ಪರಿಮಳ ಐವರ್ನಾಡು ಸುಳ್ಯ ಅವರ ಕವಿತೆ-ʼಒಲವೆ ನನ್ನೊಲವೆ!ʼ

ಕಲೆಗಳಲಂಕರಣ: ಎಲ್ಲಿರುವೆ ನನ್ನೊಲವೆ ನನ್ನ ಭಾವದೊಲವೇ
ನೋಡಬೇಕು ನಿನ್ನನು ಕಣ್ತುಂಬಿಕೊಳ್ಳಬೇಕು
ಒಲವರಾಗವನು ಹಾಡಬೇಕು ಹಾಡಿ
ಪ್ರೇಮಾಮೃತ ಸುರಿಸಬೇಕು

ನಿನ್ನನೊಮ್ಮೆ ಕಾಣಬೇಕು ನಾನು
ಬಾಹುಬಂಧನದಲ್ಲಿ ಬಂಧಿಯಾಗಬೇಕು
ನನ್ನ ಗರ್ಭಗುಡಿಯಲಿ ನಿನ್ನ ಕಂದನ ಸಲಹಬೇಕು
ನಿನಗೆ ಪ್ರೇಮದಾಸಿಯಾಗಬೇಕು

ನೂರಾರು ಭಾವಗಳ ಮಧುರ ಸಿಂಚನ
ನೀನಿತ್ತ ದೀರ್ಘಚುಂಬನದ ರಸದೌತಣ
ಕಾಲ ಉರುಳಿ ಸಾಗುತಿದೆ
ಪ್ರೇಮದಪ್ಪುಗೆ ಅಚ್ಚಳಿಯದೆ ಉಳಿದಿದೆ

ತಡವೇಕೆ ನನ್ನೊಲವೆ ಬಾ ಬೇಗ ಒಲವೆ
ಕಾಯುತ್ತಿರುವೆ ಮಧುರ ಪ್ರೇಮಕೆ
ನಿನ್ನಯ ಪ್ರೇಮರಾಗಕೆ
ನಿನ್ನೊಂದಿಗೆ ಪ್ರೇಮ ಪಯಣಕೆ


Leave a Reply

Back To Top