ಅಂಕಣ ಸಂಗಾತಿ
ಅನುಭಾವ
ಅಕ್ಕ ಮಹಾದೇವಿ ವಚನಗಳ ವಿಶ್ಲೇಷಣೆ -01
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
ಕಾಯ ಮೀಸಲಾಗಿ ನಿನಗರ್ಪಿತವಾಯಿತ್ತು
ಕರಣ ಮೀಸಲಾಗಿ ನಿನಗರ್ಪಿತವಾಗಿತ್ತು
ಆನೊಂದರಿಯೆನಯ್ಯಾ ,ಎನ್ನ ಗತಿ ನೀನಾಗಿ ಎನ್ನ ಮತಿ ನೀನಾಗಿ
ಪ್ರಾಣ ನಿನಗರ್ಪಿತವಾಯಿತ್ತು
ನೀನಲ್ಲದೆ ಪೆರತೊಂದ ನೆನದಡೆ
ಆಣೆ ನಿಮ್ಮಾಣೆ ಚೆನ್ನಮಲ್ಲಿಕಾರ್ಜುನನ
ಅಕ್ಕಮಹಾದೇವಿ
12 ನೇ ಶತಮಾನದ ಶರಣೆ ವೀರಾಗಿಣಿ ಅಕ್ಕಮಹಾದೇವಿ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಉಡುತಡಿ ಎನ್ನುವ, ಊರಲ್ಲಿ 1160ರಲ್ಲಿ ತಂದೆ ಓಂಕಾರ ಶೆಟ್ಟಿ ತಾಯಿ ಸುಮತಿ .ಇವರ ಗರ್ಭದಲ್ಲಿ ಹುಟ್ಟಿದ ಅಕ್ಕಮಹಾದೇವಿಯು,ಬಾಲ್ಯದಲ್ಲಿ ಶಿವಲಿಂಗದ ಜೊತೆಗೆಯೇ ಆಟ ಆಡುವುದನ್ನು ನೋಡಿ ತಂದೆ ತಾಯಿಗಳು ತಮಾಷೆಗಾಗಿ ಅದೇ ಶಿವಲಿಂಗದ ಜೊತೆಗೆ ನಿನ್ನ ಮದುವೆಯನ್ನು ಮಾಡಿ ಕೊಡುತ್ತೇವೆ ಎಂದು ,ಅದೇ ಒಂದು ಭಾವದಲ್ಲಿ ಅಕ್ಕಮಹಾದೇವಿಯು ಹಾಗಾದರೆ ಆ ಲಿಂಗ ಚೆನ್ನಮಲ್ಲಿಕಾರ್ಜುನನನ್ನು ನಾನು ನೋಡಬೇಕು ಆತನೇ ನನ್ನ ಗಂಡ ,ಎನ್ನುವ ಅರಿವಿನ ಕುರುವು ಜ್ಞಾನದ ಬೆಳಕು ,ಮನದ ಕತ್ತಲೆಯನ್ನು ಓಡಿಸುವ ಆ ದಿವ್ಯ ಜ್ಯೋತಿಯನ್ನು ನಾನು ತಿಳಿಯಬೇಕು ಎನ್ನುವ ಮನದ ಇತ್ಕಟ್ಟೆಚ್ಚೆ ಅಕ್ಕನಲ್ಲಿ ಬೆಳೆಯುತ್ತ , ಬೆಳೆಯುತ್ತ ಹೋಗುತ್ತದೆ.
ತನ್ನ ಮನದ ಗಂಡನನ್ನೇ ತನ್ನ ಬಾಳಸಂಗಾತಿಯನ್ನಾಗಿ ಮಾಡಿಕೊಂಡ ಅಕ್ಕ.
ಚೆಲುವ ಸಿರಿಯನ್ನೇ ಉಟ್ಟ ಬೆಳೆದ ಅಕ್ಕ ತುಂಬ ರೂಪವತಿ ಮತ್ತು ತುಂಬ ಯವ್ವನದ ಹುಡುಗಿ
ಒಂದು ದಿವಸ ಆ ಊರಿನ ಕಶ್ಯಪಯ್ಯ ಎನ್ನುವ ನಾಯಕ ಆ ಊರಿನ ರಾಜನ ಕಣ್ಣಿಗೆ ಅಕ್ಕ ಬಿದ್ದು ಬಿಡುತ್ತಾಳೆ.
