಸ್ಥೆಯಲ್ಲಿ ಪುರುಷರದ್ದೇ ಪಾರಮ್ಯ.ಈವರೆಗೆ ಕನ್ನಡ ಸಾಹಿತ್ಯ ಪರಿಷತ್ ಗದ್ದಿಗೆ ಹಿಡಿದು ಮುನ್ನಡೆಸಿರುವ ಎಲ್ಲರೂ ಪುರುಷರೇ.    1915 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ದೂರದೃಷ್ಟಿ ಹಾಗೂ ಕನ್ನಡ ಭಾಷೆಯ ಮೇಲಿದ್ದ ಪ್ರೀತಿ.ಅಭಿಮಾನದಿಂದಾಗಿ ಪ್ರಾರಂಭಗೊಂಡ ಈ ಸಂಸ್ಥೆ ,25 ಅಧ್ಯಕ್ಷರ ಆಡಳಿತದಲ್ಲಿ ಏಳು ಬೀಳುಗಳನ್ನು ಕಾಣುತ್ತಾ ಬಂದಿದೆ .ಕ.ಸಾಪ ಅಧ್ಯಕ್ಷರಾಗಿ ಸಾಹಿತಿಗಳೇ ಮೇಲುಗೈ ಸಾಧಿಸಿದ್ದರೂ ಇತ್ತೀಚೆಗೆ ಹೊಟೆಲ್ ಉದ್ಯಮಿ.ಬ್ಯಾಂಕ್ ಉದ್ಯಮಿ ,ಹಾಗೂ ಆಡಳಿತ ಅನುಭವಿಗಳೂ ಸಾರಥ್ಯವಹಿಸಿದ್ದಾರೆ . ಪ್ರಾರಂಭದಿಂದ 2008 ರವರೆಗೆ ಸರ್ಕಾರದ  ಅನುದಾನವಿಲ್ಲದೆ ನೌಕರರಿಗೆ ಸಂಬಳಕೊಡಲೂ ಸಾಧ್ಯವಾಗದ ಕ.ಸಾ.ಪ ಸಮ್ಮೇಳನಗಳನ್ನು ಸಾರ್ವಜನಿಕರ ವಂತಿಗೆಯಿಂದ ನಡೆಸಬೇಕಾದ ಪರಿಸ್ಥಿತಿ ಇದ್ದಿತು .ಆದರೆ 2008 ರಿಂದ 2012 ರವರೆಗೆ ಕಾರ್ಯನಿರ್ವಹಿದ ಸಮಿತಿ ಆಗ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ,ಎಸ್ ಯಡಿಯೂರಪ್ಪನವರನ್ನುಸಂಪರ್ಕಿಸಿ ಬೇಡಿಕೆ ಇಟ್ಟಾಗ ಬಡ್ಜೆಟ್ ತಯಾರಿಸುವಂತೆ  ತಿಳಿಸಿದರಲ್ಲದೆ ಕನ್ನಡ ಕಟ್ಟುವುದು ನನ್ನ ಆದ್ಯ ಕರ್ತವ್ಯವೆಂದು ಅನುದಾನ ಬಿಡುಗಡೆ ಮಾಡಿದರಲ್ಲದೆ ಕ.ಸಾ.ಪದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ನೌಕರರನ್ನೂ ಖಾಯಂಗೊಳಿಸಿ ಸರ್ಕಾರಿ ನೌಕರರನ್ನಾಗಿಸಿದರು ,ಇದರಿಂದಾಗಿ ಸಮಿತಿಯ ತೀರ್ಮಾನದಂತೆ ತಾಲ್ಲೂಕು ಸಮ್ಮೇಳನಕ್ಕೆ ಒಂದು ಲಕ್ಷ .,ಎರಡು ದಿನದ ಜಿಲ್ಲಾ ಸಮ್ಮೇಳನಕ್ಕೆ ಐದು ಲಕ್ಷ ಮತ್ತು ಮೂರು ದಿವಸಗಳ ರಾಜ್ಯ ಸಮ್ಮೇಳನಕ್ಕೆ ಒಂದು ಕೋಟಿ ರೂ ಎಂದು ಅನುದಾನ ಪಡೆಯಲಾಯಿತು ಆ ಅವಧಿಯಲ್ಲಿ ನಾಲ್ಕು ರಾಜ್ಯ ಸಮ್ಮೇಳನಳು ,ಹಲವಾರು ಜಿಲ್ಲಾ ,ತಾಲ್ಲೂಕು ಸಮ್ಮೇಳನಗಳು ನಡೆದವು .ಆ ನಂತರ ಆಡಳಿತ ಗದ್ದುಗೆಗೇರಿದ ಬ್ಯಾಂಕ್ ಉದ್ಯಮಿ ಸರ್ಕಾರದ ಮನವೊಲಿಸಿ ಪ್ರತಿ ಸಮ್ಮೇಳನಕ್ಕೆ ಐದು ಕೋಟಿಗೂ ಹೆಚ್ಚು ಅನುದಾನದಿಂದ ಸಮ್ಮೇಳನ ನಡೆಸಿದರು .ನಂತರ ಆಯ್ಕೆಯಾಗಿ ಬಂದ ನಿವೃತ್ತ ಐ.ಎಎಸ್ ಅಧಿಕಾರಿ ಪ್ರತೀ ಸಮ್ಮೇಳನಕ್ಕೆ 10ಕೋಟಿಗೂ ಹೆಚ್ಚು ಹಣವನ್ನು ಪಡೆದು ಸಮ್ಮೇಳನ ನಡೆಸಿದುದು ನಮ್ಮ ಕಣ್ಣೆದುರು ಇದೆ .ಸರ್ಕಾರದ ಅನುದಾನವಲ್ಲದೆ ಸ್ಥಳೀಯ ದಾನಿಗಳು,ಸಂಘ ಸಂಸ್ಥೆಗಳು ಸರ್ಕಾರಿ ನೌಕಲರ ದೇಣಿಗೆ ಅಲ್ಲದೆ ಸ್ವಯಂಸೇವಕರ ಉಚಿತ ಸೇವೆ ಪಡೆದು ಸಮ್ಮೇಳನಗಳನ್ನು ನಡೆಸಲಾಗಿದೆ.ಕೇವಲ ಮೂರು ದಿವಸಗಳ ಸಮ್ಮೇಳನಕ್ಕೆ 15- 20 ಕೋಟಿಗಳ ದುಂದು ವೆಚ್ಚಮಾಡಲಾಗುತ್ತಿದೆ .ಈ ಬಗೆಗೆ ಪ್ರತಿಯೊಬ್ಬ ಕನ್ನಡಿಗನೂ ಯೋಚಿಸಬೇಕಾಗಿದೆ ,   ಅಧಿಕಾರ ಲಾಲಸೆ ಹಾಗೂ ಆಂತರಿಕ ಆಕಾಂಕ್ಷೆಗಳಿಂದಾಗಿ ದೀರ್ಘ ಕಾಲದಿಂದ ಬದಲಾಯಿಸದೆ ಉಳಿಸಿಕೊಂಡು ಬಂದಿದ್ದ ಮೂರು ವರ್ಷಗಳ ಅವದಿಯನ್ನು ಐದು ವರ್ಷಗಳ ಅವದಿಗೆ ವಿಸ್ತರಿಸಲಾಗಿದೆ .ಮುಂದಿನ ಚುನಾವಣೆಯ ನಂತರ ಈ ಅವಧಿ ಕಡಿಮೆ ಆಗುವ ಸಾಧ್ಯತೆ ಇದೆ.  ಕ,ಸಾ.ಪ,ಇಂದು ಒಂದೂವರೆ ಲಕ್ಷಕ್ಕೂ ಹೆಚ್ಚು ಆಜೀವ ಸದಸ್ಯರನ್ನು ಒಳಗೊಂಡಿದೆ ..ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಎಲ್ಲ ಸದಸ್ಯರನ್ನು ಖುದ್ದಾಗಿ ಭೇಟಿಯಾಗಿ ಮತ ಯಾಚನೆ ಮಾಡಲು ಸಾಧ್ಯವಾಗಲಾರದು,ಆದರೆ ಮನವಿಯನ್ನಾದರೂ ಮಾಡಿಕೊಳ್ಳಲೇ ಬೇಕು .ಮನವಿಪತ್ರ ಮುದ್ರಣ,ಅಂಚೆ ವೆಚ್ಚ ಇತ್ಯಾಧಿಗಳಿಗಾಗಿ ಕನಿಷ್ಟ ಒಂದು ಕೋಟಿ ರೂ.ಬೇಕಾಗಬಹುದು ಅಲ್ಲದೆ ಪ್ರತಿ ಜಿಲ್ಲಾ ಕೇಂದ್ರಕ್ಕಾದರೂ ಭೇಟಿ ನೀಡಿ ಮನವಿ ಮಾಡಿಕೊಳ್ಳಬೇಕು.ಹತ್ತಾರು ಕಾರುಗಳನ್ನು ಬಾಡಿಗೆ ಹಿಡಿದು ರಾಜಕಾರಿಣಿಗಳಂತೆ ಮತಯಾಚನೆಗೆ ಕಳುಹಿಸಬೇಕು.ಜಿಲ್ಲಾಧ್ಯಕ್ಷರ ಚುನಾವಣೆ ಸಹ ಏಕ ಕಾಲದಲ್ಲಿ ನಡೆಯುವುದರಿಂದ ಅವರ ಸಹಕಾರ ಅಗತ್ಯ.ಕ.ಸಾಪ ಬೈಲಾ ಪ್ರಕಾರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವನು ಪ್ಲತಿಯೊಬ್ಬ ಸದಸ್ಯನ ಓಟನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುವುದರಿಂದ ಚುನಾವಣಾ ವೆಚ್ಚ ಹೆಚ್ಚಾಗುತ್ತದೆ . ವಿಧಾನ ಸಭೆ.ಮತ್ತು ಸಂಸತ್ ಚುನಾವಣೆಗಳಂತೆಯೇ ಬಿರುಸಿನಿಂದ ನಡೆಯುವ ಚುನಾವಣೆಯಲ್ಲಿ ಸ್ತ್ರೀಯರು ಭಾಗವಹಿಸಲು ಹಿಂಜರಿಯುತ್ತಿದ್ದಾರೆ.ವಹಿಳೆಯರು ನಾಲ್ಕು ಬಾರಿ ಸಮ್ಮೇಳನಾಧ್ಯಕ್ಷರಾಗಿದ್ದಾರೆ .ಆದರೆ ಕ.ಸಾ.ಪ.ಅಧ್ಯಕ್ಷರಾಗಲು ಮುಂದೆ ಬರಲು ಸಾಧ್ಯವಾಗದಿರುವುದಕ್ಕೆ ಇವುಗಳು ಕಾರಣಗಳಾಗಿವೆ .ವಾಸ್ತವವಾಗಿ ಮಹಿಳೆಯರು ಅದ್ಯಕ್ಷರಾದರೆ ಸಾಹಿತ್ಯ ಪರಿಷತ್ತು ಮತ್ತಷ್ಟು ಸದೃಢವಾಗಬಹುದು ,ಆದರೆ ಅವರೊಟ್ಟಿಗೆ ಪ್ರಾಮಾಣಿಕವಾಗಿ ದುಡಿಯುವ ಸಾಹಿತ್ಯ ,ಸಂಸ್ಕೃತಿಯ ಅರಿವಿರುವ ಪುರುಷರ ಪ್ರವೇಶ ಅಗತ್ಯವಾಗಬಹುದು .ಇಂತಹ ಸಹಕಾರಿ ಸಂಸ್ಥೆಗಳಲ್ಲಿ ಪ್ರಾಮಾಣಿಕತೆ .ಧೈರ್ಯ.ಸ್ಥೈರ್ಯಗಳೊಂದಿಗೆ  ಗುರಿಯೂ ಇರಬೇಕಾಗುತ್ತದೆ . ಬದಲಾವಣೆಯನ್ನು ಬಯಸುವ ಸಾವಿರಾರು ಸಾಹಿತ್ಯಾಸಕ್ತರು ಸಾಹಿತ್ತಾಭಿಮಾನಿಗಳೂ ಆಜೀವ ಸದಸ್ಯರಿರುವುದರಿಂದ ಮಹಿಳೆಯರು ಸಂಘಟಿತರಾಗಿ  ಆಸಕ್ತಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸು ಮಾಡಬೇಕಾಗಿದೆ . *************************** ಹೆಚ್,ಚಂದ್ರಪ್ಪ

