ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ವೈನ್ ಇಲ್ಲವೇ ಇಲ್

ಅನುವಾದಿತ ಕವಿತೆ ವೈನ್ಇಲ್ಲವೇಇಲ್ಲ ರಘುಪತಿ ಸಹಾಯ್ ಫಿರಾಖ್ ಗೋರಖ್ ಪುರಿ ಕನ್ನಡಕ್ಕೆ : ಆರ್.ವಿಜಯರಾಘವನ್ ಆಮಿಶಕ್ಕೊಳಪಡುವ ಖಾಲಿಯಾಗದ ಯಾವ ಮಧುವೂ ಇಲ್ಲಓ, ಹೂಬಿಡುವ ನಾರ್ಸಿಸಸ್ಸನ ನೋಟವೇ! ನಿನಗೆ ಯಾವ ಪ್ರತಿಸ್ಪರ್ಧಿಯೂ ಇಲ್ಲ. ನರಕಸದೃಶ ಸ್ಥಿತಿಯಲ್ಲಿರುವವನು ಸಂಪೂರ್ಣವಾಗಿ ಅಂಥ ಸ್ಥಿತಿಯಲ್ಲಿಲ್ಲಇದು ನರಕಗಳು ವಿಧಿಸಿದ ಶಿಕ್ಷೆ. ಆ ಶಿಕ್ಷೆ ಬಂದುದು ಪ್ರಿಯಕರನಿಂದ ಅಲ್ಲ ಪ್ರತಿ ಅಣುವೂ ನಿದ್ರಿಸದಿರುವ ನಿಶೆಯೇ ಇಂದಿನಿರುಳುನಾಳೆ ಒಂದು ಕ್ರಾಂತಿ ನಡೆಯಲಿದೆ, ಭೂಮಿ ಎಚ್ಚರದಿಂದಿದೆ ಜೀವನವು ನೋವಾಗಿ ಬದಲಾಗುತ್ತಲೇ ಇದೆ. ಈಗ ಏನಾಗಲಿದೆ?ಈಗ, ಆ ನೋಟ, ಪ್ರಾರ್ಥನೆಗಳಿಂದ ಯಾವುದೇ ಪ್ರಯೋಜನವಾಗದಿದೆ ಕಾರವಾನಿಗೆ ಚಂಡಮಾರುತ, ಗುಡುಗು ಮಿಂಚಿನ ಸೂಚನೆಗಳಿವೆಸಾವಿನ ಆತಂಕಗಳು ಅದರ ಮೇಲೆ ಯಾವುದೇ ನಿರ್ಬಂಧ ಹೇರದಿದೆ ಮಧು ಮತ್ತಿನೌಷಧಗಳ ಭಾರವಿರದಿಹ ಮಧುಶಾಲೆಗಳೆಲ್ಲಿಹವು?ವಿಶ್ವದ ಪಾರಮೇರೆಯ ಮೇಲೆ ಹರಡದಿರುವುದು ಒಂದು ಮೋಡವಲ್ಲದಿದೆ. ನಿನ್ನ ಪ್ರೀತಿ ನೀನೆಣಿಸಿದಂತೆ ಅಷ್ಟೊಂದು ಕೆಟ್ಟದ್ದಲ್ಲಅದಕ್ಕೆ ನೆಲವಿದೆ ಗಗನವಿದೆ ಅದು ವಿಶ್ವವನೆ ಹೊಂದಿದೆ ನನ್ನ ನಂಬಿಕೆ “ವಿಶ್ವದ ವಿರುದ್ಧ ಸ್ವರ್ಗ”ನಾನು ಪ್ರತಿಫಲವ ಬಯಸುತ್ತಿಲ್ಲ ದೇವರಿಗೆ ವಂದನೆಯಿದೆ ಯಾವಾಗಿನಿಂದ ಆ ಒಂದು ಗುರಿಯಲ್ಲಿ ದುಃಖದ ಕಾರವಾನ್ನಿಂತಿದೆ?ಯಾವಾಗಿನಿಂದ ಕ್ರಾಂತಿಯು ಕಾಲದ ಸಹ-ಪ್ರಯಾಣಿಕನಾಗದೆ ಉಳಿದಿದೆ? ಚಿಂತೆಬೇಡ! ಶತ್ರು ರುಂಡವ ಚೆಂಡಾಡಿದ ಬಳಿಕ, ಮೇಲಕ್ಕೆತ್ತಬಾರದು ಅದನ್ನುಯಾವಾಗ ತಾನೇ ಹಾರುವ ಧೂಳು ಕವಿಯ ಜೊತೆಗಾರನಾಗಿರದೆ ಉಳಿದಿದೆ? ಇಲ್ಲಿ ನಿಮ್ಮ ನೋವಿನಿಂದ ವಂಚಿತರಾದವರು ನಮಗೆಕೇಳಿಸುವ ವಿಶ್ವಪ್ರೀತಿಯ ಯಾವುದೇ ದುಃಖವನ್ನು ಹೊಂದದಿರಲಿ ಈಗಲೀಗಲೇ, ಮನುಷ್ಯನ ರಕ್ತ ನೀರಂತೆ ಹರಿಯಬಹುದುಈಗಲೀಗಲೇ ಜೀವನದ ಮುಖದಲ್ಲಿ ಹೊಳಪು ಮಾಸಬಹುದು ಪ್ರಪಂಚವ ಕುರಿತು ಪಾಪಿ ಜನಗಳು ಹೇಳುತ್ತಿದ್ದಾರೆ ಇಂತುಏರುತ್ತಿರುವ ಅಲೆ ತುಂಬಿದ ಈ ನದಿಯು ಮರೀಚಿಕೆಯಲ್ಲವೆಂದು ************************************

ವೈನ್ ಇಲ್ಲವೇ ಇಲ್ Read Post »

ಅನುವಾದ

ಅನುವಾದ ಸಂಗಾತಿ

ಛೇ.. ಕನ್ನಡ ಮೂಲ:ದೀಪ್ತಿ ಭದ್ರಾವತಿ. ಇಂಗ್ಲೀಷಿಗೆ:ಸಮತಾ ಆರ್ ಛೇ ಪಕ್ಕದ ಕೋಣೆಯಲ್ಲಿಯೇ ಇದ್ದ ಬಾಡಿಗೆದಾರನೊಬ್ಬಹೇಳದೆ ಕೇಳದೆ ರಾತ್ರಿಹೊರಟು ಹೋಗಿದ್ದಾನೆ ನಾಪತ್ತೆಯಾಗಿದ್ದಾನೆನನ್ನ ಪುಟ್ಟ ಮಗಳಜೀನ್ಸ್ ಪ್ಯಾಂಟನ್ನು ಹರವುವಾಗಲೆಲ್ಲಕೆಂಪು ಕಣ್ಣಿನಲಿ ನೋಡಿ“ಸರಿಯಿಲ್ಲ ಸರಿಯಿಲ್ಲ”ಎನ್ನುತ್ತ ದಢಾರನೆ ಬಾಗಿಲು ಹಾಕಿಶತಪಥ ತಿರುಗುತ್ತಿದ್ದವ ಹಗಲಿರುಳೂ ನಮ್ಮ ಮನೆಯ ಕಡೆಯೇ ದಿಟ್ಟಿಸುತ್ತಬಾಗಿಲಲ್ಲಿ ಕೂತುಅವನ ಸಂಕಟ ನೋಡಲಾಗದೆ” ನಿನಗ್ಯಾಕೊ ನಮ್ಮಗಳ ಉಸಾಬರಿ”ಎಂದಿದ್ದೆದನಿ ಜೋರಾಯಿತೋ ಏನೋಎದೆಯೊಳಗೆ ಅದೆಷ್ಡು ಮಾತುಗಳಿದ್ದವೊಒಂದನ್ನು ಹೇಳಿಕೊಳ್ಳದೆಮನೆಯ ಗೋಡೆಯ ತುಂಬೆಲ್ಲಮಸಿಯಲ್ಲಿ ಗೀಚಿ ಹೋಗಿದ್ದಾನೆ ಅದೆಷ್ಟು ಕೋಪವ ಎದೆಯ ಪುಪ್ಪಸದಲಿಅಡಗಿಸಿಕೊಂಡಿದ್ದನೊಮನೆಯ ಹೆಂಚು ಕಿಟಕಿಬಾಗಿಲುಎಲ್ಲವನ್ನು ಮುರಿದು ಹಾಕಿದ್ದಾನೆಒತ್ತಿ ಹೋಗಿದ್ದಾನೆಸಾಕಷ್ಡು ಕುರುಹುಗಳ ಸುತ್ತಲುಯಾರು ಬಂದರು ತಳ ಊರದಂತೆ ಛೇ ಒಂದಿಷ್ಡು ಕಸ ತೆಗೆಸಿ ಚೊಕ್ಕಗೊಳಿಸಿಸುಣ್ಣಬಣ್ಣ ಬಳಿಸಿದರೆ ಯಾರಾದರು ಬಂದು ಉಳಿದುಕೊಂಡಾರು ಎಲ್ಲಿಯೂ ಮನೆ ಸಿಕ್ಕದಿದ್ದರೆಪಾಪ ಅವನು? ———- ದೀಪ್ತಿ ಭದ್ರಾವತಿ. Tchah…. A tenant living next doorhas gone away,last night,All of a suddenwithout telling anyone.. Absconding he is,The one who used to stare angrily,whenever I went to drythe jeans of my little daughter,And used to slam the doorSaying” not okay, not okay “Pacing to and fro,with unease . Day and night sitting at his doorused to stare at mine.Unable to bear his grunt,Said I “why are you botheredso much about us”My voice might have been on a high ,So much might be hidingin his chest to say,Without revealing anythingGone away scribbling all uponthe wall in charcoal. Who knows,How much anger he was hiding,Inside his rib cage,He has broken all the roof tiles,doors and windows of the house.Has gone away, leaving behindenough imprints around,To make sure not to letanyone to settle down. Tchah, If it’s cleaned removingall the cobwebs,And painted anew,Then someone may comeand stay here. What if the poor fellowDoesn’t getany homeany where? ———- Translated by Samatha.R *************************************