ಹೇಗಾದರೂ ಮಾಡಿ ಅಕ್ಕಳನ್ನು ವಲಿಸಿಕೊಳ್ಳಬೇಕೆನ್ನುವ ಮನ ರಾಜನಿಗೆ ಆಗಿ,
ಮೂರು ನಿಯಮಗಳಾದ ಗುರು ಲಿಂಗ, ಜಂಗಮಕ್ಕೆ ಬಾದೆ ಬರದ ಹಾಗೆ ನೋಡಿಕೊಳ್ಳುವ ನಿರ್ಧಾರಕ್ಕೆ ಅಕ್ಕ ಬರುತ್ತಾಳೆ .
ಮದುವೆಯ ನಂತರ ಕೆಲವು ತಿಂಗಳವರೆಗೆ ಪಾಲಿಸಿದ ಕೌಶಿಕ
ಒಂದು ದಿವಸ ಅಕ್ಕಮಹಾದೇವಿಯು ಪೂಜೆ ಮಾಡುವ ಸಂದರ್ಭದಲ್ಲಿ ಅವಳ ಸೌಂದರ್ಯಕ್ಕೆ ಮಾರು ಹೋಗಿ ಅಕ್ಕಳ ಮೂರೂ ನಿಯಮಗಳನ್ನು ಮುರಿದ ಕೌಶಿಕನನ್ನು ದಿಕ್ಕರಿಸಿ ಅಕ್ಕ ಅರಮನೆಯನ್ನು ತೊರೆದು,
ಕಲ್ಯಾಣದ ಅನುಭವ ಮಂಟಪದಲ್ಲಿರುವ ಅಲ್ಲಮಪ್ರಭು ಹಾಗೂ ಬಸವಣ್ಣನವರನ್ನು ಕಾಣಲು ಬರುತ್ತಾಳೆ.
ಅಕ್ಕಳ ಮೇಲೆ ಬರೆದ ಅನೇಕ ನಾಟಕ, ಕಾದಂಬರಿ, ಕಾವ್ಯ, ಜಾನಪದ ಕೊರವಂಜಿ ಹಾಡು
ಹಂತಿ ಹಾಡು ,ಮುಂತಾದ ಸಾಹಿತ್ಯದಲ್ಲಿ ಅಕ್ಕ ನಡೆದು ಬಂದ ಹಾದಿಯನ್ನು ಗಮನಿಸಬಹುದು .
ಅಕ್ಕಳು ಬರೆದ ಸುಮಾರು 434 ವಚನಗಳು ನಮಗೆ ಸಿಗುತ್ತವೆ .
ಅಕ್ಕನು ಬರೆದ ಯೋಗಾಂಗ ತ್ರಿವಿದಿ, ವಚನಗಳು ,ಸೃಷ್ಟಿಯ ವಚನಗಳು ,ಅಕ್ಕಗಳ ಪೀಠಿಕೆ ,ಅಕ್ಕನ ಹಾಡುಗಳು ಇವು ಮಹಾದೇವಿ ಅಕ್ಕನ ಕೃತಿಗಳು .
ಅಕ್ಕ ಬರೆದ ವಚನಗಳೇ ಒಂದು ಮಹಾಕಾವ್ಯ.
ಇಲ್ಲಿ ಅಕ್ಕನ ಜೀವನದ ಅನುಭವವೇ ಒಂದು ಅನುಭಾವ ಆಗುತ್ತದೆ .
ಇಲ್ಲಿ ಶರಣರು ತಮ್ಮ ಜೀವನದ ಕಥೆಯನ್ನು ಬರೆಯಲಿಲ್ಲ.ವಚನಕಾರರು ಬರೆದ ವಚನಗಳನ್ನು ಪರಿಷ್ಕರಿಸಿ ,ಅವರ ಜೀವನವನ್ನು ಉಲ್ಲೇಖಿಸಿದವರೇ, ಶೂನ್ಯ ಸಂಪಾದನೆಕಾರರು.
ಇಲ್ಲಿ ಕಾಯ ಎಂದರೆ ಶರೀರ .ಈ ಶರೀರ ಎಲ್ಲವೂ ನನ್ನ ಒಳಗಿನ ಅರಿವಿನ ಗಂಡನಾದ ಚೆನ್ನಮಲ್ಲಿಕಾರ್ಜುನನಿಗೆ ಮೀಸಲಾದ ಈ ದೇಹ ಈ ಶರೀರ ಆತನಿಗೆಯೇ ಅರ್ಪಿತ ಎನ್ನುವ ಭಾವ ಅಕ್ಕನದು .
