ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಯುಗಾದಿ ವಿಶೇಷ ಲೇಖನ ನವಚೈತನ್ಯಕ್ಕೆ ಮುನ್ನುಡಿ ಯುಗಾದಿ ಸಂಗಾತಿ ಸಾಹಿತ್ಯ ಪತ್ರಿಕೆ: ಯುಗಾದಿ ಬಂತೆಂದರೆ ಸಾಕು ಪ್ರಕೃತಿಯಲ್ಲೊಂದು ಸಂಚಲನ ಮೂಡುತ್ತದೆ ಎಲ್ಲಾ ಕಡೆಗೂ ಹಸಿರುತೋರಣ ಹೂವಿನ ಶೃಂಗಾರ ಮಾಡಿದಂತೆ ಗಿಡದ ತುಂಬಾ ಹೂಗಳು ಅರಳಿ ಚಿಗುರು ಮೂಡಿ ಸಂಭ್ರಮದ ವಾತಾವರಣ ಏರ್ಪಡಿಸುತ್ತವೆ.ಇದು ನಾವು ಹೊಸವರ್ಷದ ಎಂದು ಸಂಭ್ರಮಪಡುವ ಯುಗದ ಆದಿ ಯುಗಾದಿಯ ವಿಶೇಷತೆ.        ಹೊಸವರ್ಷವೆಂದರೆ ಇದುವೇ ಎಂದು ಸಾಧಿಸುವಂತೆ ಎಲ್ಲಾ ಕಡೆಗೂ ಹಸಿರು ಉಸಿರಾಡುವುದು. ಬಣ್ಣ ಬಣ್ಣದ ಹೂವುಗಳು ಗಿಡದ ತುಂಬೆಲ್ಲಾ ಅರಳಿ ಪರಿಸರವೆಲ್ಲಾ ಶೃಂಗಾರ. ವರ್ಷದ ಆರಂಭದ ಸಂಕೇತವನ್ನು, ಹೊಸತನದ ಕಳೆಯನ್ನು ಪ್ರಕೃತಿ ಎಲ್ಲೆಡೆ ಪಸರಿಸುತ್ತದೆ.       ಅದೇ ಇಡೀ ಜಗತ್ತು ಹೊಸ ವರ್ಷವೆಂದು ಆಚರಿಸುವ ಜನವರಿ ಒಂದು, ಮಧ್ಯರಾತ್ರಿಯಲ್ಲಿ ನಿಶಾಚರಗಳು ಹೋರಾಡುವ ಸಮಯದಲ್ಲಿ ಪ್ರಾರಂಭವಾಗುವುದು . ಆರೋಗ್ಯ ಹಾಳು ಮಾಡಿಕೊಳ್ಳುವಂತಹ ಬೇಕರಿ ತಿನಿಸುಗಳು , ಕೇಕ್ ,ಡ್ರಿಂಕ್ಸ್ ಕೂಲಡ್ರಿಂಕ್ಸ್, ಮೋಜು-ಮಸ್ತಿ ಮಾಡುತ್ತಾರಾತ್ರಿಯೆಲ್ಲಾ ನಿದ್ದೆಗೆಟ್ಟು ಅನಾಹುತಕ್ಕೆ ಕಾರಣ ಮಾಡಿಕೊಳ್ಳುವ ಇದು ಹೊಸವರ್ಷವೇ? ಅದೇ ಭಾರತೀಯ ಪದ್ದತಿಯಂತೆ ಯುಗಾದಿಯಂದು  ನಾವು ಆಚರಿಸುವ ಹೊಸ ವರ್ಷವು ಮುಂಜಾವಿನ ಬ್ರಾಹ್ಮಿ   ಮುಹೂರ್ತದಲ್ಲಿ ಪ್ರಾರಂಭವಾಗುವುದು.ಅಂದು ಮೊದಲೇ ಶುಚಿಗೊಳಿಸಿದ ಮನೆಯಲ್ಲಿ  ಬಾಗಿಲಿಗೆ ಮಾವಿನ ತೋರಣ ಕಟ್ಟಿ , ಹೂವಿನ ಅಲಂಕಾರ ಮಾಡಿ , ಅಂಗಳದಲ್ಲಿ ಸುಂದರ ರಂಗೋಲಿಗೆ ಬಣ್ಣದ ಮೆರಗು . ಎಲ್ಲರೂ ಬೇವು ಬೆರೆಸಿದ ಬಿಸಿ ನೀರಿನಲ್ಲಿ ಅಭ್ಯಂಗ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮನೆಯಲ್ಲೇ ಮಾಡಿದ ಹೋಳಿಗೆ,ಕಡುಬು, ಅನ್ನ ಸಾರು ಸಂಡಿಗೆ, ಹಪ್ಪಳ ,ಉಪ್ಪಿನಕಾಯಿ, ಮೊಸರು ಮುಂತಾದ ಬಗೆಬಗೆಯ ಅಮೃತದಂತಹ ಸವಿಭೋಜನ ಜೊತೆಗೆ ಜೀವನದ ಮರ್ಮ ಸಾರುವ ಬೇವು-ಬೆಲ್ಲವನ್ನು ಮನೆಮಂದಿಯಲ್ಲಾ ಸೇರಿ ಸವಿದು ಸಂಭ್ರಮಿಸುವ ನಮ್ಮ ಹಬ್ಬ ತನುಮನಕ್ಕೆ ಹಿತಕರ. ಪ್ರಕೃತಿಗೆ ಹತ್ತಿರ. ಇಡೀ ವರ್ಷ ಉತ್ಸಾಹ ಸಂಭ್ರಮದಿಂದ ಕಳೆಯುವಂತೆ ಚೈತನ್ಯ, ಬರವಸೆ ಮೂಡಿಸುವ ಈ ನಮ್ಮ ಯುಗಾದಿ ನಿಜವಾದ ಹೊಸ ವರ್ಷ.      ನಮ್ಮ ಮನೆಯಲ್ಲಂತೂ ಯುಗಾದಿ ಬಂದರೆ ಸಾಕು ವಾರದ ಮೊದಲೇ ಸ್ವಚ್ಛತಾ ಕಾರ್ಯ ನಡೆಯುವುದು. ಮನೆಯಲ್ಲಾ ಶುಚಿಗೊಳಿಸಿ , ಹಾಸಿಗೆ ಬಟ್ಟೆ, ಪಾತ್ರೆಗಳನ್ನು ಶುಭ್ರಗೊಳಿಸುತ್ತೇವೆ. ಅಮಾವಾಸ್ಯೆ ದಿನದಂದೇ ನಮ್ಮ ಮನೆಯಲ್ಲಿ ಹಬ್ಬ ಪ್ರಾರಂಭವಾಗುವುದು. ಮನೆಗೆ ತಳಿರು ತೋರಣ ಹೂಗಳಿಂದ ಸಿಂಗರಿಸಿ, ಆ ದಿನದಂದೇ ಘಟಸ್ಥಾಪನೆ ಮಾಡಿ ಐದು ದಿನಗಳ ಕಾಲ ನಂದಾದೀಪವನ್ನು ಹಗಲು-ಇರುಳು ಕಾಯುತ್ತೇವೆ. ಅಂದು ಹೋಸ ಗೋಧಿ,ನೆನೆಸಿದ ಕಡಲೆಕಾಳು,ಉಡಕ್ಕಿ ಸಾಮಾನು ಇಟ್ಟು ಕಾಳಿಕಾ ದೇವಿಯನ್ನು ಪೂಜಿಸುತ್ತೇವೆ.  ಹೋಳಿಗೆ ಅನ್ನ ,ಸಾರು ,ಕೋಸಂಬರಿ, ಪಲ್ಯ ಮುಂತಾದವುಗಳನ್ನು ನೈವೇದ್ಯ ಮಾಡುತ್ತೇವೆ .ಅಮವಾಸ್ಯೆ ಮರುದಿನ ಪಾಡ್ಯದಂದು ಬೇವು ಹಾಕಿದ ನೀರಿನಿಂದ ಅಭ್ಯಂಗ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಸಂಭ್ರಮಿಸುತ್ತೇವೆ.ಅಂದು ಗೋಧಿ ಹುಗ್ಗಿ, ಬೇವು ಬೆಲ್ಲ ವನ್ನು ನೈವೇದ್ಯಕ್ಕೆ ವಿಶೇಷವಾಗಿ ಮಾಡಿರುತ್ತೇವೆ.ಕಾಳಿಕಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಉಡಿ ತುಂಬಿ ದೇವಿ ಕೃಪೆಗೆ ಪಾತ್ರರಾಗುತ್ತೇವೆ.         ಹೀಗೆ ಯುಗಾದಿ ಮನೆ ಒಳಗೂ ಹೊರಗೂ ಸಂಭ್ರಮ ಸಡಗರದ ವಾತಾವರಣವನ್ನು ಏರ್ಪಡಿಸುತ್ತದೆ.ಮಾನವರ ದೇಹ ಮನಸ್ಸುಗಳಿಗೆ,ಸಸ್ಯ ಜೀವ ಸಂಕೂಲಕ್ಕೆನವಚೈತನ್ಯ, ನವೋಲ್ಲಾಸ ಹೊತ್ತು ತರುತ್ತದೆ. ****** ಲಕ್ಷ್ಮೀದೇವಿ ಪತ್ತಾರ

Read Post »

ಇತರೆ

ಸಾಮಾಜಿಕಕ್ರಾಂತಿಸೂರ್ಯಜ್ಯೋತಿಬಾ_ಪುಲೆ

ಜನ್ಮದಿನಾಚರಣೆ 11/04/2021 ಸಾಮಾಜಿಕಕ್ರಾಂತಿಸೂರ್ಯಜ್ಯೋತಿಬಾ_ಪುಲೆ [01:48, 11/04/2021] +91 95382 66593: ಭಾರತದ ಸಾಮಾಜಿಕ ಕ್ರಾಂತಿಯ ಮೂಲಪುರುಷರಲ್ಲಿ ಪ್ರಮುಖರು ಜ್ಯೋತಿಬಾ ಪುಲೆ.ಸಮಾಜ ಸುಧಾರಕರಾಗಿ, ಸಮಾನತೆಯ ಹರಿಕಾರರಾಗಿ ದೀನ, ದಲಿತ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿದವರು. ಇವರು ಧರ್ಮ, ಪಂಥ, ಸಂಪ್ರದಾಯ ಈ ರೀತಿಯ ಕಟ್ಟುಪಾಡುಗಳಿಗೆ ಜೋತುಬೀಳದೆ,ಮಾನವ ಧರ್ಮವನ್ನು ಆಧರಿಸಿ ನಡೆಯಬೇಕೆಂದು ಅಪೇಕ್ಷೆ ಪಟ್ಟವರು. ಜ್ಯೋತಿಬಾ ಪುಲೆ ಅವರು 11/04/1827 ರಂದು ಮಹಾರಾಷ್ಟ್ರದ ‘ಕಟಗುಣ’ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಗೋವಿಂದರಾವ್,ತಾಯಿ ಚಿಮಣಾಬಾಯಿ. ಜ್ಯೋತಿಬಾ ಅವರು ಇನ್ನೂ ಚಿಕ್ಕವರಿದಾಗಲೇ ತಾಯಿ ಚಿಮಣಾಬಾಯಿ ಅವರು ಸ್ವರ್ಗಸ್ತರಾಗುತ್ತಾರೆ.ನಂತರ ಜ್ಯೋತಿಬಾ ಅವರನ್ನು ಸಾಕಿ ಸಲುಹಿದ್ದು ತಾಯಿ ಚಿಮಣಾಬಾಯಿ ಅವರ ಸೋದರಿ ಸಗುಣಾಬಾಯಿ ಅವರು.ಸಗುಣಾಬಾಯಿ ಅವರು ಚಿಕ್ಕವಯಸ್ಸಿನಿಂದಲೇ ಜ್ಯೋತಿಬಾ ಅವರ ಮನಸ್ಸಿನಲ್ಲಿ ಸಮಾಜಸೇವೆ ಎಂಬ ಬೆಳಕಿನ ಜ್ಞಾನವನ್ನು ಬಿತ್ತುತ್ತಾರೆ. ಜಾತಿಯ ಕಟ್ಟಲೆಗಳಿಂದ ಮಡುಗಟ್ಟಿದ್ದ ಸಮಾಜದಲ್ಲಿ ಶಿಕ್ಷಣವೆಂಬ ಸೇವೆಯ ಮೂಲಕ ಸಂಪೂರ್ಣ ಭಾರತದಲ್ಲಿ ಪ್ರಗತಿಪರ ನಡೆಯನ್ನು ಹುಟ್ಟುಹಾಕಿದ ಜ್ಯೋತಿಬಾ ಫುಲೆ ಅವರು,ಅಂಬೇಡ್ಕರರವರಿಗೂ ಹಲವು ವಿಚಾರಗಳಲ್ಲಿ ಆದರ್ಶವಾಗಿದ್ದರು.ಹೆಣ್ಣು ಮಕ್ಕಳ ಶಿಕ್ಷಣವನ್ನು ಸಂಪ್ರದಾಯದ ಹೆಸರಿನಲ್ಲಿ ನಿಷೇಧಿಸಿದ್ದ ಕಾಲದಲ್ಲಿ ಜ್ಯೋತಿಬಾರವರು ತನ್ನ ಪತ್ನಿ ಸಾವಿತ್ರಿಭಾಯಿ ಪುಲೆ ರವರಿಗೆ ಅಕ್ಷರ ಕಲಿಸಿ ಭಾರತದ ಮೊದಲ ಮಹಿಳಾ ಶಿಕ್ಷಕಿಯನ್ನಾಗಿ ರೂಪಿಸಿದ ಮಹಾನ್ ಚೇತನ. ಆ ಕಾಲದಲ್ಲಿ ಮೇಲ್ಜಾತಿಯವರಿಗೆ ಮಾತ್ರ ಶಿಕ್ಷಣವೆಂಬ ಅನಿಷ್ಟ ಪದ್ಧತಿ ಇತ್ತು.ಹಳ್ಳಿಗಳಲ್ಲಿ ಪ್ರಾಥಮಿಕ ಶಿಕ್ಷಣದ ವಿದ್ಯಾಭ್ಯಾಸಕ್ಕೆ ಶಾಲೆಗಳಿದ್ದವು.ಆದರೆ ಆ ಶಾಲೆಗಳಲ್ಲಿ ಶ್ರೀಮಂತರ ಮಕ್ಕಳಿಗೆ ಮಾತ್ರ ಕಲಿಯುವ ಅವಕಾಶ ಇತ್ತು, ಆ ಎಲ್ಲಾ ಕಟ್ಟಲೆಗಳನ್ನು ಮೀರಿ 1848 ರಲ್ಲಿ ಪುಣೆಯಲ್ಲಿ ಶ್ರೀ ಬಿಡೇಯವರ ಭವನದಲ್ಲಿ ಹೆಣ್ಣು ಮಕ್ಕಳ ಶಾಲೆ ಆರಂಭಿಸಿ ಭಾರತದಲ್ಲಿ ಪ್ರಪ್ರಥಮ ಹೆಣ್ಣು ಮಕ್ಕಳ ಶಾಲೆ ಆರಂಭಿಸಿದ ಕೀರ್ತಿಯನ್ನು ಪುಲೆ ದಂಪತಿ ಪಡೆದರು.ಬಡವ,ಶ್ರೀಮಂತ, ಜಾತಿ ಧರ್ಮಗಳ ಬೇಧ ಮಾಡದೇ ಸಕಲ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಶ್ರಮಿಸಿದರು ಪುಲೆ ದಂಪತಿಗಳು,ಆ ಕಾಲದಲ್ಲಿ ಜ್ಯೋತಿಬಾ ಅವರು ಮನಸ್ಸು ಮಾಡಿದ್ದರೆ ಸರ್ಕಾರಿ ನೌಕರಿಗೆ ಹೋಗಬಹುದಿತ್ತು.ಆದರೆ ಅವರ ಇಚ್ಛೆ,ಗುರಿ ಒಂದೇ ಆಗಿತ್ತು ಸಮಾಜ ಸೇವೆ.ಶಿಕ್ಷಣದ ಕ್ರಾಂತಿಯ ಜೊತೆಗೆ ಜ್ಯೋತಿಬಾ ಪುಲೆ ಅವರು ವಿಧವೆಯರ ಮಕ್ಕಳಿಗಾಗಿ ಅನಾಥ ಶಾಲೆ,ವಿಧವಾ ವಿವಾಹ, ಸತ್ಯಶೋದಕ ಸಮಾಜದ ಸ್ಥಾಪನೆ ಮಾಡಿ ಬಸವ ಮಾರ್ಗದಲ್ಲಿ ಸಾಗಿದ ಮಹಾನ ಚೇತನ ಜ್ಯೋತಿಬಾ ಪುಲೆ. ಇಂದಿನ ಯುವ ಸಮಾಜ ಪುಲೆ ದಂಪತಿಗಳ ಆದರ್ಶಗಳನ್ನ ಪಾಲಿಸಿಕೊಂಡು ಹೋಗಬೇಕಾಗಿದೆ.ನಟ ನಟಿಯರ ಜನ್ಮದಿನದವನ್ನು ಅದ್ದೂರಿಯಾಗಿ ಆಚರಣೆ ಮಾಡುವ ಕಾರ್ಯದಲ್ಲಿ ಬಹುತೇಕ ಇಂದಿನ ಯುವ ಸಮಾಜ ಮುಳುಗಿದೆ.ಆದರೆ ಈ ರೀತಿಯ ಮಹಾನ ಚೇತನಗಳು ಯುವ ಸಮಾಜಕ್ಕೆ ನೆನಪಾಗದೆ ಇರುವುದು ವಿಪರ್ಯಾಸ,ಪುಲೆ ದಂಪತಿಗಳ ಜನ್ಮದಿನವನ್ನು ಅದ್ದೂರಿಯಾಗಿ ಮಾಡದೇ ಇದ್ದರೂ ಅವರ ಜೀವನದ ಕುರಿತು ತಿಳಿದುಕೊಂಡು ಅವರು ಸಾಗಿದ ಮಾರ್ಗದಲ್ಲಿ ಒಂದಿಷ್ಟಾದರೂ ಸಾಗುವ ಮನಸ್ಸು ನಾವುಗಳು ಮಾಡಬೇಕಿದೆ. ************************************** ಹೊರನಾಡ ಕನ್ನಡಿಗ ಪ್ರಕಾಶ (ಇಂದೋರ್- ಮಧ್ಯಪ್ರದೇಶ)

ಸಾಮಾಜಿಕಕ್ರಾಂತಿಸೂರ್ಯಜ್ಯೋತಿಬಾ_ಪುಲೆ Read Post »

ಇತರೆ

ನುಡಿ ಕಾರಣ

ಧನ ಸಂಪತ್ತು ಕೆಲವರಿಗೆ ಇರಬಹುದು,ಕೆಲವರಿಗೆ ಇರಲಿಕ್ಕಿಲ್ಲ.ಒಬ್ಬನು ಸಿರಿವಂತ ನಾಗಬೇಕಾದರೆ ಒಬ್ಬ ಬಡವನಾಗುತ್ತಾನೆ.( ರಾಜಕಾರಣಿ ಶ್ರೀಮಂತನಾದಾಗ,ಆದಾಯ ಕರ ಸಲ್ಲಿಸುವವನು ಬಡವನಾಗುವುದು

ನುಡಿ ಕಾರಣ Read Post »