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಬರಹ ರಘುಪತಿ ಸಹಾಯ್ ಫಿರಾಖ್ ಗೋರಖ್ ಪುರಿ ಕವಿತೆ ರಘುಪತಿಸಹಾಯ್ ಫಿರಾಖ್ ಗೋರಖ್ಪುರಿ ಇವರು ಪ್ರಮುಖ ಉರ್ದುಕವಿಗಳು. ಸಾಹಿರ್ಲೂದಿಯಾನ್ವಿ,ಮಹಮ್ಮದ್ಇಕ್ಬಾಲ್‍‍ರಂತಹ ಅನೇಕ ಹೆಸರಾಂತ ಉರ್ದುಕವಿಗಳಿದ್ದ ಕಾಲದಲ್ಲಿಇವರುಉತ್ತಮಉರ್ದುಕವಿಗಳಾಗಿಪ್ರಸಿದ್ಧಿಪಡೆದರು. ಇವರ ಬೃಹತ್ಕವನಸಂಕಲನ ಗುಲ್-ಏ-ನಗ್ಮಾಕ್ಕೆ ಜ್ಞಾನಪೀಠಪ್ರಶಸ್ತಿಯುದೊರೆಯಿತು. ಇಲ್ಲಿಅನುವಾದಗೊಂಡ ಕವಿತೆಗಳು ಗಜಲುಗಳಂತೆ ಕಂಡರೂ ಗಜಲುಗಳಲ್ಲ. ಇವುಕಾವ್ಯಕಾರಣದಲ್ಲಿಬಂದವು ಕನ್ನಡಕ್ಕೆ ಅನುವಾದಿಸಿದವರು: ಆರ್.ವಿಜಯರಾಘವನ್ ಇಂದು ಸಹ ಪ್ರೀತಿಯ ಕಾರವಾನ್ ಇಂದೂ ಈಪ್ರೀತಿಯ ಕಾರವಾನ್ ಹಾದುಹೋಗುತ್ತಿದೆಈ ಮೈಲು ಮತ್ತು ಈ ಮೈಲಿಗಲ್ಲನ್ನು ಯಾವತ್ತಿನಂತೆ ನಿಮ್ಮ ದುಃಖ ಈ ಜಗತ್ತಿನಲ್ಲಿದ್ದ ಎಂದಿನ ದುಷ್ಟ ವಿಷಯವಾಗಿದೆನಮ್ಮ ಕಥೆಯನ್ನು ಇತರರು ಹೇಳುತ್ತಿದ್ದಾರೆಅದೇ ಮೊದಲಿನಂತೆ ಗುರಿಗಳುಧೂಳಿನಂತೆಹಾರಿಹಾರಿ ಹೋಗುತ್ತಲಿವೆಹಾದುಹೋಗುವಲೋಕದರೀತಿಯೂಮೊದಲಿನಂತೆ ಕತ್ತಲೆಯಲ್ಲಿಬೆಳಕಿನಲ್ಲಿಪ್ರೀತಿಏನನ್ನೂಕಾಣಲಿಲ್ಲಸಂಜೆಬೆಳಕಿನಪರಿಣಾಮವಿದೆಇಂದಿಗೂಮೊದಲಿನಂತೆ ಈ ಬದುಕಿನಲ್ಲಿ ಬದುಕ ಒಟ್ಟುಗೂಡಿಸುವಿಕೆ ಪರಿಣಾಮರಹಿತವಾಗಿದೆಭಾರದುಬಾರಿ ಮಧುಕುಡಿಕೆಗಳ ಕುರಿತ ಗೌಜುಗದ್ದಲವಿದೆ ಮೊದಲಿನಂತೆ ಸಾವಿರಸಾವಿರ ಹಿಂಸೆ ದಬಾವಣಿಕೆಯ ಕಾರ್ಯಗಳಮಾಡುಸಾವಿರಗಟ್ಟಲೆ ಬದ್ಧತೆಯ,ದಯೆಯ ಸತ್ಕಾರ್ಯಗಳಮಾಡುಗೆಳೆಯನೇ! ನಿನ್ನ ಕುರಿತ ಶಂಕೆ ಅನುಮಾನಗಳು ಉಳಿವವು ಮೊದಲಿನಂತೆ ಇಂದು, ಮತ್ತೆ, ಪ್ರೀತಿಬೇರ್ಪಟ್ಟಿದೆಎರಡುಲೋಕಗಳಿಂದಜಗತ್ತನ್ನುತೋಳುಗಳಲ್ಲಿಬಿಗಿದಪ್ಪಿದ್ದವಳುಇರುವಳೇಮೊದಲಿನಂತೆ ಖಿನ್ನತೆಗೆಸಂದ ಪ್ರೀತಿಇಂದಿಗೂಅತಿಖಿನ್ನತೆಗೆಒಳಗಾಗಿಲ್ಲಕಾಣದಂಥಸುಡುವಿಕೆಯಸಣ್ಣಪರಿಣಾಮವುಇದೆಮೊದಲಿನಂತೆ ಸಾಮೀಪ್ಯವುಕಡಿಮೆಯಿಲ್ಲ, ದೂರವಿರುವಿಕೆಯುಹೆಚ್ಚಿಲ್ಲಆದರೆಇಂದು, ಅನ್ಯೋನ್ಯತೆಯಅರ್ಥವಿರುವುದಾದರೂಎಲ್ಲಿಮೊದಲಿನಂತೆ ಸ್ಫಟಿಕಮಣಿಯಲ್ಲಿಅತಿಸೂಕ್ಷ್ಮಲೋಪವನುನೀನಗೆನೋಡಲುಸಾಧ್ಯಸ್ಫಟಿಕಮಣಿಯಕಲಾಕಾರನೇ, ಹೇಳು, ನನ್ನಹೃದಯವಿರುವುದೇಮೊದಲಿನಂತೆ ಒಮ್ಮೆಕಾಮಕ್ಕೆಅಜಾಗರೂಕತೆಯಿಂದಬದುಕನ್ನೊಪ್ಪಿಸಿದರೂಲಾಭನಷ್ಟದಸಮಸ್ಯೆಉಳಿದೇ ಇರುವುದುಮೊದಲಿನಂತೆ ಇಂದೂಕೊಲ್ಲುವಸೌಂದರ್ಯವಿರುವುದುಪ್ರೀತಿಬೇಟೆಯಾಡುವನೆಲದಲ್ಲಿತನ್ನ ಕಮಾನುಹುಬ್ಬನ್ನುಒಯ್ಯಲೊಯ್ಯುತ್ತಮೊದಲಿನಂತೆ ನಿಮ್ಮಪ್ರಕಾಂಡಪ್ರವಚನದಕಣ್ಣುಮಾತನಾಡಲುಪ್ರಾರಂಭಿಸಿತುಆಅಭಿವ್ಯಕ್ತಿಯಸೌಂದರ್ಯಮಾಂತ್ರಿಕತೆ ಈಗಲೂಇರುವವಾ ಮೊದಲಿನಂತೆ ಓಫಿರಾಕ್, ಸುಡುವಹೃದಯದಕಪ್ಪುವಿಧಿಯಂತಹಅದೃಷ್ಟವುಮಸುಕಾಗುವುದಿಲ್ಲಈದಿನಮೋಂಬತ್ತಿಯಮೇಲ್ಭಾಗದಲ್ಲಿಹೊಗೆಇದೆ, ಮೊದಲಿನಂತೆ.