ಕರಣ ಮೀಸಲಾಗಿ ನಿನಗರ್ಪಿತವಾಯಿತು
ಇಲ್ಲಿ ಕರಣ ಅಂದರೆ ತ್ರಿಕರಣಗಳು
ಕಾಯಕ ,ವಾಚಾ,ಮನಸಾ
ಈ ಶರೀರ ಅಷ್ಟೇ ಚೆನ್ನಮಲ್ಲಿಕಾರ್ಜುನನಿಗೆ ಮೀಸಲಿಡುವುದರ ಜೊತೆಗೆ ನಾನು ಮಾತನಾಡುವ ಈ ಮಾತುಗಳೆಲ್ಲವೂ ನನ್ನ ಚೆನ್ನಮಲ್ಲಿಕಾರ್ಜುನನಿಗೆ ಸೇರಬೇಕು .ನಾನು ಬರೀ ನನ್ನ ಅರಿವಿನ ಗಂಡನ ಜೊತೆಗೆ ಮಾತ್ರ ಮಾತನಾಡುವೆ ಈ ಮಾತುಗಳೆಲ್ಲವೂ ಆತನಿಗೆ ಮೀಸಲು.ಆತನು ನುಡಿಸಿದಂತೆ ನಾ ನೀಡಿವೆ .
ಮಾತು ಅವನಿಗೆ ಕೊಟ್ಟ ಮೇಲೆ ನನ್ನ ಮನಸ್ಸು ಕೂಡಾ ಆತನದೇ, ಈ ಮನಸ್ಸು ಚೆನ್ನಮಲ್ಲಿಕಾರ್ಜುನನಿಗೆ ಮಾತ್ರ ಮೀಸಲು.ಈ ಮೀಸಲಾದ ಈ ಕಾಯ ಬೇರೆಯವರನ್ನು ಮುಟ್ಟಿದರೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ಎನ್ನುತ್ತಾಳೆ ಅಕ್ಕ.
ಆನೊಂದರಿಯೆನಯ್ಯಾ ,
ನನ್ನ ಗತಿಯೂ ನೀನೇ ನನ್ನ ಮತಿಯೂ ನೀನೇ
ನನ್ನ ಆಗು ಹೋಗುಗಳಿಗೆ ಚೆನ್ನಮಲ್ಲಿಕಾರ್ಜುನನೇ ಕಾರಣ ,ಆತನ ಬುದ್ಧಿಯೇ ನನಗೆ, ಆತನೇ ನನ್ನ ಬುದ್ಧಿಗೆ ಸಿದ್ಧಿಗೆ ಕಾರಣ .
ಈ ಕಾಯವೇ ಚೆನ್ನಮಲ್ಲಿಕಾರ್ಜುನನಿಗೆ ಅರ್ಪಿತ ವಾದ ಮೇಲೆ ನನ್ನ ಮಾತು ,ನನ್ನ ನಡೆ ,ನನ್ನ ಬುದ್ಧಿ ಎಲ್ಲವೂ ಚೆನ್ನಮಲ್ಲಿಕಾರ್ಜುನೇ ಎನ್ನುವ ಅರಿವಿನ ಜ್ಞಾನವನ್ನು ತಿಳಿಯಪಡಿಸುವ ನೈಜ ಮನೋಧರ್ಮದ ನಿಲುವು ಅಕ್ಕನದು .
ನಾನು ನನ್ನ ಮನದಲ್ಲಿ ನೆನಪಿಸುವುದು ಕೂಡಾ ಆ ಚೆನ್ನಮಲ್ಲಿಕಾರ್ಜುನನನ್ನೇ .
ಚಂಚಲವಾದ ಮನವನ್ನು ದೃಢವಾದ ಭಕ್ತಿಯಿಂದ ದೇವರನ್ನು ವಲಿಸಿಕೊಳ್ಳಬೇಕೆನ್ನುವ ಅಕ್ಕ ಳ ನಿರ್ಧಾರವನ್ನು ನೋಡಿದರೆ ,
ಇವತ್ತಿನ ಯುಗದ ಯುವಪೀಳಿಗೆಗೆ ಇದು ಒಂದು ಅರಿವಿನ ಜ್ಞಾನದ ಕುರುವು .ಆ ಕಡೆ ಈ ಕಡೆ ಹರಿಯುವ ಮನಕೆ ಗೋಡೆಯನ್ನು ಕಟ್ಟಬೇಕು .
ಏಕ ದೇವೋಪಾಸನದ ನೆಲೆಯಲ್ಲಿ ಅಕ್ಕನ ಈ ವಚನದಲ್ಲಿ ನಾನು ಕಂಡು ಕೊಂಡಿರುವ ಸತ್ಯದ ಮಾರ್ಗ.
