ಕಾವ್ಯ ಸಂಗಾತಿ
ಪ್ರಮೋದ ಜೋಶಿ
ಅಳುತಿದೆ ಹಿಂದೆ ನಿಂತು
ನಮ್ಮ ಶಕ್ತಿ ನಮ್ಮ ದುಡಿಮೆ
ಇರಲಿ ಬದುಕಿನ ಧ್ಯೇಯವು
ದುಡಿತದಿ ತಿಂದ ಅನ್ನವು
ಸ್ವಾಭಿಮಾನದ ಪ್ರತೀಕವು
ಆಮೀಷದ ಫಲಗಳೆಲ್ಲವೂ
ಕ್ಷಣಿಕ ಕ್ಷಣದ ಮಜಲುಗಳು
ನಂಬಿ ದುಡಿಮೆ ಮರೆತರೆ
ಬದುಕಿಗೆ ಉಂಟೆ ಆಸರೆಯು
ನಮ್ಮ ತನ ನಮ್ಮ ಮನ
ನಮ್ಮ ಒಡೆತನದ ಆಸ್ತಿಯು
ನಮ್ಮ ಹಾದಿಲಿ ನಾವ ನಡೆಯಲು
ಬೇಕೆ ಇನ್ನೋಬ್ಬರ ಸಹಾಯವು
ಸ್ವಾರ್ಥದ ಸುಳಿಯಲಿ ನಾವು ಸಿಲುಕಿ
ನಮ್ಮ ತನವನೇ ಅದರೊಳು ತುರುಕಿ
ಇದ್ದು ಬಿದ್ದು ಕಳೆದ ಮೇಲೆ
ಸಿಗುವುದೇ ಮತ್ತೆ ನಾಳೆ
ದುಡಿತದಲಿ ಸ್ವರ್ಗ ಇದೆ
ನಂಬಿಕೆಯಲಿ ಶಕ್ತಿ ಇದೆ
ಇಷ್ಟ ಇದ್ದರೆ ಸಾಕು ನಮಗೆ
ನೆಮ್ಮದಿ ಗೂಡು ಇರುವುದು ಜೊತೆಗೆ
ಬೇಕೆ ನಮಗೆ ಅನ್ಯಾಯದ ಸೊತ್ತು
ಇರಬೇಕು ನಾವು ಬದುಕಿಯೂ ಸತ್ತು
ಸವಿದರೆ ಈಗ ಹೆಚ್ಚೆಚ್ಚು ತುತ್ತು
ನಾವಾಗುವೆವು ಅವರ ಸೊತ್ತು
ಬೆಳೆಯೊಣ ಬದುಕೋಣ
ನಮ್ಮ ತನದಿ ಮೆರೆಯೋಣ
ನಮ್ಮ ಶಕ್ತಿಯಿಂದ ಬಳೆದು
ನಾಡಲಿ ಹೆಸರು ಉಳಿಸೋಣ
ಹಂಗಿನ ಬಾಳು ಬದುಕಿ
ಹೆಸರು ಪಡೆದರೇನು ಬಂತು
ಈ ಕ್ಷಣಕೆ ಮುಂದೆ ಬಂದರೂ
ಆ ಕ್ಷಣ ಅಳುತಿದೆ ಹಿಂದೆ ನಿಂತು
ಪ್ರಮೋದ ಜೋಶಿ
ಆತ್ಮ ಸಂತೃಪ್ತಿಗೆ ಢಾಂಬಿಕತೆಯ ಜೀವನ ಬೇಕಾಗಿಯೇ ಇಲ್ಲ, ನಿಸ್ವಾರ್ಥದ ಬದುಕಿನಲ್ಲಿ ಸಿಗುವ ತೃಪ್ತಿ ಕೋಟಿ ಕೊಟ್ಟರೂ ಸಿಗುವುದಿಲ್ಲ ಅಂತ ನನ್ನನಿಸಿಕೆ.
ಕವನ ತುಂಬಾ ಚೆನ್ನಾಗಿದೆ ಅಭಿನಂದನೆಗಳು