Read Post »

ಅನುವಾದ

ಕಣ್ಣ ಕಸ

ಅನುವಾದಿತ ಕವಿತೆ ಕಣ್ಣ ಕಸ ಕನ್ನಡ ಮೂಲ: ಶೈಲಜಾ ಬಿ. ಇಂಗ್ಲೀಷಿಗೆ: ಸಮತಾ ಆರ್. ಈ ಕಸ ಹೇಗೆಬಿತ್ತೋ ಗೊತ್ತಿಲ್ಲಕಣ್ಣಿಂದ ಇಳಿವಒಂದೊಂದೇ ಹನಿಗಾಗಿಕಾಯುತಿರುವೆಕರವಸ್ತ್ರದ ತುದಿಸೆರಗಿನ ಚುಂಗುಉಫ್..ಅಂತಊದಿದ ಮಗಳ ಉಸಿರುಯಾವುದಕ್ಕೂ ಸಿಗದೆಅವಿತು ಕಾಡಿಸುತಿದೆ ತುಂಬಿದ ಕಣ್ಣುಗಳಲ್ಲಿಜಗತ್ತನ್ನು ನೋಡುವುದೂಒಂದು ಅನುಭವ ತಾನೇಹೀಗಂದುಕೊಳ್ಳುತ್ತಲೇಕನ್ನಡಿಯ ಮುಂದೆ ಬಂದುಮನಸ ಓಲೈಸಲುಹೆಣಗುತಿರುವೆ ಈ ನಶ್ವರ ಬದುಕಲ್ಲಿಪ್ರತಿ ಘಳಿಗೆಯನಿರಿಯುತಿದೆಕಣ್ಣ ತುಂಬ ಬಾವುಕಣ್ಣೊಳಗೆ ಬಿದ್ದ ನೋವು I just don’t knowHow this speck of dustGot in to the eyeAnd haunting me hiding inside.And kept me waiting forevery drop dripping. Corner of a hand kerchiefEdge of my saree,“Uff” the air blown by my kid,Nothing could get rid of this. To see the world with filled eyes,Is also an experience,Thinking so,Stood before the mirrorStruggling hard to console the soul. In this immortal life,Eye swelled and the pain filledAre stabbing each moment.

ಕಣ್ಣ ಕಸ Read Post »

ಅನುವಾದ

ಸೇಡಿನ ಫಲ

ಸೇಡಿನ ಫಲ ವಿಲಿಯಂ ಬ್ಲೇಕ್ ಕವನದ ಅನುವಾದ ನನ್ನ ಗೆಳೆಯನ ಮೇಲೆ ಬಂದ ಮುನಿಸಿಗೆ ನಾನುತಾಳ್ಮೆಯಿಂದಲೆ ಅಂದೆ, ‘ಸುಮ್ಮನಿರು’ ಎಂದುಮಾಯವಾಗಿಯೆ ಹೋಯ್ತು ಕೋಪವಂದು.ನನ್ನ ವೈರಿಯ ಮೇಲೆ ಬಂದ ಮುನಿಸಿಗೆ ನಾನುಕೋಪದಿಂದಲೆ ನುಡಿದೆ, ‘ಚೆಂಡಾಡು’ ಎಂದುಮನದೊಳಗೆ ಬೆಳೆಯಿತದು ನನಗರಿವಿಲ್ಲದೆಲೆ ಹಗೆತನದ ಬೀಜವದು ಮೊಳಕೆಯೊಡೆಯುತ್ತಸಸಿಯಾಗಿ ಬೆಳೆದು ಮರವಾಗಿ ನಿಂತಿತ್ತುಭಯವೆಂಬ ಕಣ್ಣೀರ, ನಗುವೆಂಬ ಎಳೆ ಬಿಸಿಲನೀಡುತ್ತ ಬೆಳೆಸಿದೆನು ಹಗಲು ರಾತ್ರಿಯೆನ್ನದೆಲೆವಂಚನೆಯ ತಂತ್ರಗಳ ನಡುನಡುವೆ ತುರುಕುತ್ತಮರವಾಗಿ ಬೆಳೆಸಿದೆನು ಸೇಡಿನಾ ಗಿಡವನ್ನು ಮರ ಬೆಳೆದು ಹೂವಾಯ್ತು, ಹೂವರಳಿ ಹಣ್ಣಾಯ್ತುನನ್ನ ಅರಿ ನೋಡಿದನು ಥಳಥಳಿಪ ಹಣ್ಣನ್ನುಕಿಂಚಿತ್ತು ಯೋಚಿಸಿದಲೆ ನನ್ನ ಹಣ್ಣೆಂದರಿತುಕಳಿತ ಹಣ್ಣನು ಕದ್ದು ತಿಂದು ಮುಗಿಸಿದನುಕತ್ತಲಿನ ಆವರಣ ಅವನ ಕಣ್ಣನು ಮುಚ್ಚಿನನ್ನ ಖೆಡ್ಡದಲಿ ಅವನ ಎಳೆದು ಕೆಡವಿತ್ತು ಬೆಳಗಿನಾ ಬೆಳಕಲ್ಲಿ ಸಂತಸದಿ ನೋಡಿದೆನುನನ್ನ ಮರದಡಿಯಲ್ಲಿ ಸೆಟೆದು ಬಿದ್ದಾ ವೈರಿಯನು **************************************** ಮೂಲ: A Poisonous Tree: By William Blake ಕನ್ನಡಕ್ಕೆ: ಗಣೇಶ್.ವಿ

ಸೇಡಿನ ಫಲ Read Post »