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು Read Post »

ಇತರೆ

ಮಹಿಳಾ ಅಧ್ಯಕ್ಷರು ಯಾಕಿಲ್ಲ… !

ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ 1915 ರಲ್ಲಿ ಸ್ಥಾಪನೆಯಾದ ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಆಗಿನ ಮೈಸೂರಿನ ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಚಲನೆಗೊಂಡಿತು. ನಂತರ 1938 ರಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು’ ಎಂದು ಬದಲಾಯಿತು. ಉದ್ದೇಶ : ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು -ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಇದು ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುವುದರ ಮೂಲಕ ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹರಡಲು ಸಾಧ್ಯವಾಗಿದೆ. ಇದರ ಮೂಲ ಆಶಯ ಕನ್ನಡ ಸಂಸ್ಕೃತಿಯನ್ನು ಪೋಷಿಸುವ, ಬೆಳೆಸುವ ದನಿಯಾಗುವ ಹಂಬಲ. ನಂತರದಲ್ಲಿ ಈ ಆಶಯವನ್ಹೊತ್ತು ರೂಪುಗೊಂಡ ಸಂಸ್ಥೆಗಳು ಸಂಸ್ಕೃತಿ ಇಲಾಖೆ, ಪ್ರಾಧಿಕಾರಗಳು, ವಿಶ್ವವಿದ್ಯಾಲಯದ ಕನ್ನಡ ವಿಭಾಗಗಳು, ಕನ್ನಡ ವಿಶ್ವವಿದ್ಯಾಲಯ… ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳು ಇಂದಿಗೂ ಪ್ರಸ್ತುತ. ಇಂತಹ ಮಹೋನ್ನತ ಗುರಿಯನ್ನಿಟ್ಟುಕೊಂಡು ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಈಗ ನೂರು ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ವಿಷಯವೇ ಸರಿ. ಇದರೊಂದಿಗೆ ಈ ನೂರು ವರ್ಷಗಳ ಇತಿಹಾಸದಲ್ಲೇ ಒಮ್ಮೆಯೂ ಮಹಿಳೆಯೊಬ್ಬಳು ಕ. ಸಾ. ಪ. ದ ಅಧ್ಯಕ್ಷರಾಗಿಲ್ಲವೆಂಬುದು ಕೂಡ ಅಷ್ಟೇ ವಿಷಾದನೀಯ ಸಂಗತಿಯೂ ಹೌದು. ಪ್ರತಿಭೆ, ಸೇವೆಗಳ ವಿಷಯದಲ್ಲಿ ಗಂಡು- ಹೆಣ್ಣುಎಂಬ ಭೇದವಿರದು. ಹೆಣ್ಣೊಬ್ಬಳು ನಾಲ್ಕು ಗೋಡೆಯೊಳಗಿನಿಂದ ಹಿಡಿದು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಹೆಜ್ಜೆಗುರುತನ್ನು ಮೂಡಿಸಲು ಮುಂದಾಗಿರುವ ಈ ಯುಗದಲ್ಲಿ ನಮ್ಮ ನಾಡು -ನುಡಿ -ಸಂಸ್ಕೃತಿಯ ದಣಿಯಾಗಲೆಂದೇ ಸ್ಥಾಪಿತವಾಗಿರುವ ಕ. ಸಾ. ಪ. ದ ಅಧ್ಯಕ್ಷ ಸ್ಥಾನಕ್ಕೆ ಇನ್ನೂ ಯಾಕೆ ಓರ್ವ ಮಹಿಳಾ ಅಭ್ಯರ್ಥಿಯೂ ಅಧ್ಯಕ್ಷರಾಗಿಲ್ಲ ಎಂಬುದು ಈಗ ಅವಶ್ಯವಾಗಿ ತರ್ಕಿಸಲೇಬೇಕಾದ ವಿಷಯ. ಹಲವು ಆಯಾಮಗಳಲ್ಲಿ ಕಾರಣಗಳನ್ನು ಹುಡುಕುತ್ತಾ ಹೊರಟರೆ ಕೆಲವು ನಮ್ಮ ಕಣ್ಣಿಗೆ ಗೋಚರಿಸಬಹುದು.. ಆದರೆ ಗೋಚರವಾಗದೆ ಉಳಿದಿರುವ, ಉಳಿಯುವ ಕಾರಣಗಳೂ ಹಲವು ಸಿಗಬಹುದು. ನಾವು ಒಮ್ಮೆ ಚರಿತ್ರೆ, ಇತಿಹಾಸದ ಪುಟಗಳನ್ನು ತಿರುವಿಹಾಕಿದಾಗ ಗಂಡಿನಷ್ಟೇ ಹೆಣ್ಣು ಕೂಡ ರಾಜಕೀಯವಾಗಿ, ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ, ಜ್ಞಾನಾತ್ಮಕವಾಗಿ, ವೈಜ್ಞಾನಿಕವಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸರಿಸಮವಾಗಿ ನಿಲ್ಲಬಲ್ಲಳು. ಅವಳಲ್ಲಿ ಸಂಘಟನಾ ಸಾಮರ್ಥ್ಯ ಹುಟ್ಟಿನಿಂದಲೇ ಬಂದ ಬಳುವಳಿ. ಮಾನವ ಸಂಘಜೀವಿ. ಪ್ರತಿ ಕುಟುಂಬದ ಹೆಣ್ಣುಮಗಳು ಕೂಡ ಒಬ್ಬ ಸಮರ್ಥ ಸಂಘಟಕಿಯಾಗಿರುತ್ತಾಳೆ ಎಂಬುದನ್ನು ನಾವು ಅಲ್ಲಗೆಳೆಯುವಂತಿಲ್ಲ. ಕಾರಣ ಒಂದು ಕುಟುಂಬದ ಸರ್ವಸದಸ್ಯರನ್ನು ನಿಯಂತ್ರಿಸುವ ಕಲೆ ಅವಳಿಗೆ ಸಿದ್ದಿಸಿರುತ್ತದೆ. ಇದರ ಜೊತೆಗೆ ಬಂಧು -ಬಳಗ, ನೆಂಟರಿಸ್ಟರು, ವೃತ್ತಿ, ಸಮಾಜ, ಸಮುದಾಯ… ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮಹಿಳೆ ಎಲ್ಲಾ ವಲಯದಲ್ಲೂ ಪುರುಷರಿಗೆ ಸರಿಸಳಾಗಿಯೇ ಕೆಲಸ ನಿರ್ವಹಿಸಬಲ್ಲಳು. ಆದರೆ ಇದುವರೆಗಿನ ಅಧ್ಯಕ್ಷ ಸ್ಥಾನವನ್ನು ಇಂತಹ ಪ್ರಬುದ್ಧರ ಕ್ಷೇತ್ರದಲ್ಲೇ ಯಾವ ಮಹಿಳೆಯೂ ಏರಿಲ್ಲವೆಂಬುದಕ್ಕೆ ಸಾಧ್ಯತೆಗಳು ಏನಿರಬಹುದೆಂಬುದನ್ನು ಮನಗಂಡು ಕನ್ನಡದ ಸಾಹಿತಿಗಳು, ಕನ್ನಡಪರ ಮಹಿಳಾ ಸಂಘಟನೆಗಳೆಲ್ಲವೂ ಒಗ್ಗೂಡಿ ಚಿಂತನ -ಮಂಥನಗಳ ಮೂಲಕ ಸುಧಾರಿಸಿಕೊಳ್ಳುವ ತುರ್ತು ಇದೆ. ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾಂತ ಲೇಖಕರಿರುವಂತೆಯೇ ಲೇಖಕಿಯರು ಕೂಡ ಇದ್ದಾರೆ.. ಹಲವಾರು ಮಹಿಳಾ ಸಂಘಟನೆಗಳು ಕೂಡ ಮುಂಚೂಣಿಯಲ್ಲಿವೆ. ಆದರೂ ಯಾಕೆ ಮಹಿಳೆಯರು ಅಧ್ಯಕ್ಷಗಿರಿಗೆ ಏರಲು ಸಾಧ್ಯವಾಗಿಲ್ಲ, ಆಕಾಂಕ್ಷಿಗಳ ಕೊರತೆಯೇ, ಒತ್ತಡಗಳ ಕಾರಣವೇ, ರಾಜಕೀಯ ಲಾಭಿಯ ಗೊಂದಲಗಳೇ, ಇಂದಿಗೂ ಲಿಂಗ ಅಸಮಾನತೆಯನ್ನು ಬಿಂಬಿಸುತ್ತಿದೆಯೇ, ಸಾಮಾಜಿಕ ಪರಿಸ್ಥಿತಿಗಳ ಕಾರಣವೇ? ಅಷ್ಟಕ್ಕೂ ಅಧ್ಯಕ್ಷ ಪದವಿಗೆ ಬೇಕಿರುವುದು ನಾಡು – ನುಡಿ – ಸಂಸ್ಕೃತಿಯನ್ನು ಕಟ್ಟಿ, ಬೆಳೆಸಿ, ಪೋಷಿಸುವಂತಹ ಒಬ್ಬ ಪ್ರಾಮಾಣಿಕ ಸಮರ್ಥರು ಸಾಕಲ್ಲವೇ.. ಅವರು ಗಂಡಾಗಲಿ, ಹೆಣ್ಣಾಗಲಿ… ಆಯ್ಕೆ ಸೂಕ್ತವಾಗಿರಬೇಕು. ಇದುವರೆಗೆ ಈ ಸ್ಥಾನವನ್ನು ನಿಭಾಯಿಸುವ ಒಬ್ಬ ಮಹಿಳೆಯೂ ಸಿಕ್ಕಿಲ್ಲವೇ ಎಂಬುದು ಮಾತ್ರ ಅಚ್ಚರಿ.. ರಾಜಕೀಯದಿಂದ ಹಿಡಿದು ಬಾಹ್ಯಾಕಾಶದವರೆಗೆ ಪುರುಷರ ಸಮಕ್ಕೆ ಹೆಜ್ಜೆ ಹಾಕಿದ ಮಹಿಳೆಗೆ ಕ. ಸಾ. ಪ. ದ ಅಧ್ಯಕ್ಷಗಿರಿ ಕಷ್ಟವೇ? ಅಥವಾ ಬೆವರು, ಸೇವೆಗಳಿಗೂ ಸಾಮಾಜಿಕ ಪಿಡುಗುಗಳ ಸ್ಪರ್ಶ ತಾಕಿ ಇಂಥದ್ದೊಂದು ಪರಿಸ್ಥಿತಿ ಬಂದೊದಗಿದೆಯೇ? ಇಂತಹ ನೂರಾರು ಪ್ರಶ್ನೆಗಳಿಗೆ ಪರಿಹಾರ ದೊರಕಿ ಎಲ್ಲಾ ಕನ್ನಡದ ಸಾಹಿತಿಗಳು, ಕನ್ನಡಪರ ಮತ್ತು ಮಹಿಳಾ ಸಂಘಟನೆಗಳು ಎಚ್ಛೆತ್ತುಕೊಂಡು ಮುಂದಾದರೂ ಅಧ್ಯಕ್ಷ ಸ್ಥಾನವು ಮಹಿಳೆಯರಿಂದ ಅಲಂಕರಿಸುವುದೇ.. ಕಾದು ನೋಡಬೇಕಿದೆ. ********************* ತೇಜೋವತಿ.ಹೆಚ್.ಡಿ.

ಮಹಿಳಾ ಅಧ್ಯಕ್ಷರು ಯಾಕಿಲ್ಲ… ! Read Post »

ಇತರೆ

ಕಸಾಪಗೆಮಹಿಳಾ ಅಧ್ಯಕ್ಷರು

ತೊಟ್ಟಿಲ ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂಬ ಮಾತನ್ನು ನಾವೆಲ್ಲ ನೆನಪಿಸಿಕೊಳ್ಳಬೇಕು. ಸಾಹಿತ್ಯ, ಸಂಗೀತ ಕಲೆ ಇತ್ಯಾದಿಗಳು ಹೆಣ್ಣಿನ ಮನದಲ್ಲಿ ನೈಜವಾಗಿ ಹಾಸು ಹೊಕ್ಕಾಗಿರುತ್ತೆ. ಆದರೆ ಎಷ್ಷ್ಟೊ ಸಲ ಮಹಿಳೆ ತನ್ನ ಸಂಸಾರದ ಜವಾಬ್ದ್ದಾರಿ, ಇತರೆ ಕರ್ತವ್ಯಗಳಲ್ಲಿ ತನ್ನ ಪ್ರತಿಭೆಗೆ ಬೆನ್ನು ತೋರಿಸಿದ್ದೂ ಕಾಣುತ್ತೆವೆ. ಕಣ್ಣಿಗೆ ಕಾಣಿಸುವ ತನ್ಮ ಕೆಲಸ, ಮನೆಯವರನ್ನೆಲ್ಲ ತನ್ನ ಕರ್ತವ್ಯ ದಲ್ಲಿ ಚ್ಯುತಿ ಬರದಂತೆ, ಸಹನೆಯಿಂದ ದುಡಿಯುವದೊಂದೆ ತನ್ನ ಕಾಯಕ‌ ‌ಎಂದು ಕೊಂಡ ಮಹಿಳೆ ಈಗ ತನ್ನತನವನ್ನು‌ ಅರಿತು ಕಪ್ಪೆಚಿಪ್ಪಿನಿಂದ ಹೊರಬಂದು ಸಾಧನೆ ಮಾಡಿರುವದನ್ನು‌ ಕಾಣುತ್ತಾ ಜಗತ್ತಿನ ಬದಲಾವಣೆ ಗಮನಿಸುವಂತಾಗುದೆ. ಸೂಕ್ತ ಆಸಕ್ತಿ ಇದ್ದ ಮಹಿಳೆಗೆ ಅಧ್ಯಕ್ಷ ಸ್ಥಾನ ದೊರೆತರೆ ಯಾವದೇ ರಾಜಕೀಯ ಹಿತಾಸಕ್ತಿ, ವೈಯಕ್ತಿಕ ವೈಭವ , ಇರದೇ ಕೆಲಸ ಮಾಡಬಹುದಾಗಿದೆ ಸಾಹಿತ್ಯ ದ ಒಲುಮೆ ಇರುವ ನಿಜವಾದ ಅಕ್ಷರಸ್ಥ ಮಹಿಳೆಯನ್ನು ಈ ಸಾಹಿತ್ತ ಪರಿಷತ್ತಿನ ಅಧ್ಯಕ್ಷರಾಗಿ ಆರಿಸಿದರೆ ಮಹಿಳೆ ಕೂಡ ತನ್ನಲ್ಲಿ ರಕ್ತಗತವಾದ ಕಲಾಭಿಮಾನಿಯಾಗಿ, ಇತರರನ್ನೂ ಕಲೆಗೆ ಸೇರ್ಪಡಿಸಿ ಸಾಹಿತ್ಯ ವನ್ನು ಉತ್ತುಂಗಕ್ಕೆ ಏರಿಸಬಲ್ಲಳ ********************** ಡಾ.ವಿಜಯಲಕ್ಷ್ಮಿ