ಇತರೆ

ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ

ಲೇಖನ ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ ಅಂಜಲಿ ರಾಮಣ್ಣ ಅವತ್ತು ನನಗೆ 18 ತುಂಬಿದ ಮಾರನೆಯ ದಿನವೇ ಮತದಾರ ಗುರುತಿನ ಚೀಟಿ ಮಾಡಿಸಿಕೊಟ್ಟರು ನನ್ನ ತಂದೆ. ಇದೊಂದೇ  ಗುರುತಿಗಾಗಿ 18 ಆಗುವುದನ್ನೇ ಕಾಯುತ್ತಿದ್ದೆ. ಆಗ ತಿಳಿದೇ ಇರಲಿಲ್ಲ ಕಾಲ ಮತ್ತು ಹರೆಯ ಇಬ್ಬರದ್ದೂ ಗಳಸ್ಯ ಕಂಠಸ್ಯ ಜೋಡಿ ಎಂದು ಮತ್ತು ಅವರುಗಳ ಬಂಡಿಗೆ ರಿವರ್ಸ ಗೇರ್ ಇರುವುದಿಲ್ಲ ಎಂದು. ಕೈಯಲ್ಲಿ ವೋಟರ್ಸ್ ಐಡಿ ಇತ್ತು, ಮತ ಹಾಕಲೇ ಬೇಕು ಎನ್ನುವ ಹಠವೂ ಜೊತೆಯಾಗಿತ್ತು. ಆದರೇನು ಮಾಡುವುದು ಆಗ ಮೈಸೂರಿನಲ್ಲಿ ಕಾರ್ಪೊರೇಷನ್ ಚುನಾವಣೆಯೂ ಇರಲಿಲ್ಲ. ಅಂದು ಈಗಿನಷ್ಟು ಸರಾಗವಾಗಿ ಸರ್ಕಾರ ಬೀಳುವ ಭಯವಾಗಲೀ, ಪದ್ದತಿಯಾಗಲೀ ಇರಲಿಲ್ಲ. ಹಾಗಾಗಿ ಮತ್ತೆರಡು ವರ್ಷ ಕಾದೆ ಬೆರಳು ಮಸಿ ಮಾಡಿಕೊಳ್ಳಲು. ನಂತರದ ಒಂದು ಅವಕಾಶವನ್ನೂ ಬಿಡದೆಯೇ ಮತ ಚಲಾಯಿಸಿದ್ದೇನೆ ಎನ್ನುವ ಹೆಮ್ಮೆಯೊಂದಿಗೇ ವಯಸ್ಸು ರಾಜಕೀಯ ನಿಲುವುಗಳಷ್ಟೇ ಅತಂತ್ರದಿಂದ ಓಡುತ್ತಿದೆ. ಮೊನ್ನೆಮೊನ್ನೆಯವರೆಗೂ, ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಓಡಿ ಬರುತ್ತಿದ್ದೆ ಮೈಸೂರಿಗೆ, ನನ್ನೂರಿಗೆ ಅವಳಾತ್ಮದ ಒಂದು  ತುಣುಕೇ ಆದ ನಾನು ಮತಹಾಕಲು. ಈಗ ಬದುಕು ಕಲಿಸಿದೆ ತವರು ನೆಲದಲ್ಲೋ, ಅನ್ನ ಕೊಡುತ್ತಿರುವ ಭೂಮಿಯಲ್ಲೋ ರಾಜಕಾರಣಿಗಳೆಲ್ಲಾ ಒಂದೇ ಎಂದು ಹಾಗಾಗಿ ಮತಗುರುತಿನ ಚೀಟಿಯನ್ನು ಈ ಊರಿನ ವಿಳಾಸಕ್ಕೆ ಬದಲಾಯಿಸಿಕೊಂಡಿದ್ದೇನೆ ಆದರೆ ತಪ್ಪದ ಮತ ಹಾಕುವ ನನ್ನ ಚಾಳಿಯನ್ನಲ್ಲ. ಅನುಸರಿಸಿಕೊಂಡು ಬಂದ ಪದ್ದತಿಯನ್ನು ಮೊದಲ ಬಾರಿಗೆ ಮುರಿದು ಈ ಬಾರಿ  11 ಗಂಟೆಗೆ ಮತ ಚಲಾವಣೆಗೆ ಹೊರಟೆ. ಚಾಲೀಸಾ ಪಠಣೆ ಮುಗಿದರೂ ಹನುಮಂತ ಪ್ರತ್ಯಕ್ಷ ಆದರೂ ಮುಗಿಯದಷ್ಟು ಬಾಲದಷ್ಟುದ್ದದ ಸಾಲಿತ್ತು. ಬರೋಬರಿ 1 ಗಂಟೆ ನಲವತ್ತು ನಿಮಿಷದ ನಂತರ ಮತಹಾಕುವ ಕೋಣೆಯ  ಎದುರು ಸಾಲಿನಲ್ಲಿ ನಿಂತಿದ್ದೆ .ಪೊಲೀಸಪ್ಪನೊಬ್ಬ ಸರಬರ ಬಂದು ಬಾಗಿಲಲ್ಲಿ ನಿಂತ . ಐದು ನಿಮಿಷಕ್ಕೆ ತಂದೆಯೊಬ್ಬ ಮಗಳನ್ನು ಕರೆದುಕೊಂಡು ಬಂದು ಅದೇ ಪೊಲೀಸ್ಗೆ “ನೋಡಿ ತಪ್ಪು ಸಾಲಲ್ಲಿ ನಿಂತಿದ್ದ್ವಿ ಈಗ ಗೊತ್ತಾಯ್ತು ಇದು ನಮ್ಮ ಸಾಲು ಅಂತ” ಎಂದು ಹೇಳುತ್ತಾ ನಡುವೆ ಮಗಳನ್ನು ತೂರಿಸಲು ಪ್ರಯತ್ನ ಪಡುತ್ತಿದ್ದನ್ನು ಕಂಡು ತುಂಬಾ ಮೇಲು ದನಿಯಲ್ಲಿ ಆ ಹುಡುಗಿಗೆ ಸರತಿಯಲ್ಲಿಯೇ ಬರಲು ಹೇಳಿದೆ. ಅವರಿಗೆ ಅಲ್ಲಿದ್ದ ಪೊಲೀಸಪ್ಪನೇ ನೆಂಟನಾದ್ದರಿಂದ ಅವರುಗಳನ್ನು ಒಳ ತೂರಿಸಲು ಆತನೂ ತನ್ನ ಕೈಲಾದ ಸೇವೆ ಸಲ್ಲಿಸುತ್ತಿದ್ದ. ನನ್ನ ಕೋರಿಕೆಗೆ ಅವರುಗಳ ಮಾತು , ಹುಡುಗಿಯ ದಡ್ಡ ಮೌನ ಎಲ್ಲವೂ ಸೇರಿತ್ತು. ಆತ “ಆಯ್ತು ಬಿಡಿ ನೀವೇ ವೋಟ್ ಆಕೋಳಿ ನನಗೆ ವೋಟ್ ಆಕದಿದ್ದರೆ ಪ್ರಾಣ ಓಗಲ್ಲ” ಎಂದ. “ಅಪ್ಪ ತಂದೆ ವೋಟ್ ಹಾಕದಿದ್ದರೆ ನಿನ್ನ ಪ್ರಾಣ ಹೋಗಲ್ಲ ಆದರೆ ನನ್ನದು  ಹೋಗತ್ತಪ್ಪಾ” ಎಂದು ಹೇಳಿ ಅಂತೂ ಸರತಿ ಸಾಲಿನ ಕೊನೆ ಸೇರಿಸಿದೆ ಆ ಅಪ್ಪ ಮಗಳನ್ನು. ಇದು ಹೆಚ್ಚುಗಾರಿಕೆಯಲ್ಲ . ಆದರೆ ನಾ ವಿರೋಧ ವ್ಯಕ್ತ ಪಡಿಸಿ ಗೆದ್ದ ಮೇಲೆ ಅಲ್ಲಿದ್ದ ಒಂದಷ್ಟು ಹೆಂಗಸರು Thank you  ಎಂದದ್ದು ಒಂದು ಪಾಠ. ದನಿ ಎತ್ತಬೇಕು ಎನ್ನುವ ಮೆದುಳಿದ್ದರೂ “ಶ್ ಸೈಲೆನ್ಸ್” ಎನ್ನುವ ಗುಡುಗಿಗೆ ಬಲಿಯಾಗುವ ಹೆಂಗಸರ ಪರವಾಗಿ ಮಾತಾಗಲಾದರೂ ಮತ ಹಾಕಬೇಕು. ಬಾಲ್ಯ ಕಳೆಯುತ್ತಿದ್ದ ಕಾಲದಲ್ಲಿ ನನ್ನ ಅಜ್ಜಿ ತಾತನ ತಲೆ ಮಾರಿನವರು ನಮ್ಮ ಹಾಗೆ ಕೈಕೈ ಹಿಡಿದುಕೊಂಡು ಮುಸಿಮುಸಿ ನಗುತ್ತಾ, ಕಣ್ಣಲ್ಲೇ ಕಾಮಿಸುತ್ತಾ, ಮಾತುಗಳಲ್ಲಿ ಪ್ರೇಮಿಸುತ್ತಿದ್ದವರಲ್ಲ. ಯಾರು ಗಂಡ ಆತನ ಹೆಂಡತಿ ಯಾರು ಎನ್ನುವುದು ಕೇವಲ ಹೆಸರುಗಳ ಮೂಲಕವೇ ಕಂಡುಕೊಳ್ಳ ಬೇಕಿತ್ತು. ಆದರೆ ಅಂತಹ ಮಡಿವಂತರುಗಳು ಜೋಡಿಯಾಗಿ ಬೀದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದದ್ದು ಚುನಾವಣೆಯ ದಿನ, ಮತಗಟ್ಟೆಗಳ ಮುಂದಿನ ಸಾಲುಗಳಲ್ಲಿ ಮಾತ್ರ. ಗಂಡನ ಇತರೆ ಸಂಬಂಧಗಳು, ಹೆಂಡತಿಯ ಮೂದಲಿಕೆ, ಮನೆ ಭರ್ತಿ ಮಕ್ಕಳು, ನೆಂಟರು ಇಷ್ಟರುಗಳ ಕದಲಿಕೆ, ಹಣ-ಕಾಸಿನ ಅಗಲಿಕೆ ಯಾವುದಕ್ಕೂ ಆ ದಿನ ಮಾತ್ರ ಜಗ್ಗದೆಯೇ ಬಂದು ಮತ ಚಲಾಯಿಸುತ್ತಿದ್ದರು ವೃದ್ಧ ದಂಪತಿಗಳು ಅದು ಒಂದೇ ಕಾರಣಕ್ಕೆ ಸೊಗಸಾಗಿ ಕಾಣಿಸುತ್ತಿದ್ದರು ಕೂಡ. ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರರ, ವಿದ್ಯಾವಂತ ಕುಟುಂಬ ನಮ್ಮದು. ಊಟವನ್ನಾದರೂ ಬಿಟ್ಟೇವು ಪ್ರತಿಷ್ಠೆ, ನಿಷ್ಠೆಯಿಂದ ಕದಲೆವು ಎನ್ನುವ ಪಾಠವನ್ನು ಮನೆಯ ಪ್ರತಿ ಅಮ್ಮನೂ ಮಕ್ಕಳಿಗೆ ತುತ್ತಿಡುವಾಗಲೇ ಜೀರ್ಣಿಸಿಕೊಡುತ್ತಿದ್ದ ಮನೆತನ. ಅಂದಮೇಲೆ ಚುನಾವಣೆ ದಿನ ದಸರೆಯ ದಿನಗಳ ಸಂಭ್ರಮಕ್ಕಿಂತ ಭಿನ್ನ ಎನಿಸುತ್ತಿರಲಿಲ್ಲ. ಕೂಡು ಕುಟುಂಬದ ಪ್ರತೀ ಗಂಡಸರು ಹೆಂಗಸರು ವಯಸ್ಕ ಮಕ್ಕಳು ತಮ್ಮ ನಿತ್ಯ ಕೆಲಸಗಳನ್ನು ಮುಗಿಸಿ ಬೆಳಿಗ್ಗೆ 7.30 ಗಂಟೆಗೆ ಮತಗಟ್ಟೆಯ ಮುಂದೆ ನಿಂತಿರಬೇಕು ಎನ್ನುವ ಅಲಿಖಿತ ನಿಯಮ. ಮತಗಟ್ಟೆಯ ಸಿಬ್ಬಂದಿಗಳು ಇನ್ನೂ ಬೆಳಗಿನ ಕಾಫಿ ಕುಡಿದು ಮುಗಿಸುವುದರ ಮೊದಲೇ ಕೆ.ರಾಮಣ್ಣ (ನನ್ನ ತಂದ) ಇವರ ಕುಟುಂಬದವರು ಹನುಮಂತನ ಬಾಲದಂತೆ ಮತಗಟ್ಟೇಯ ಮುಂದೆ ನಿಂತಿರುತ್ತಿದ್ದರು. ಆ ದಿನಗಳಲ್ಲಿ ದೇಶ ಭಕ್ತಿ ಮತ್ತು ಕರ್ತವ್ಯ ಎನ್ನುವ ಪರಿಕಲ್ಪನೆಗಳ ವ್ಯಾಖ್ಯಾನವನ್ನು ಸುಪ್ರೀಮ್ ಕೋರ್ಟ್ ಕೊಟ್ಟೀರಲಿಲ್ಲ ಬದಲಿಗೆ ದೇಹದಲ್ಲಿರುವ ಪ್ರತೀ ಜೀವಕೋಶಗಳು ಉತ್ಪಾದನೆ ಮಾಡುತ್ತಿದ್ದವು ಅದಕ್ಕೇ ವಯಸ್ಸು, ಅಂತಸ್ತುಗಳ ವ್ಯತ್ಯಾಸವಿಲ್ಲದೆ ಮತಗಳು ನೊಂದಾಯಿತವಾಗುತ್ತಿತ್ತು. ಈ ಬಾರಿಯೂ ನಾನು ಮತ್ತು ಹಾಕಿದ್ದು ಅಭ್ಯರ್ಥಿಯ ಬಗ್ಗೆ ನನಗಿರುವ ವಿಶ್ವಾಸಕ್ಕಾಗಲೀ, ರಾಜಕೀಯದಲ್ಲಿ ಉಳಿದುಕೊಂಡಿರುವ ಅಲ್ಪ ಆಸಕ್ತಿಯಿಂದಾಗಲೀ ಅಲ್ಲ. ನನ್ನ ಮನೆತನದ ಹೆಮ್ಮೆಯ ಧ್ಯೋತಕವಾಗಿ. ನನ್ನ ಪಪ್ಪ-ಅಮ್ಮ ನಮ್ಮೆಲ್ಲರನ್ನು ಬೆಳಿಸಿದ ಪರಿಗೆ ಸಲ್ಲಿಸುವ ಗೌರವಕ್ಕಾಗಿ. ಈ ನೆಲಕ್ಕೆ ಸ್ವಾತಂತ್ರ್ಯದ ಗಾಳಿಯನ್ನು ಸರಾಗವಾಗಿಸಿಕೊಟ್ಟ ನನ್ನ ಪಪ್ಪನಂತಹ ಹೋರಾಟಗಾರರಿಗೆ ಧನ್ಯವಾದ ಹೇಳುವುದಕ್ಕಾಗಿ. ಮೈ ಮನ ಮಸಿಯಾಗಿಸದೆಯೇ ಬೆರಳನ್ನು ಮಾತ್ರ ಕರೆ ಮಾಡಿಕೊಳ್ಳುವ ಸೋಜಿಗದ ಪ್ರತೀಕದಂತೆ ಕಾಣುತ್ತದೆ ನನಗೆ ಮತ ಚಲಾವಣೆ. ಒಂದು ಕಪ್ಪು ಕಲೆ ವಿಕಾರ ರೂಪದಲ್ಲಿ ಹುಟ್ಟಿ ದಿನಗಳೆದಂತೆ ಗಾಢವಾಗುತ್ತಾ, ಆಕಾರ ಪಡೆಯುತ್ತಾ, ಕ್ರೋಢಿಕರಣಗೊಂಡು, ಉಗುರ ತುದಿಯಲ್ಲಿ ಸಾಂಧ್ರವಾಗಿ, ಮತ್ತೆ ಬರುತ್ತೇನೆ ಎಂದು ಹೇಳುತ್ತಾ ದೂರಾಗುವ ಪರಿಯನ್ನು ನೋಡುವುದು ಮತ್ತು ಅದರಿಂದ ಕಲಿಯುವುದು, ಈ ರೊಮ್ಯಾಂಟಿಕ್ ಪ್ರಕ್ರಿಯೆಯಲ್ಲಿ ದೇಶ ಎನ್ನುವ ಚಿರಯೌವ್ವನೆ ಅರಳುವುದ ಕಾಣಲು ಮತ ಹಾಕಿದ್ದೇನೆ. ಹಾಂ ಹಿಂದಿರುಗಿ ಬರುವ ದಾರಿಯಲ್ಲಿ ಮೆಡಿಕಲ್ ಶಾಪ್ ತೆಗೆದಿತ್ತು . ಹೊಸ ಮುಖ ಚಿಗುರು ಮೀಸೆ ಹೊತ್ತು ಗಿರಾಕಿಗಳ ಕೈಯಿಂದ ಚೀಟಿ ತೊಗೊಂಡು ಚುರುಕಾಗಿ ಔಷಧಿ ಬಟವಾಡೆ ಮಾಡುತ್ತಿತ್ತು. ಬೆರಳು ನೋಡಿದೆ ಮಸಿ ಇಲ್ಲ. ‘ ವೋಟ್ ಮಾಡಲಿಲ್ಲವಾ ಮಗಾ’ ಎಂದೆ . ‘ಇಲ್ಲಾ ಮೇಡಂ ಊರಿಗೆ ಹೋಗಿ ವೋಟ್ ಹಾಕಕ್ಕೆ ಓನರ್ ರಜಾ ಕೊಡಲಿಲ್ಲ ‘ ಎಂದ. ಓನರ್ಗೆ ಫೋನ್ ಮಾಡಿದೆ. ಆತ ಕುಟುಂಬ ಸಮೇತ ಮತಗಟ್ಟೆಯ ಸಾಲಿನಲ್ಲಿ ನಿಂತಿದ್ರು. ನನ್ನ ಮಾತುಗಳನ್ನೆಲ್ಲಾ ಕೇಳಿಸಿಕೊಂಡು ಸಾರೀಮೇಡಮ್ ಎಂದರಷ್ಟೇ. ಆ ಕೊನೆಘಳಿಗೆಯಲ್ಲಿ ನಾ ಏನೂ ಮಾಡಲಾಗಲಿಲ್ಲ. ಆದರೆ ಮುಂದಿನ ಚುನಾವಣೆಗೆ ಹುಡುಗ ರಜೆ ಪಡೆದು ವೋಟ್ ಹಾಕುತ್ತೇನೆ ಎನ್ನುವಷ್ಟು ಸಬಲನಾದರೆ ಚಲಾವಣೆಯಾದ ನನ್ನ ಮತಕ್ಕೂ ಹೆಮ್ಮೆ. ನನ್ನ ಮೈಸೂರಿನ ದಿನಗಳಲ್ಲಿ ’ಅಮ್ಮ ಎಲ್ಲಿ?’ ಎನ್ನುವ ಯಾರದ್ದೇ ಪ್ರಶ್ನೆಗೂ ಉತ್ತರ ಇರುತ್ತಿದ್ದದ್ದು ಅಡುಗೆ ಮನೆಯಲ್ಲಿ, ಪೂಜಾ ಕೋಣೆಯಲ್ಲಿ, ಬಟ್ಟೆ ಒಣಗುವಲ್ಲಿ, ಪಾತ್ರೆ ತೊಳೆಸಿಕೊಳ್ಳುವ ಹಿತ್ತಲಲ್ಲಿ, ದಾಸವಾಳಕ್ಕೆ ನೀರು ಹಾಕುವ ಕಾಂಪೌಂಡ್‍ನಲ್ಲಿ, ಗಂಡನ ಕೇಳಿ ಬರುವ ದೂರವಾಣಿ ಕರೆಗಳಿಗೆ ನೀಡುತ್ತಿದ್ದ ಮಾಹಿತಿಗಳಲ್ಲಿ, ನೆಂಟರಲ್ಲಿ-ನೆರೆಹೊರಯವರಲ್ಲಿ, ಪುಸ್ತಕದ ಓದಿನಲ್ಲಿ, ವೀಣೆ ನುಡಿಸುವುದರಲ್ಲಿ, ಯೋಗಾಭ್ಯಾಸ ಮಾಡುವಲ್ಲಿ, ಲೇಖನಗಳನ್ನು ಬರೆಯುವಲ್ಲಿ ಎಂದಾಗಿತ್ತು. ಇಷ್ಟೆಲ್ಲವೂ ಆಗಿಹೋಗಿದ್ದ ನನ್ನಮ್ಮ ಚುನಾವಣೆ ದಿನದಲ್ಲಿ ಕೇವಲ ಮತದಾರಮಾತ್ರ ಆಗಿರುತ್ತಿದ್ದಳು. ಸ್ವತಂತ್ರ್ಯ ಭಾರತಕ್ಕೆ ಎರಡೇ ವರ್ಷ ಚಿಕ್ಕವಳು ಅವಳು. ಈಗಲೂ ಬದಲಾವಣೆ ಆಗದ ಅವಳ ಒಂದೇ ಸ್ವಭಾವ ಎಂದರೆ ಮತ ಹಾಕುವುದು. ಒಮ್ಮೆ ಮೈಸೂರಿನ ಸ್ಥಳೀಯ ಚುನಾವಣೆಯ ಸಮಯ. ಕಾಲು ಫ್ರ್ಯಾಕ್ಚರ್ ಆಗಿ ಇವಳು ಬೆಂಗಳೂರಿನ ಆಸ್ಪತ್ರೆ ವಾಸಿ. “ಇನ್ನು ಎರಡು ವಾರ ರೆಸ್ಟ್ ನಲ್ಲಿ  ಇರಬೇಕು” ಡಾಕ್ಟರ್ ಹೇಳಿಯಾಗಿತ್ತು. ಬಿಡುವಳೇ ಇವಳು, ’ಸಾಧ್ಯವೇ ಇಲ್ಲ ಮತ ಹಾಕಲೇ ಬೇಕು” ಎಂದು ಶೂರ್ಪಣಕಿಯ ಹಠದಲ್ಲಿ ಮೈಸೂರಿಗೆ ನೇರವಾಗಿ ಮತಗಟ್ಟೆಗೇ ಬಂದವಳು. ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲೂ ಮತ ಹಾಕಲು ತಪ್ಪಿಸಿಕೊಳ್ಳದವಳು. ಯಾವ ಚುನಾವಣೆಯ ದಿನದ ಹಿಂದಿನ ರಾತ್ರಿಯೇ ಫೋನ್ ಮಾಡಿ ಬೆಳಗ್ಗೆ ಬೇಗ ಹೋಗಿ ಮತ ಹಾಕಿಬಿಡು ಎಂದು ಎಚ್ಚರಿಸಿ ಮಲಗುವವಳು ಅಷ್ಟೇ ಅಲ್ಲ ,  ಮತ ಹಾಕಿ ಬರುವವರೆಗೂ ಪ್ರಾಣ ತಿನ್ನುವ ನನ್ನ ಅಮ್ಮ ನಿಜಕ್ಕೂ ಆಯ್ಕೆ ಸ್ವಾತಂತ್ರ್ಯದ ಸದ್ಬಳಕೆ ಕಲಿಸಿಕೊಟ್ಟವಳು. ನಾ ಮತ ಹಾಕುವುದು ಅವಳೆಡೆಗೆ ನನ್ನ ಒಂದು ಮುಷ್ಟಿ ಋಣ ಸಂದಾಯದಂತೆ. ಪಪ್ಪ ಇರುವವರೆಗೂ ಅವರೊಂದಿಗೇ ಹೋಗಿ ಮತ ಹಾಕಿ ಬರುತ್ತಿದ್ದ ಅಮ್ಮನ ಕಾಲುಗಳು ಈಗ ಊರುಗೋಲಿನ ಸಾಂಗತ್ಯಕ್ಕೆ ಜೋತು ಬಿದ್ದಿವೆ. ಚಾಮುಂಡಿ ತಾಯಿ ನೀಡುತ್ತಿರುವ ಬೇಸಿಗೆ ತಡೆದುಕೊಳ್ಳುವ ಶಕ್ತಿ ಇಲ್ಲವಾಗಿದೆ. ಹೊಸಿಲು ದಾಟಲು ಯಾರದ್ದಾದರೂ ಕೈ ಹಿಡಿದುಕೊಳ್ಳಲೇ ಬೇಕು ಎನ್ನುವ ಸ್ಥಿತಿ ಆದರೂ ಚುನಾವಣಾ ದಿನಕ್ಕೆ ಉಡಬೇಕಾದ ಸೀರೆ ರವಿಕೆಗೆ ಇಸ್ತ್ರಿ ಮಾಡಿರಿಸಿಕೊಂಡಿದ್ದಳು. ಈಗಂತೂ ಮತ ಚಲಾವಣೆ ಅವಳ ಪಾತಿರ್ವ್ರತ್ಯದ ಒಂದು ಭಾಗವಾಗಿದೆ. ಅದನ್ನು ಅವಳು ತನ್ನ ಗಂಡನಿಗೆ ತೋರುವ ಪ್ರೀತಿ, ಕಾಳಜಿ ನಿಷ್ಠೆ ಎಂದುಕೊಂಡಿರುವಂತಿದೆ. “ಅಮ್ಮ ನೀ ಕಳೆದ ಬಾರಿ ಮತ ಹಾಕಿದವರು ಗೆಲ್ಲಲಿಲ್ಲ, ಸುಮ್ಮನೆ ಯಾಕೆ ಶ್ರಮ ಪಡ್ತೀಯ, ಮನೇಲಿರು” ಎನ್ನುವ ಮಗಳ ಉಪದೇಶದ ಒಂದು ವಾಕ್ಯಕ್ಕೆ , ಪ್ಯಾರಾಗ್ರಾಫ್‍ನಲ್ಲಿ ಸಿಟ್ಟಾಗುತ್ತಾಳೆ. “ಹೌದು ಈ ಬಾರಿಯೂ ನನ್ನ ಅಭ್ಯರ್ಥಿ ಗೆಲ್ಲುವ ಸಂಭವ ಕಡಿಮೆ , ಆದರ ನಾನು ಅವನಿಗೇ ವೋಟ್ ಹಾಕೋದು” ಎನ್ನುತ್ತಾಳೆ. “ಇಷ್ಟೆಲ್ಲಾ ಮೈಕೈ ನೋಯಿಸಕೊಂಡು ಹೋಗ್ತಿದ್ದೀಯ ಗೆಲ್ಲುವ ಅಭ್ಯರ್ಥಿಗೇ ಹಾಕು ನಿನ್ನ ಮತ ಉಪಯೋಗಕ್ಕೆ ಬರಲಿ” ಎನ್ನುವ ನನ್ನೆಡೆಗೆ ಅನುಮಾನದ ನೋಟ ತೂರುತ್ತಾ ಹೇಳುತ್ತಾಳೆ  “ನಿನ್ನ ಪಪ್ಪ ಇದ್ದಿದ್ದರೆ ಅವರು ನೀ ಹೇಳುವ ಅಭ್ಯರ್ಥಿಗೆ ವೋಟ್ ಹಾಕ್ತಿದ್ದ್ರಾ? ಇದು ನನ್ನ ಮತ ಅಲ್ಲ ನನ್ನ ಗಂಡನ ವೋಟ್ ನಾನು ಹಾಕುತ್ತಿದ್ದೇನೆ” ಬೇಗ ಹೋಗಲು ಉಸಿರು ಸಾಲದೆ ನಡು ಮಧ್ಯಾಹ್ನದಲ್ಲಿಯಾದರೂ ಮತ ಹಾಕಿದ್ದು ಅವಳ ಪಾಲಿಗೆ ಜೀವದ್ರವದಂತೆ. ಆ ತಲೆಮಾರಿಗೆ ನಿಷ್ಠೆ ಕಲಿಸಿಕೊಟ್ಟ ಚುನಾವಣೆಗಳು ನನ್ನ ತಲೆಮಾರಿಗೆ ಬದಲಾವಣೆಯನ್ನು “ಬಯಸು, ಆರಿಸು, ಒಪ್ಪಿಕೊ”  ಎನ್ನುವುದನ್ನು ಕಲಿಸಿಕೊಟ್ಟಿದೆ. ಆದರೆ ಈ ದೇಶ ನನ್ನದು ಎನ್ನುವ ಸ್ವಾರ್ಥವನ್ನು ಮಾತ್ರ ಕಡಿಮೆ ಮಾಡಿಲ್ಲ ರಾಜಕೀಯ. ಅದಕ್ಕಾಗಿಯಾದರೂ ಮತ ಹಾಕಲು ತಪ್ಪಿಸುವುದಿಲ್ಲ.  ಹೌದು, ಕಾಲ ಮತ್ತು ಹರೆಯ ಇಬ್ಬರದ್ದೂ ಗಳಸ್ಯ ಕಂಠಸ್ಯ ಜೋಡಿ ಮತ್ತು ಅವರುಗಳ ಬಂಡಿಗೆ ರಿವರ್ಸ ಗೇರ್ ಇರುವುದಿಲ್ಲ ಥೇಟ್ ಅಮ್ಮನ ವಾತ್ಸಲ್ಯ ಮತ್ತು ಅಪ್ಪನ ಅಭಯದಂತೆ. ಇದೇ ಆಸ್ಥೆಯೊಂದಿಗೆ ಈ ಬಾರಿಯೂ ಮತ ಹಾಕಿ ಬಂದೆ. ********************************* (ಲೇಖನ ಕೃಪೆ: ಆಂದೋಲನ ಪತ್ರಿಕೆ ಮೈಸೂರು-ಏಪ್ರಿಲ್-2019) ಮತ್ತು ಅಸ್ಥಿತ್ವ ಲೀಗಲ್ ಬ್ಲಾಗಸ್ಪಾಟ್.ಕಾಮ್

ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ Read Post »

ಇತರೆ, ದಾರಾವಾಹಿ

ದಾರಾವಾಹಿ- ಅದ್ಯಾಯ-11 ಅದೃಷ್ಟದಿಂದಲೋ, ದೈವಕೃಪೆಯಿಂದಲೋ ಮನುಷ್ಯನಿಗೆ ದೊರಕುವ ಸುಖ ಸಂಪತ್ತು ಕೆಲವೊಮ್ಮೆ ಅವನನ್ನು ಎಂಥ ಕಾರ್ಯಕ್ಕಾದರೂ ಪ್ರೇರೇಪಿಸಬಲ್ಲದು ಎಂಬುದಕ್ಕೆ ಸಂತಾನಪ್ಪ ಕಿಲ್ಲೆಯೇ ಸಾಕ್ಷಿಯಾಗುತ್ತಾನೆ. ಅವನು ತನ್ನ ದಿಢೀರ್ ಶ್ರೀಮಂತಿಕೆಯಿಂದಲೂ, ಗಂಡಸುತನದ ಕೊಬ್ಬಿನಿಂದಲೂ ಮಸಣದ ಗುಡ್ಡೆಯ, ತನಗಿಂತ ಇಪ್ಪತ್ತು ವರ್ಷ ಕಿರಿಯಳಾದ ದ್ಯಾವಮ್ಮ ಎಂಬ ಹುಡುಗಿಯನ್ನು ಒಲಿಸಿ ತನ್ನವಳನ್ನಾಗಿಸಿಕೊಂಡ ವಿಷಯವು ಅವಳ ಪ್ರಿಯಕರ ಪರಮೇಶನಿಗೆ ತಿಳಿದುಬಿಟ್ಟಿತು. ಪರಮೇಶ ದ್ಯಾವಮ್ಮಳನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದವನು ಕಂಗಾಲಾಗಿಬಿಟ್ಟ. ಸಂತಾನಪ್ಪ ತನ್ನ ಹುಡುಗಿಯನ್ನು ಯಾವತ್ತು ಮರುಳು ಮಾಡಿ ಬಗಲಿಗೆಳೆದುಕೊಂಡನೋ ಆವತ್ತಿನಿಂದ ಪರಮೇಶನಿಗೆ ಜೀವನದಲ್ಲಿ ಜಿಗುಪ್ಸೆ ಹುಟ್ಟಿತ್ತು. ಜೊತೆಗೆ ಸಂತಾನಪ್ಪನ ಮೇಲೆ ತೀವ್ರ ದ್ವೇಷವೂ ಬೆಳೆದುಬಿಟ್ಟಿತು. ಆದ್ದರಿಂದ ಅವನು ತಾನು ಸಂತಾನಪ್ಪನಂಥ ನೀಚನ ಮೇಲೆ ಸೇಡು ತೀರಿಸಿಕೊಳ್ಳದಿದ್ದರೆ ತನ್ನ ಪುರುಷತ್ವಕ್ಕೇ ಅವಮಾನ! ಎಂದು ಯೋಚಿಸುತ್ತ ಕುದಿಯತೊಡಗಿದ. ಆದರೆ ಸಂತಾನಪ್ಪನೆದುರು ತಾನು ಉಸಿರೆತ್ತಲಾಗದ ದೈನೇಸಿ ಸ್ಥಿತಿಯಲ್ಲಿದ್ದೇನೆಂಬುದನ್ನೂ ತಿಳಿದಿದ್ದವನು ಅದೇ ಕೊರಗಿನಿಂದ ಮಹಾ ಕುಡುಕನಾಗಿಬಿಟ್ಟಿದ್ದ. ಆದರೂ ಸರಿಯಾದ ಸಮಯಕ್ಕಾಗಿ ಹೊಂಚು ಹಾಕುತ್ತಲೇ ಇದ್ದ. ಹಾಗಾಗಿ ಇಂದು ಅದೇ ಸಂತಾನಪ್ಪ ಈಶ್ವರಪುರದ ಪ್ರತಿಷ್ಠಿತ ಬಿಲ್ಡರ್‍ಗಳಲ್ಲೊಬ್ಬನಾದ ಶಂಕರನ ಮೇಲೆ ಮಚ್ಚು ಹರಿಸಲು ಹವಣಿಸುತ್ತ ತಿರುಗಾಡುತ್ತಿದ್ದ ಸಂಗತಿಯು ಪರಮೇಶನಿಗೆ ತಿಳಿದು ಅವನ ದ್ವೇಷದ ಜ್ವಾಲೆಗೆ ತುಪ್ಪ ಸುರಿದಂತಾಯಿತು. ಅವನು ತನ್ನ ಸೇಡು ತೀರಿಸಿಕೊಳ್ಳುವ ಸಮಯ ಹತ್ತಿರವಾದ ಖುಷಿಯಿಂದ ಸಾರಾಯಿ ಶೀಶೆಯನ್ನು ನೆತ್ತಿಯ ಮೇಲಿಟ್ಟುಕೊಂಡು ಕುಣಿದಾಡಿಬಿಟ್ಟ!    ಉತ್ತರ ಕರ್ನಾಟಕದ ರುದ್ರೇನಾಹಳ್ಳಿ ಎಂಬ ಕುಗ್ರಾಮವೊಂದರಲ್ಲಿ ಹುಟ್ಟಿ ಬೆಳೆದ ಪರಮೇಶ ಮತ್ತು ದ್ಯಾವಮ್ಮ ನೆರೆಕರೆಯಲ್ಲೇ ವಾಸಿಸುತ್ತಿದ್ದವರು.  ಅವನಿಗೆ ಕುಡಿಮೀಸೆ ಚಿಗುರುತ್ತಲೂ ಇವಳಿಗೆ ಹದಿಹರೆಯ ಇಣುಕುತ್ತಲೂ ಇಬ್ಬರ ನಡುವೆ ದೈಹಿಕಾಕರ್ಷಣೆಯ ಪ್ರೇಮಾಂಕುರವಾಗಿತ್ತು. ಆದರೆ ಆ ಪ್ರೀತಿಯ ಮಧುರ ಸವಿಯನ್ನು ಹೆಚ್ಚು ಕಾಲ ಅನುಭವಿಸಲು ಇಬ್ಬರ ಮನೆಯ ಪರಿಸ್ಥಿತಿಯೂ ಅವಕಾಶ ಕೊಡಲಿಲ್ಲ. ಒಂದೆಡೆ ಅತಿಯಾದ ಬಡತನ, ಇನ್ನೊಂದೆಡೆ ಮಳೆ ಬೆಳೆಯೂ ಚೆನ್ನಾಗಿ ಆಗದೆ ದ್ಯಾವಮ್ಮನ ಅಪ್ಪ ಮಲ್ಲೇಶ ತಾನು ಮಾಡಿದ ಕೃಷಿ ಸಾಲ ತೀರಿಸಲಾಗದೆ ಊರುಬಿಟ್ಟು ಹೋಗುವುದೇ ಸಮಸ್ಯೆಗೆ ಪರಿಹಾರವೆಂದು ನಿರ್ಧರಿಸಿದ. ಅತ್ತ ಪರಮೇಶನ ಕುಟುಂಬವೂ ಅದೇ ಕಾರಣಕ್ಕೆ ಮಲ್ಲೇಶನ ಕುಟುಂಬದೊಂದಿಗೆ ಸೇರಿ ವಲಸೆ ಹೊರಟು ಕಟ್ಟಡ ಕಾಮಗಾರಿ ಬಿಲ್ಡರ್‍ಗಳ ‘ಅಧಿಕ ಸಂಬಳ’ ದ ಆಸೆಗೊಳಗಾಗಿ ಈಶ್ವರಪುರಕ್ಕೆ ಬಂದು ನೆಲೆಸಿತ್ತು. ದ್ಯಾವಮ್ಮ ಪರಮೇಶನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಆದ್ದರಿಂದ ಪರವೂರಿಗೆ ಬಂದ ನಂತರ ಕೆಲವು ಕಾಲ ಅವನ ಸಾಂಗತ್ಯವನ್ನು ಮತ್ತಷ್ಟು ಬಯಸುತ್ತಿದ್ದಳು. ಪರಮೇಶನಿಗೂ ಅವಳು ಸರ್ವಸ್ವವಾಗಿದ್ದಳು. ಊರಲ್ಲಿದ್ದಾಗಲೂ ಅವನು ಸದಾ ಅವಳ ಹಿಂದೆಯೇ ಸುತ್ತುತ್ತಿದ್ದ. ಇಬ್ಬರೂ ತಂತಮ್ಮ ಹೊಲಗದ್ದೆಗಳ ಕೆಲಸ ಕಾರ್ಯಗಳಲ್ಲೂ ಜೊತೆಯಾಗಿ ದುಡಿಯುತ್ತ ಮಾವು ಮತ್ತು ದಾಳಿಂಬೆ ತೋಪುಗಳ ಮರೆಯಲ್ಲಿ ಕುಳಿತು ಪ್ರೇಮಸಲ್ಲಾಪವಾಡುತ್ತ ಪ್ರಪಂಚವನ್ನೇ ಮರೆಯುತ್ತಿದ್ದರು. ಆದರೆ ಅಂದು ತನ್ನ ಜನುಮದ ಗೆಳೆಯನನ್ನು ಒಂದು ಕ್ಷಣವೂ ಬಿಟ್ಟಿರಲಾಗದೆ ಒಡನಾಡುತ್ತಿದ್ದ ದ್ಯಾವಮ್ಮ ಈಶ್ವರಪುರಕ್ಕೆ ಬಂದ ಕೆಲವೇ ಕಾಲದೊಳಗೆ ಬದಲಾಗಿಬಿಟ್ಟಳು. ಅದಕ್ಕೆ ಕಾರಣವೂ ಇತ್ತು. ಈಶ್ವರಪುರದ ಜನರ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ, ಅವರ ಶಿಸ್ತುಬದ್ಧ ಜೀವನಶೈಲಿ, ಸುಸಂಸ್ಕೃತ ನಡೆ ನುಡಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿನ ತನ್ನ ಓರಗೆಯ ಹೆಣ್ಣು ಮಕ್ಕಳ ಸ್ನಿಗ್ಧ ಚೊಕ್ಕ ಸೌಂದರ್ಯ ಹಾಗೂ ಅದಕ್ಕೊಪ್ಪುವಂಥ ಆಧುನಿಕ ಶೈಲಿಯ ವೇಷ ಭೂಷಣಗಳನ್ನು ಅವರೆಲ್ಲ ತೊಡುತ್ತ ವನಪು ವಯ್ಯಾರದಿಂದ ಮಿಂಚುತ್ತಿದ್ದುದನ್ನು ಕಾಣುತ್ತ ಬಂದ ಬಯಲುಸೀಮೆಯ ಹಳ್ಳಿಯ ಹುಡುಗಿ ದ್ಯಾವಮ್ಮನಿಗೆ ತನ್ನೂರಿನ ಜೀವನವೇಕೋ ಶುಷ್ಕ ನೀರಸವಾಗಿ ಕಾಣತೊಡಗಿತು. ಹಾಗಾಗಿ ತಾನೂ ಇಲ್ಲಿನವರಂತೆ ಸುಂದರವಾಗಿ ಬದುಕಬೇಕು ಎಂದು ಅವಳು ಇಚ್ಛಿಸಿದಳು. ಅಪ್ಪನೊಂದಿಗೆ ಕೂಲಿಗೆ ಹೋಗಿ ದುಡಿಮೆಯಾರಂಭಿಸಿದ ಮೇಲೆ ಕೆಲವೇ ಕಾಲದೊಳಗೆ ಲಂಗ ದಾವಣಿ ಮತ್ತು ಅರ್ಧ ಸೀರೆಯಂಥ ಹಳ್ಳಿಯ ಉಡುಗೆ ತೊಡುಗೆಗಳನ್ನು ಕಿತ್ತೊಗೆದು ಚೂಡಿದಾರ್, ಸ್ಕರ್ಟ್‍ಗಳನ್ನು ತೊಟ್ಟುಕೊಂಡು ವಿಹರಿಸಲಾರಂಭಿಸಿದಳು. ಬರಬರುತ್ತ ಅದರಿಂದಲೂ ತೃಪ್ತಳಾಗದೆ ಜೀನ್ಸ್ ಪ್ಯಾಂಟ್, ಟೀಶರ್ಟ್ ಧರಿಸುವವರೆಗೂ ಮುಂದುವರೆದು ಹದಿನೆಂಟರ ಹರೆಯ ತನ್ನ ಕೋಮಲ ಸೌಂದರ್ಯವನ್ನು ಮಾಟವಾಗಿ ಪ್ರದರ್ಶಿಸುತ್ತ ಖುಷಿಪಡಲಾರಂಭಿಸಿದಳು. ಆದ್ದರಿಂದ ದಿನವಿಡೀ ಎಲೆಯಡಿಕೆ, ಮಾವಾ ಮತ್ತು ಪಾನ್‍ಪರಾಗ್‍ನಂಥ ಮಾದಕವಸ್ತುಗಳನ್ನು ಜಗಿಯುತ್ತ ಅದರದೇ ನಶೆಯಲ್ಲಿದ್ದು ಅಡ್ಡ ವಾಸನೆ ಹೊಡೆಯುತ್ತಿದ್ದ ಪರಮೇಶನ ಒಣಕಲು ಮೂತಿಯೂ, ಬಡಕಲು ದೇಹವೂ ಅವಳಿಗೆ ಸಹಜವಾಗಿಯೇ ಅಸಹ್ಯವೆನಿಸತೊಡಗಿತು. ಅದರಿಂದ ನಿಧಾನಕ್ಕೆ ಅವನ ಮೇಲಿನ ಪ್ರೀತಿಯೂ ಅವಳಲ್ಲಿ ಆರಿಹೋಯಿತು.    ಮೂರುಕಾಸಿಗೆ ಬೆಲೆಯಿಲ್ಲದಂಥ ಈ ಪ್ರೀತಿ ಪ್ರೇಮಕ್ಕೆಲ್ಲ ತಾನಿನ್ನು ಮರುಳಾಗುವ ಅವಿವೇಕಿಯಾಬಾರದು. ಪರಮೇಶನನ್ನು ಮದುವೆಯಾದೆನೆಂದರೆ ಸಾಯುವತನಕವೂ ತಾನು ಕೂಲಿನಾಲಿ ಮಾಡುತ್ತ ಗುಡಿಸಲಲ್ಲೇ ಬದುಕಿ ಸಾಯಬೇಕಾದೀತು! ಹಾಗೆ ಬದುಕಲು ತನ್ನಿಂದಿನ್ನು ಸಾಧ್ಯವೇ ಇಲ್ಲ. ಈ ಬಡತನದಿಂದ ಆದಷ್ಟು ಬೇಗ ಹೊರಗೆ ಬಂದು ಇಲ್ಲಿನ ಜನರಂತೆ ತಾನೂ ಸ್ಥಿತಿವಂತಳಾಗುವ ದಾರಿಯನ್ನು ಕಂಡುಕೊಳ್ಳಬೇಕು ಎಂದೆಲ್ಲ ಯೋಚಿಸುತ್ತಿದ್ದ ದ್ಯಾವಮ್ಮ ತನ್ನಿಚ್ಛೆ ನೆರವೇರಿಸುವಂಥ ಗಂಡೊಬ್ಬನ ಅನ್ವೇಷಣೆಗಿಳಿದಳು. ಅದೇ ಸಮಯದಲ್ಲಿ ದಿಢೀರ್ ಶ್ರೀಮಂತನೂ, ಶಂಕರನಂಥ ಸ್ಥಳೀಯ ಶ್ರೀಮಂತರ ಸಂಘ ಬೆಳೆಸಿ ಇಲ್ಲಿನವನಾಗಿಯೇ ರಾಜಾರೋಷದಿಂದ ಬದುಕುತ್ತಿದ್ದ ಸಂತಾನಪ್ಪ ಕಿಲ್ಲೆಯ ಕಟ್ಟಡವೊಂದಕ್ಕೆ ಅವನ ಮೇಸ್ತ್ರಿಯೊಡನೆ ಕೂಲಿಯಾಳಾಗಿ ಹೋದಳು. ಆವತ್ತು ಸಂತಾನಪ್ಪನೂ ತನ್ನ ಕಟ್ಟಡದ ಕೆಲಸಕಾರ್ಯಗಳನ್ನು ಗಮನಿಸಲು ಬಂದಿದ್ದ. ಆಹೊತ್ತು ಆಕಸ್ಮತ್ತಾಗಿ ಅವನ ವಕ್ರದೃಷ್ಟಿಯು ದ್ಯಾವಮ್ಮನ ಮೇಲೆ ಬಿದ್ದುಬಿಟ್ಟಿತು. ಅವಳ ತೆಳ್ಳನೆ ನಸುಗೆಂಪಿನ, ಬಾಗಿ ಬಳುಕುವಂಥ ದೇಹಸಿರಿಯನ್ನು ಕಂಡವನು ಆಕ್ಷಣವೇ ಅವಳನ್ನು ಮೋಹಿಸಿಬಿಟ್ಟ.    