ಅನುವಾದ

ಕಾಡಿನಲ್ಲಿ ಕಾಡಿದ ಭೂತ

ಅನುವಾದಿತ ಕಥೆ ಕಾಡಿನಲ್ಲಿ ಕಾಡಿದ ಭೂತ ಇಂಗ್ಲೀಷ್ ಮೂಲ: ಆರ್.ಕೆ.ನಾರಾಯಣ್       ಬಹಳ ವರ್ಷಗಳ ಹಿಂದೆ ನಡೆದ ಘಟನೆ. ನೀವು ನಂಬುತ್ತೀರೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ಘಟನೆ ನಡೆದುದು ಮಾತ್ರ ಸತ್ಯ. ನಾನು ಆಗ ಕಾರಿನಲ್ಲಿ ಹೋಗುತ್ತಿದ್ದೆ. ಆಗ  ನನ್ನ ಕಾರಿನ ಚಾಲಕ ದಾಸಪ್ಪ ತುಂಬ ಸಭ್ಯವಾದ ವ್ಯಕ್ತಿ. ಆದರೆ ಆ ದಿನ ಅವನು ಯಾಕೆ ಹಾಗೆ ವರ್ತಿಸಿದನೋ ಗೊತ್ತಿಲ್ಲ. ಅವನು ತುಂಬಾ ಕುಡಿದಿದ್ದಿರಬಹುದು. ಏನೇ ಆಗಲಿ, ನಿಮ್ಮ ಕುತೂಹಲಕ್ಕಾಗಿ ಈ ಕಥೆಯನ್ನು ಹೇಳುತ್ತೇನೆ ಕೇಳಿ.        ಆ ದಿನ ನಾನು ಕುಂಬಳೂರಿಗೆ ಹೋಗಿ ಕೆಲಸವನ್ನು ಮುಗಿಸಿಕೊಂಡು ಬರಬೇಕಾಗಿತ್ತು. ಅದಕ್ಕಾಗಿ ಒಂದು ಕಾರನ್ನು ಬಾಡಿಗೆಗೆ ಹಿಡಿದು ಮಾಲ್ಗುಡಿಯಿಂದ ಸುಮಾರು ಐವತ್ತು ಮೈಲಿ ದೂರದಲ್ಲಿರುವ ಕುಂಬಳೂರಿಗೆ ಹೋಗಿ, ಅಲ್ಲಿ ಕೆಲಸ ಮುಗಿಸಿಕೊಂಡು ಬರುತ್ತಿದ್ದೆ. ನಾನು ಹೊರಡುವಾಗ ಸುಮಾರು 9:00 ಗಂಟೆ ರಾತ್ರಿ ಆಗಿತ್ತು. ನಾನು ಬೇಡವೆಂದರೂ ಕಾರಿನ ಚಾಲಕ ಕಾರನ್ನು ಸ್ವಲ್ಪ ವೇಗವಾಗಿಯೇ ನಡೆಸುತ್ತಿದ್ದ. ನನ್ನ ಕಾರಿನ ಚಾಲಕ ದಾಸಪ್ಪ ಸುಮಾರು 25 ವರ್ಷದ ಯುವಕ. ಆತನು ತುಂಬಾ ನಂಬಿಕಸ್ತ ಹಾಗೂ ನನಗೆ ಪ್ರಿಯವಾದ ಚಾಲಕ. ನನಗೆ ವಾಹನದ ಅವಶ್ಯಕತೆ ಇದ್ದಾಗಲೆಲ್ಲ ನಾನು ಅವನ ಕಾರನ್ನೇ ಬಾಡಿಗೆಗೆ ತೆಗೆದುಕೊಂಡು ಹೋಗುತ್ತಿದ್ದೆ. ಅವನು ನನ್ನ ಕೆಲಸ ಕಾರ್ಯಗಳಿಗೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದ. ಕೆಲವೊಮ್ಮೆ ಗಂಟೆಗಳ ಕಾಲ ನನಗಾಗಿ ಕಾಯಬೇಕಾಗಿ ಬಂದರೂ ಸ್ವಲ್ಪವೂ ತಕರಾರು ಮಾಡದೇ ಕಾಯುತ್ತಾ ಕುಳಿತಿರುತ್ತಿದ್ದ. ಕಾರನ್ನು ಕೂಡ ತುಂಬಾ ನಿಧಾನವಾಗಿ ನಡೆಸುತ್ತ ಬಾಡಿಗೆದಾರರಿಗೆ ಯಾವ ರೀತಿಯ ಮುಜುಗರವಾಗದಂತೆ ನೋಡಿಕೊಳ್ಳುತ್ತಿದ್ದ. ಹಾಗಾಗಿ ನಾನು ಯಾವಾಗಲೂ ಅವನ ಕಾರನ್ನು ಉಪಯೋಗಿಸುತ್ತಿದ್ದೆ.       ನಾವು ಆ ದಿನ ಹೊರಟು ಆ ಸ್ಥಳಕ್ಕೆ ಬಂದಾಗ ಸುಮಾರು 11 ಗಂಟೆ ರಾತ್ರಿಯಾಗಿತ್ತು.  ಕರಾಳ ಕಾರ್ಗತ್ತಲು ಆವರಿಸಿದ್ದು ಪ್ರಯಾಣ ಮಾಡುವಾಗ ಏಕೋ ಒಂದು ತರದ ಭಯ ಉಂಟಾಗುತ್ತಿತ್ತು. ಸುತ್ತಮುತ್ತಲ ಪ್ರದೇಶದಗಳಲ್ಲೆಲ್ಲ ಜನರು ನಿದ್ದೆಯಲ್ಲಿ ಮುಳುಗಿಹೋಗಿದ್ದರು. ಆಕಾಶದಲ್ಲಿ ಕಾಣಿಸುವ ಅಲ್ಲೊಂದು ಇಲ್ಲೊಂದು ನಕ್ಷತ್ರಗಳ ಬೆಳಕನ್ನು ಬಿಟ್ಟು ಇನ್ನೇನು ಕಾಣಿಸುತ್ತಿರಲಿಲ್ಲ. ಹಿಂಭಾಗದ ಸೀಟಿಗೆ ಒರಗಿ ಕುಳಿತಿದ್ದ ನನಗೆ ಕಾರು ಚಲಿಸುವ ಸಪ್ಪಳವೊಂದನ್ನು ಬಿಟ್ಟು ಇನ್ನೇನು ಕೇಳಿಸುತ್ತಿರಲಿಲ್ಲ. ಹಾಗೆಯೇ ನಿದ್ದೆಯ ಮಂಪರು ಬಂದು ನನ್ನನ್ನು ಆವರಿಸಿತ್ತು. ಇದ್ದಕ್ಕಿದ್ದಂತೆ ಬಂದ ದಾಸಪ್ಪನ ಕಿರುಚಾಟದಿಂದ ನನಗೆ ತಕ್ಷಣವೇ ಎಚ್ಚರವಾಯಿತು.       “ಹೇ ಮುದುಕ, ನಿನಗೇನು ತಲೆ ಕೆಟ್ಟಿದೆಯೇ? ಪ್ರಾಣ ಕಳೆದುಕೊಳ್ಳಬೇಕೆಂದು ತೀರ್ಮಾನಿಸಿದ್ದೀಯಾ? ಸಾಯಲು ನಿನಗೆ ಬೇರೆ ಯಾವ ಸ್ಥಳವೂ ಸಿಗಲಿಲ್ಲವೇ?” ಎನ್ನುತ್ತ ಕಾರನ್ನು ಆ ದಟ್ಟವಾದ ಕಾಡಿನ ಮಧ್ಯದಲ್ಲಿ ನಿಲ್ಲಿಸಿದ    ತಕ್ಷಣವೇ ಎಚ್ಚೆತ್ತ ನಾನು ಗಡಿಬಿಡಿಯಿಂದ, “ಏನಪ್ಪಾ ಸಮಾಚಾರ? ಕಾರನ್ನು ಏಕೆ ನಿಲ್ಲಿಸಿದೆ?” ಎಂದು ಕೇಳಿದೆ.    “ನೋಡಿ ಸರ್, ಅಲ್ಲಿ ಆ ಮುದುಕ ನನ್ನ ಕಾರಿಗೆ ಅಡ್ಡ ಬರುತ್ತಿದ್ದಾನೆ. ಅವನಿಗೆ ಜೀವ ಹೆಚ್ಚಾಗಿದೆ  ಎಂದು ಕಾಣಿಸುತ್ತದೆ. ತಾನು ಏನು ಮಾಡುತ್ತಿರುವೆ ಎಂಬ ಪ್ರಜ್ಞೆ ಇದ್ದಂತಿಲ್ಲ.” ಎನ್ನುತ್ತ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ.     ಅವನು ಹೇಳಿದ ದಿಕ್ಕಿನಲ್ಲಿ ನಾನು ಗಮನವಿಟ್ಟು ವೀಕ್ಷಿಸಿದೆ.  ಆದರೆ ಅವನು ಹೇಳಿದಂತೆ ನನಗೆ ಯಾವ ವ್ಯಕ್ತಿಯೂ ಕಾಣಿಸಲಿಲ್ಲ. ಹಾಗಾಗಿ ನಾನು,   “ಏನಪ್ಪಾ, ನೀನು ಯಾರ ಬಗ್ಗೆ ಹೇಳುತ್ತಿದ್ದೀಯ? ಯಾರೂ ಕಾಣಿಸುತ್ತಿಲ್ಲವಲ್ಲ? ಎಂದು ಕೇಳಿದೆ.    “ನೋಡಿ ಅಲ್ಲಿ, ಅಲ್ಲಿ ಅವನು ಓಡುತ್ತಿದ್ದಾನೆ” ಎನ್ನುತ್ತ ಕಾರಿನ ಮುಂಭಾಗದ  ದಿಕ್ಕಿನಲ್ಲಿ ತೋರಿಸತೊಡಗಿದೆ     ಆದರೆ ಅವನು ಹೇಳಿದ ದಿಕ್ಕಿನಲ್ಲಿ ನನಗೆ ಏನೂ ಕಾಣಿಸಲಿಲ್ಲ. ಆದರೂ ನಾನು ಟಾರ್ಚನ್ನು ತೆಗೆದುಕೊಂಡು ಕಾರಿನಿಂದ ಕೆಳಗಿಳಿದು, ಅವನು ಹೇಳಿದ ದಿಕ್ಕಿನಲ್ಲಿ ಪರೀಕಿಸ್ಷಿದೆ. ಅವನು ಹೇಳಿದ ದಿಕ್ಕಿನಲ್ಲಿ ಒಂದು ದೇವಸ್ಥಾನ ಕಾಣಿಸುತ್ತಿತ್ತು. ಅದೊಂದು ಪಾಳು ಬಿದ್ದ ದೇವಸ್ಥಾನವಾಗಿದ್ದು ಗೋಡೆಗಳೆಲ್ಲ ಶಿಥಿಲಗೊಂಡಿದ್ದವು. ಅದರ ಹತ್ತಿರ ಯಾರೂ ಹೋಗುವಂತಿರಲಿಲ್ಲ. ಅದರ ಬಾಗಿಲು ನೋಡಿದರೆ ತೆಗೆದು ಎಷ್ಟೋ ದಿವಸಗಳಾದಂತೆ ಕಾಣಿಸುತ್ತಿತ್ತು. ನೂರಾರು ವರ್ಷಗಳಿಂದ ಅದರಲ್ಲಿ ಯಾರೂ ವಾಸವಾಗಿರುವ ಸಾಧ್ಯತೆ ಇದ್ದಂತೆ ಕಾಣಿಸುತ್ತಿರಲಿಲ್ಲ. ಹಾಗಾಗಿ ನಾನು ದಾಸಪ್ಪನ ಕಡೆಗೆ ತಿರುಗಿ,   “ದಾಸಪ್ಪ, ಅದೊಂದು ಪಾಳು ಬಿದ್ದ ದೇವಸ್ಥಾನ. ಅದರಲ್ಲಿ ಯಾರೂ ಇದ್ದಂತೆ ಕಾಣಿಸುವುದಿಲ”್ಲ   “ಇಲ್ಲ ಸರ್, ಒಬ್ಬ ಮುದುಕ ಅಲ್ಲಿಂದ ಈಗ ತಾನೇ ಬಾಗಿಲು ತೆಗೆದುಕೊಂಡು ಬಂದಿದ್ದಾನೆ. ನೋಡಿ, ನೋಡಿ, ಅಲ್ಲೇ ನಿಂತಿದ್ದಾನೆ. ಬೇಕಾದರೆ ಅವನ ಬಳಿ ದೇವಸ್ಥಾನದ ಬಾಗಿಲನ್ನು ತೆಗೆಯಲು ಹೇಳಿ ನೋಡೋಣ”   ಒಂದಕ್ಕೊಂದು ಸಂಬಂಧವಿಲ್ಲದ ಅವನ ಉತ್ತರವನ್ನು ಕೇಳಿ ನನಗೆ ಬೇಸರವಾಯಿತು.    “ದಾಸಪ್ಪ, ತುಂಬಾ ಹೊತ್ತಾಯಿತು, ನಡಿ ಹೋಗೋಣ” ಎಂದೆ.    ನಾವಿಬ್ಬರೂ ವಿಷಯವನ್ನು ಅಲ್ಲಿಗೇ ಬಿಟ್ಟು ಕಾರನ್ನು ಹತ್ತಿ ಕುಳಿತುಕೊಂಡೆವು.. ಆತನು ತನ್ನ ಕೀಯನ್ನು ತೆಗೆದುಕೊಂಡು ಕಾರನ್ನು ಸ್ಟಾರ್ಟ್ ಮಾಡತೊಡಗಿದ.    “ಸಾರ್, ಈ ವ್ಯಕ್ತಿ ನಮ್ಮ ಜೊತೆಗೆ ಕಾರಿನಲ್ಲಿ ಸ್ವಲ್ಪ ದೂರ ಬರುವನಂತೆ. ಇಲ್ಲೇ ಮುಂದಿನ ತಿರುವಿನಲ್ಲಿ ಇಳಿದುಕೊಳ್ಳುವನಂತೆ . ಅವನನ್ನು ಕರೆದುಕೊಂಡು ಹೋಗೋಣವೇ?” ಎಂದು ಕೇಳಿದ   “ನೀನು ಯಾರ ಬಗ್ಗೆ ಹೇಳ್ತಿದ್ದೀಯಾ?’ ನಾನು ಆಶ್ಚರ್ಯದಿಂದ ಕೇಳಿದೆ.    “ಇಲ್ಲೇ ಕುಳಿತಿದ್ದಾನಲ್ಲ ಅಜ್ಜ, ಇವನ ಬಗ್ಗೆಯೇ ನಾನು ಹೇಳುತ್ತಿರುವುದು” ಎನ್ನುತ್ತ ದಾಸಪ್ಪ ತನ್ನ ಸೀಟಿನ  ಎಡಭಾಗದ ಜಾಗವನ್ನು ತೋರಿಸಿದ.    “ದಾಸಪ್ಪ ನಿನಗೇನಾಗಿದೆ? ಈ ದಿನ ಏನಾದರೂ ಸ್ವಲ್ಪ ಹೆಚ್ಚಾಗಿ ಕುಡಿದಿದ್ದೀಯಾ?”    “ಕ್ಷಮಿಸಿ ಸರ್, ನಾನು ಇಡೀ ಜೀವಮಾನದಲ್ಲಿ ಒಂದೇ ಒಂದು ಹನಿ ಮಾದಕ ದ್ರವ್ಯವನ್ನೂ  ಸೇವಿಸಿಲ್ಲ” ಎನ್ನುತ್ತಾ ತನ್ನ ಎಡಭಾಗಕ್ಕೆ ತಿರುಗಿ,    “ಅಜ್ಜ, ತಪ್ಪು ತಿಳಿದುಕೊಳ್ಳಬೇಡ, ಯಜಮಾನರು ಏಕೋ ನಿನ್ನನ್ನು ಕರೆದುಕೊಂಡು ಹೋಗುವುದು ಬೇಡ ಎಂದು ಹೇಳುತ್ತಿದ್ದಾರೆ” ಎಂದ.     “ಏನು ದಾಸಪ್ಪ, ನಿನ್ನಷ್ಟಕೆ ನೀನೇ ಮಾತನಾಡಿಕೊಳ್ಳುತ್ತಿದ್ದೀಯ?” ಎಂದು ನಾನು ಆಶ್ಚರ್ಯದಿಂದ ಕೇಳಿದೆ.    “ಸರ್, ನೀವು ಹೇಳುವುದು ಸರಿ ಈ ರೀತಿ, ರಾತ್ರಿ ಹೊತ್ತಿನಲ್ಲಿ ದಾರಿಹೋಕರನ್ನೆಲ್ಲ ಕಾರಿನಲ್ಲಿ ಕರೆದುಕೊಂಡು ಹೋಗುವುದು ಸರಿಯಲ್ಲ”    “ದಾಸಪ್ಪ, ನಿನಗೆ ಆರೋಗ್ಯ ಸರಿ ಇಲ್ಲ ಎಂದು ಕಾಣುತ್ತಿದೆ. ಏಕೋ ಏನೇನೋ ಮಾತನಾಡುತ್ತಿದ್ದೀಯ” ಎಂದು ನಾನು ಅವರ ಮೇಲಿನ ಕರುಣೆಯಿಂದ ಕೇಳಿದೆ.    “ನಿನಗೆ ಕಾರನ್ನು ಚಾಲನೆ ಮಾಡಲು ಸಾಧ್ಯವಾಗುತ್ತದೆಯೋ, ಇಲ್ಲವೋ, ಬೇಕಾದರೆ ನಾನು ಸಹಾಯ ಮಾಡುತ್ತೇನೆ” ಎಂದೆ.    “ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಸರ್, ಯಾಕೋ ನನಗೆ ಬಹಳ ಸುಸ್ತಾದಂತಿದೆ.” ಎನ್ನುತ್ತಾ ಅವನು ಹಾಗೇ ಸೀಟಿಗೆ ಒರಗಿಕೊಂಡು ಕಣ್ಣು ಮುಚ್ಚಿದ. ನಂತರ ಜೋರಾಗಿ ಅಳಲು ಪ್ರಾರಂಭಿಸಿದ. ಆಮೇಲೆ ಇದ್ದಕ್ಕಿದ್ದಂತೆ ಬೆನ್ನು ಬಗ್ಗಿಸಿ ಗೂನುಬೆನ್ನಿನವನಂತೆ ವರ್ತಿಸತೊಡಗಿದ.      ತಕ್ಷಣವೇ ಕಾರಿನಿಂದ ಕೆಳಗಿಳಿದ ನಾನು ಮುಂಬಾಗಕ್ಕೆ ಹೋಗಿ ಬಾಗಿಲು ತೆಗೆದು ಅವನತ್ತ ನೋಡಿದೆ. ಅಲ್ಲಿ ದಾಸಪ್ಪನನ್ನು ಬಿಟ್ಟು ಇನ್ನಾರೂ ಕಾಣಿಸಲಿಲ್ಲ. ಆಗ ಅವನು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದ್ದ. ತನ್ನ ಎರಡು ಕೈಗಳಿಂದ ಕಣ್ಣನ್ನು ಉಜ್ಜಿಕೊಳ್ಳುತ್ತ ಗೂನು ಬೆನ್ನಿನ ಮುದುಕನಂತೆ ವರ್ತಿಸುತ್ತಿದ್ದ. ನಾನು ಅವನ ಆರೋಗ್ಯವನ್ನು ವಿಚಾರಿಸುವ ದೃಷ್ಟಿಯಿಂದ,     “ಏನಪ್ಪಾ, ಈಗ ಹೇಗಿದ್ದೀಯ ಆರೋಗ್ಯವಾಗಿದ್ದೀಯ ತಾನೇ? ಎಂದು ಕೇಳಿದೆ.      “ಹ! ಹ! ಆರೋಗ್ಯ, ಈ ವಯಸಿನಲ್ಲಿ ಇನ್ನೆಂತಹ ಆರೋಗ್ಯ ಸ್ವಾಮಿ” ಎಂದು ಹೇಳುವಾಗ ಅವನ ಧ್ವನಿಯೇ ಬದಲಾದಂತೆ ಕಾಣುತ್ತಿತ್ತು.      “ಏಕಪ್ಪ, ನಿನ್ನ ಧ್ವನಿಯೇ ಬದಲಾದಂತೆ ಕಾಣುತ್ತಿದೆ.”      “ನನ್ನ ಧ್ವನಿ ಇದ್ದಂತೇ ಇದೆ ಸ್ವಾಮಿ, ಹೇಗೆ ತಾನೇ ಬದಲಾವಣೆಯಾಗಲು ಸಾಧ್ಯ? ಎಂಬತ್ತು  ವರ್ಷವಾದ ವ್ಯಕ್ತಿಗೆ ಇದಕ್ಕಿಂತಲೂ ಉತ್ತಮವಾದ ಕಂಠ ಇರಲು ಸಾಧ್ಯವೇ”     “ಅಂದರೆ  ನಿನಗೆ 80 ವರ್ಷವಾಗಿದೆಯೇ?”     “ಅದರಲ್ಲಿ ಯಾವ ಅನುಮಾನವೂ ಇಲ್ಲ.  ನನಗಾಗಲೇ 80 ವರ್ಷ ದಾಟಿ ಹೋಗಿದೆ”     “ಯಾಕೆ? ನಿಮ್ಮ ಈ ಕಾರನ್ನು ಡ್ರೈವ್ ಮಾಡಲು ಯಾರು ಚಾಲಕರು ಸಿಕ್ಕಿಲ್ಲವೇ?”      “ಯಾರೂ ಸಿಗದಿದ್ದರೆ ನಾನು ದೇವಸ್ಥಾನಕ್ಕೆ ತಿರುಗಿ ಹೋಗುತ್ತೇನೆ. ಏಕೆಂದರೆ ನನಗೆ ಬಹಳ ದೂರ ನಡೆಯಲು ಸಾಧ್ಯವಾಗುವುದಿಲ್ಲ”     “ನೀನು ಡ್ರೈವ್ ಮಾಡದೇ ಇದ್ದರೆ ಈ ಕಾರನ್ನು ತೆಗೆದುಕೊಂಡು ಹೋಗುವುದಾದರೂ ಹೇಗೆ? ನಾನು ಬೇರೆ ಡ್ರೈವರನ್ನು ಹುಡುಕಬೇಕು. ಅದು ಹೇಗೆ ಸಾಧ್ಯ?”      “ಈ ಹೊಸ ಮಾದರಿಯ ಗಾಡಿಗಳನ್ನು ನಡೆಸುವುದು  ಹೇಗೆ ಎಂಬುದು ಆ ಭಗವಂತನಿಗೇ ಗೊತ್ತು. ನನ್ನ ಇಡೀ ಜೀವಮಾನದಲ್ಲಿ ಎರಡು ಎತ್ತಿನ ಗಾಡಿಗಳನ್ನು ಬಿಟ್ಟರೆ, ಬೇರೆ ಯಾವ ರೀತಿಯ ವಾಹನಗಳನ್ನೂ ಚಲಿಸಿ ಗೊತ್ತಿಲ್ಲ”      “ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲೇ?”     “ಕೇ ಳ ಪ್ಪ ಕೇಳು, ಅದೇನು ನಿನ್ನ ಪ್ರಶ್ನೆ”    “ನಮ್ಮ ಪ್ರಜೆಗಳೆಲ್ಲ ಎಲ್ಲಿಗೆ ಹೋಗಿದ್ದಾರೆ?” ,   “ಯಾವ ಪ್ರಜೆಗಳ  ಬಗ್ಗೆ ನೀನು ಕೇಳುತ್ತಿದ್ದೀಯ?”    “ಈ ರಾಜ್ಯದಲ್ಲಿ ವಾಸಿಸುತ್ತಿದ್ದ ಸಾವಿರಾರು ಮಂದಿ ಪ್ರಜೆಗಳು, ಎಲ್ಲಿಗೆ ಹೋಗಿದ್ದಾರೆ?    “ಹೌದು, ಇತ್ತೀಚಿನ ದಿನಗಳಲ್ಲಿ ಯಾರೂ ಕಾಣಿಸುತ್ತಿಲ್ಲ. ಎಲ್ಲರೂ ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ. ದೇವಸ್ಥಾನದಲ್ಲಿ ದೇವರ ದರ್ಶನ ಮಾಡಲೂ ಸಹ ಯಾರೂ ಬರುತ್ತಿಲ್ಲ. ಈ ರಾಜ್ಯದ ಮಹಾರಾಜನು ಕೂಡ ದೇವರು ದರ್ಶನಕ್ಕಾಗಿ ಬರುತ್ತಿಲ್ಲ. ಹಿಂದಿನ ದಿನಗಳಲ್ಲಾದರೆ ವರ್ಷಕ್ಕೆ ಒಂದು ಬಾರಿಯಾದರೂ ರಾಜ ಬಂದೇ ಬರುತ್ತಿದ್ದ”    “ಯಾವ ರಾಜನ ಬಗ್ಗೆ ನೀನು ಹೇಳುತ್ತಿರುವುದು?” ನಾನು ಕೇಳಿದಾಗ, ಅವನಿಗೆ ಒಮ್ಮೆಲೇ ನನ್ನ ಮೇಲೆ ಸಿಟ್ಟು ಬಂದಂತೆ ಕಾಣಿಸಿತು.    “ಹುಚ್ಚುಹುಚ್ಚಾಗಿ ಏನನ್ನೋ ಮಾತನಾಡಬೇಡ. ನಾನು ಹೋಗುತ್ತೇನೆ ಎನ್ನುತ್ತಾ ಅವನು ಬಾಗಿಲಿನ ಮೇಲೆ ಹಾಗೆಯೇ ಬಾಗಿದ”. ನಂತರ ಸಾವರಿಸಿಕೊಂಡು,    “ನನ್ನ ಬಗ್ಗೆ ನಿನಗೆ ಏನೂ ಗೊತ್ತಿಲ್ಲ ಎಂದು ಕಾಣಿಸುತ್ತಿದೆ.” ಎಂದು ಹೇಳುತ್ತಾ ನನ್ನನ್ನು ಪಕ್ಕಕ್ಕೆ ತಳ್ಳಿ ಕಾರಿನಿಂದ ಕೆಳಗಿಳಿದ    ಹೀಗೆ  ಇಳಿದವನು ಗೂನು ಬೆನ್ನಿನವನ ರೀತಿಯಲ್ಲಿ ಬಾಗಿ ನಡೆಯುತ್ತಾ ದೇವಸ್ಥಾನದ ಕಡೆಗೆ ಹೊರಟ. ನನಗೆ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ನಾನೂ ಅವನ ಜೊತೆಯಲ್ಲಿ ದೇವಸ್ಥಾನದ ಕಡೆಗೆ ಹೊರಟೆ.    ದೇವಸ್ಥಾನದ ಬಳಿಗೆ ಹೋಗಿ ನಿಂತ ಅವನು ನನ್ನ ಕಡೆಗೆ ತಿರುಗಿ ನೋಡುತ್ತಾ,   “ಹೋಗು, ಹೋಗು, ಇಲ್ಲಿಂದ ಹೊರಟು ಹೋಗು,  ನನಗೆ ನಿನ್ನ ಸಹವಾಸ ಸಾಕಾಗಿ ಹೋಗಿದೆ” ಎಂದು ಆರ್ಭಟಿಸಿದ. ದಾನಪ್ಪ ಎಂದೂ ಈ ರೀತಿ ಮಾತನಾಡಿದುದನ್ನು ನಾನು ನೋಡಿರಲಿಲ್ಲ. ಹಾಗಾಗಿ ನಾನು,    “ದಾಸಪ್ಪ ನಿನಗೇನಾಗಿದೆ? ಯಾಕೆ ಹೀಗೆ ವಿಚಿತ್ರವಾಗಿ ಆಡುತ್ತಿದ್ದೀಯ?” ಎಂದು ನಾನು ನಿಧಾನವಾಗಿ ಕೇಳಿದೆ.    “ಇಲ್ಲಿ ದಾಸಪ್ಪ ಎನ್ನುವವರು ಯಾರೂ ಇಲ್ಲ. ಆಗಿನಿಂದ ‘ದಾಸಪ್ಪ, ದಾಸಪ್ಪ, ದಾಸಪ್ಪ’ ಎಂದು ಅರಚುತ್ತಿದ್ದೀಯಲ್ಲ, ನನ್ನನ್ನು ಹೆಸರಿಡಿದು ಕರಿ, ಇಲ್ಲದಿದ್ದರೆ ಇಲ್ಲಿಂದ ಹೊರಟುಹೋಗು ಬರಬೇಡ, ನನ್ನನ್ನು ಹಿಂಬಾಲಿಸಿ ಬರಬೇಡ” ಎಂದು ಮತ್ತೊಮ್ಮೆ ಘರ್ಜಿಸಿದ.    “ನಿನ್ನ ಹೆಸರೇನು? ಹೇಳಪ್ಪ”    “ನನ್ನ ಹೆಸರು ಕೃಷ್ಣಭಟ್ಟ , ಇನ್ನು ಮುಂದೆ ನನ್ನನ್ನು ಕೃಷ್ಣಭಟ್ಟ ಎಂದೇ ಕರೆಯುಬೇಕು, ಗೊತ್ತಾಯಿತೇ?.”     “ಈ ಊರಿನಲ್ಲಿ ಹೋಗಿ ಯಾರನ್ನು ಬೇಕಾದರೂ ಕೇಳು. ಎಲ್ಲರಿಗೂ ನನ್ನ ಪರಿಚಯ ಇದೆ