ಕಸಾಪಗೆಮಹಿಳಾ ಅಧ್ಯಕ್ಷರು Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು

ತೊಟ್ಟಿಲು ತೂಗುವ ಕೈ ಜಗತ್ತನ್ನೂ ತೂಗಿದೆ. ದೇಶವನ್ನೂ ಆಳಿದೆ.ಸೌಟು ಹಿಡಿದ ಕೈ ಲೇಖನಿಯನ್ನೂ ಸಮರ್ಥವಾಗಿ ಬಳಸಿದೆ . ಅಡುಗೆ ಮನೆಯನ್ನು ಸಂಭಾಳಿಸುವ ಮಹಿಳೆ ಕನ್ನಡ ಸಾಹಿತ್ಯ ಪರಿಷತ್ತನ್ನು ನಿಭಾಯಿಸಲಾರಳೇ? ನಾನಿಲ್ಲಿ ಪುರುಷರು ಸರ್ವಾಧಿಕಾರಿಯಾಗಿದ್ದಾರೆ ಎಂದಾಗಲಿ, ಮಹಿಳೆಯರನ್ನು ತುಳಿದಿದ್ದಾರೆಂದಾಗಲಿ ಹೇಳುತ್ತಿಲ್ಲ. ಅಸಲಿಗೆ, ಮಹಿಳೆಯರೇ ಮನಸ್ಸು ಮಾಡಿರಲಿಕ್ಕಿಲ್ಲ ಎಂದು ಅನಿಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ ನೂರರ ಮೇಲೆ ಆರು ವರುಷಗಳಾದರೂ ಇದುವರೆಗೆ ಅಧ್ಯಕ್ಷ ಸ್ಥಾನವನ್ನು ಒಬ್ಬ ಮಹಿಳೆ ವಹಿಸಿಲ್ಲ ಎನ್ನುವುದರ ಹಿಂದೆ ಪುರುಷರಿಗಿಂತ ಮಹಿಳೆಯರದೇ ಹೆಚ್ಚಿನ ಪಾಲಿದೆ. ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ 1915ರ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ 1938ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು. ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸುವ ಕೆಲಸ ಮಾಡುತ್ತಿದೆ. ವರ್ಷಕ್ಕೊಮ್ಮೆ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು 1974 ರಲ್ಲಿ ಜಯದೇವಿ ತಾಯಿ ಲಿಗಾಡೆ, 2000 ದಲ್ಲಿ ಶಾಂತಾದೇವಿ ಮಾಳವಾಡ, 2003 ರಲ್ಲಿ ಕಮಲಾ ಹಂಪನಾ, 2010 ರಲ್ಲಿ ಗೀತಾ ನಾಗಭೂಷಣ ವಹಿಸಿಕೊಂಡಿರುವುದು ಬಿಟ್ಟರೆ ಇನ್ನು ಉಳಿದ ಯಾವ ವರ್ಷವೂ ಮಹಿಳೆಯರ ಆಧ್ಯಕ್ಷತೆ ಇಲ್ಲ. 1915 ರಿಂದ 1940 ರವರೆಗೆ ಕಸಾಪ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಬಳಿಕ ಚುನಾವಣಾ ಪದ್ಧತಿ ಜಾರಿಗೆ ಬಂದಿತು.ಕಸಾಪ ಚುನಾವಣೆಗಳಲ್ಲಿ ಮಹಿಳೆಯರು ಯಾಕೆ ಪ್ರಬಲವಾಗಿ ಸ್ಪರ್ಧಿಸುತಿಲ್ಲ? ಅಥವಾ ಚುನಾವಣೆಯಲ್ಲಿ ಯಾಕೆ ಆಯ್ಕೆಯಾಗುತ್ತಿಲ್ಲ? ಎಂಬುದು ಪ್ರಶ್ನೆ. ಕನ್ನಡದ ಅನೇಕ ಹೆಸರಾಂತ ಮಹಿಳಾ ಸಾಹಿತಿಗಳು ಈ ಬಗ್ಗೆ ಯೋಚಿಸಬೇಕು.ಯೋಚಿಸಬೇಕು ಅನ್ನುವ ಮೊದಲು ಅಲ್ಲಿ ಮಹಿಳೆಯರು ಸ್ಪರ್ಧಿಸಲು ಆರೋಗ್ಯಕರ ವಾತಾವರಣ ಇದೆಯೇ ಗಮನಿಸಬೇಕಾಗುತ್ತದೆ. ಯಾವುದೇ ರಾಜಕೀಯ ಪ್ರಭಾವ, ಜಾತಿ ರಾಜಕಾರಣಗಳಿಂದ ಮುಕ್ತವಾಗಿ ಸಾಹಿತ್ಯದ ಬೆಳವಣಿಗೆ, ಭಾಷಾ ಬೆಳವಣಿಗೆಗೆ ಪೂರಕವಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ ಕಸಾಪಕ್ಕೂ ಇದೆ. ಮಹಿಳೆಯರು ಅಧ್ಯಕ್ಷರಾಗಲಿ ಎಂದು ಮಹಿಳಾ ಮೀಸಲಾತಿಗೆ ಒತ್ತು ಕೊಡುವ ಬದಲು, ನಮ್ಮ ಮಹಿಳೆಯರು ಸಾಹಿತ್ಯದ ಪ್ರಬಲ ಹಿನ್ನೆಲೆಯಿಂದ ಗಂಡು ಹೆಣ್ಣೆಂಬ ಬೇಧವಿಲ್ಲದೇ ಬಹುಮತದಿಂದ ಆಯ್ಕೆಯಾಗಬೇಕು ಎನ್ನುವುದು ನನ್ನ ಆಶಯ. ಮುಂಬರುವ ಚುನಾವಣೆಯಲ್ಲಿ ಅಂತಹ ಅರ್ಹತೆ ಉಳ್ಳ ಮಹಿಳೆಯರೇ ಮುಂದೆ ಬಂದು ಸ್ಪರ್ಧಿಸಿ, ಅಧ್ಯಕ್ಷರಾಗಿ ಆಯ್ಕೆಯಾಗುವಂತಾಗಲಿ ಎಂದು ಆಶಿಸೋಣ. ********************** ಶೀಲಾ ಭಂಡಾರ್ಕರ್

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು Read Post »

