ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
“ನೀತಿ ನಿಯಮ”


ಹಗೆಯ ಸಾಧಿಸ ಬೇಡ,
ಜಿದ್ದಿಗೆ ಹೊರಳಾಡ ಬೇಡ,
ತಗ್ಗಿ ಮುನ್ನಡೆದರೆ ಜಯವಿದೆ,!
ಶತ್ರುತ್ವವೆಂದೂ ಬೇಡ,
ಸಂಶಯಕ್ಕೆ ಎಡೆಯು ಬೇಡ,
ಅರಿತು ಬಾಳಿದಾಗ ಜಯವಿದೆ,!
ಮಿತ್ರತ್ವವೇ ಮುತ್ತಿನ ಹಾರ,
ದುಷ್ಟ ಶಕ್ತಿಗಳ ಅದು ಸಂಹಾರ,
ಬೆರೆತು ಬಾಳಲು ನಮಗೆ ಜಯವಿದೆ.!
ದೇವನೆಂದೂ ಗೊಂದಲವಲ್ಲ,
ಧರ್ಮವೆಂದೂ ಕಚ್ಚಾಡಿ ಕೊಳ್ಳಲಲ್ಲ,
ನೀತಿ ನಿಯಮ ಪಾಲಿಸಲು ಜಯವಿದೆ.!
ಹಮೀದ್ ಹಸನ್ ಮಾಡೂರು.