ಕಾಡಿನಲ್ಲಿ ಕಾಡಿದ ಭೂತ Read Post »

ಅನುವಾದ

ತರಗೆಲೆ

ಅನುವಾದ ತರಗೆಲೆ ಕನ್ನಡ ಮೂಲ: ನಾಗರೇಖಾ ಗಾಂವಕರ್ ಇಂಗ್ಲೀಷಿಗೆ: ಸಮತಾ ಆರ್. ತರಗೆಲೆ ಮರದಡಿಯ ನೆರಳಲ್ಲಿ ಬೆಚ್ಚಗೆ ಇತ್ತು ತರಗೆಲೆ.ಕಾಲಾಂತರದ ಕರಿಯಪ್ಪುಗೆಯಲ್ಲಿ ಮುಂದೊಂದು ದಿನ ಹಾಗೇಕೊಳೆತು ಹೋಗುವುದಿತ್ತುಮರಳಿ ಮಣ್ಣಡಿ ಸೇರಿ. ದಿಗ್ಗನೇ ಬೆಳಗಿದ ನಾಜೂಕುಬೆಳಕಿನ ಹೊಳಪುಅದೇಕೋ ಅರಿವ ಹೊಸೆವ ಅನಂತದ ನೆರಳಡಿತಂದು ನಿಲ್ಲಿಸಿತು.ತರಗೆಲೆಯ ಮಾಸಿದ ಬಣ್ಣಕ್ಕೆ ಹೊಂಬಣ್ಣದ ಹೊಳಪು.ಮತ್ತೆ ಚಿಗುರಿದಂತೆ ಸಂಭ್ರಮ.ನೆಲದ ನಿಯಮದ ಹಾಗೇ.ಮಬ್ಬು ಸರಿಸಿ ‘ ಕಾಣಬಯಸಿದ್ದ ಮನಗಾಣು’ ಎಂದು ಎದೆ ತೆರೆದು ಆಹ್ವಾನಿಸಿಅಪ್ಪಿ ಮುದ್ದಿಸಿತು ಬೆಳಕು. ಬೆಳಕಿನ ದಾರಿಯಲ್ಲಿ ಕಣ್ಢಿಗೆಣ್ಣೆಬಿಟ್ಪು ಹಾಗೇ ನೋಡುತ್ತಲೇಇತ್ತು ತರಗೆಲೆ ತಪದಂತೆ ಸೈರಿಸಿ ಬೆಳಕ ಕಿರಣಹೊಳಪುಂಡು ಶಕ್ತ ನಿಲುವಲಿನಿರಾಳ ಉಸಿರಾಡುತ್ತಕಾಯುತ್ತಲೇ ಇತ್ತು. ಪ್ರತಿಮಿಸುವ ಪ್ರತಿ ಪದವೂಒಳಗಣ್ಣ ತೆರೆಸಿ, ವಿಸ್ಮಯದ ಅಂಚು ಎಲೆಯ ಸುತ್ತುಗಟ್ಟಿತಾರೀಪುಗಳ ಹೊತ್ತ ಎಲೆಯ ಭಿತ್ತಿಯಮೇಲೆ ನೂರಾರು ಚಿತ್ರಗಳ ಚಲನೆ, ಚಿಂತನೆ,ನಿಂದನೆಯ ಎಣ್ಣೆಯಲ್ಲಿ ಹುರಿದು,ಕಮಟು ವಾಸನೆ ಬಡಿಸಿ, ಮತ್ತೆ ಮರುಗಳಿಗೆ ತುಪ್ಪ ಮೂಗಿಗೆ ಸವರಿ,ಬೆಳಕು ಹದವರಿತು ತರಗೆಲೆಯನುಡಿಸಿತ್ತು. ಉರಿವ ಬೆಳಕಿಂದಜಿಗಿಯಬಲ್ಲ ಬೆಂಕಿಯ ತಾಪದಭಯಕಾಡುತ್ತಲೇ ಇತ್ತು. ಆದರೂ ತರಗೆಲೆಗೆ ತೀರದವ್ಯಾಮೋಹ.ಹಾರುವ ಪುಟ್ಟ ಗುಬ್ಬಿಯ ಬಾಯೇರಿ, ಅದಿಟ್ಟ ಮೊಟ್ಟೆಯ ಗೂಡಿಗೆ ಮಂದರಿಯಾಗಿಪುಟಪುಟ ನೆಗೆತದ ಚೀಂವ್ ಚೀಂವ್ ಮರಿಗುಬ್ಬಿಗಳಕಾಲಡಿಗೆ ರೋಮಾಂಚನಗೊಳ್ಳಬೇಕುಚಿಲಿಪಿಲಿಯೂದುವ ತೊದಲ ನುಡಿಗಳಿಗೆ ಕಿವಿಯಾಗಬೇಕು. ಜೀವವಿಲ್ಲದ ಒಣ ಎಲೆಯೆಂದವರ ಕಡೆಗೊಮ್ಮೆನಲ್ಮೆಯ ನೋಟವೆಸಗಬೇಕು. ———————ನಾಗರೇಖಾ ಗಾಂವಕರ. A dry leaf.. A dry leaf resting cosily,Under the shadow of a tree,Was about to get degradedIn the dark embrace of timeAnd get mixed up with the soil as usual. Just then all of a sudden a soft tender lightLit up everything with its gleam. And without any reasonBrought under the shade ofInfinite enlightenment.. The faded leaf got a new shineAnd beaming as if budding anewJust as the laws of the earth. Removing the darkness said the light“Perceive whatever you wanted to see “Inviting with open arms and cuddling. With the eyes wide openThe leaf kept on seeingThe path of light. Bearing the light just as a penanceDevouring the lightStood strong and breathing.And kept on waiting.. Every word casted ,Opened the inner eyeA mesmerizing rimSurrounded the leaf,Hundreds of pictures and thoughtsAre moving all over the laminaladen with the praises. Fried with the oil of accusationsMade to smell rancid,butLater buttering up to console,The light has made the leaf to sayWith the right temper. But the leaf still fearsThe heat of the firethat may emergeFrom the glowing light. But still this leaf hasAn unending yearning.Wants to fly away held inThe beak of a little sparrow,Wants to be a quilt for it’s eggs filled nest.Wants to be thrilled under the tripping feetOf the tweeting nestlings.Wants to be all ears for theirStammering chirpings. And wants to stare with love,All those,who called it“A lifeless dry leaf,” —————————————- Translated by Samatha.R

ತರಗೆಲೆ Read Post »

ಅನುವಾದ

ಜಗವನೇ ಗೆಲುವೆನು ನಿನ್ನೊಲವೊಂದಿದ್ದರೆ.

ಅನುವಾದ ಜಗವನೇ ಗೆಲುವೆನು ನಿನ್ನೊಲವೊಂದಿದ್ದರೆ. ಇಂಗ್ಲೀಷ್ ಮೂಲ: ವಿಲಿಯಂ ಶೇಕ್ಸ್ ಪಿಯರ್ ಕನ್ನಡಕ್ಕೆ: ವಿ.ಗಣೇಶ್ ಹುಟ್ಟಿನ ಮದದಲಿ ಬೀಗುವರು ಕೆಲರು ಬುದ್ಧಿಮದದಲಿ ಕೆಲರು ಸಿರಿತನದ ಮದದಲಿ ಕೆಲರು, ರೂಪದ ಮದದಲಿ ಮತ್ತೆ ಕೆಲರು ದೇಹದಾಡ್ಯದಲಿ ಕೆಲರು, ಕೆಲರು ಉಡುಗೆತೊಡುಗೆಯಲಿ ಮೆರೆವರು ಗಿಡುಗ ಸಾಕುವ ಹುಚ್ಚು ಕೆಲರಿಗೆ, ಕುದುರೆ ಸಾಕುವ ಹುಚ್ಚು ಕೆಲರಿಗೆ ಅವರವರ ಮನಸಿನಣತಿಗೆ ಅವರವರ ಹುಚ್ಚು ಮೆರೆವುದು ಅಂತೆಯೇ ಈ ಕ್ಷಣಿಕ ಆಸೆ ಆಕಾಂಕ್ಷೆಗಳ ಹುಚ್ಚೊಂದೂ ನನ್ನ ಮನದೊಳಗಿನಿತಿಲ್ಲ ಅದಕಿಂತ ಮಿಗಿಲಾದ ಹುಚ್ಚೊಂದು ಕಾಡುತಿದೆ ಈ ನನ್ನ ಮನವ ಅದುವೆ ನಿನ್ನ ಮೇಲಿಟ್ಟ ಅಳಿಸಲಾಗದ ಆ ನಿಜ ಪ್ರೀತಿಯ ಹುಚ್ಚು ಅದಕೆ ಮರುಳಾಗಿ ನಾ ಅಪ್ಪಿಕೊಂಡಿರುವೆ ನಿನ್ನ ಹೃದಯಮಂದಿರವ ಜಗಜಗಿಪ ದನಕನಕಗಳು,ಗರಿಗರಿಯಾದ ಉಡುಗೆಗಳ ಜೊತೆಗೆ ಗಿಡುಗ ಕುದುರೆಗಳೆಲ್ಲವೂ ತೃಣಸಮಾನವೆನಗೆ ಈ ಬದುಕಿನಲಿ ನಿನ್ನ ಒಲವೊಂದಿದ್ದರೆ ಜಗವನೆದುರಿಸುವ ಬಲ ನನ್ನ ತುಂಬುವುದು ನಿನ್ನ ನಾ ಪಡೆಯಲು ನನ್ನ ವಿಧಿಯದು ವಂಚಿಸಿದರೆ ಈ ಬದುಕ ತೊರೆಯುತ್ತ ತೆರಳುವೆನು ನಾ ನರಕಕ್ಕೆ. ****************************

ಜಗವನೇ ಗೆಲುವೆನು ನಿನ್ನೊಲವೊಂದಿದ್ದರೆ. Read Post »