ಇತರೆ

ವೃತ್ತಿಯಷ್ಟೇ ಹವ್ಯಾಸ ಮುಖ್ಯ

ಲೇಖನ ಚಂದಕಚರ್ಲ ರಮೇಶ ಬಾಬು ವೃತ್ತಿ ಅಂದರೆ ನಾವು ಜೀವನಕ್ಕಾಗಿ ಆರಿಸಿಕೊಂಡ ಕೆಲಸ. ಆ ಕೆಲಸದಲ್ಲಿ ನಮಗಿಷ್ಟವಿಲ್ಲದಿದ್ದರೂ ಹೊಟ್ಟೆ ಹೊರೆಯುವುದಕ್ಕಾಗಿ ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ. ಮೇಲಧಿಕಾರಿಯ ದಬ್ಬಾಳಿಕೆ, ಅಲ್ಲಲ್ಲಿ ವರ್ಗಾವಣೆ, ಗ್ರಾಹಕರ ಜೊತೆ ಘರ್ಷಣೆ, ಸಹೋದ್ಯೋಗಿಗಳ ಕಿರುಕುಳ ಇವೆಲ್ಲ ವೃತ್ತಿಯ ಜೊತೆಯಿದ್ದು, ನಾವು ಗಳಿಸುವ ಸಂಬಳದ ಜೊತೆ ಬಂದು ಬೀಳುವ ಅಡ್ಡ ಒತ್ತಡಗಳು. ಇವನ್ನೆಲ್ಲ ತೂಗಿಸಿಕೊಂಡು ಹೋಗಲೇಬೇಕಾದ ಅನಿವಾರ್ಯತೆ. ಆಗ ನಮಗೆ ಗೊತ್ತಿಲ್ಲದೆಯೇ ನಮ್ಮಲ್ಲಿ ಒತ್ತಡ ಜಾಸ್ತಿಯಾಗುತ್ತದೆ. ಮನೆ, ಮಡದಿ, ಮಕ್ಕಳು ಮನೆಯಲ್ಲಿಯ ನೆಮ್ಮದಿ ಸ್ವಲ್ಪ ಮಟ್ಟಿಗೆ ಈ ಒತ್ತಡವನ್ನು ಕಮ್ಮಿ ಮಾಡುವಲ್ಲಿ ಸಹಾಯಕವಾದರೂ, ವೈಯಕ್ತಿಕ ಸ್ತರದಲ್ಲಿ ಯಾವುದಾದರು ಹವ್ಯಾಸ ಇದ್ದಲ್ಲಿ ಅಥವಾ ಬೆಳೆಸಿಕೊಂಡಲ್ಲಿ ಅದು ಒತ್ತಡವನ್ನು ಇನ್ನೂ ಕಮ್ಮಿ ಮಾಡುವ ಸಾಧನವಾಗಬಹುದು. ಈ ನಿಟ್ಟನಲ್ಲಿ ಹವ್ಯಾಸದ ಪಾತ್ರ ಮಹತ್ವವಿರುವುದಾಗುತ್ತದೆ. ಹವ್ಯಾಸ ಎನ್ನುವುದು ಏನು ಎಂದು ಒಮ್ಮೆ ನೋಡೋಣ.” ಕೇವಲ ಹಣಕ್ಕಾಗಿ ಮಾಡದೆ ಆತ್ಮ ಸಂತೋಷಕ್ಕಾಗಿ ಮಾಡುವ, ದೈನಂದಿನ ಬದುಕಿನ ಆಗುಹೋಗುಗಳ ನಡುವೆ ಮಾನಸಿಕ ಹತಾಶೆಯನ್ನು ಕಳೆದುಕೊಳ್ಳಲು ಮಾಡುವ ಕೆಲಸ’ ಎಂದು ಒಂದು ನಿರ್ವಚನವಿದೆ. ಹವ್ಯಾಸ ತಂತಾನೇ ಬೆಳೆದು ಬಂದಿರಬಹುದು ಅಥವಾ ಬೆಳೆಸಿಕೊಂಡಿರಲೂ ಬಹುದು. ಉದಾ: ಒಬ್ಬರಿಗೆ ಚಿತ್ರಕಲೆ ಸ್ವತಃ ಸಿದ್ಧಿಸಿರಬಹುದು. ಕೆಲವರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬಹುದು. ಯಾವುದೇ ಇಂಥ ಚಟುವಟಿಕೆಯನ್ನು ನಾವು ಹವ್ಯಾಸವೆನ್ನ ಬಹುದಾಗಿದೆ. ಈ ಅಭ್ಯಾಸಗಳ ಬಗ್ಗೆ ಆಂಗ್ಲ ಭಾಷೆಯ ಒಂದು ಚಿಕ್ಕ ಪ್ರಯೋಗ ನೋಡೋಣ. ಹವ್ಯಾಸ ವೃತ್ತಿಯಾಗಲೂ ಬಹುದು. ಚೆನ್ನಾಗಿ ಬರೆಯುವ ಕಲೆ ಇರುವವನು ಪತ್ರಿಕಾ ಕಛೇರಿಗೆ ಸೇರಿ ಅದರಿಂದ ಹಣ ಗಳಿಸಿದರೆ ಅದು ವೃತ್ತಿಯಾಗಿಬಿಡುತ್ತದೆ. ಆದಕಾರಣ ಯಾವುದು ಹವ್ಯಾಸ ಅಥವಾ ಯಾವುದು ವೃತ್ತಿ ಎಂದು ವಿಂಗಡನೆ ಮಾಡುವುದು ಪರಿಸ್ಥಿತಿಗಳ ಮೇಲೆ ಅವಲಂಬಿಸಿರುತ್ತದೆ. ಕೆಲ ಹವ್ಯಾಸಗಳು ಮನುಷ್ಯನ ಅವನತಿಗೀಡು ಮಾಡುವುವೂ ಆಗಿವೆ. ಇವುಗಳನ್ನು ಹವ್ಯಾಸವೆನ್ನಲಾಗುವುದಿಲ್ಲ. ಆದರೆ ಇವುಗಳನ್ನು ಬೆಳೆಸಿಕೊಳ್ಳುವರು ಹವ್ಯಾಸವೆಂದಲೇ ಬೆಳೆಸಿಕೊಂಡು ಅವುಗಳು ಅಭ್ಯಾಸವಾಗಿ ಬಿಡಲಾರದಾಗುತ್ತವೆ. ಉದಾ: ಜೂಜು, ಕುಡಿತ ಮೊದಲಾದವು. ಇವುಗಳಿಂದ ಹಣ ಪೋಲಾಗುವುದಲ್ಲದೆ ಆರೋಗ್ಯ ಕೆಡುತ್ತದೆ. ಈ ದುರಭ್ಯಾಸಗಳ ಬಗ್ಗೆ ಆಂಗ್ಲ ಭಾಷೆಯಲ್ಲಿ ತಮಾಷೆಗೆ ಹೀಗೆ ಹೇಳುತ್ತಾರೆ. ಆಂಗ್ಲದಲ್ಲಿ ಅಭ್ಯಾಸ ಅಥವಾ ಚಟಕ್ಕೆ habit ಎನ್ನುತ್ತಾರೆ. ನಿದಾನವಾಗಿ  ಬಿಡುವ ಪ್ರಯತ್ನದಲ್ಲಿ ಅದರಲ್ಲಿಯ ಐದು ಅಕ್ಷರಗಳಲ್ಲಿ ಮೊದಲನೆಯ ಅಕ್ಷರ ತೆಗೆದರೆ ಉಳಿಯುವದು a bit . ಅಂದರ ಅದರ ಶೇಷ ಉಳಿಯುತ್ತದೆ. ಮತ್ತೊಂದು ಅಕ್ಷರ ಅಂದರೆ a ತೆಗೆದರೂ ಒಂಚೂರು bit ಉಳಿಯುತ್ತದೆ. ಮುಂದುವರೆದು ಮತ್ತೊಂದು ತೆಗೆದರೂ  ಅದು it ಉಳಿಯುತ್ತದೆ. ಅಷ್ಟು ಜಿಡ್ಡಾಗಿ ಹತ್ತಿಕೊಂಡಿರುತ್ತದೆ ಎಂದು ಉದಾಹರಿಸುತ್ತಾರೆ. ದುರಭ್ಯಾಸ ವ್ಯಸನವಾಗುವ ಮುಂಚೆಯೇ ಅದನ್ನು ಗುರ್ತಿಸಿ ಬಿಟ್ಟುಬಿಡಬೇಕು. ಹವ್ಯಾಸದ ನಿರ್ವಚನದಲ್ಲೇ “ ಕೇವಲ ಹಣಕ್ಕಾಗಿ ಮಾಡದೆ, ಆತ್ಮ ಸಂತೋಷಕ್ಕಾಗಿ “ ಮಾಡುವ ಚಟುವಟಿಕೆ ಎಂದು ಹೇಳಲಾಗಿದೆ. ಇದು ಏಕೆ ಮುಖ್ಯ ಎಂದು ಒಮ್ಮೆ ನೋಡೋಣ. ಇತ್ತೀಚಿನ ಹಲವಾರು ಸಂದರ್ಶನಗಳಲ್ಲಿ ಅಭ್ಯರ್ಥಿಗಳಿಗೆ ಅವರ ವೃತ್ತಿಪರವಾದ ಪ್ರಶ್ನೆಗಳನ್ನೇ ಅಲ್ಲದೆ ನಿಮ್ಮ ಹವ್ಯಾಸವೇನು ಎಂದು ಕೇಳುತ್ತಿರುವುದು