ದ್ಯಾವಮ್ಮಳೂ ಸಂತಾನಪ್ಪನನ್ನು ಕೆಲವು ಕ್ಷಣ ಅಡಿಗಣ್ಣಿನಿಂದ ದಿಟ್ಟಿಸಿ ನೋಡಿದಳು. ಮೂವತ್ತೈದರ ಯುವಕನಂತೆ ಕಾಣುತ್ತಿದ್ದ ಅವನ ಕಟ್ಟುಮಸ್ತುತನಕ್ಕಿಂತಲೂ ತನ್ನಪ್ಪನಿಂದಲೇ ಅವನ ಸಿರಿವಂತಿಕೆಯ ಕಥೆಯನ್ನು ಕೇಳಿದ್ದವಳು ಅಂದೇ ಅವನಿಗೆ ಆರ್ಕಷಿತಳಾಗಿ ತನ್ನಾಸೆಯನ್ನು ಪೂರೈಸಿಕೊಳ್ಳಬೇಕೆಂಬ ಕನಸು ಕಾಣತೊಡಗಿದಳು. ಹೀಗಿದ್ದವಳನ್ನು ಆವತ್ತೊಂದು ದಿನ ಮೇಸ್ತ್ರಿಯು ಸಂತಾನಪ್ಪನ ಆಜ್ಞೆಯ ಮೇರೆಗೆ ಅವನ ಕೋಣೆಗೆ ಕಳುಹಿಸಿಕೊಟ್ಟ. ದ್ಯಾವಮ್ಮನಿಗೂ ಅದೇ ಬೇಕಿತ್ತು. ಆದರೆ ಸ್ತ್ರೀ ಸಹಜ ನಾಚಿಕೆ ಅಳುಕು ಅವಳನ್ನು ಕಾಡುತ್ತಿತ್ತು. ಮೇಸ್ತ್ರಿ ಮತ್ತು ಜೊತೆ ಕೆಲಸಗಾರರಿಂದ ಸಂತಾನಪ್ಪನ ಗುಣಗಾನವನ್ನೂ, ಅವನ ಉದಾರತೆಯನ್ನೂ ಕೇಳುತ್ತಿದ್ದವಳಿಗೆ ಅವನು ತಮ್ಮೂರಿನ ಕಡೆಯವನೇ ಎಂಬ ಧೈರ್ಯವೂ ಅವಳನ್ನು ಅವನ ಕೋಣೆ ಹೆಜ್ಜೆಯಿಡುವಂತೆ ಪ್ರೇರೇಪಿಸಿತು. ಕೋಣೆ ಹೊಕ್ಕವಳು ಒಂದು ಮೂಲೆಗೆ ಸರಿದು, ಸಿಮೆಂಟು ಮೆತ್ತಿದ್ದ ತನ್ನ ಪಾದಗಳನ್ನು ಮುಜುಗರದಿಂದ ಮರೆಮಾಚುತ್ತ, ಹೆಬ್ಬೆರಳುಗಳಿಂದ ಅಲ್ಲಲ್ಲೇ ಅದನ್ನು ತೊಡೆದು ಹಾಕುತ್ತ ನಿಂತಳು. ಅವಳ ನಾಚಿಕೆಯನ್ನು ಕಂಡ ಸಂತಾನಪ್ಪ ರೋಮಾಂಚಿತನಾಗಿ ಮಾತಾಡಿಸಿದ. ಅವಳೂ ವಯ್ಯಾರದಿಂದ ನುಲಿಯುತ್ತ ಒಂದಿಷ್ಟು ಮಾತಾಡಿದಳು. ಮಾತಿನ ಮಧ್ಯೆ ಅವಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಂತಾನಪ್ಪನ ಮನಸ್ಸು ಈ ಪುಟ್ಟ ರಾಜಕುಮಾರಿ ತನ್ನವಳಾಗಲೇಬೇಕೆಂದು ಹಠ ಹಿಡಿದುಬಿಟ್ಟಿತು. ಆದ್ದರಿಂದ ಅವನು ಮತ್ತೆ ತಡಮಾಡಲಿಲ್ಲ. ‘ಹೇ, ಹುಡಿಗಿ, ಬ್ಯಾಸರ ಮಾಡ್ಕೊಳ್ಳೊದಿಲ್ಲ ಅಂದ್ರ ಒಂದ್ ಮಾತ್ ಕೇಳೇನು…?’ ಎಂದ ಮೃದುವಾಗಿ.‘ಹ್ಞೂಂ ಹೇಳಿ, ಏನಾ…?’ ಎಂದಳು ಅವಳು ತಲೆತಗ್ಗನನ್ನ ಮದಿವಿ ಆಗ್ತಿ ಏನಾ…?’ ಎಂದು ಸಂತಾನಪ್ಪ ತುಟಿಯಂಚಿನಲ್ಲಿ ನಗುತ್ತ ಕೇಳಿದ. ದ್ಯಾವಮ್ಮ ಬೆಚ್ಚಿ ಬಿದ್ದವಳಂತೆ ನಟಿಸಿದಳು. ನಂತರ ಲಜ್ಜೆಯಿಂದ, ‘ಅಯ್ಯಯ್ಯಾ…ಅದೆಲ್ಲ ನಂಗೊತ್ತಿಲ್ಲಪ್ಪಾ! ಅಪ್ಪಯ್ಯನ್ ಕೇಳಿ. ಅಂವ ಹ್ಞೂಂ ಅಂದ್ರಾ ನಾನೂ ಹ್ಞೂಂ…!’ ಎಂದವಳು ಒಂದೇ ಉಸಿರಿಗೆ ಹೊರಗ್ಹೋಡಿ ಬಂದಳು.    ಅಷ್ಟು ಸಣ್ಣ ಪ್ರಾಯದ ಹುಡುಗಿಯೊಬ್ಬಳು ಪ್ರಥಮ ನೋಟದಲ್ಲೇ ಮತ್ತು ಮೊದಲ ಮಾತುಕತೆಯಲ್ಲೇ ತನ್ನನ್ನು ಮೆಚ್ಚಿದ್ದು ಸಂತಾನಪ್ಪನಲ್ಲಿ ಮೊದಲಿಗೆ ವಿಸ್ಮಯವನ್ನೂ ಅನುಮಾನವನ್ನೂ ಮೂಡಿಸಿತಾದರೂ ಅದನ್ನು ಬದಿಗೊತ್ತಿದವನು, ತಾನು ಈ ವಯಸ್ಸಿನಲ್ಲೂ ಸಣ್ಣ ಹುಡುಗಿಯರು ಇಷ್ಟಪಡುವಂತೆ ಇದ್ದೇನೆಯೇ? ಎಂದು ಯೋಚಿಸಿ ಪುಳಕಿತನಾದ. ಏಕೆಂದರೆ ಅವನು ತನ್ನ ಮೊದಲ ಮಡದಿ ಮುನಿಯಮ್ಮನ ಜೊತೆಗಿನ ಸಂಸಾರದಲ್ಲಿ ಬಹಳವೇ ನೀರಸಗೊಂಡಿದ್ದ. ಹಾಗಾಗಿ ಈಗಿನ ಶ್ರೀಮಂತ ಬದುಕಿಗೆ ಹೊಸದೊಂದು ಸಂಗಾತಿಯ ಬಯಕೆಯು ಅವನನ್ನು ಸದಾ ಕಾಡುತ್ತಿತ್ತು. ಆದ್ದರಿಂದ ಮರುದಿನವೇ ದ್ವಾವಮ್ಮಳ ಅಪ್ಪ ಮಲ್ಲೇಶಪ್ಪನನ್ನು ಕಟ್ಟಡಕ್ಕೆ ಕರೆದು ಕುಳ್ಳಿರಿಸಿಕೊಂಡು ಮಾತುಕತೆಗಿಳಿದ. ಮಲ್ಲೇಶಪ್ಪನಿಗೆ ಸಂತಾನಪ್ಪನ ಕಥೆಯೆಲ್ಲ ಗೊತ್ತಿತ್ತು. ಆದರೂ ತಾನವನ ಅಡಿಯಾಳಾಗಿ ದುಡಿಯುವವನೆಂಬ ಗೌರವಕ್ಕೆ ಮಣಿದು ಅವನೆದುರು ವಿನಮ್ರವಾಗಿ ಕುಳಿತುಕೊಂಡ. ‘ಮಲ್ಲೇಶಪ್ಪಾ ನಾನು ಸುತ್ತಿ ಬಳಸಿ ಮಾತಾಡೋನಲ್ಲ. ನಂಗ್ ಈಗಾಗಲೇ ಸಂಸಾರ ಐತಿ ಅಂತ ನಿಂಗೂ ಗೊತ್ತೈತಿ. ಆದರೆ ನನ್ನಾಕಿ ವಿದ್ಯಾಬುದ್ಧಿ ಕಲ್ತವಳಲ್ಲ. ಮಕ್ಕಳಿನ್ನೂ ಸಣ್ಣವು. ನಂಗಿರುವ ದೊಡ್ಡ ಆಸ್ತಿಯನ್ನು ಸಂಭಾಳಿಸಲು ಅವ್ರಿಂದ ಸಾಧ್ಯ ಆಗಕಿಲ್ಲ. ನಿನ್ ಮಗ್ಳು ಶಾಲೆ ಓದಿರೋಳು. ಭಾಳ ಶಾಣೆಯೂ ಅದಾಳ. ಹಂಗಾಗಿ ನಂಗೆ ಆಕಿ ಹಿಡಿಸಿಯಾಳ. ಆಕಿಗೂ ನಾ ಒಪ್ಪಿಗೆಯಾಗಿವುನಿ. ಆಕಿ ನಿನ್ನ ಒಪ್ಪಿಗಿ ಕೇಳು ಅಂದಾಳ. ನೀನು ಆಕೀನ ನಂಗಾ ಕೊಟ್ಟು ಮದಿವಿ ಮಾಡಿದಿಯಂದ್ರಾ ಆಕೀನ ರಾಣಿ ಹಂಗೆ ನೋಡ್ಕೊಂತೀನಿ ಮಾತ್ರವಲ್ಲ, ನಿನ್ನೆಲ್ಲ ಉದ್ರೀನ (ಸಾಲ) ತೀರ್ಸಿ, ನನ್ ಹಿರಿಯನಂಗೆ ಜೋಪಾನ ಮಾಡ್ತೀನಿ, ಏನಂತೀ…?’ ಎಂದು ಗಂಭೀರವಾಗಿ ಕೇಳಿದ.    ಸ್ತ್ರೀಯರ ವಿಷಯದಲ್ಲಿ ಸಂತಾನಪ್ಪ ಸ್ವಲ್ಪ ದುರ್ಬಲ ಬುದ್ಧಿಯವನು ಹೌದಾದರೂ ಇತರ ವಿಷಯಗಳಲ್ಲಿ ಅವನು ಯಾರಿಗೂ ಮೋಸ, ಕೇಡು ಬಗೆದ ಮನುಷ್ಯನಲ್ಲ. ತಮ್ಮೂರಿನ ಜನರಿಗೆ ಅವನು ಬಹಳ ಕರುಣೆ ಅನುಕಂಪ ತೋರಿಸುತ್ತ ಉಪಕಾರ ಮಾಡುತ್ತ ಬರುತ್ತಿರುವವನು ಎಂಬುದನ್ನೆಲ್ಲ ಮಲ್ಲೇಶಪ್ಪನೂ ಗಮನಿಸುತ್ತ ಬಂದಿದ್ದ. ಹೀಗಿರುವಾಗ ಈಗ ತನ್ನ ಒಪ್ಪಿಗೆಯಿಂದ ಮಗಳ ಬಾಳು ಹಸನಾಗುವುದಲ್ಲದೇ ತನ್ನ ತಲೆಯ ಮೇಲಿರುವ ದೊಡ್ಡ ಮೊತ್ತದ ಉದಾರಿಯೂ ಕಳಚಿಕೊಳ್ಳುತ್ತದೆ ಎಂದೂ ಯೋಚಿಸಿದ. ಹಾಗಾಗಿ ಈ ಸನ್ನಿವೇಶವು ಅವನಿಗೆ ದಿಢೀರ್ರನೇ ದೇವರು ಪ್ರತ್ಯಕ್ಷನಾಗಿ, ‘ಭಕ್ತಾ, ನಿನಗೇನು ವರ ಬೇಕೋ ಕೇಳುವಂತವನಾಗು…?’ ಎಂಬಂತಾಯಿತು. ಮುಂದೇನೂ ಯೋಚಿಸದೆ ಮಗಳನ್ನು ಅವನಿಗೆ ಧಾರೆಯೆರೆದುಬಿಟ್ಟ. ಅಂದಿನಿಂದ ದ್ಯಾವಮ್ಮ ಸಂತಾನಪ್ಪನ ಎರಡನೆಯ ಹೆಂಡತಿಯಾಗಿ ತಾನು ಅಂದುಕೊಂಡಂತೆಯೇ ತಗಟು ಶೀಟಿನ ಜೋಪಡಿಯನ್ನು ತೊರೆದು ಮಸಣದಗುಡ್ಡೆಯ ರಾಮತೀರ್ಥ ಕಾಮತರ ಬಾಡಿಗೆಯ ತಾರಸಿ ಮನೆಯ ಸಿರಿವಂತ ಬದುಕಿಗೆ ಪಾದಾರ್ಪಣೆ ಮಾಡಿದಳು.   ಆದರೆ ಆವತ್ತು ಮಧುಚಂದ್ರದ ರಾತ್ರಿ ಗಂಡನ ಕೋಣೆ ಪ್ರವೇಶಿಸಿದ ದ್ಯಾವಮ್ಮನಿಗೆ ತನ್ನ ಹಳೆಯ ಪ್ರೇಮಿ ಪರಮೇಶನ ನೆನಪು ಇನ್ನಿಲ್ಲದಂತೆ ಕಾಡಿತು. ಅವನ ಮುಗ್ಧ, ನಿಶ್ಕಲ್ಮಶ ಪ್ರೀತಿಯನ್ನು ನೆನೆದವಳ ಕರುಳು ಹಿಂಡಿದಂತಾಗಿ ಕಣ್ಣೀರುಕ್ಕಿ ಬಂತು. ಆ ಅಮಾಯಕನಿಗೆ ದ್ರೋಹ ಮಾಡಿಬಿಟ್ಟೆನೇನೋ…? ಎಂಬ ಪಾಪಪ್ರಜ್ಞೆ ಹುಟ್ಟಿತು. ಸುಮಾರು ಹೊತ್ತು ಅಳುತ್ತ ಕುಳಿತಳು. ಅದೇ ಹೊತ್ತಿಗೆ ಸುಗಂಧದ್ರವ್ಯದ ಪರಿಮಳವೂ ಮಲ್ಲಿಗೆ ಹೂವಿನ ಕಂಪೂ ಅವಳ ಕೋಣೆಯತ್ತ ಇಂಪಾಗಿ ಹರಿದು ಬಂತು. ಆಗ ಅಳು ನಿಲ್ಲಿಸಿ ಅತ್ತ ಗಮನ ಹರಿಸಿದಳು. ಸಂತಾನಪ್ಪ ಬಾಗಿಲು ತಳ್ಳಿಕೊಂಡು ಒಳಗಡಿಯಿಟ್ಟ. ಅವನು ತನ್ನ ಭುಜ, ಕತ್ತು ಮತ್ತು ಕೈಗಳಿಗೆ ಮಲ್ಲೆಹೂವಿನ ದಂಡೆಯನ್ನು ಸುತ್ತಿಕೊಂಡು ದ್ಯಾವಮ್ಮಳತ್ತ ತುಂಟ ನಗುತ್ತ ಬೀರುತ್ತ ಬಂದ. ದ್ವಾವಮ್ಮ ಅವನಿಗೆ ತಿಳಿಯದಂತೆ ಕಣ್ಣೊರೆಸಿಕೊಂಡಳು. ಭಯದಿಂದ ಅವಳೆದೆ ಜೋರಾಗಿ ಬಡಿದುಕೊಂಡಿತು. ವಿಪರೀತ ಲಜ್ಜೆಯೂ ಮೂಡಿ ಎದ್ದು ತಲೆತಗ್ಗಿಸಿ ನಿಂತಳು. ಸಂತಾನಪ್ಪ ಡೇಸಾರ ಅಪಾರ ಸಂಪತ್ತಿನ ಒಡೆತನಕ್ಕೆ ಇವಳಿಂದಲೂ ಸಮರ್ಥ ಪುತ್ರನೊಬ್ಬನನ್ನು ಪಡೆಯುವ ಇಚ್ಛೆಯಿಂದ ಸಮೀಪಿಸಿದ. ದ್ಯಾವಮ್ಮ ಅವನನ್ನು ಎದುರುಗೊಂಡಳು. ತುಸುಹೊತ್ತಲ್ಲಿ ಶ್ರೀಮಂತ ಗಂಡನ ತೋಳತೆಕ್ಕೆಯಲ್ಲಿ ಮೃದುವಾಗಿ ನಲುಗುತ್ತ ತೃಪ್ತಿಯ ಪರಾಕಷ್ಠೆ ತಲುಪಿದ ಮರುಕ್ಷಣ ಅವಳು ತನ್ನ ಕೊರಳನ್ನು ವಿನಾಕಾರಣ ನೋಯಿಸುತ್ತಿದ್ದ ಮುತ್ತಿನ ಹಾರವನ್ನು ಸರ್ರನೆ ಕಿತ್ತೆಸೆಯುವಂತೆ ಪರಮೇಶನ ಪ್ರೀತಿಯ ನೆನಪುಗಳನ್ನೂ ಮನಸ್ಸಿನಿಂದ ಹರಿದು ಚೆಲ್ಲಿಬಿಟ್ಟಳು.                                                          *** ಅತ್ತ ದ್ಯಾವಮ್ಮಳ ಮೊದಲ ರಾತ್ರಿಯ ಹೊತ್ತು ಪರಮೇಶ ತೀರಾ ವಿಚಲಿತನಾಗಿದ್ದ. ಅವಳ ಅಗಲಿಕೆಯ ನೋವನ್ನು ತಾಳಲಾಗದೆ ಮೂಗಿನ ಮಟ್ಟ ಕುಡಿದು ಮಸಣದ ಗುಡ್ಡೆಯ ಪಕ್ಕದ ಮೈದಾನದಲ್ಲಿ ಅಂಗಾತ ಬಿದ್ದುಕೊಂಡು ದಟ್ಟ ಕತ್ತಲಾಗಸವನ್ನು ದಿಟ್ಟಿಸುತ್ತ ರೋಧಿಸುತ್ತಿದ್ದ. ತನ್ನ ಸಂಗಾತಿಯಾಗಿ ತನ್ನ ವಂಶದ ಕುಡಿಗಳನ್ನು ಹೆತ್ತು ಹೊತ್ತು ಜೀವನ ಹಸನಾಗಿಸಲೆಂದೇ