ಅನುವಾದ

ಅನುವಾದ ಸಂಗಾತಿ

ಕಿಟಕಿ — ಗೋಡೆ ಕನ್ನಡ ಮೂಲ:ವಸುಂಧರಾಕದಲೂರು ಇಂಗ್ಲೀಷಿಗೆ: ಸಮತಾ ಆರ್ ಕಿಟಕಿ — ಗೋಡೆ ನಾನೊಂದು ಕಿಟಕಿ; ಮುಚ್ಚಿಯೇಇದ್ದೇನೆ ಶತಮಾನಗಳಿಂದಗತಕಾಲದ ಗಾಳಿ ಒಳಗೆಸುಳಿದಾಡುತ್ತಾ ಕತ್ತಲ ಘಮಲಿನಅಮಲಲಿ ಉರುಳಾಡುತ್ತಾಎದ್ದೆದ್ದು ಕುಣಿಯುವಆತ್ಮಗಳೂ ಅಸ್ಥಿಪಂಜರಗಳೂನನ್ನೊಳಗಿವೆ. ವಿಶಾಲ ಬಿಳಲುಗಳ ಆಲದಮರವೊಂದು ಟಿಸಿಲೊಡೆದುತೊಗಟೆ ಕಳಚಿಕೊಳ್ಳದೆ ಬೇರೂರಿಮುಚ್ಚಿದ ಕಿಟಕಿಯಾಚೆಸ್ವಚ್ಛ ಗಾಳಿಗೆ ಚಿಗುರು ಚಿಗಿಸಿಹಕ್ಕಿ ಗೂಡಿಗೆ ಟೊಂಗೆ ಚಾಚಿದೆ.ಒಂದೊಂದು ಟೊಂಗೆಗೂಗೂಡು. ಗೂಡೊಳಗೆ ಕಾವುಕೂತ ಹಸಿ ಬಾಣಂತಿ ಹಕ್ಕಿಕಿಟಕಿ ಕುಟುಕಿದ ಸದ್ದು;ಚಾಚಿದ ಟೊಂಗೆಯೋಚೈತನ್ಯದ ಹಕ್ಕಿಯೋ ತಿಳಿಯದು.ಪ್ರತೀ ಶಬ್ದ ಮಾಡುವ ಹಕ್ಕಿಗೂಅದೇನು ರಾಗವೋಸುಮ್ಮಗೆ ಬೀಸುವ ಗಾಳಿಗೆತಲೆದೂಗುವ ಟೊಂಗೆಗಳಿಗೂಅದೇನು ಹೊಸ ರಂಗೋ ನಾನು ಮಾತ್ರ ತೆರೆಯುವುದಿಲ್ಲ. ಶತಮಾನಗಳಿಂದ ಮುಚ್ಚಿದಕಿಟಕಿ. ನನ್ನಾಚೆ ನನಗೆ ಅರಿವಾಗದೇಒಳಗಿನ ಗವ್ವುಗತ್ತಲೆಕಮಟು ವಾಸನೆ ಕತ್ತು ಹಿಸುಕಿ ಕುತ್ತುತರುತ್ತಿವೆ. ಕಾಲದ ಅಲೆ ಉರುಳಿತನ್ನೊಡನೆ ತಂದಿಟ್ಟ ಮರಳುತನಕ್ಕೆಈಗ ಕಿವೂಡೂ ಕುರುಡೂಸಾತ್ ಕೊಡುತ್ತಾ ಕೂಡುತ್ತಿವೆಜತನ ಮಾಡುತ್ತಾ ಗತವನ್ನು. ನನ್ನ ಚೌಕಟ್ಟಿನಾಚೆ ನಿಂತಗಟ್ಟಿ ಗೋಡೆ ಆಗಾಗ್ಗೆ ಅಪಾರವೇದನೆಯಲಿ ಮುಖಕಿವುಚಿ ನರಳಿ ನುಡಿಯುತ್ತದೆಯಾರೋ ಈಗಷ್ಟೆ ಕೆತ್ತಿಹೋದರೆಂದು ಮೊಳೆ ಜಡಿದುಭಾರಗಳನು ತೂಗುಹಾಕಿಭಾವನೆಗಳನು ಹೇರಿದರೆಂದುಆಕ್ರಮಿಸಿಕೊಂಡ ಆಕ್ರಂದನದದನಿಯಲಿ.. ನೆಟ್ಟಗೆ ನಿಂತ ಪಾಪದ ಗಟ್ಟಿಗೋಡೆ ; ಹೊಸ ಬಣ್ಣ ಬಳಿದರೂಬದಲಾಗದ ಹಳೆಯ ಹಣೆಬರಹ.ನವೀನತೆಗೆ ಒಡೆಯಬೇಕು, ಕುಟ್ಚಿಕೆಡವಿ ಪುಡಿಗಟ್ಟಬೇಕು. ಅಸ್ತಿತ್ವದನಿರಾಕರಣೆ ಆಗಲೇಬೇಕು. ನನಗಾದರೂ ಬಾಗಿಲುಗಳಿವೆ ತೆರೆಯಬಹುದುಒಮ್ಮೆ ಜಗ್ಗನೆ ಹೊಳೆವ ಮಿಂಚುಪಕ್ಕನೆ ಹಾರುವ ಹಕ್ಕಿ ಸಾಲನುನಾನಾದರೂ ಕಾಣಬಹುದು.ನಿಧಾನದ ಆಲಾಪಕ್ಕೆ ತೆರೆದುತಲೆತೂಗಬಹುದು.ಯಾರಾದರು ಒಮ್ಮೆನನ್ನೊಳಗೆ ಹಣಕಿ ಈ ಓಲಾಡುವಆತ್ಮಗಳನೂ ಕಿಲುಬುಗಟ್ಟಿದಅಸ್ಥಿಪಂಜರಗಳನೂ ಒಮ್ಮೆ ಜಾಡಿಸಿಓಡಿಸಿ ಬಿಡಬಹುದು. ಗೋಡೆ ಕೆಡವಲುವಿಳಾಸ ಹುಡುಕಿ ಬರುವವರುಬಣ್ಣ ಮಾಸಿ ಸಡಿಲಾದ ನನ್ನಬಾಗಿಲುಗಳನುದೂಡಲಿ ಪರದೆ ಹರಿದು ಹೊಸಜೇಡ ಮತ್ತೆ ಬಲೆ ಹೆಣೆಯದಂತೆಮಾಡಲಿ ಎಳೆ ಬಿಸಿಲುಹೊಸ ಗಾಳಿ ತುಂಬಿ ಬರಲಿ ನಾನು ತೆರೆದುಕೊಳ್ಳುವ ಕಿಟಕಿ ——-ವಸುಂಧರ ಕದಲೂರು. A WINDOW—-A WALL I, a window,Kept closed since ages,Have deep inside,Stale air of aeons whirling,Skeletons and spirits twirling.Drunk with the scent of darkness. Outside,there is a non unbarkedBanyan tree, With props deep rooted,Is branching wide in the fresh air,Each branch has a nest,Each nest has an incubatinghatching bird. Tappings at the door,Who that could be?A twig or a spirited bird?Each chirping birdSeems to have its own tune.What new colourThese swaying sprigs get,?By the air flowing on its own.But I was never opened. A window kept closed for centuriesWas I, unaware of my outside,But inside,Gloomy darkness and stale airAre strangling me to choke. The craziness brought by theRolling waves of time,Is conserving the past,Unheard,unseen. The wall attached to my frameOften moans and groans,About the weight hangingOn a nail stuck deep,And of laden emotions,In a jeremiad. This upright, innocent,Well built wallWas newly paintedBut ill fated.Have to be demolishedTo be newfangledNeeds to be pulverizedTo Crush it’s existenceTo dust. I atleast have doorsThat could be opened,So that,Once in a while,I might be able to seeA streak of lightning,A flock of birds flyingAnd listen to a melody,To keep me moving. Some daySome one may scare,And drive awayThese rusted skeletonsAnd swinging spirits. Those who come,With the address of the wallTo demolish,Shall fling openMy faded, loosened doors,Tear off the curtains.For not letting any spiderTo weave again,Let the morning sun andThe blowing windFill me up.Because,I am an unfolding window.. ——- Translated by Samatha.R ***********************************

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಕವಿತೆ ಸಾವಿಗೊಂದು ಪತ್ರ ಸಾವೇ, ನೀನು ಹುಟ್ಟಿನಿಂದಜೊತೆಗೇ ಬಂದಿರುವೆತಿಳುವಳಿಕೆ ಬಂದಂತೆಭಯದಿಂದ ದೂರವಿರಿಸಿದೆನೆನಪಿಸದೆ, ವಿಳಾಸವೂ ಹುಡುಕದೆ. ವಿಳಾಸ ಬೇಕಿರಲಿಲ್ಲ ಬದುಕಿನುದ್ದಕ್ಕೂ….ನಿರುಮ್ಮಳ ಉಸಿರೆಳೆಯುವಾಗಸ್ವಚ್ಛಂದವಾಗಿ ಸಾಗುವಾಗಪ್ರತೀ ದಿನವು ನೆರಳಂತೆಹೊತ್ತು ಜೀವಿಸುವಾಗಅದಕೇ ನೆನೆಯಲಿಲ್ಲ ನಿನ್ನ. ದೇಹದ ಚಿತ್ರಣ ಬದಲಾಗಿದೆಮುಪ್ಪೆರಗಿ ಕುಂದಿದೆಉಸಿರಿಗೂ ಅಳುಕೇಆಹಾರಕೂ ನಳಿಕೆಶಸ್ತ್ರಕ್ರಿಯೆಗೆಂದು ಅರಿವಳಿಕೆಸಹಜಕ್ರಿಯೆಗಳೆಲ್ಲ ನಿಲ್ಲುತ್ತಿವೆನಿನ್ನನೇ ಬಲವೆಂದು ಕಾಯ್ದಿರುವೆ. ಪರಸೇವೆಗೆ ದೇಹ ಬೀಳದಂತೆನೋವಿಲ್ಲದಂತೆ ನಸುನಕ್ಕೇಫಕ್ಕನೆ ಆರುವ ದೀಪದಂತೆನನ್ನನ್ನೊಮ್ಮೆ ತಬ್ಬುವಿಯಂತೆಬಂದು ಬಿಡು ನೀ ಬಂಧುಸಹಜ ಸವಿನಿದ್ರೆಗೆ ಜಾರಿದಂತೆ..! ————ಕನ್ನಡ ಮೂಲ- ಅಜಿತ ಹೆಗಡೆ, ಹರೀಶಿ A letter to the death Death,you are with meSince i took birth.As being matured,fear kept you awayneither recalled nor tried to search for your address. No address needed, throughout the life,While breathing relief,Moving with carefree walk,Everyday like a shadowCarrying with life,I didn’t recall you. Now the body changed,deformed with the old ageeven hesitant to breathtube to take foodAnesthesia for surgeryCommon functionsbeing stopped.having the beliefthat you are. the strength and waiting . As to be served by noneSmile like not having pain,like a light turns off in sudden.You embrace me but once,my dear, come to me,as I am sleeping sweet. Translated into english by-Nagarekha Gaonkar

ಅನುವಾದ ಸಂಗಾತಿ Read Post »

You cannot copy content of this page

Scroll to Top