ನಮಗೆಲ್ಲ ಕೇಳಿಬಂದಿದೆ. ಆಯ್ಕೆ ಮಾಡುವಾಗ ಈ ಅಂಶವನ್ನೂ ಪರಿಗಣನೆಗೆ ತೆಗೊಳ್ಳುವುದು ಮುಖ್ಯ ಎಂದು ಮಾನವ ಸಂಪನ್ಮೂಲದ ಅಧಿಕಾರಿಗಳು ಅಭಿಪ್ರಾಯ ಪಡುತ್ತಿದ್ದಾರೆ. ವೃತ್ತಿಯ ಒತ್ತಡ ಮತ್ತು ಹವ್ಯಾಸಗಳೆರಡರನ್ನೂ ಸಮತೋಲನೆ ಮಾಡಬೇಕಾಗಿರುವ ಅವಶ್ಯಕತೆ ಎಲ್ಲ ಕ್ಷೇತ್ರಗಳಲ್ಲೂ ಕಂಡು ಬಂದಿದೆ. ಹವ್ಯಾಸ  ಮನಸ್ಸಿಗೆ ಹಿತವೆನಿಸಿದ್ದು ಮಾಡುವಂಥದ್ದಾಗಿದೆ. ಹಾಗಾಗಿ ಮನಸ್ಸು ಪ್ರಫುಲ್ಲವಾಗುತ್ತದೆ. ಅದರಲ್ಲೂ ಒಂದು ಸ್ತರದ ಪರಿಣಿತಿ ಸಾಧಿಸಿದರೆ ಅದು ಇನ್ನೂ ಹುಮ್ಮಸ್ಸು ತುಂಬುತ್ತದೆ. ಧನಾತ್ಮಕ ಶಕ್ತಿ ಹೆಚ್ಚುತ್ತದೆ. ನಮ್ಮ ಮೈಯಲ್ಲಿ ಬಿಡುಗಡೆಯಾಗುವ ತತ್ಸಂಬಂಧೀ ಹಾರ್ಮೋನುಗಳಿಂದ ನಮ್ಮ ಆರೋಗ್ಯ ಸುಧಾರಿಸುತ್ತದೆ. ಆದಕಾರಣ ಮೈ ಮತ್ತು ಮನಗಳ ಹಿತಕ್ಕಾಗಿ ಹವ್ಯಾಸ ಅವಶ್ಯಕವಾಗಿದೆ. ನಾವು ಇದುವರೆಗೆ ನೋಡಿದಂತೆ ಹವ್ಯಾಸಗಳು ಸ್ವತಃ ಬೆಳೆದಿರಬಹುದು. ಲಲಿತ ಕಲೆಗಳು ಇದರ ಕೆಳಗೆ ಬರುತ್ತವೆ. ಇವೆಲ್ಲ ಬಹುತೇಕ ಸ್ವತಃ ಸಿದ್ಧಗಳೇ. ಬರವಣಿಗೆ, ಹಾಡುಗಾರಿಕೆ, ಚಿತ್ರಕಲೆ ಇವೆಲ್ಲ ದೈವದತ್ತ ಪ್ರತಿಭೆಗಳು. ಇವುಗಳಿಗೆ ಮೆರಗನ್ನು ಕೊಟ್ಟು ಬೆಳೆಸಿ ಹವ್ಯಾಸಗಳನ್ನಾಗಿ ಮಾಡಿಕೊಂಡರೆ ಇತರೆ ಹವ್ಯಾಸಗಳಿಗಾಗಿ ಹುಡುಕಬೇಕಾಗುವುದಿಲ್ಲ. ಹಲವಾರು ಮಹನೀಯರು ಈ ತರದ ತಮ್ಮ ಪ್ರತಿಭೆಗಳನ್ನು ಅನುಸರಿಸಿ ಅವುಗಳಲ್ಲಿ ಸಹ ಹೆಸರು ಗಳಿಸಿದ್ದಾರೆ. ನಮ್ಮ ಮಾಜೀ ಪ್ರಧಾನಿ ಶ್ರೀ ವಾಜಪೇಯಿ ಅವರು ಕವಿಗಳಾಗಿದ್ದರು. ಮಾಜೀ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಮ್ ಅವರು ಅತ್ಯುತ್ತಮ ಬರಹಗಾರರಾಗಿದ್ದರು.  ಇನ್ನು ಹವ್ಯಾಸವನ್ನು ಬೆಳೆಸಿಕೊಳ್ಳುವುದರ ಕಡೆಗೆ ಗಮನ ಹರಿಸೋಣ. ಪುಸ್ತಕ ಓದುವುದು, ದೇಶ ಸುತ್ತುವುದು, ತೋಟಗಾರಿಕೆ, ಪರ್ವತಾರೋಹಣ, ಯೋಗ ಮತ್ತು ಪ್ರಾಣಾಯಾಮ ಹೀಗೆ ಕೆಲವು ರೂಢಿ ಮಾಡಿಕೊಳ್ಳಬಹುದು. ಇವುಗಳಲ್ಲಿ ಸಹ ನಮ್ಮ ಮನಸ್ಸಿಗೆ ಯಾವುದು ಹಿತವೆನಿಸುತ್ತದೋ ಅದನ್ನು ಆಯ್ದುಕೊಂಡು ಅವುಗಳಲ್ಲಿ ತೊಡಗಬಹುದು. ತಾಂತ್ರಿಕ ವಿಸ್ಫೋಟದ ಈ ಯುಗದಲ್ಲಿ ಈ ದಿಕ್ಕಿನಲ್ಲಿ ತುಂಬಾ ಆಯ್ಕೆಗಳು ಸಿಗುತ್ತಿವೆ.     ಬರೀ ಯುವ ಪೀಳಿಗೆಯಲ್ಲದೆ ವಯಸ್ಸಾದವರು ಸಹ ಇವುಗಳ ಲಾಭ  ಪಡೆಯುತ್ತಿದ್ದಾರೆ. ಉದಾ: ವಾಟ್ಸಪ್, ಫೇಸ್ಬುಕ್, ಕರೊಕೆ ಹಾಡುಗಾರಿಕೆ ಮುಂತಾದವು.  ಲಾಕ್ ಡೌನ್ ಸಮಯದಲ್ಲಂತೂ ಇವುಗಳ ಉಪಯೋಗ ಜಾಸ್ತಿಯಾಗಿ ಹವ್ಯಾಸಗಳ ಹೊಸ ಬಾಗಿಲನ್ನೇ ತೆರೆದಿದೆ. ಟಿವಿ, ಅಂತರ್ಜಾಲ, ಚರವಾಣಿ ಇವೆಲ್ಲವೂ ಇಲ್ಲದ ಸಮಯದಲ್ಲಿ ಸ್ನೇಹಿತರೆಲ್ಲ ಒಟ್ಟಾಗಿ ಹರಟೆ ಹೊಡೆಯುತ್ತಿದ್ದುದ್ದು ಸಹ ಉಲ್ಲಾಸಕ್ಕಾಗಿ ಮಾಡಿಕೊಂಡ ಹವ್ಯಾಸವೇ. ನಾಟಕಗಳು, ಸಂಗೀತ ಕಚೇರಿಗಳು, ಸಾಹಿತ್ಯ ಕಾರ್ಯಕ್ರಮಗಳು, ಕವಿಗೋಷ್ಠಿ, ಬಯಲು ನಾಟಕ, ಯಕ್ಷಗಾನ  ಇವೆಲ್ಲ ಮನೋಲ್ಲಾಸದ ದಾರಿಗಳು. ಪಾತ್ರಧಾರಿಗಳೇ ಆಗಬೇಕಾಗಿಲ್ಲ, ಪ್ರೇಕ್ಷಕರಾಗುವ ಹವ್ಯಾಸವನ್ನು ಸಹ ಹಾಕಿಕೊಳ್ಳ ಬಹುದು. ಹವ್ಯಾಸಗಳಿಗಾಗಿ ಸಮಯವಿಲ್ಲ ಎಂದು ಹೇಳುವುದು ಬೇಡ. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಹವ್ಯಾಸ ಬೆಳೆಸಿಕೊಳ್ಳುವುದು ಬರೀ ಒಳಿತೇ ಅಲ್ಲ ಅನಿವಾರ್ಯವು ಸಹ ಈಗ. ಹಾಗಂತ ಯಾವುದೇ ಹವ್ಯಾಸ ಚಟವಾಗಬಾರದು. ಅದರಿಂದ ನಮ್ಮ ಮಾನಸಿಕ ಅಥವಾ ದೈಹಿಕ ಸ್ವಾಸ್ಥ್ಯ ಕೆಡಬಾರದು. ಹಣ ಪೋಲಾಗಬಾರದು. ಒಂದು ಒಳ್ಳೆಯ ಹವ್ಯಾಸ ನಮ್ಮ ವೃತ್ತಿ ಜೀವನದ ಒತ್ತಡವನ್ನು ಕಮ್ಮಿಮಾಡಿದರೆ, ಚಟವಾದಾಗ ಅದು ಸಹ ಒತ್ತಡ ಕೊಟ್ಟು ನಮ್ಮ ಸ್ಥಿತಿಯನ್ನು ಹದಗೆಡಿಸುತ್ತದೆ. ಮಿತಿ ಅರಿತು ಅಭ್ಯಾಸ ಮಾಡಿಕೊಂಡು ಹವ್ಯಾಸದ ಲಾಭ ಪಡೆಯುವುದೇ ವಿಜ್ಞರ ಜಾಣತನ. *********************************

