ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಂಗಾಳಿಗೆ ತೂಗುವಾ ಗಿಡ ಬಳ್ಳಿಗಳಂತೆ
ತೂಗುತ್ತಿವೆ ನೀ ತೊಟ್ಟ ವಾಲೆ ಜುಮುಕಿ

ಮಿಂಚುತ್ತಿರುವ ನಿನ್ನಾ ಆ ನಯನಗಳು
ನಕ್ಷತ್ರದಂತೆ ಫಳಫಳ ಹೊಳೆಯುತ್ತಿರಲು

ಹುಣ್ಣಿಮೆ ರಾತ್ರಿಯ ಚಂದಿರನ ಕಂಡಂತೆ
ಬೆಳದಿಂಗಳ ಕಂಡೆ ನಾ ನಿನ್ನ ನಗುವಿನಲ್ಲಿ

ದೂರ ಬೆಟ್ಟದಲಿ ಬೆಳ್ಳಿ ಚಂದ್ರನ ಕಂಡಂತೆ
ಕಂಡೆ ನಾ ನಿನ್ನ ಮುತ್ತಿನ ಮೂಗುತಿಯಲಿ

ನಿನ್ನ ಆ ತಿದ್ದಿ ತೀಡಿರುವ ಹುಬ್ಬಿನಲ್ಲಿ ನಾ
ಕಂಡೆ ಕಾಮನ ಬಿಲ್ಲಿನಂತೆ ಅತಿ ಸುಂದರ

ಹಣೆಯಲ್ಲಿ ನೀ ಇಟ್ಟಿರುವ ಕಪ್ಪು ಬೊಟ್ಟು
ನಿನ್ನಾ ಸೌಂದರ್ಯಕೆಲ್ಲಾ ದೃಷ್ಟಿ ಬೊಟ್ಟು…

About The Author

1 thought on “ಗೀತಾ ಆರ್ “ಸೌಂದರ್ಯ””

  1. ಹೆಣ್ಣಿನ ಮುಖದ ಸೌಂದರ್ಯ ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ.

Leave a Reply

You cannot copy content of this page

Scroll to Top