Read Post »

ಇತರೆ

ಬಿಸಿಲ ನೆಲ ಕಂಡ ಬೆಳದಿಂಗಳ ಚೇತನ

ನೀ ಹೋದ ಮರುದಿನ ಮತ್ತ ನಂ ಬದುಕು ಮದಲಿನಂಗ ಆಗ್ಯಾದೋ ಬಾಬಾಸಾಹೇಬ!
ನಿನ್ನಂಗ ನುಡಿವಾಂವಾ,ಕಳ ಕಳಿಯ
ಪಡುವಂವ ಬರಲಿಲ್ಲೋ ಒಬ್ಬ!!
ಚನ್ನಣ್ಣ ವಾಲೀಕಾರ

ಬಿಸಿಲ ನೆಲ ಕಂಡ ಬೆಳದಿಂಗಳ ಚೇತನ Read Post »

ಇತರೆ

ನೆನೆವುದೆನ್ನ ಮನಂ : ಕೆಲವು ಮಾತುಗಳು

ವಿಶೇಷ ಲೇಖನ ಪಂಪನ ಕುರಿತಾದ ವಿಶೇಷ ಲೇಖನ ಆರ್.ದಿಲೀಪ್ ಕುಮಾರ್ ನೆನೆವುದೆನ್ನ ಮನಂ : ಕೆಲವು ಮಾತುಗಳು ವಿಕ್ರಮಾರ್ಜುನ ವಿಜಯ (ಪಂಪಭಾರತ) ಕೃತಿಯ ನಾಲ್ಕನೇ ಆಶ್ವಾಸದ ಮೂವತ್ತನೇ ಪ್ರಖ್ಯಾತ ಪದ್ಯವು ಇದಾಗಿದೆ. ಈ ಪದ್ಯದ ಬಗೆಗೆ ಬೆಳ್ಳಾವೆ ವೆಂಕಟನಾರಾಯಣಪ್ಪನವರಿಂದ ಇತ್ತೀಚಿನವರವರೆಗೂ ಮಾಡಿರುವ ವಿಮರ್ಶೆ ಮತ್ತು ವ್ಯಾಖ್ಯಾನಗಳ ಅಧ್ಯಯನವೇ ಬಹಳ ವಿಸ್ತಾರವಾದದ್ದಾಗಿದೆ. ಕನ್ನಡನಾಡಿನ ಬನವಾಸಿಯ ನೆಲವು ಆಂಧ್ರನಾಡಿನಲ್ಲಿ ಕುಳಿತಿರುವ ಕವಿಯ ನೆನಪಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿರುವ ಕಾರಣದಿಂದ ಅವನ ಮೇಲೆ ಬೀರಿರುವ ಪರಿಣಾಮದ ಪ್ರತಿಫಲವೇ ಈ ಪದ್ಯದ ಆವಿರ್ಭಾವಕ್ಕೆ ಕಾರಣವಾಗಿದೆ. ನೆನಪು ಮತ್ತು ನೆನಪಿನ ಕಾರಣ ಸಂಬಂಧ ಈ ಪದ್ಯದ ಭಾವಕೇಂದ್ರವಾಗಿದೆ. ಈ ಪದ್ಯವನ್ನು ಬಿಡಿಸಿ ಮರುವಿನ್ಯಾಸಗೊಳಿಸಿ, ಹೊಸ ಕ್ರಮದಲ್ಲಿ ಓದಿಕೊಳ್ಳುವುದರಿಂದ ಕವಿಯ ಮೇಲೆ ಆ ಪರಿಸರ ಬೀರಿರಬಹುದಾದ ದಟ್ಟವಾದ ಪರಿಣಾಮಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯವಿದೆ ಎಂದು ನನಗೆ ಅನಿಸಿದೆ. ಪಠ್ಯದ ಮೂಲ ಉದ್ದೇಶಕ್ಕೇನೂ ಬಿಡಿಸುವ ಮತ್ತು ಮರುವಿನ್ಯಾಸಗೊಳಿಸುವ ಕ್ರಮಗಳು ಧಕ್ಕೆತರುವುದಿಲ್ಲ. ಆ ಕವಿಯ ಉದ್ದೇಶವನ್ನೇ ಇನ್ನೂ ಪರಿಣಾಮಕಾರಿಗೊಳಿಸುವ ಓದಿನ ಕ್ರಮವಿದು ಎಂದು ಭಾವಿಸಿದ್ದೇನೆ. ಹೀಗೆ ಬಿಡಿಸಿ ಓದುವುದರಿಂದ ಹೊಸ ಅರ್ಥವನ್ನೂ ಈ ಪದ್ಯ ನನ್ನೊಳಗೆ ಉಂಟುಮಾಡಿದೆ. ಮೂಲ ಪಠ್ಯ ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ l ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ l ಕೆಂದಲಂ ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನೆಂಬೆ ನಾ l ರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ವನವಾಸಿದೇಶಮಂ ll ಈ ಪದ್ಯಕ್ಕೆ ಆಚಾರ್ಯ ಡಿ. ಎಲ್. ನರಸಿಂಹಾಚಾರ್ಯರು ತಮ್ಮ “ಪಂಪಭಾರತ ದೀಪಿಕೆ”ಯಲ್ಲಿ ಮಾಡಿರುವ ಅರ್ಥವನ್ನೊಮ್ಮೆ ಗಮನಿಸಿ ತೆಂಕಣ ಗಾಳಿ ಸೋಂಕಿದೊಡಂ – ದಕ್ಷಿದ ಗಾಳಿ ಮೈ ಮುಟ್ಟಿದರೂ ಒಳ್ನುಡಿಗೇಳ್ದೊಡಂ – ಒಳ್ಳೆಯ ಮಾತನ್ನು ಕೇಳಿದರೂ ಇಂಪನಾಳ್ದಗೇಯಂ – ಇಂಪಿನಿಂದ ಕೂಡಿದ ಗೀತವು ಕವಿವೊಕ್ಕೊಡಂ – ಕಿವಿಗೆ ಕೇಳಿಸಿದರೂ ಬಿರಿದ ಮಲ್ಲಿಗೆಗಂಡೊಡಂ – ಅರಳಿದ ಮಲ್ಲಿಗೆಯನ್ನು ನೋಡಿದರೂ ಆದ ಕೆಂದು – ಉಂಟಾದ ನಿದ್ದೆ  ಅಲಂಪಂ – ಸುಖವನ್ನು ಗೆಡೆಗೊಂಡೊಡಂ – ಜೊತೆಗೂಡಿದರೂ ಮಧುಮಹೋತ್ವಮಾದೊಡಂ – ವಸಂತಕಾಲದ ಮಹೋತ್ಸವ ನಡೆದರೂ ಏನನೆಂಬೆಂ – ಏನೆಂದು ಹೇಳಬಲ್ಲೆ ಎನ್ನ ಮನಂ – ನನ್ನ ಮನವು ವನವಾಸಿ ದೇಶಮಂ – ಬನವಾಸಿಯ ಪ್ರಾಂತ್ಯವನ್ನು  ಅರಂಕುಸಮಿಟ್ಟೊಡಂ – ಯಾರು ಅಂಕುಶ ಹಾಕಿದರೂ, ಎಂದರೆ ತಡೆದರೂ ನೆನೆವುದು – ನೆನೆದುಕೊಳ್ಳುತ್ತದೆ. ಡಾ. ಎಲ್. ಬಸವರಾಜು ಅವರು “ಸರಳ ಪಂಪಭಾರತ”ದಲ್ಲಿ ಈ ಪದ್ಯವನ್ನು ಬಿಡಿಸಿರುವ ಕ್ರಮವನ್ನೊಮ್ಮೆ ಗಮನಿಸಿ ನೋಡಿ ತೆಂಕಣ ಗಾಳಿ ಸೋಂಕಿದೊಡಮ್ ಒಳ್ನುಡಿಗೇಳ್ದೊಡಮ್ ಇಂಪನಾಳ್ದ ಗೇಯಂ ಕವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮ್ ಆದಲಂಪು ಅಲಂಪಂ ಗೆಡೆಗೊಂಡೊಡಂ ಮಧುಮಹೋತ್ವಮಾದೊಡಮ್ – ಏನನೆಂಬೆನ್ ಆರ್ ಅಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸೀ ದೇಶಮಂ ! ( ಈ ಪದ್ಯವನ್ನು ಅರ್ಥಪ್ರಾಧಾನ್ಯದಲ್ಲಿ ಬಿಡಿಸುವಾಗ ಛಂದೋನಿಯಮ ಯತಿಯ ಪಾಲನೆಗಾಗಿ ಅಕ್ಷರದ ಮೇಲೆ ಡಾ.‌ ಎಲ್. ಬಿ ಅವರು ಕೊಟ್ಟಿರುವ ಚಿಹ್ನೆಗಳನ್ನು ಕೈ ಬಿಟ್ಟಿದ್ದೇನೆ. ಉಳಿದಂತೆ ಪದ್ಯವು ಯಥಾವತ್ತು ನೀಡಿದ್ದೇನೆ. ) ಕಾವ್ಯ ರಚನೆ ಹೇಗೆ ಮನುಜಕುಲದ ನಿರಂತರ ಕ್ರಿಯೆಯೋ, ಹಾಗೇ ಕಾವ್ಯದ ಓದು ಮನುಜಕುಲದ ನಿರಂತರವಾದ ಪ್ರಕ್ರಿಯೆ. ಕವಿಯೊಬ್ಬ ತಾನು ಕಂಡ ಬದುಕಿನ ವ್ಯಷ್ಟಿ ಅನುಭವಗಳನ್ನು, ಸಮಷ್ಟಿ ಮಾನವಕುಲದ ಒಳಿತಿಗಾಗಿ ತತ್ವೀಕರಿಸಿ ರೂಪಕಾತ್ಮಕಗೊಳಿಸಿ ತನ್ನದೇ ಭಾಷೆಯಲ್ಲಿ ಹಸ್ತಾಂತರಕ್ಕೆ ನಿಲ್ಲುವನು. ಅಂತಹ ಕವಿಗೆ ಎಂದೂ ಸಾಹಿತ್ಯ ಚರಿತ್ರೆಯಲ್ಲಿ, ಜನಮಾನಸದಲ್ಲಿ ಸ್ಥಾನವಿದ್ದೇ ಇದೆ. ತನ್ನ ಸಮಕಾಲೀನರೂ ಅಷ್ಟೇ ಸಶಕ್ತರಾಗಿದ್ದಾಗ ಆ ತಾತ್ವಿಕತೆಯ ತುದಿಮೊದಲುಗಳನ್ನು ಬಲ್ಲವರಾದರೆ ಕಟ್ಟಿದ ಕವಿಗೆ ಎಲ್ಲಿಲ್ಲದ ಮನ್ನಣೆ ದೊರೆತುಬಿಡುತ್ತದೆ. ಕೃತಿಯಲ್ಲಿನ ತಾತ್ವಿಕತೆ ಎನ್ನುವುದೇ ವಿಶಿಷ್ಟವಾದ ಅವಲೋಕನನದ ಕ್ರಮ. ಅದು ಕೃತಿಯ ಮೂಲಕವೇ ಓದುಗನಿಗೆ ಅನುಭವಕ್ಕೆ ಬರುವುದೇ ಹೊರತು ಕೃತಿಯ ಸುತ್ತ ಕಟ್ಟುವ ಕಥೆಗಳಿಂದ ಅಲ್ಲ. ಕೃತಿಯಲ್ಲಿನ ಜಾತಿ, ಧರ್ಮ, ವರ್ಗ, ವರ್ಣ, ಪ್ರಕೃತಿ, ಕಾಲ, ಮನುಷ್ಯನ ಸ್ಥಿತಿ, ಭಾವನೆಗಳು, ಮನುಷ್ಯನ ಸ್ಥಿತಿಸ್ಥಾಪಕತ್ವಗಳನ್ನು ವಸ್ತು, ಪಾತ್ರಗಳ ಮೂಲಕ ಅಭಿವ್ಯಕ್ತಿಗೊಂಡಿರುತ್ತದೆ. ಈ ಸೂಕ್ಷ್ಮ ಗ್ರಹಿಕೆಯಿಂದ ಕಟ್ಟಿಕೊಂಡ ತಾತ್ವಿಕತೆಯ ಮೂಲಕ ಅತ್ಯುನ್ನತ ಮನ್ನಣೆಗೆ ಪಾತ್ರರಾದ ಕೆಲವೇ ಕೆಲವು ಕನ್ನಡ ಕವಿಗಳ ಪಟ್ಟಿಯಲ್ಲಿ ಮೊದಲಿಗ ಆದಿಕವಿ ಪಂಪ. ಎಷ್ಟೋ ಶತಮಾನಗಳ ಹಿಂದಿನ ಕಾವ್ಯಗಳನ್ನು ಇಂದು ಓದುವುದಕ್ಕೆ ಓದುಗನಿಗೆ ತನ್ನದೇ ಆದ ಕಾರಣಗಳು ಇರುತ್ತವೆ. ಕಾಲ ಬದಲಾಗಿದೆಯೇ ಹೊರತು ಮನುಕುಲದಲ್ಲಿನ ಮೂಲ‌ಭಾವಗಳಾದ ಕಾಮ, ಕ್ರೌರ್ಯ, ಮಾತ್ಸರ್ಯ, ಅಪನಂಬಿಕೆ, ನಂಬಿಕೆ, ಪ್ರೀತಿ, ಸ್ನೇಹ, ಔದಾರ್ಯಗಳಂತಹಾ ಗುಣಗಳು ನಿರಂತರವಾಗಿ ಹರಿಯುತ್ತಲೇ ಇದೆ. ಕೆಲವೊಮ್ಮೆ ಆ ಹರಿಯುವಿಕೆಯ ಯಾವುದೋ ಒಂದು ಅಲೆ ಓದುಗನಿಗೆ ಕಾವ್ಯದಲ್ಲಿರುವುದು ತನ್ನ ಬದುಕಿನ ಭಾವದೊಂದಿಗೆ ಘರ್ಷಿಸಿದೊಡನೆ, ತಾಕಿದೊಡನೆ ದೊಡ್ಡ ಸಾಯುಜ್ಯ ಸಂಬಂಧವನ್ನು ಸ್ಥಾಪಿಸಿಕೊಂಡು ಆ ಭಾವಗಳು ಹರಿಯಲು ಆರಂಭ ಮಾಡಿಬಿಡುತ್ತವೆ. ಈ ಸಂಬಂಧ ಸ್ಥಾಪಿಸಿಕೊಳ್ಳುವುದೇ ಕವಿಯೊಬ್ಬ ಸಮಕಾಲೀನಗೊಳ್ಳುವ ಸ್ಥಿತಿ. ಕೆಲವು ಸದ್ಯದ ಕವಿಗಳ ಕಾವ್ಯಗಳೂ ಸದ್ಯದ ಓದುಗರಿಂದ ದೂರವಾಗಲು ಈ ಹರಿವ ಬದುಕ ನದಿಯೊಡನೆ ಸಂಬಂಧ ಸಾಧಿಸಲು ಭಾಷೆಯ ಮೂಲಕ ಸಾಧ್ಯವಾಗದಿರುವುದೇ ಕಾರಣ. ಕೆಲವೊಮ್ಮೆ ಸದ್ಯದ ಓದುಗರೊಳಗಿನ ವ್ಯಕ್ತಿನಿಷ್ಟ ಪೂರ್ವಗ್ರಹಿಕೆಗಳು ಕಲಾಕೃತಿಯೊಂದನ್ನು ಇತ್ಯಾತ್ಮಕ ಅಥವಾ ನೇತ್ಯಾತ್ಮಕ ದುಡುಕಿ ನಿರ್ಧಾರ ಕೊಡುವಂತೆ ಮಾಡಿಬಿಡುತ್ತವೆ. ಈ‌ ದುಡುಕಿನಿಂದ ಬಿಡುಗಡೆಗೆ ಬಹುದೊಡ್ಡ ಮೌನದ ಅಗತ್ಯವಂತೂ ಓದುಗನಿಗೆ ಇದ್ದೇ ಇದೆ.  