ವೃತ್ತಿಯಷ್ಟೇ ಹವ್ಯಾಸ ಮುಖ್ಯ Read Post »

ಇತರೆ

ಜೀವನ ಪೂರ್ತಿ ಜೀವದ ಗೆಳೆಯ

ಜಯಶ್ರೀ ಜೆ.ಅಬ್ಬಿಗೇರಿ ಅದೆಷ್ಟೋ ದಿನಗಳಿಂದ ಹಗಲು ರಾತ್ರಿ ಪ್ರಯತ್ನಿಸಿದರೂ ನಿನ್ನನ್ನು ಮರೆಯಲಾಗುತ್ತಿಲ್ಲ. ನಿನ್ನ ನೆನಪುಗಳು ತಲೆಯಿಂದ ಆಚೀಚೆ ಕದಲದೇ ಕರಗದ ಗುಡ್ಡದಂತೆ ಕುಳಿತುಕೊಂಡು ಬಿಟ್ಟಿವೆ. ಅದ್ಯಾಕೋ ಮರೆಯಲಾಗುತ್ತಿಲ್ಲ. ಮರೆಯಬೇಕೆಂದಷ್ಟು ಹಟ ಹಿಡಿದರೂ ನಾ ಮುಂದು ತಾ ಮುಂದು ಎಂದು ಮನಃಪಟಲದ ಮೇಲೆ ನೆನಪಿಗೆ ಬಂದು ಕಾಡುತ್ತವೆ. ಹೀಗೇಕೆ? ಅಂತ ಹೃದಯ ನೂರಾರು ಬಾರಿ ಪ್ರಶ್ನಿಸಿದರೂ ಮನಸ್ಸು ತನ್ನ ಮಾತುಗಳನ್ನು ಹೇಳಲಾಗದೇ ತನ್ನ ನಾಲಿಗೆಗೆ ದೊಡ್ಡದೊಂದು ಬೀಗ ಹಾಕಿಕೊಂಡು ತನ್ನೊಳಗೆ ಮಾತುಗಳನ್ನು ಬಂಧಿಸಿಟ್ಟು ಮೌನದಲ್ಲೇ  ಕ್ಷಣ ಕ್ಷಣವೂ ನನ್ನನ್ನು ಕೊಲ್ಲುತ್ತಿದೆ. ನಿನ್ನೊಂದಿಗೆ ಕಳೆದ ಒಲವಿನ ನೆನಪುಗಳನು ಬಿಟ್ಟು ಬಿಡದೇ ಮನದಾಗಸದಿಂದ ಮಳೆಯ ಹನಿಗಳಂತೆ ಸುರಿಯುತ್ತಿವೆ. ನೀ ದೂರವಿದ್ದರೂ ನಿನ್ನ ನೆನಪುಗಳು ಮಾತ್ರ ಹೃದಯಕ್ಕೆ ತೀರಾ ತೀರಾ ಹತ್ತಿರ.  ಬದುಕಿನ ಪಯಣದಲ್ಲಿ ಸಿಹಿ ಜೇನಿನಂಥ ನಿನ್ನ ಪ್ರೀತಿಯ ನೆನಪುಗಳು ನನ್ನವು. ಬದುಕಲು ಅದೆಷ್ಟೊ ದಾರಿಗಳಿವೆ. ಪ್ರೀತಿಯಲ್ಲಿ ಕವಲು ದಾರಿಯಲ್ಲಿ ನಿಂತ ನನಗೆ ನನ್ನ ಕಂಗಳಿನ ತುಂಬ ನೀನೇ ಬಂದೇ ಬರುತ್ತಿಯಾ ಎಂಬ ನಂಬಿಕೆಯ ಕನಸು ಹೊತ್ತು ರಾತ್ರಿಯೆಲ್ಲ ಕಣ್ಣ ರೆಪ್ಪೆ ಮುಚ್ಚದೇ ಕಾಯುತ್ತಿದ್ದೇನೆ. ಆ ನಂಬಿಕೆಯಲ್ಲಿ ದಿನ ನಿತ್ಯದ ಬದುಕು ಸಾಗುತ್ತಲೇ ಇದೆ. ಅದೆಂತ ಅನಿವಾರ್ಯತೆ ನಿನ್ನನ್ನು ಕಾಡುತ್ತಿದೆಯೊ ಗೊತ್ತಿಲ್ಲ. ಸಹಿಸಲೇಬೇಕಾದ ಅನಿವಾರ್ಯತೆ ನನಗಿದೆ. ನಿನ್ನ ಅನಿವಾರ್ಯತೆಯನ್ನು ವಿರೋಧಿಸಲೂ ಆಗದೇ ಬಿಸಿ ತುಪ್ಪ ಬಾಯಲ್ಲಿ ಹಾಕಿಕೊಂಡ ಪರಿಸ್ಥಿತಿ ಅನುಭವಿಸುತ್ತಿದ್ದೇನೆ. ನೀನು ಒಳ್ಳೆಯವನೋ ಕೆಟ್ಟವನೋ ಎಂದು ಗೊತ್ತಾಗುವ ಮುನ್ನವೇ ನೀ ನನ್ನ ಹೃದಯದಲ್ಲಿ ಬಲಗಾಲಿಟ್ಟು ಪ್ರವೇಶ ಪಡೆದಾಗಿತ್ತು. ನಿನ್ನಲ್ಲಿ ನನಗಿರುವುದು ಅತಿಯಾದ ಸ್ನೇಹವೊ ಬೆಳೆದ ಸ್ನೇಹದ ಮುಂದುವರಿದ ಭಾಗವಾದ ಪ್ರೀತಿಯೋ? ಅತಿ ಎನಿಸುವಷ್ಟು ಆಕರ್ಷಣೆಯೋ ಯಾವುದು ಒಂದೂ ತಿಳಿಯುತ್ತಿಲ್ಲ. ಪೂರ್ತಿ ಗೊಂದಲದ ಮಡುವಿನಲ್ಲಿ ಬಿದ್ದಿದ್ದೇನೆ. ನಮ್ಮಿಬ್ಬರ ಸಂಬಂಧಕೆ ಅದ್ಯಾವ ಹೆಸರಿಡಲಿ ತಿಳಿಯದಾಗಿದೆ.? ಹೆಸರಿಟ್ಟು ಸೀಮಿತಗೊಳಿಸುವುದು ಬೇಡವೆಂದು ಮನಸ್ಸು ಹೇಳುತ್ತಿದೆ. ಒಮ್ಮೊಮ್ಮೆ ಪ್ರೀತಿಯ ಹೆಸರಿಟ್ಟು ಬಲೆಗೆ ಸಿಕ್ಕ ಮೀನಿನಂತೆ ಒದ್ದಾಡುವ ಬದಲು ಸ್ನೇಹದ ಕಡಲಲ್ಲಿ ಇಬ್ಬರೂ ಒಂದೇ ದೋಣಿಯಲ್ಲಿ ಪಯಣಿಸುವುದೇ ಒಳ್ಳೆಯದೇನೋ ಅನಿಸುತ್ತಿದೆ. ಬೆರಳುಗಳ ಸಂದಿಯಲ್ಲಿ ನಿನ್ನ ಬೆರಳುಗಳನ್ನು ಸಿಕ್ಕಿಸಿ ಭುಜಕ್ಕೊರಗಿದಾಗ ತಂಗಾಳಿಗೆ ಆಚೀಚೆ ನಲಿದಾಡುವ ಮುಂಗುರುಳುಗಳ ಮೋಡಿಗೆ ಸೋತು ನನ್ನನ್ನೇ ನೋಡುತ್ತಿರುವಾಗ ನಿನ್ನೊಂದಿಗೆ ಹಂಚಿಕೊಳ್ಳದ ವಿಷಯವೇ ಇಲ್ಲ. ಆದರೂ ಒಮ್ಮೆಯೂ ನಿನ್ನ ಮನದ ತರಂಗಗಳಲಿ ನನ್ನ ಪ್ರೀತಿಯೇ ತುಂಬಿಕೊಂಡಿದೆಯೇ? ಎಂದು ಕೇಳಲೇ ಇಲ್ಲ. ಕೇಳಬೇಕೆನಿಸಿದರೂ ನೀನು ತಪ್ಪಾಗಿ ತಿಳಿದು ನನ್ನಿಂದ ದೂರವಾಗಿ ಬಿಡುತ್ತಿಯೇನೋ ಎಂಬ ಭಯದಲ್ಲಿ ಬೇಕಂತಲೇ ಬಾಯಿಗೆ ಬೀಗ ಹಾಕಿದ್ದೆ. ಗೆಳೆಯಾ ನಿಜ ಹೇಳು ನನ್ನೊಂದಿಗೆ ಕಳೆದ ಪ್ರತಿ ಕ್ಷಣವು ನೀನು ಸಂತಸದಿಂದಿರಲಿಲ್ಲವೇ? ಇಷ್ಟು ವರ್ಷ ಜೊತೆಗಿದ್ದರೂ ಜೊತೆಗಾತಿಯಾಗಿ ಬಾಳು ಹಂಚಿಕೊಳ್ಳಲು ಸಿದ್ದಳಿದ್ದಿಯಾ? ಎಂದು ಒಂದು ಸಾರಿ ಕೇಳಲಿಲ್ಲವೇಕೆ? ನನಗಿಂತಲೂ ಹೆಚ್ಚು ಹುಚ್ಚು ಹಿಡಿಸಿಕೊಂಡು ತುಸು ಹೆಚ್ಚೆನಿಸುವ ಹಾಗೆ ಒಳಗೊಳಗೆ ನನ್ನನ್ನು ಪ್ರೀತಿಸುತ್ತಿದ್ದರೂ ಹೇಳಿಕೊಳ್ಳಲಾಗದೇ ಮೌನಿಯಾದೆ. ಅದೇನೆ ಇರಲಿ ನೀನು ಮಾತ್ರ ನನ್ನಿಂದ ದೂರವಾಗಬೇಡ. ಹುಣ್ಣಿಮೆ ರಾತ್ರಿ ಸಾಗರ ಚಂದಿರನ ಮುಟ್ಟಲು ಜಿಗಿಯುವಾಸೆ. ಮನಸ್ಸು ನೆಗೆಯುತ್ತಿದ್ದರೂ ಪ್ರೀತಿಯ ನಿವೇದನೆಯನ್ನು ನಿನ್ನ ಮುಂದಿಡದೇ ಮೌನದಲ್ಲೇ ಕಾಲ ಕಳೆಯುತ್ತಿದ್ದೇನೆ. ನವ ಬಾಳಿನ ಹೊಸ್ತಿಲು ದಾಟುವಾಗ ನನ್ನ ಹೆಜ್ಜೆಯ ಹಿಂದೆ ನಿನ್ನ ಹೆಜ್ಜೆ ಇರುತ್ತದೆಂದು ಸುಂದರ ಕನಸು ಕಂಡಿದ್ದೇನೆ. ಹಾಡು ಹಗಲೇ ಲೂಟಿ ಹೊಡೆಯುವ ನಿನ್ನ ನೆನಪುಗಳಲ್ಲೂ ಅದೇನೋ ಹಿತವೆನಿಸುವ ಭಾವ. ನಿನ್ನ ತುಟಿಯಂಚಿನ ತುಂಟ ನಗು ಓರೆಗಣ್ಣಿನಿದ ಕದ್ದು ಕದ್ದು ನೋಡುತ್ತಿದ್ದ  ನಿನ್ನ ನೋಟ ರಂಗಿನಾಟಕೆ ಹಾತೊರೆಯುತ್ತಿದ್ದ ನಿನ್ನ ಮನಸ್ಸು ಒಲವಿನ ಮಿಡಿತವನ್ನು ತುಂಬಿಕೊAಡ ನಿನ್ನ ಹೃದಯವನ್ನು ನನ್ನಿಂದ ಎಂದೂ ಮರೆಯಲಾಗುವುದಿಲ್ಲ. ಮೊನ್ನೆ ಊರ ದೇವಿಯ ಜಾತ್ರೆಯಲ್ಲಿ ನೀನು ನನ್ನನ್ನೇ ಕದ್ದು ಕದ್ದು ನೋಡಿದ್ದನ್ನು  ಮನಸ್ಸು ಜಿಂಕೆಯಂತೆ ಜಿಗಿದಾಡಿತು.. ಜೀವನ ಪೂರ್ತಿ ನನ್ನ ಜೀವದ ಗೆಳೆಯ ನೀನೇ ಎಂದು ಮನೆಯಲ್ಲಿ ಹೇಳಿ ಒಪ್ಪಿಗೆ ಪಡೆದಾಗಿದೆ.ನನ್ನಪ್ಪ ನಿನ್ನಪ್ಪನೊಂದಿಗೆ ಮಾತಾಡಿಯೂ ಆಗಿದೆ  ಇನ್ನೇಕೆ ಹಮ್ಮು ಬಿಮ್ಮು. ಬಂದು ಬಿಡು ನದಿಯ ದಂಡೆಗೆ ಜೀವನ ಪೂರ್ತಿ ಜೀವದ ಗೆಳತಿಯಾಗಿ ಇದ್ದು ಬಿಡುವೆ ನಿನ್ನ ತೋಳ ತೆಕ್ಕೆಯಲ್ಲಿ. ===========================================================