ಈ ಸುಂದರ ಶರೀರದೊಳಗೆ ಚೈತನ್ಯ ದಾಯಕವಾದ ಶಕ್ತಿ ಇದೆ .ಈ ಶಕ್ತಿಯನ್ನು ತಮ್ಮ ಕೈ ವಶ ಮಾಡಿಕೊಂಡು ಹೋಗುವ ಅರಿವಿನ ಜ್ಞಾನದ ಮಾರ್ಗದ ಗಂಡನನ್ನು ಅಕ್ಕ ನಮಗಿಲ್ಲಿ ತೋರ್ಪಡಿಸಿದ್ದಾಳೆ.
ಆಕೆಯ ಹಂಬಲ ಏನಿದ್ದರೂ, ಚೆನ್ನಮಲ್ಲಿಕಾರ್ಜುನನನ್ನೇ ಕಾಣುವುದು .ಅಂದರೆ ತನ್ನ ಕಾಯದೊಳಗೆ ಇರುವ ಅರಿವಿನ ತಿಳುವಳಿಕೆಯ ಗಂಡನನ್ನು ಕಾಣುವುದು .
ಈ ಸತ್ಯ ಎಲ್ಲರಿಗೂ ಅನ್ವಯ. ಈ ಸತ್ಯವನ್ನು ನಾನು ಪಾಲಿಸಿರುವೆ, ಆಣೆಗೂ, ನಿಮ್ಮಾಣೆಗೂ ಕೂಡಾ ಎನ್ನುವ ಧೃಢ ಭಕ್ತಿ ಭಾವ ದಿಂದ ಅಕ್ಕ ಈ ಒಂದು ವಚನದಲ್ಲಿ ಹೇಳಿರುವುದು ಕಂಡು ಬಂದಿದೆ .
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
ಸರ್ಕಾರಿ ಪದವಿಪೂರ್ವ ಕಾಲೇಜು ಖನಗಾಂವ
ಪ್ರಾಚಾರ್ಯರು
ಇವರು ಮೂಲತ:ಬೆಳಗಾವಿ ಜಿಲ್ಲೆಯ ಮುರಗೋಡದವರಾಗಿದ್ದು, ಸರಕಾರಿಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರ ಪ್ರಕಟಿತ ಕೃತಿಗಳು ನಾಲ್ಕು:
1ಮೌನಗಳೇ ಮಾತನಾಡಿ
2ಕನಸುಗಳ ಜಾತ್ರೆ
3ಸಂತೆಯೊಳಗಿನ ಅಜ್ಜಿ
4ಬದುಕೇ ಒಂದು ಹೊತ್ತಿಗೆ5 ನೆನಪಿನ ಅಂಗಳದಲ್ಲಿ
ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳು ಇರುವ ಕೃತಿಗಳು
1ನನಗೆ ಇಂದು ಒಂದು ಕನಸಿದೆ
2 ಕೆಸರೊಳಗಿನ ಕಮಲ
3ಕಾವಲುಗಾರ
5 ಸವಿ ಮನ
6 ಅಭಿಮಾನಿ
7 ಗಾಯತ್ರಿ ಸಣ್ಣ ಕಥೆ
8 ಸಂಗ್ರಹ ಗ್ರಂಥ ರವಿಶಂಕರ ಗುರೂಜಿ ಯವರ ನುಡಿಗಳು ಅಮೃತ ಬಿಂದು
9 ಬದುಕು ಭಾರವಲ್ಲ ಲೇಖನ ಕೃತಿ
10 ಶರಣರ ವಚನಗಳ ವಿಶ್ಲೇಷಣೆ ಕೃತಿ
ಪ್ರಶಸ್ತಿಗಳು1 ಸತತ ಹತ್ತುವರುಷ ಪ್ರತಿವರ್ಷ ಕನ್ನಡ ರತ್ನ, ಕನ್ನಡ ನಿಧಿ, ಸಿರಿಗನ್ನಡ ಚಿತ್ರದುರ್ಗ ಕನ್ನಡ ಪ್ರತಿಭಾ ಪರೀಕ್ಷೆಯಲ್ಲಿ ಉತ್ತಮ ಶಿಕ್ಷಕ/ ಉಪನ್ಯಾಸಕಿಯರು ಎಂಬ ಪ್ರಶಸ್ತಿ
2 ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ
3ಗೌರವ ಡಾ.ಲಿಟ್ ಪ್ರಶಸ್ತಿ
4ಕಾವ್ಯಚೇತನ ಪ್ರಶಸ್ತಿ
ಉತ್ತಮ ಅನುಭಾವ