ಕಾವ್ಯಕೃತಿಯೊಂದನ್ನು ಬಿಡಿಸಿ – ಕೂಡಿಸಿ ಓದುವ ಕ್ರಮಗಳನ್ನು ಕವಿಯೇ ಕೆಲವೊಮ್ಮೆ ಸ್ಪಷ್ಟಪಡಿಸಿಕೊಂಡು ಛಂದಸ್ಸಿನ ಮೂಲಕ ತಂದಿದ್ದರೂ ಅದನ್ನು ಮೀರುವ ತುರ್ತು ಕಾಲಾನಂತರದ ಓದುಗರಿಗೆ ಮತ್ತು ಕವಿಯ ಕಾಲದೊಳಗಿನ ಓದುಗರಿಗೂ ಇರುತ್ತವೆ. ಆ ಓದುಗನ ಓದಿನ ಕ್ರಮದೊಳಗೆ ಮೂಗು ತೂರಿಸುವ ಹಕ್ಕು ಕವಿಗೂ ಇಲ್ಲ. ವಸ್ತುವೊಂದನ್ನು ಕೆಲವು ತನ್ನದೇ ಪರಿಕರಗಳ ಮೂಲಕ ಕಲಾಕೃತಿಯಾಗಿ ಮಾರ್ಪಡಿಸಿದ ಅನಂತರ ಆ ಪರಿಕರಗಳ ಉಪೋತ್ಪನ್ನವಾದ ಕಾವ್ಯಕ್ಕೂ ತನಗೂ ಸಂಬಂಧವಿಲ್ಲ, ತನ್ನದಲ್ಲವೇ ಅಲ್ಲ ಎಂದು ನಿಂತಿರುವುದಕ್ಕೆ ಸಾಕ್ಷಿಗಳು ಹಿಂದಿನ ಕವಿಗಳಿಂದ ದೊರೆಯುತ್ತವೆ. ನುರಿತ ಓದುಗನೊಬ್ಬ ಕೃತಿಯನ್ನು,‌ ಕೃತಿ ಕಟ್ಟಿಕೊಟ್ಟಿರುವ ತಾತ್ವಿಕತೆಯನ್ನು, ಭಾಷೆಯ ಮೂಲಕ ಹೊರಹೊಮ್ಮಿಸಿರಬಹುದಾದ ಧ್ವನಿತರಂಗಗಳನ್ನು ಕೃತಿಯ ಸೂಕ್ಷ್ಮಸ್ತರಗಳನ್ನು ಮುಟ್ಟಿ ಶೋಧಿಸುವ ನಿಕಟ ಓದಿನ ಮೂಲಕ ಕೃತಿಯನ್ನು ತನ್ನ ಕಾಲ ಮತ್ತು ಸ್ಥಳದಲ್ಲಿ ಪುನರ್ನಿರ್ಮಾಣ ಮಾಡಿಕೊಳ್ಳುತ್ತಾನೆ. ಹೀಗೆ ಮಾಡಲು ಕಾವ್ಯವೇ ಕೇಂದ್ರವಾಗಿರುತ್ತದೆಯೇ ಹೊರತು ಅದರ ಸುತ್ತ ಹೆಣೆಯುವ ಕಥೆಯಲ್ಲ. ಕಲಾಕೃತಿಯೊಂದನ್ನು ಸದ್ಯದ ಸಾಂಸ್ಕೃತಿಕ ಸಂದರ್ಭದ ಕೇಂದ್ರದಲ್ಲಿ ನಿಲ್ಲಿಸುವ ಮತ್ತು ಅಪವ್ಯಾಖ್ಯಾನಗೊಳಿಸಿ ಸದ್ಯದ ಸಂದರ್ಭದಲ್ಲಿ ಅಮುಖ್ಯಗೊಳಿಸಿ ಅಂಚಿಗೆ ಸರಿಸಿಬಿಡುವ ಅಪಾಯಗಳು ಎಲ್ಲ ಕಾಲದಲ್ಲಿಯೂ ಇದ್ದೇ ಇರುತ್ತವೆ. ಈ ಸಮಸ್ಯೆಯಿಂದ ಯಾವ ಕವಿಯೂ ತಪ್ಪಿಸಿಕೊಂಡು ಓಡಲಾರ. “ಆನಂದ”ಕ್ಕಾಗಿ ಓದುವುದು ಸಹಾ ಮುಖ್ಯ ಕಾರಣಗಳಲ್ಲಿ ಒಂದು. ಮೀಮಾಂಸಕರು ಪ್ರತಿಪಾದಿಸಿರುವ ತತ್ವಗಳ ಅಡಿಯಲ್ಲಿ ಕಾವ್ಯದ ಓದು ಏನನ್ನು ಕೊಡುತ್ತದೆ ಎನ್ನುವುದನ್ನು ಹೇಳಿದ್ದಾರೆ. ಆಧುನಿಕ ವಿಮರ್ಶಕರೂ ತಮ್ಮದೇ ಆದ ತತ್ವ, ಸಿತಗಳ ಅಡಿಯಲ್ಲಿ ಕಾವ್ಯ ಮತ್ತದರ ರಚನೆಯ ಕಾರಣ ಮತ್ತು ಪರಿಣಾಮಗಳನ್ನು ಅರಿಯುವುದನ್ನು ತೋರಿಸಿಕೊಟ್ಟಿದ್ದಾರೆ. ಓದುಗನೊಬ್ಬ ಮಾಡಬೇಕಾದ ಪ್ರಮುಖ ಕೆಲಸವೆಂದರೆ ಪೂರ್ವನಿಯೋಜಿತ ಕಲ್ಪನೆಗಳಿಂದ ಹೊರಬರುವುದು. ಈ ಅಪಾಯಗಳು ಸಾಕಷ್ಟುಬಾರಿ ಕಾವ್ಯ, ಕಾಲ ಮತ್ತು ದೇಶದ ಆಕಾರಕ್ಕೆ, ಲೋಕಾಕಾರ ಕಥನ ಕ್ರಮವನ್ನು ಅರ್ಥೈಸಿಕೊಳ್ಳುವ ಪ್ರಜ್ಞೆಗೆ ಅಪಾಯವನ್ನು ತಂದುಬಿಡತ್ತವೆ. ಈ ಪೂರ್ವನಿಯೋಜಿನ ಅಂಶಗಳನ್ನು ಮೀರಿಕೊಳ್ಳುವುದು ಇಂದಿಗಂತೂ ಅಗತ್ಯವಿದೆ. ಓದು ಎನ್ನುವ ಪ್ರಕ್ರಿಯೆ ಐದು ಅಂಶಗಳನ್ನು ಹೊಂದಿವೆ. ಈ ಪ್ರಕ್ರಿಯೆ ಒಂದರಿಂದ ಮತ್ತೊಂದಕ್ಕೆ ಬೆಳವಣಿಗೆಯ ಹಂತದಲ್ಲಿದೆ. ಕಾವ್ಯದಿಂದ, ಅದು ಹೊರಸೂಸುವ ಅರ್ಥದಿಂದ, ಏನೋ ಬದಲಾಗುತ್ತದೆ ಎನ್ನುವ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದನ್ನು ಬಿಡುವುದು. ಕಾವ್ಯದ ಹೊಸ ಓದಿಗೆ ಹಾದಿ ಮಾಡುವುದು ಎನ್ನುವುದನ್ನು ಕಲಿಯುವುದು. ಕಾವ್ಯವೇ ತನ್ನ ಪರಿಣಾಮದಲ್ಲಿ ಒಗ್ಗೂಡಿಸಿ ಕಟ್ಟಿಕೊಡುವ ಓದುಗನ ಬದುಕಿನಲ್ಲಿ ಘಟಿಸಿದ ನೆನಪುಗಳ ಸುರುಳಿಗೆ ತಾಕಿ ಅವುಗಳನ್ನು ಮೇಲಕ್ಕೆ ತಂದು ಭೂತ ವರ್ತಮಾನಗಳಿಗೆ ಮುಖಾಮುಖಿಯಾಗಿಸುವುದು ಮತ್ತು ಆ ನೆನಪುಗಳನ್ನು ಮರುರಚನೆ, ಮರುವಿನ್ಯಾಸ ಮಾಡಿಕೊಳ್ಳುವುದು. ಕೊನೆಯದಾಗಿ ಕಾವ್ಯದ ಓದಿನಿಂದ ದೊರೆವ ತೃಪ್ತಿ. ಈ ಕ್ರಿಯೆಗಳು ನಿರಂತರವಾಗಿ ನಡೆಯುತ್ತ ಹೋದರೆ ಕಾವ್ಯದ ಓದು ಆನಂದಕ್ಕಾಗಿ ಆಗುತ್ತದೆ. ಪೂರ್ವನಿಯೋಜಿತ ಕಲ್ಪನೆಗಳ ಆಚೆಗೆ ಕವಿಯನ್ನು ಕಾಣುವುದು, ಕಾವ್ಯದ ಮೂಲಕ ಕಂಡರಿಸುವುದು ಬಹುಮುಖ್ಯವಾದ ಇಂದಿನ ತುರ್ತಾಗಿದೆ. ಕವಿಗೆ ಕಟ್ಟಿದ ಹಣೆಪಟ್ಟಿಯನ್ನು ಕಳಚುವುದರ ಜೊತೆಗೆ ನಮಗೇ ನಾವು ಕಟ್ಟಿಕೊಂಡ ಪಟ್ಟಿಯನ್ನು ಕಳಚಬೇಕಾದ ತುರ್ತು ಇಂದಿಗಿದೆ. ಈ ಅನುಭವಗಳ ಸುರಳಿ ಬಿಚ್ಚಲು ಭಾಷೆಯೆನ್ನುವುದು ಬಹುದೊಡ್ಡ ಮಾಧ್ಯಮ. ಜನಸಾಮಾನ್ಯರ ಭಾಷೆ ಮತ್ತು ಕಾವ್ಯಭಾಷೆ ಎನ್ನುವುದರ ಅಂತರ ಇಂದಿಗಿಲ್ಲ. ಕವಿಯೊಬ್ಬನ ಕಾವ್ಯಭಾಷೆ ಹೇಗೆ ಸಾಮಾನ್ಯ ಭಾಷೆಗೆ ಹತ್ತಿರ ಬಂದು ಅಪೇಕ್ಷಿತ ಪರಿಣಾಮವನ್ನು ಉಂಟುಮಾಡಿ ಹೇಗೆ ಯಶಸ್ವಿಯಾಗಬಹುದು ಎನ್ನುವುದನ್ನು ಒಂದು ಉದಾಹರಣೆಯ ಮೂಲಕ ನೋಡಬಹುದು. ಛಂದೋನಿಯಮಗಳಿಗೆ ಒಳಪಟ್ಟು ರಚನೆಯಾದ ಕಾವ್ಯಗಳ ರಚನೆಯನ್ನು ಬಿಡಿಸುವ ಕ್ರಮ ಹೊಸದೇನಲ್ಲ. ಕೆಲವೊಮ್ಮೆ ಬಿಡಿಸುವ ಕ್ರಮಗಳು ಬಹುದೊಡ್ಡ ಅಪಾಯಗಳನ್ನು ಹಾಗು ಅದರೊಂದಿಗೇ ಅಪಾರವಾದ ಅರ್ಥ ಸಾಧ್ಯತೆಗಳನ್ನೂ ತೋರಿಸಿಬಿಡುತ್ತದೆ. ಪಠ್ಯವೊಂದ ಓದು  ಎನ್ನುವುದೇ ಭಾಷೆಯೊಂದಿಗಿನ ಒಂದು ಲೀಲೆ. ಪ್ರತಿಯೊಂದು ಬಾರಿಯ ಕಾವ್ಯದೊಂದಿಗಿನ ಮುಖಾಮುಖಿಯ ಓದೂ ಒಂದು ಲೀಲೆಯೇ ಅಗಿರುತ್ತದೆ. ಅದು ನಿರಂತರವಾದದ್ದು ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವಂತಹದ್ದು. ಈ ಬದಲಾಗುವಿಕೆ ಮತ್ತು ವ್ಯತ್ಯಸ್ಥಿತವಾಗುವಿಕೆಯ ಗುರುತಿಸುವಿಯೇ ಕವಿ, ಕಾವ್ಯ ಮತ್ತು ಓದುಗನ ಜೀವಂತಿಕೆಗೆ ಸಾಕ್ಷಿಯಾಗುತ್ತದೆ. ಆ ಹಂತದ ಓದಿನ ಒಂದು ಕ್ರಮವನ್ನು ಮತ್ತು‌ ಬಹುಮುಖ ಓದಿನ ಸಾಧ್ಯತೆಯನ್ನು ಒಂದು ವೃತ್ತದ ಮೂಲಕ ಉದಾಹರಣೆಯಾಗಿ ಕೊಡುತ್ತೇನೆ. ವೃತ್ತದ ಕೊನೆಯ ನಾಲಕ್ಕು ಪದಗಳನ್ನು ಸ್ಥಾನಪಲ್ಲಟ ಮಾಡುವುದರಿಂದ ಕಾವ್ಯವು ಕಟ್ಟಿಕೊಡುತ್ತಿರುವ ಭಾವ, ಅದು ಕವಿಯ ಮೇಲೆ ಬೀರಿರುವ ಪರಿಣಾಮ ಮತ್ತು ಬಿಡದ ಹಾಗೆ ಆ ನೆಲ ಅವನ ಮೇಲೆ ಬಂಧ ಬೆಸೆದಿರುವುದನ್ನು ತಿಳಿಯಲು ಸಹಕಾರಿಯಾಗುತ್ತದೆ. ಭಾಷೆಯೆನ್ನುವುದನ್ನು ಪ್ರತಿಭಾಶಾಲಿಯಾದ ಕವಿಯೊಬ್ಬ ಬಳಸಿರುವ ಕ್ರಮವು ತಿಳಿಯುತ್ತದೆ. ಕಾವ್ಯದಿಂದ ಆಗುವ ಎರಡು ಕಾರ್ಯಗಳು ನನಗೆ ಬಹಳ ಮುಖ್ಯವಾದವು. ಪ್ರತಿಯೊಬ್ಬ ಓದುಗನಿಗೂ ತನ್ನದೇ ಅನುಭವ ಪ್ರಪಂಚವಿರುತ್ತದೆ. ಹುಟ್ಟಿದಾಗಿನಿಂದ ಒಳ ಹೊರ ಬದಲಾವಣೆಗಳನ್ನು ಗುರುತಿಸಿ ಅರ್ಥೈಸಿಕೊಳ್ಳಲು ಕಲಿಯುವುದರಿಂದ ಈ ಪ್ರಪಂಚ ನಿರ್ಮಾಣವಾಗುತ್ತದೆ. ಕೆಲವೊಮ್ಮೆ ಆ ಅನುಭವ ಪ್ರಪಂಚವು ಚದುರಿರುತ್ತವೆ. ಕಾವ್ಯದ ಓದು ಆ‌ ಚದುರಿರುವ ಅನುಭವಗಳನ್ನು ಒಂದುಗೂಡಿಸಿ ಕಲಾಕೃತಿಯನ್ನು ಉಪಾದಿ ಮಾಡಿಕೊಂಡು ಅನುಭವಗಳನ್ನು ಜೋಡಿಸುತ್ತದೆ ಮತ್ತು ಅನುಭವಗಳನ್ನು ವ್ಯವಸ್ಥಿತಗೊಳಿಸುತ್ತದೆ. ಮತ್ತೊಂದು ಅನುಭವಗಳು ಒಂದುಗೂಡಿರುತ್ತವೆ, ವ್ಯವಸ್ಥಿತವಾಗಿರುತ್ತವೆ. ತಕ್ಷಣದ ಬದುಕಿಗೆ ಬೇಕಾದ ಭಾವ, ಅನುಭವಗಳನ್ನು ಕಾವ್ಯದ ಓದು ಮುನ್ನೆಲೆಗೆ ತಂದು ನಿಲ್ಲಿಸಿ, ಆಯಾ ಸಮಾಜ ಒಪ್ಪಿತ,‌ ಅಪೇಕ್ಷಿತ, ತುರ್ತಿಗೆ ಭಾವದ ಉತ್ಪಾದನೆ ಮಾಡಿ ಓದುಗ ತನ್ನ ಬದುಕಿನ ಬಗೆಗೆ, ತನ್ನ ಲೋಕಾಕಾರ ಕಥನದ ಬಗೆಗೆ ಮಾತನಾಡಿಸಿಕೊಳ್ಳುವ ಹಾಗೆ ತನ್ನ ಕಾಲದ್ದಲ್ಲದ ಕಾವ್ಯವೊಂದು ಹಾದಿಮಾಡಿಕೊಡುತ್ತದೆ. ಒಂದೊಳ್ಳೆಯ ಕಲಾಕೃತಿ ಓದಿಗನೊಳಗೆ ಈ ಎರಡು ಕಾರ್ಯಗಳನ್ನೂ ಏಕಕಾಲದಲ್ಲಿ ಸಾಧ್ಯವಾಗಿಸಿದರೆ ಸಾರ್ಥಕ್ಯ ಪಡೆದಂತೆ. ಕಾವ್ಯವೊಂದು ಓದುಗನ ಮೇಲೆ ಬೀರುವ ಪರಿಣಾಮವನ್ನು ಗಮನಿಸುವುದು-ಗುರುತಿಸುವುದು, ಕಾವ್ಯವನ್ನು ಕೂಡಿಸಿ ಓದಿದಷ್ಟೇ ಬಿಡಿಸಿ ಓದಿಕೊಳ್ಳುವುದರಿಂದ ಮೇಲಿನ ಕಾರ್ಯಗಳು ಸಾಧ್ಯವಾಗುತ್ತದೆ. ಇವಷ್ಟೇ ಅಲ್ಲದೆ ಕಾವ್ಯವೇ ತನ್ನೊಡಲಿನಲ್ಲಿ ಅಗಣಿತವಾದ ಸಾಧ್ಯತೆಗಳ ಕೀಲಿಕೈಗಳನ್ನು ಅಡಗಿಸಿ ಇಟ್ಟುಕೊಂಡಿರುತ್ತದೆ. ಒಮ್ಮೆ ಓದಿದ ಅನಂತರವೂ ಮತ್ತೊಮ್ಮೆ ಹೊಸ ಪಠ್ಯವಾಗಿ ಮುಖಾಮುಖಿಯಾದರೆ ಕಾವ್ಯದ ಒಳಹೋಗುವ ಮತ್ತೊಂದು ಬಾಗಿಲ ಕೀಲಿ ಕೈ ಕಾವ್ಯವೇ ಕೊಡುತ್ತದೆ. ಈ ಅಗಣಿತ ಸಾಧ್ಯತೆಗಳ ಕಡೆಗೆ ಮುಖಾಮುಖಿಯಾಗುವಾಗಲೂ ಕಾಲ, ದೇಶ ಮತ್ತು ಓದುಗನ ಮನಸ್ಥಿತಿ ಬಹಳ ಮುಖ್ಯವಾದದ್ದು. ಒಂದೊಂದೂ ಕಾವ್ಯದ ಮೂಲಕ ಬೀರುವ ಪರಿಣಾಮ ಮತ್ತು ತನ್ನೊಳಗೆ ಮಾಡಿದ ಬದಲಾವಣೆಯನ್ನು ಗಮನಿಸುವುದು ಓದುಗನ ಪ್ರಮುಖವಾದ ಕೆಲಸ. ಈ ಕೆಲಸದ