ಜೀವನ ಪೂರ್ತಿ ಜೀವದ ಗೆಳೆಯ Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು

ಮಹಿಳಾ ಅಧ್ಯಕ್ಷರು ಸಾಹಿತ್ಯ ಪರಿಷತ್ ಅಧ್ಯಕ್ಷರಾಗುವದು ಗೌರವದ ಸಂಕೇತ ಕನ್ನಡ ಸಾಹಿತ್ಯ ಸೇವೆಯ ದ್ಯೇಯದಡಿ ಕನ್ನಡ ಸಾಹಿತ್ಯ ಪರಿಷತ್ ನೂರು ವರ್ಷದ ಸಂಭ್ರಮದಲ್ಲಿರುವದು ಅತ್ಯಂತ ಸಂತಸದ ಸಂಗತಿ. ಈಗಾಗಲೇ ಅನೇಕ ಸಾರಥಿಗಳು ಸಾಹಿತ್ಯ ಪರಿಷತ್ ಆಳಿದ್ದು ತಮಗೆಲ್ಲ ಗೊತ್ತಿರುವ ಸಂಗತಿ ಪ್ರಸ್ತುತ ಶ್ರೀ ಮನು ಬಳಿಗಾರ ಸೇರಿದಂತೆ ಅನೇಕರು ಇಲ್ಲಿ ಅಧ್ಯಕ್ಷೀಯ ಸೇವೆ ಸಲ್ಲಿಸಿದ್ದನ್ನು ಸ್ಮರಿಸಬಹುದು. ಜೊತೆಗೆ ಈ ನಡುವೆ ಗಮನಿಸಬೇಕಾದದ್ದು ಮಹಿಳೆಯರೊಬ್ಬರು ಇನ್ನು ಅಧ್ಯಕ್ಷರಾಗದೆ ಇತಿಹಾಸ ಸ್ರಷ್ಟಿಸದ ವಿಚಾರ. ಈ ದೇಶವನ್ನೇ ಆಳಿದ ಮಹಿಳಾ ಪ್ರಧಾನಿಗಳು ಮಾದರಿ -ಹಾಗೂ ಪರ ವಿರೋದಗಳ ತಿಕ್ಕಾಟ ಸ್ವಾಭಾವಿಕವಿದ್ದರೂ ಕೆಲವು ಬದಲಾವಣೆ ಸಹಜಸಾಧ್ಯ. ಈ ಸಾಹಿತ್ಯ ಕ್ಷೇತ್ರದಲ್ಲೂ ನಾವು ಅಳೆದು ತೂಗಿ ನೋಡಿದರೆ ಸಾಹಿತ್ಯ ಕ್ರಷಿಯಲ್ಲಿ ಹೆಚ್ಚಿಗರು ಮಹಿಳೆಯರೇ. ಹಾಗೂ ಸಂಘಟನೆ ,ಶಿಸ್ತು, ಹಾಗೂ ಇನ್ನೂ ಹೆಚ್ಚಿನ ಕ್ರಾಂತಿ ಸಾಹಿತ್ಯ ಪರಿಷತ್ ನಲ್ಲಿ ಆಗಬೇಕಾಗಿದ್ದು ಇದ್ದು ಆಗುವ ಭರವಸೆ ಭವಿಷ್ಯತ್ ಕಾಲವೇ ಸರಿ. ಯಾಕೆಂದರೆ ಇನ್ನೂ ಅಧಿಕಾರ ಸಿಕ್ಕಿಲ್ಲ, ಅಷ್ಟಕ್ಕೂ ಈ ಎಲ್ಲ ಕೂಗಿಗೆ ಉತ್ತರ ಯಾರು ಮಹಿಳೆಯಾದರೆ ಯಾರು ಸಮರ್ಥರು ?ಎನ್ನುವ ಪ್ರಶ್ನೆ ಹೊಸ ಅನ್ವೇಷಣೆಯೋ ಅಥವಾ ಇದಕ್ಕೆ ಸೂಕ್ತ ಅಕ್ಷರಶಃ ತಯಾರಿಯಲ್ಲಿ ಇದ್ದಾರೋ ಅಥವಾ ಅವರಲ್ಲಿನ ಕೆಲ ಕಷ್ಟ ಸಾಧ್ಯಗಳು ಹೇಗೆ ನೆರವೇರುವವು. ಈ ಎಲ್ಲ ಪ್ರಶ್ನೆಗಳು ಹೊಸ ನಾಳೆಗೆ ಸಿಗುವದಂತೂ ನಿಶ್ಚಿತ .ಎಕಾ ಏಕಿ ಇಂತಹ ಕೂಗಿಗೆ ಸ್ವಾಗತ ಹೇಳಬೇಕಾದರೂ ಸೂಕ್ತರ ಲಭ್ಯತೆ ಕೂಡ ಅಷ್ಟೇ ಮುಖ್ಯ. ಬದಲಾವಣೆ ಜಗದ ನಿಯಮ ಎನ್ನುವ ಹಾಗೆ ಶತಮಾನದ ಈ ಕನಸು ಸಾಕಾರಗೊಳಿಸಲು ಯಾರೆಲ್ಲ ನಿರೀಕ್ಷೆ ಮಾಡುತ್ತ ಇದ್ದೀರಾ  ಅವರಿಗೆಲ್ಲ ಶುಭವಾಗಲಿ .ಆದರೆ ಎಲ್ಲ ಕ್ಷೇತ್ರಗಳಂತೆ ಇಲ್ಲಿ ಮಹಿಳಾ ಸ್ಥಾನ ಕೇಳಿದರೆ ಹಂತ ಹಂತವಾಗಿ ಮೀಸಲಾತಿ ,ಹೀಗೆ ಹತ್ತಲವು ರಾಜಕೀಯ ಅನುಕರಣೀಯ ಪ್ರತ್ಯಕ್ಷ ಬೆಳವಣಿಗೆಗೆ ಕಾರಣವಾಗಬಹುದೇ ?ಎಂಬ ಭಯ ಜೊತೆಗೆ ಶತಮಾನದ ಸಾಹಿತ್ಯ ಪರಿಷತ್ ಉತ್ತುಂಗಕ್ಕೆ ಏರಲಿ, ಶ್ರೇಷ್ಠತೆ ಉಳಿಸಿಕೊಳ್ಳಲಿ ಎಂಬುದೇ ನನ್ನ ಹಾರೈಕೆ. ಶತಮಾನದ ಸಂಭ್ರಮಕೆ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ************************* ಅರುಣ್ ಕೊಪ್ಪ

ಕಸಾಪಗೆ ಮಹಿಳಾ ಅಧ್ಯಕ್ಷರು Read Post »

You cannot copy content of this page

Scroll to Top