ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ತನ್ನಿಂದ ತಪ್ಪಾದಾಗ
ತಾ ವಕೀಲನಾಗುವ
ಪರರ ತಪ್ಪೆನಿಸೆ
ನ್ಯಾಯಾಧೀಶನಾಗುವ.
“ನನ್ಗೆ ಗೊತ್ತಿದೆ” ಎಂದು
ಬೇರೆಯವರಿಗೆಲ್ಲ
ಗೊತ್ತಾಗಬಾರದೆಂದೇ
ಗೊತ್ತಿಲ್ಲದಂತಿರೋದು.
ಅರಿತಿರುವ ನೀನು
ಅವರಿವರ ಮುಂದೆ
ಅರಿವಿರದ ಹಾಗೆ-
-ಇರುವುದೇ ಅರಿವು.
ಬರೀ ಒಳ್ಳೆಯವರ
ಗೆಳೆತನ ಅಸಾಧ್ಯ,
ಒಳ್ಳೆಯ ಗುಣಗಳ
ಹೆಕ್ಕುವುದು ಸಾಧ್ಯ.
ಗುಡಿಸಲಲ್ಲಾಗಲಿ
ಬಂಗಲೆಯೇ ಇರಲಿ
ಒಂಟಿತನದ ಬಾಳು
ಸಹಿರಿಸದ ಗೋಳು.
ನೇಮಿಸಲು ಬಹುದು
ಎಲ್ಲ ಸೇವೆಗಳಿಗೆ
ನೇಮಿಸಲು ಅಸಾಧ್ಯ
ನರಳಲು ಸಾಯಲು.
ವ್ಯಾಸ ಜೋಶಿ.