ಕಾವ್ಯ ಸಂಗಾತಿ
“ಕಟ್ಟಬೇಕಿದೆ ನಾಡೊಂದನು”
ಬಸವರಾಜ್ ಚೌಡ್ಕಿ


ಕಟ್ಟಬೇಕಿದೆ ನಾವು ನಾಡೊಂದನ
ಸರಿ ಸಮಾನತೆಯ ಬಿಡೊಂದನ.!!ಪ!!
ಬಿತ್ತರಿಸುತಿಹರಿಂದು ಆ ಜಾತಿ ನಂದೆಂದು
ಕತ್ತರಿಸಿ ಹಾಕೋಣ ಜಾತಿಯ ಗಿಡವಿಂದು
ಎಚ್ಚರಿಸಿ ನಡೆ ನೀ ಮೌಢ್ಯತೆಯ ಕೊಂದು
ಉಚ್ಚರಿಸು ನಾವೆಲ್ಲ ಭಾರತೀಯರೆಂದು
ಕಟ್ಟಿಹರು ನಾಡ ಬಿಸಿಲು ಬೇವರಲಿ ಬೆಂದು
ಕೊಟ್ಟಿಹರು ಸ್ವಾತಂತ್ರ್ಯ ಲಕ್ಷ ಬಲಿದಾನ ಗೈದು
ಬರೆದರು ಸಂವಿಧಾನ ಸಮಪಾಲಿರಲೆಂದು
ಕರೆ ಕೊಟ್ಟರು ಅಸ್ಪೃಶ್ಯತೆ ತೊಲಗಲಿ ಎಂದು
ಸ್ಮರಿಸೋಣ ನಮ್ಮವರ ತ್ಯಾಗ ಬಲಿದಾನವನ್ನು
ಕೊರೋಣ ಹಿರಿ ಜೀವಗಳಿಗೆ ಶಾಂತಿಯನ್ನು
ತೊರೆಯೋಣ ನಾವು ಜಾತಿ ಮತ ಪಂಥಗಳನ್ನ
ಮರೆಯೋಣ ಅಸೂಯೆ ಬೇಧ ಭಾವಗಳನ್ನು
ಕಿತ್ತೋಣ ಜಾತಿ ಧರ್ಮದ ಜಾಲಿಯ ಮುಳ್ಳು
ಬಿತ್ತೋಣ ಮನುಜ ಮತದ ಪ್ರೀತಿ ಬಿಳಿ ಎಳ್ಳು
ಹಚ್ಚೋಣ ಅನ್ಯೋನ್ಯತೆಯ ಅಮೃತ ಬಳ್ಳಿ
ಬಿಚ್ಚೋಣ ಕಟ್ಟಿರುವ ಕೋಮುವಾದದ ಸರಪಳಿ
ಬಸವರಾಜ್ ಚೌಡ್ಕಿ