ನೆನೆವುದೆನ್ನ ಮನಂ : ಕೆಲವು ಮಾತುಗಳು Read Post »

ಇತರೆ, ದಾರಾವಾಹಿ

ದಾರಾವಾಹಿ ಅದ್ಯಾಯ-10 ಸಂತಾನಪ್ಪನ ಶ್ರೀಮಂತಿಕೆಯನ್ನು ಕಂಡು ಶಂಕರ ಬೆಕ್ಕಸ ಬೆರಗಾಗಿದ್ದ! ಹಿಂದೊಮ್ಮೆ ತನ್ನೊಂದಿಗೆ ಮೂರುಕಾಸಿಗೆ ದುಡಿಯುತ್ತಿದ್ದಂಥ ಆ ಗಂಡ, ಹೆಂಡತಿ ಒಮ್ಮೆ ಹೇಳದೆ ಕೇಳದೆ ಓಡಿ ಹೋಗಿದ್ದು ಮಾತ್ರವಲ್ಲದೇ ತನ್ನ ಬದ್ಧ ವೈರಿ ರಘುಪತಿಯೊಂದಿಗೆ ಸೇರಿಕೊಂಡಿದ್ದನ್ನು ತಿಳಿದು ಅವರ ಮೇಲೆ ವಿಪರೀತ ಕುಪಿತನಾಗಿದ್ದ. ಆದರೆ ರಘುಪತಿಯೊಂದಿಗೆ ಮರಳಿ ಜಗಳವಾಡಲು ಅವನಿಗೆ ಧೈರ್ಯವಿರಲಿಲ್ಲ. ಆದ್ದರಿಂದ ತಾನು ಮನಸ್ಸು ಮಾಡಿದರೆ ಸಂತಾನಪ್ಪನಂಥ ಸಾವಿರ ಕೂಲಿಯಾಳುಗಳನ್ನು ಉತ್ತರ ಕರ್ನಾಟಕದಿಂದಲ್ಲದೇ ಉತ್ತರ ಭಾರತದಿಂದಲೂ ತರಿಸಿಕೊಳ್ಳಬಲ್ಲೆ! ಎಂದು ತನ್ನನ್ನು ತಾನೇ ಸಮಾಧಾನಿಸಿಕೊಂಡವನು ತನ್ನನ್ನು ತೊರೆದು ಹೋಗುತ್ತಿದ್ದ ಇತರ ಕೂಲಿಯಾಳುಗಳಂತೆಯೇ ಸಂತಾನಪ್ಪ ದಂಪತಿಯನ್ನೂ ಕಡೆಗಣಿಸಿದ್ದ.    ಆದರೆ ಅದೇ ಸಂತಾನಪ್ಪ, ಡೇಸಾರ ಮನೆ ಸೇರಿಕೊಂಡಿದ್ದನ್ನೂ ಅವರ ಐಶ್ವರ್ಯವೆಲ್ಲ ಅವನ ಪಾಲಾದುದನ್ನೂ ಮತ್ತು ಆನಂತರ ಅವನು ತನ್ನೆದುರಿಗೇ ಆಗರ್ಭ ಶ್ರೀಮಂತನಂತೆ ಮೆರೆಯತೊಡಗಿದ್ದನ್ನೂ ಕಾಣುತ್ತ ಬಂದ ಶಂಕರ ಯದ್ವಾತದ್ವ ಹೊಟ್ಟೆ ಉರಿಸಿಕೊಂಡ. ಅಷ್ಟಲ್ಲದೇ ಅವನೂ ತನ್ನಂತೆ ಮನೆ, ಕಟ್ಟಡ ಕಾಮಗಾರಿಯ ಗುತ್ತಿಗೆ ವಹಿಸಿಕೊಳ್ಳಲಾರಂಭಿಸಿದ್ದಂತೂ ಶಂಕರನನ್ನು ರೊಚ್ಚಿಗೆಬ್ಬಿಸಿಬಿಟ್ಟಿತು. ಆದ್ದರಿಂದ, ಒಂದೆರಡು ವರ್ಷಗಳ ಹಿಂದಷ್ಟೇ ಯಾವನೋ ಭಿಕಾರಿಯೊಬ್ಬ ತನ್ನಲ್ಲಿಗೆ ಕೂಲಿನಾಲಿಗೆ ಬಂದು, ತನಗೆ ಸಲಾಂ ಹೊಡೆಯುತ್ತಿದ್ದಂಥವನು ಇವತ್ತು ತನಗೇ ಪ್ರತಿಸ್ಪರ್ಧಿಯಾಗಿ ನಿಂತಿದ್ದಾನೆ ಮಾತ್ರವಲ್ಲದೇ ನಮ್ಮೂರಿವರ ಆಸ್ತಿಪಾಸ್ತಿಯನ್ನೇ ಲಪಟಾಯಿಸಿ ತನ್ನ ಕಣ್ಣಮುಂದೆಯೇ ಮೆರೆದಾಡುತ್ತಿದ್ದಾನೆಂದರೆ ಅವನಿಗೆಷ್ಟು ಅಹಂಕಾರವಿರಬೇಕು! ಅಂಥವನನ್ನು ಸುಮ್ಮನೆ ಬಿಡಲಿಕ್ಕುಂಟಾ? ಈಶ್ವರಪುರದ ಜನರು ನಾವೆಲ್ಲ ಅಷ್ಟೊಂದು ಮೂರ್ಖರೆಂದು ಭಾವಿಸಿದನೇ ಆ ಬೋಳಿಮಗ! ಈ ಊರಲ್ಲೇ ಹುಟ್ಟಿ ಬೆಳೆದವನು ನಾನು. ನನ್ನ ಈಗಿನ ಹಂತಕ್ಕೆ ತಲುಪಬೇಕಾದರೆ ಅದೆಷ್ಟು ಕಷ್ಟಪಟ್ಟಿದ್ದೇನೆ! ಆದರೂ ಒಂದೊಳ್ಳೆಯ ತೃಪ್ತಿಯ ಮಟ್ಟಕ್ಕಿನ್ನೂ ಬೆಳೆಯಲಾಗಲಿಲ್ಲ. ಅಂಥದ್ದರಲ್ಲಿ ಯಾವನೋ ಒಬ್ಬ ಲಾಟರಿ ಹೊಡೆದಂತೆ ತನ್ನ ಕಣ್ಣೆದುರೇ ಇನ್ನೊಬ್ಬರ ಸಂಪತ್ತನ್ನು ಅನುಭವಿಸಲು ಬಿಟ್ಟೇನೇ…? ಅದೂ ತನ್ನ ಶತ್ರುವಿನ ಸಂಗ ಮಾಡಿದಂಥವನಿಗೆ! ಖಂಡಿತಾ ಇಲ್ಲ. ಹೇಗಾದರೂ ಮಾಡಿ ಅವನಿಂದ ಡೇಸಾರ ಆಸ್ತಿಯ ಸಣ್ಣ ಕವಡೆಯನ್ನೂ ಬಿಡದೆ ಕಿತ್ತುಕೊಳ್ಳಬೇಕು! ಎಂದು ಶಂಕರ ಒಮ್ಮೆ ಉದ್ರಿಕ್ತನಾಗಿ ಯೋಚಿಸಿದವನು ಸಂತಾನಪ್ಪನನ್ನು ಹೊಸಕಿ ಹಾಕಲು ವ್ಯವಸ್ಥಿತ ಸಂಚೊಂದನ್ನು ರೂಪಿಸಿದ. ಸಂತಾನಪ್ಪನಂತೆಯೇ ತನ್ನ ಕೈಕೆಳಗೆ ನೂರಾ ಒಂದನೆಯ ಆಳಾಗಿ ದುಡಿಯುತ್ತ ಕಾರಣವಿಲ್ಲದೆ ತನ್ನಿಂದ ಒದೆಸಿಕೊಳ್ಳುತ್ತ ಕೊನೆಗೊಮ್ಮೆ ರೋಸಿ ಓಡಿ ಹೋಗಿದ್ದಂಥ ಹನುಮಪ್ಪ ಎಂಬವನಿಂದ ತನ್ನ ಕಾರ್ಯ ಸಾಧಿಸಿಕೊಳ್ಳಲು ಮುಂದಾದ. ಆದ್ದರಿಂದ ಒಬ್ಬ ಕೂಲಿಯಾಳಿನೊಂದಿಗೆ, ಹನುಮಪ್ಪ ಕೂಡಲೇ ತನ್ನನ್ನು ಕಾಣಲು ಬರುವಂತೆ ಹೇಳಿ ಕಳುಹಿಸಿದ.    ಆದರೆ ಶಂಕರನ ಕಿಡಿಗೇಡಿತನದ ಅರಿವಿದ್ದ ಹನುಮಪ್ಪನಿಗೆ ಅವನ ಹೆಸರೆತ್ತುತ್ತಲೇ ಚೇಳು ಕುಟುಕಿದಂತಾಯಿತು. ಅವನು ಹೇಳಿಕೆ ತಂದವನನ್ನು ಕೋಪದಿಂದ ಧುರುಗುಟ್ಟುತ್ತ, ‘ಹೇ, ಹೋಗಲೇ ಅವನೌವ್ವನಾ! ಸತ್ತರೂ ಇನ್ನೊಂದ್ ದಪಾ ಆ ಹಡೀ ಸೂಳೀಮಗನ ಮಖಾ ನೋಡಕ್ಕಿಲ್ಲಂತ ಓಗೇಳು ಅವ್ನುಗೇ…!’ ಎಂದು ಗದರಿಸಿಬಿಟ್ಟ. ಕೆಲಸದಾಳು ಹಾಗೆಯೇ ಹಿಂದಿರುಗಿದ. ಆದರೆ ಹನುಮಪ್ಪ ಬೈದುದನ್ನು ಶಂಕರನಿಗೆ ಹೇಳಲಿಲ್ಲ. ಬದಲಿಗೆ, ‘ಅವ್ನು ಬರಾಕಿಲ್ಲಾಂದ ಧಣೇರಾ…!’ ಎಂದಷ್ಟೆ ಹೇಳಿದ. ತನ್ನ ಆದೇಶವನ್ನು ತಿರಸ್ಕರಿಸಿದ ಹನುಮಪ್ಪನ ಕೊಬ್ಬನ್ನು ನೆನೆದ ಶಂಕರನಿಗೆ, ಈ ಕ್ಷಣವೇ ಹೋಗಿ ಆ ಬೇವರ್ಸಿಯನ್ನು ಹೊತ್ತು ತಂದು ತುಳಿದು ಹಾಕಲಾ…? ಎಂದೆನ್ನಿಸಿತು. ಆದರೂ ‘ಕಾರ್ಯವಾಸಿ ಕತ್ತೆ ಕಾಲು!’ ಎಂದುಕೊಂಡು ಅವುಡುಗಚ್ಚಿದ. ಆವತ್ತೊಂದು ಭಾನುವಾರ ಸಂಜೆ ತಾನೇ ಖುದ್ದಾಗಿ ಮಸಣದಗುಡ್ಡೆಯ ಹನುಮಪ್ಪನ ಗುಡಿಸಲಿನತ್ತ ಹೊರಟ. ಹನುಮಪ್ಪ ಆಹೊತ್ತು ಕುಡಿದು ಮತ್ತನಾಗಿ ತನ್ನ ಕಾಲೋನಿಯ ಅಶ್ವತ್ಥಮರದ ಕಟ್ಟೆಯಲ್ಲಿ ಕುಳಿತುಕೊಂಡು ನೆರೆಕರೆಯವರೊಡನೆ ಪಟ್ಟಾಂಗ ಹೊಡೆಯುತ್ತಿದ್ದ. ಶಂಕರನ ಕಾರು ಬಂದು ಮರದ ಹತ್ತಿರ ನಿಲ್ಲುತ್ತಲೇ ಬೆಚ್ಚಿಬಿದ್ದು ಎದ್ದು ನಿಂತ. ‘ಮೊನ್ನೆ ತಾನು ಸಿಟ್ಟಿನ್ ಬರದಾಗ ಈ ದುಷ್ಟನಿಗೆ ಬೈದಿದ್ದನ್ನು ಇವನ ಎಂಚಿಲು ನೆಕ್ಕುವ ಆ ನಾಯಿ ಹಾಗೆಯೇ ಒದರಿಬಿಟ್ನೇನೋ! ಇವ ಮೊದಲೇ ತಲೆಕೆಟ್ಟ ಮುಳ್ಳುಹಂದಿ. ಈಗ ನೆರೆಕರೆಯವರ ಮುಂದೆ ಅದೇನ್ ಮಾಡ್ತಾನೋ…?’ ಎಂದು ಯೋಚಿಸಿ ತಣ್ಣಗೆ ಬೆವರಿದ.    ಶಂಕರ ಗಂಭೀರವಾಗಿ ಕಾರಿನಿಂದಿಳಿದವನು ಹನುಮಪ್ಪನನ್ನೊಮ್ಮೆ ದುರುಗುಟ್ಟಿ ನೋಡಿದ. ಆಗ ಇನ್ನಷ್ಟು ಕುಗ್ಗಿದ ಅವನ ದೃಷ್ಟಿಯು ತಟ್ಟನೆ ನೆಲಕಚ್ಚಿತು. ‘ಲೇ, ಮಗನಾ ಲಘೂನ ಓಡಿ ಹೋಗಲೇ ಇಲ್ಲಿಂದ…!’ ಎಂದು ಅವನೊಳಗೆ ಯಾರೋ ಕೂಗಿ ಹೇಳಿದಂತಾಯಿತು. ಪಟ್ಟನೇ ತಲೆ ಎತ್ತಿ ಶಂಕರನತ್ತ ನೋಡಿದ. ಆದರೆ ಅವನಾಗಲೇ ಇವನೆದುರು ಬಂದು ನಿಂತಿದ್ದ. ಹನುಮಪ್ಪ ದೆವ್ವ ದರ್ಶನವಾದಂತೆ ಬೆದರಿ ಕುಸಿದು ಬೀಳುವುದೊಂದೇ ಬಾಕಿಯಿತ್ತು! ಅದೇ ಹೊತ್ತಿಗೆ ಅವನೊಂದಿಗೆ ಕುಳಿತಿದ್ದ ನೆರೆಕರೆಯವರು, ‘ಈಗೇನೋ ಗಮ್ಮತ್ತು ನಡೆಯಕೈತಿ!’ ಎಂದು ಕುತೂಹಲ, ಭಯದಿಂದ ರಪ್ಪನೆದ್ದವರು ಶಂಕರನತ್ತ ಹಲ್ಲು ಗಿಂಜುತ್ತ ಹಿಂದೆ ಸರಿದು ನಿಂತು ಅವನಾಟಕ್ಕೆ ಅನುವು ಮಾಡಿಕೊಟ್ಟರು. ‘ಯಾಕಾ ಹನುಮಪ್ಪಾ ಆವತ್ತು ಹೇಳದೆ ಕೇಳದೆ ಕೆಲಸ ಬಿಟ್ಟು ಹೋದವನದ್ದು ಆಮೇಲೆ ಪತ್ತೇನೇ ಇಲ್ಲವಲ್ಲಾ ಮಾರಾಯಾ?’ ಎಂದು ಶಂಕರ ಮುಗುಳ್ನಗುತ್ತ ಪ್ರಶ್ನಿಸಿದ. ಆಗ ಹನುಮಪ್ಪನಿಗೆ ಜೀವ ಬಂದಂತಾಯಿತು. ಆದರೂ ವಿಪರೀತ ಭಯಪಟ್ಟಿದ್ದರಿಂದಲೋ ಏನೋ ಅವನ ಯೋಚನೆಯೇ ನಿಂತುಹೋಗಿತ್ತು. ಶಂಕರನ ಮಾತಿಗೆ ಪಕ್ಕನೇ ಏನುತ್ತರಿಸಬೇಕೆಂದು ತಿಳಿಯದೆ, ‘ಹ್ಞಾಂ… ಅದೂ, ಹಾಗೇನಿಲ್ರೀ ಧಣೇರಾ…!’ ಎಂದು ಹಲ್ಲು ಗಿಂಜಿದ. ‘ಎಂಥದು ಹಾಗೇನಿಲ್ಲ? ನನ್ನೊಂದಿಗೆ ನೀನು ಎಷ್ಟು ವರ್ಷಗಳಿಂದ ದುಡಿಯುತ್ತಿದ್ದಿ ಮಾರಾಯಾ? ಆದರೂ ನನ್ನ ಸ್ವಭಾವ ಎಂಥದ್ದು ಅಂತ ಅರ್ಥವಾಗಲಿಲ್ಲವಲ್ಲಾ ನಿಂಗೆ…? ಆವತ್ತೇನೋ ಕೋಪದ ಭರದಲ್ಲಿ ಎರಡೇಟು ಹೊಡೆದುಬಿಟ್ಟೆ. ಅಷ್ಟಕ್ಕೇ ಎದ್ದು ಹೋಗಿಬಿಡುವುದಾ! ಆನಂತರ ನಾನೆಷ್ಟು ಸಂಕಟಪಟ್ಟೆ ಅಂತ ನಿನಗೇನಾದರೂ ಗೊತ್ತುಂಟಾ?’ ಎಂದು ವಿಷಾದ ವ್ಯಕ್ತಪಡಿಸಿದ. ಶಂಕರನ ಕುತಂತ್ರ ಅರಿಯದ ಅಮಾಯಕ ಹನುಮಪ್ಪ ಅವನ ಶರಣಾಗತಿಯನ್ನು ಕಂಡು ವಿಸ್ಮಯಗೊಂಡ. ಬಳಿಕ, ‘ಎಷ್ಟಾದರೂ ಕಷ್ಟಕಾಲದಲ್ಲಿ ಕೆಲ್ಸ ಕೊಟ್ಟು ಕಾಪಾಡ್ದ ಧಣಿ ಇವ್ರು. ಅಷ್ಟಲ್ಲದೇ ಸ್ವತಃ ತಾವೇ ಹುಡುಕೊಂಬಂದು ತಪ್ಪೊಪ್ಕೊಂಡಿದ್ದಾರೆ. ಇಂಥವರನ್ನು ಬೈದ್ ಬಿಟ್ನಲ್ಲ!’ ಎಂದು ಕೊರಗಿ, ಸಂಕೋಚದಿಂದ ಹಿಡಿಯಾಗಿ ಏನೋ ಹೇಳಲು ಬಾಯಿ ತೆರೆದ. ಅಷ್ಟರಲ್ಲಿ, ‘ನೋಡು ಹನುಮಪ್ಪ, ಇನ್ನೇನೂ ಮಾತಾಡಬೇಡ. ನನಗೆ ನಿನ್ನ ಅವಶ್ಯಕತೆ ತುಂಬಾ ಇದೆ. ನಾಳೆಯಿಂದ ಮರುಮಾತಾಡದೆ ಕೆಲಸಕ್ಕೆ ಬಂದುಬಿಡು. ಹ್ಞಾಂ, ಇನ್ನೊಂದು ಮಾತು. ಇಷ್ಟು ವರ್ಷ ನನ್ನೊಂದಿಗೆ ಕೂಲಿಯವನಾಗಿ ದುಡಿದೆ. ಆದರೆ ನಾಳೆಯಿಂದ ಮೇಸ್ತ್ರಿಯಾಗಿ ದುಡಿಯಬೇಕು. ಅದು ನಿನ್ನಿಂದ ಸಾಧ್ಯವಾ?’ ಎಂದು ಹಸಿದ ನಾಯಿಯ ಮುಂದೆ ಮಾಂಸದ ಚೂರನ್ನೆಸೆದಂತೆ ಆಸೆ ತೋರಿಸಿದ. ಮೇಸ್ತ್ರಿ ಎಂದ ಕೂಡಲೇ ಹನುಮಪ್ಪ ಖುಷಿಯಿಂದ ಆಕಾಶಕ್ಕೆ ನೆಗೆದುಬಿಟ್ಟ. ಏಕೆಂದರೆ ಅವನು ಈಶ್ವರಪುರಕ್ಕೆ ಕಾರ್ಮಿಕನಾಗಿ ಬಂದು ದುಡಿಯಲಾಂಭಿಸಿ ಹದಿನೈದು ವರ್ಷಗಳು ಕಳೆದಿದ್ದವು. ಮನೆ, ಕಟ್ಟಡ ಕಟ್ಟುವ ಕೆಲಸವೆಲ್ಲವನ್ನೂ ಕಲಿತಿದ್ದ. ಇಂದಲ್ಲ ನಾಳೆ ದೊಡ್ಡ ಮೇಸ್ತ್ರಿಯಾಗಬೇಕು ಎಂಬ ಕನಸನ್ನೂ ಕಾಣುತ್ತಿದ್ದ. ಅದಕ್ಕಾಗಿ ಹಲವು ಗುತ್ತಿಗೆದಾರರೊಡನೆ ಆಗಾಗ ಅಂಗಲಾಚುತ್ತಲೂ ಇದ್ದ. ಆದರೆ ಅವರು ಯಾರೂ ಇವನ ಕೆಲಸದ ಮೇಲೆ ವಿಶ್ವಾಸಬಾರದೆ ನಿರಾಕರಿಸುತ್ತಿದ್ದರು. ಹಾಗಾಗಿ ಹೊಟ್ಟೆಪಾಡಿಗೆ ಮಾತ್ರವೇ ಎಂಬಂತೆ ದುಡಿಯಲು ಹೋಗುತ್ತಿದ್ದ. ಇಂದು ಶಂಕರನಂಥ ದೊಡ್ಡ ಗುತ್ತಿಗೆದಾರನೊಬ್ಬ, ‘ನನ್ನ ಮೇಸ್ತ್ರಿಯಾಗುತ್ತೀಯಾ?’ ಎನ್ನುತ್ತಿದ್ದಾನೆ! ಎಂದು ಯೋಚಿಸಿದವನು ಆನಂದದಿಂದ ಉಬ್ಬಿ ಹೋದ.    ನಿಜ ಹೇಳಬೇಕೆಂದರೆ ಆಗ ಶಂಕರನಿಗೂ ಮೇಸ್ತ್ರೀಗಳ ಜರೂರತ್ತಿತ್ತು. ಆದ್ದರಿಂದಲೇ ಅವನು ಒಂದೇ ಹೊಡೆತಕ್ಕೆ ಎರಡು ಮಿಕಗಳನ್ನು ಹೊಡೆಯುವ ಹುನ್ನಾರದಿಂದ ಬಂದಿದ್ದ. ಆದರೆ ಕುಕ್ಕುಟಗಳಂತೆ ತಂತಮ್ಮ ಕಾಲ ಬುಡಕ್ಕೇ ಕೆದಕಿಕೊಳ್ಳುವಂಥ ಬಂಡವಾಳಶಾಹಿಗಳ ಸ್ವಾರ್ಥ, ಕುತ್ಸಿತ ಬುದ್ಧಿಯನ್ನು ಒಂದಷ್ಟು ಬಡವರ್ಗವು ಎಂದೂ ತಿಳಿಯುವ ಗೋಜಿಗೆ ಹೋಗುವುದಿಲ್ಲ ಅಥವಾ ತಿಳಿದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬಂತೆ ಹನುಮಪ್ಪನೂ ಹಿಂದುಮುಂದು ಯೋಚಿಸದೆ, ‘ಇಲ್ಲ ಧಣೇರಾ, ಆವತ್ತು ನೀವೊಂದೇಟು ಬಡ್ದದ್ದು ನನ್ನ ಒಳ್ಳೆಯದಕ್ಕಾತು ಅಂತ ತಿಳಕೊಂಡಿನ್ರೀ. ಆತ್ರಿಯಪ್ಪಾ, ನಾಳಿಂದ ನಾ ಮೇಸ್ತ್ರೀಯಾಗೇ ನಿಮ್ಮ ಕೂಡೆ ಕೆಲಸಕ್ಕ ಬರ್ತೀನ್ರೀ. ನೀವೀಗ ಲಘೂನ ಮನಿ ಕಡೀ ಹೊಂಡ್ರೀ ಧಣೇರಾ…!’ ಎಂದು ಸೌಜನ್ಯದಿಂದ ಕೈಮುಗಿಯುತ್ತ ಅಂದ. ‘ಹಾಗೆ ಹೇಳು ಮತ್ತೆ…! ಸರಿ ಹಾಗಾದರೆ, ನಾಳೆ ಬೆಳಿಗ್ಗೆ ಮನೆಯ ಕಡೆ ಬಂದುಬಿಡು. ಕೆಲಸ ಎಲ್ಲೀಂತ ಹೇಳುತ್ತೇನೆ’ ಎಂದ ಶಂಕರ ನೂರರ ನೋಟೊಂದನ್ನು ತೆಗೆದು ಅವನ ಕೈಗೆ ತುರುಕಿಸಿ ನಗುತ್ತ ಹಿಂದಿರುಗಿದ. ತಾನು ಅಂದಂತೆಯೇ ಮರುದಿನ ಅವನಿಗೆ ಮೇಸ್ತ್ರಿ ಕೆಲಸವನ್ನು ಕೊಟ್ಟವನು, ಕೆಲವೇ ದಿನದೊಳಗೆ ಅವನ ಆಪ್ತತೆಯನ್ನೂ ಗಳಿಸಿಕೊಂಡ. ಕಾರಣ ಹನುಮಪ್ಪ, ಸಂತಾನಪ್ಪನ ಸಮೀಪದ ಬಂಧುವೂ ಮೇಲಾಗಿ ಆತ್ಮೀಯ ಮಿತ್ರನೂ ಆಗಿದ್ದ. ಆದ್ದರಿಂದ ಶಂಕರ ಹನುಮಪ್ಪನ ಸಹಾಯದಿಂದಲೇ ಸಂತಾನಪ್ಪನ ವಿಶ್ವಾಸವನ್ನು ಮರಳಿ ಗಳಿಸಿ, ತನ್ನ ಕಾರ್ಯ ಸಾಧಿಸಿಕೊಳ್ಳಲು ನಿರ್ಧರಿಸಿದ. ಹಾಗಾಗಿ ಸಂತಾನಪ್ಪನ ವೃತ್ತಿನಿಷ್ಠೆಯನ್ನೂ ಪ್ರಾಮಾಣಿಕತೆಯನ್ನೂ ಹನುಮಪ್ಪನೊಡನೆ ಮಿತಿಮೀರಿ ಹೊಗಳುತ್ತ ತನ್ನ ಸಾರಾಯಿ ಪಾರ್ಟಿಗಳಿಗೆ ಅವನನ್ನು ಉಪಾಯವಾಗಿ ಆಹ್ವಾನಿಸತೊಡಗಿದ. ಆದರೆ ಶಂಕರ ಹೇಗೆ ಹೇಗೆ ಪ್ರಯತ್ನಿಸಿದರೂ ಸಂತಾನಪ್ಪ ಅವನನ್ನು ನಂಬಲು ತಯಾರಿರಲಿಲ್ಲ. ಕಾರಣ ಶಂಕರ ಮಹಾದುಷ್ಟನೆಂಬ ಭಯವೊಂದು ಕಡೆಯಾದರೆ ಹಿಂದೆ ಒಂದಷ್ಟು ಕಾಲವಾದರೂ ತನಗೂ, ತನ್ನ ಸಂಸಾರಕ್ಕೂ ಅನ್ನ ನೀಡಿದ ಧಣಿಯೆಂಬ ಗೌರವಕ್ಕೋ ಏನೋ ಅವನು ಶಂಕರನ ಸ್ನೇಹದ ಹಸ್ತವನ್ನು ಪುರಸ್ಕರಿಸಲು ಇಷ್ಟಪಡಲಿಲ್ಲ. ಆದರೂ ಹನುಮಪ್ಪನ ಮೂಲಕ ಶಂಕರನ ನಿರಂತರ ಪ್ರಯತ್ನವು ಕೊನೆಗೂ ಒಮ್ಮೆ ಸಂತಾನಪ್ಪನ ಬುದ್ಧಿಯನ್ನು ಮಂಕು ಬಡಿಸಿಬಿಟ್ಟಿತು. ಅದೇ ಸಮಯಕ್ಕೆ ಸರಿಯಾಗಿ ಶಂಕರನೂ ಕೊನೆಯ ಪ್ರಯತ್ನವೆಂಬಂತೆ ಆವತ್ತು ಕಡೆಪಾಡಿಬೆಟ್ಟಿನ ತನ್ನ ಹೊಸ ಫ್ಲ್ಯಾಟ್‍ನಲ್ಲಿ ಸಂತಾನಪ್ಪನಿಗಾಗಿಯೇ ಸಣ್ಣದೊಂದು ಔತಣ ಕೂಟವನ್ನು ಆಯೋಜಿಸಿ ಅವನನ್ನು ವಿಶೇಷ ಆದರದಿಂದ ಆಹ್ವಾನಿಸಿದ.    ಸಂತಾನಪ್ಪ ಒಲ್ಲದ ಮನಸ್ಸಿನಿಂದ ಹನುಮಪ್ಪನೊಂದಿಗೆ ಶಂಕರನ ಫ್ಲ್ಯಾಟ್‍ಗೆ ಆಗಮಿಸಿದ. ಶಂಕರನ ಊರ ಐವರು ಆಪ್ತ ಸ್ನೇಹಿತರೊಂದಿಗೆ ಬರೇ ಎಂಟು ಜನರಿಂದ ಕೂಡಿದ ಸಣ್ಣ ಔತಣಕೂಟ ಅದಾಗಿದ್ದರಿಂದ ಸಂತಾನಪ್ಪನೂ ಮುಜುಗರ ಬಿಟ್ಟು ಅವರೊಂದಿಗೆ ಬೆರೆತ. ವಿದೇಶಿ ಮದ್ಯದ ಬಾಟಲಿಗಳು ಮತ್ತು ಆಡು, ಕೋಳಿಯ ಹುರಿದ ಮಾಂಸದ ಖಾದ್ಯಗಳು ಕೋಣೆಯೊಳಗೆಲ್ಲ ಘಮಘಮಿಸುತ್ತ ಹಭೆಯಾಡುತ್ತಿದ್ದವು. ಶಂಕರ ಎಲ್ಲರೊಂದಿಗೆ ಸಂತಾನಪ್ಪನಿಗೂ ಸಾರಾಯಿ ಕೊಟ್ಟ. ಸಂತಾನಪ್ಪ ಸಂಕೋಚದಿಂದ ಒಂದು ಪೆಗ್ಗು ಹೊಟ್ಟೆಗಿಳಿಸಿದ. ತುಸು ಮತ್ತೇರುತ್ತಲೇ ನಿರ್ಭಿಡೆಯಿಂದ ಕೈಕಾಲು ಚಾಚಿ ಕುಳಿತು ಶಂಕರ ಬಗ್ಗಿಬಗ್ಗಿಸಿ ಕೊಡುತ್ತಿದ್ದ ಪೆಗ್ಗನ್ನು ಅಡಿಗಡಿಗೆ ಹೀರುತ್ತ ಗತ್ತಿನಿಂದ ಎಲ್ಲರೊಂದಿಗೆ ಹರಟತೊಡಗಿದ. ಶಂಕರ, ಸಂತಾನಪ್ಪನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಕಾದ ಕಬ್ಬಿಣ ಬಡಿಯಲು ಇದೇ ಸರಿಯಾದ ಸಮಯ ಎಂದು ಖಚಿತವಾಗುತ್ತಲೇ, ‘ಏನೋ ಸಂತಾನಪ್ಪಾ ನನ್ನ ಮೇಲೆ ನಿನಗಿನ್ನೂ ಹಿಂದಿನ ಬೇಸರ ಹೋಗಲಿಲ್ಲವಾ ಮಾರಾಯ? ನನ್ನ ಸ್ನೇಹ ಮಾಡಲೇ ಹೆದರುವಂಥ ದ್ರೋಹವನ್ನು ನಿನಗೆ ನಾನು ಮಾಡಿದ್ದಾದರೂ ಏನು ಹೇಳು…?’ಎಂದು ಬೇಸರದ ಧ್ವನಿಯಿಂದ ಕೇಳಿದ. ಶಂಕರನ ಆ ಬಗೆಯ ಆತ್ಮೀಯತೆಯ ಮಾತನ್ನು ಕೇಳಿದ ಸಂತಾನಪ್ಪನಿಗೆ ರಪ್ಪನೆ ಉತ್ತರಿಸಲು ತುಸು ಸಂಕೋಚವಾಯಿತು. ಆದರೆ ಈಗ ತಾನೂ ಶಂಕರನಷ್ಟೇ ಶ್ರೀಮಂತನಲ್ಲವೇ! ಎಂದುಕೊಂಡವನು ಅದೇ ವರ್ಚಸ್ಸಿನಿಂದ, ‘ಹೇ, ಹಾಗೇನಿಲ್ರೀ ಶಂಕ್ರಣ್ಣಾ, ನಿಮ್ಮ್ ಮ್ಯಾಲೆ ಈವಾಗ ನಂಗೇನೂ ಬ್ಯಾಸರ ಇಲ್ಲ ಬಿಡ್ರೀ…!’ ಎಂದ ನಗುತ್ತ. ‘ಹಾಗಾದರೆ ಮತ್ಯಾಕೆ ಆವತ್ತು ಹನುಮಪ್ಪನೊಡನೆ ನಾನು ಎಷ್ಟೊಂದು ಬಾರಿ ಹೇಳಿ ಕಳುಹಿಸಿದರೂ ನೀನು ಬರಲಿಲ್ಲ ಯಾಕೆ ಮಾರಾಯಾ? ಅದರರ್ಥ ನನ್ನ ಮೇಲೆ ನಿನಗಿನ್ನೂ ವಿಶ್ವಾಸ ಬಂದಿಲ್ಲ ಎಂದೇ ಅಲ್ಲವಾ?’ ‘ಯಪ್ಪಾ ವಿಶ್ವಾಸ ಅದೇರೀ… ಆದ್ರಾ ಒಂದ್ಕಾಲದಾಗ ನೀವ್ ನಮ್ ಧಣಿಯಾಗಿದ್ರಲ್ರೀ, ಅದಕ್ಕಾ ಸ್ವಲ್ಪ ಮುಜುಗರ ಆಗ್ತಿತ್ತ್ ಅಷ್ಟೇರೀ!’ ‘ಓಹೋ ಅಷ್ಟೇನಾ ವಿಷ್ಯಾ. ನೋಡು ಸಂತಾನಪ್ಪ ಈ ಹಿಂದೆ ನೀನು ನನ್ನೊಂದಿಗೆ ಕೂಲಿಯವನಾಗಿ ದುಡಿದಿದ್ದಿ ಅಂತ ನಿನ್ನ ಮನಸ್ಸಿನಲ್ಲಿದ್ದರೆ ಅದನ್ನೀಗಲೇ ತೆಗೆದು ಹಾಕು ಮಾರಾಯಾ. ಯಾಕೆಂದರೆ ನೀನೂ ನನ್ನ ಮಟ್ಟಕ್ಕೆ ಬೆಳೆಯಲು ಕಷ್ಟಪಟ್ಟಿದ್ದಿಯೋ ಇಲ್ಲವೋ ಗೊತ್ತಿಲ್ಲ. ಆದರೂ ಬೆಳೆದುಬಿಟ್ಟಿದ್ದಿ ನೋಡು. ಹೀಗಿರುವಾಗ ಆವತ್ತಿನ ಭೇದಭಾವವನ್ನು ಇನ್ನೂ ಇಟ್ಟುಕೊಳ್ಳುವುದರಲ್ಲಿ ಅರ್ಥ ಉಂಟಾ ಹೇಳು?

Read Post »

ಇತರೆ

ಮಹಿಳೆ ಎಷ್ಟು ಸುರಕ್ಷಿತಳು?

ಹೆಣ್ಣು ಎಂಬ ಕಾರಣಕ್ಕೆ ಆಕೆ ಮನೆಯಿಂದ ಹೊರಗೆ ಹೋಗುವುದನ್ನು ಮತ್ತು ದೂರದ ಊರುಗಳಿಗೆ ಪಯಣಿಸುವುದನ್ನು ನಿರ್ಬಂಧಿಸಲಾಗುತ್ತದೆ. ಸಂಪ್ರದಾಯವಾದಿಗಳು ಶಾಲೆಗೆ ಹೋಗದಂತೆ ತಡೆಯುತ್ತಿದ್ದಾರೆ. ದಾಖಲಾದ ಹೆಣ್ಣು ಮಕ್ಕಳು ವಿವಿಧ ಕಾರಣಗಳಿಂದ ಶಾಲೆಯಿಂದ ಹೊರಗುಳಿಯುತ್ತಾರೆ.

ಮಹಿಳೆ ಎಷ್ಟು ಸುರಕ್ಷಿತಳು? Read Post »

You cannot copy content of this page

Scroll to Top