ಸಾವಿಲ್ಲದ ಶರಣರು ಮಾಲಿಕೆ-ಅಪ್ರತಿಮ ಸ್ವಾತಂತ್ರ ವೀರ ಮೈಲಾರ ಮಹಾದೇವ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಪೂನಾ.

ಭಾರತದ  ಸ್ವಾತಂತ್ರ ಚಳುವಳಿಯಲ್ಲಿ ಹಾವೇರಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿದೆ. ಶ್ರೀ ಸಿದ್ದಪ್ಪ ಹೊಸಮನಿ ಮೈಲಾರ ಮಹದೇವಪ್ಪ ಹಳ್ಳಿಕೇರಿ ಗುದ್ಲೇಪ್ಪ ಮುಂತಾದ ಸೇನಾನಿಗಳಿಂದ ದೇಶದ ಗಮನವನ್ನು ಸೆಳೆದರು. 

   ಸ್ವಾತಂತ್ರ ಚಳವಳಿಯಲ್ಲಿ ಕರ್ನಾಟಕದಿಂದ ಗಾಂಧಿ ಯುಗದಲ್ಲಿ ಬಲಿದಾನ ಮಾಡಿದ ವೀರಯೋಧರಲ್ಲಿ ಅಗ್ರಗಣ್ಯರು ಮೈಲಾರ ಮಹಾದೇವ ಕೂಡ ಒಬ್ಬರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭೂಗತರಾಗಿ ಏಳು ತಿಂಗಳಿಗೂ ದೀರ್ಘಕಾಲ ಮಹಾದೇವ ಮಾಡಿದ ಸಾಹಸ, ಪಟ್ಟ ಕಷ್ಟ- ಕೋಟಲೆ, ತೋರಿದ ಧಾಡಸಿತನ ಅಸಾಧಾರಣ. ಮಾಡು ಇಲ್ಲವೆ ಮಡಿ ಎಂಬ ಗಾಂಧೀಜಿಯ ಕರೆಯಂತೆ ನಡೆದು ಮಡಿದ ಧೀರ.

 ಮೈಲಾರ ಮಹಾದೇವಪ್ಪನವರು 1911ರಲ್ಲಿ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ಜನಿಸಿದರು. ಇವರ ತಾಯಿ ಬಸಮ್ಮ ; ತಂದೆ ಮಾರ್ತಾಂಡಪ್ಪ. ಮೋಟೆಬೆನ್ನೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನೂ ಹಾಗು ಹಂಸಭಾವಿಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪಡೆದರು. ಹೈಸ್ಕೂಲಿನಲ್ಲಿ ಹರ್ಡೇಕರ ಮಂಜಪ್ಪ‍ನವರಿಂದ ರಾಷ್ಟ್ರೀಯ ಭಾವನೆಯ ಉದಯವಾಯಿತು. ಅದೇ ಸಮಯದಲ್ಲಿ ಗಳಗನಾಥರ ಸಾಹಿತ್ಯ ಹಾಗು ಲೋಕಮಾನ್ಯ ತಿಲಕರ] ಕೇಸರಿ ಪತ್ರಿಕೆಯಲ್ಲಿಯ ಲೇಖನಗಳಿಂದ ಇವರಿಗೆ ಪ್ರೇರಣೆ ದೊರೆಯಿತು. ಇದರಿಂದ 1929 ರಲ್ಲಿ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಖಾದಿ ಪ್ರಚಾರದಲ್ಲಿ ತೊಡಗಿದರು. ಮಹಾತ್ಮಾ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಪ್ರಾರಂಭಿಸಿ ದಾಂಡಿ ಯಾತ್ರೆ ಕೈಗೊಂಡಾಗ ಅದರಲ್ಲಿ ಭಾಗವಹಿಸಿದ ಅತಿ ಕಿರಿಯ ಚಳುವಳಿಗಾರರಾಗಿದ್ದರು. ಜೊತೆಗೆ, ಮೈಲಾರ ಮಹಾದೇವಪ್ಪನವರು ಕರ್ನಾಟಕದಿಂದ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಏಕೈಕ ವ್ಯಕ್ತಿ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.ಇವರ ತಾಯಿ ಬಸಮ್ಮ, ತಂದೆ ಮಾರ್ತಾಂಡಪ್ಪ. ಮೋಟೆಬೆನ್ನೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನೂ ಹಾಗು ಹಂಸಭಾವಿಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪಡೆದರು. ಹೈಸ್ಕೂಲಿನಲ್ಲಿ ಇದ್ದಾಗ ಹರ್ಡೇಕರ್‌ ಮಂಜಪ್ಪ ಅವರ ರಾಷ್ಟ್ರೀಯ ಭಾಷಣದಿಂದ ರಾಷ್ಟ್ರೀಯ ಭಾವನೆಯ ಉದಯವಾಯಿತು.  ಗಳಗನಾಥರ ಸಾಗಿತ್ಯ ಹಾಗೂ ಮೋಕಮಾನ್ಯ ತಿಲಕರ ಕೇಸರಿ ಪತ್ರಿಕೆಯಿಂದ ಬರುವ ಲೇಖನದಿಂದ ಪ್ರೇರಣೆ ಪಡೆದುಕೊಂಡರು. ನಂತರ 1929 ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಖಾದಿ ಪ್ರಚಾರದಲ್ಲಿ ತೊಡಗಿದರು.

ಮಹಾತ್ಮ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಪ್ರಾರಂಬಿಸಿ ದಾಂಡಿ ಯಾತ್ರೆ ಕೈಗೊಂಡಾಗ ಅದರಲ್ಲಿ ಭಾಗವಹಿಸಿದ ಅತಿ ಕಿರಿಯ ಚಳುವಳಿಗಾರರಾಗಿದ್ದರು. ಮೈಲಾರ ಮಹಾದೇವಪ್ಪನವರು ಕರ್ನಾಟಕದಿಂದ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಏಕೈಕ ವ್ಯಕ್ತಿ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ

1930ರ ಮಾರ್ಚ್ 12 ರಂದು ದಿನ ಮಹಾತ್ಮ ಗಾಂಧಿಯವರು ತಾವೇ ಆರಿಸಿಕೊಂಡ 78 ಸೇನಾನಿಗಳೊಂದಿಗೆ ಸಾಬರಮತಿಯಿಂದ ಉಪ್ಪಿನ ಸತ್ಯಾಗ್ರಹಕ್ಕಾಗಿ ದಂಡಿ ಯಾತ್ರೆ ಆರಂಬಿಸಿದರು. ಈ ತಂಡದಲ್ಲಿ ಕರ್ನಾಟಕದ ಏಕಮೇವ ಪ್ರತಿನಿಧಿಯಾಗಿದ್ದವರು ಮೈಲಾರ ಮಹಾದೇವ. ಸುಮಾರು 385 ಕಿಮೀ ದೂರದ ಧಾಂಡಿಯನ್ನು 25 ದಿನಗಳ ಪಾದಯಾತ್ರೆಯಲ್ಲಿ ಗಾಂಧೀ ಸೇರಿದಂತೆ ಅಪ್ರತಿಮ ಹೋರಾಟಗಾರರೊಂದಿಗೆ ಸಾಗಿ ಉಪ್ಪನ್ನು ಎತ್ತಿಕೊಂಡು ಕಾಯ್ದೆ ಭಂಗ ಚಳುವಳಿಗೆ ಅವರೂ ಸಾಕ್ಷಿಯಾದರು. ಇದಕ್ಕಾಗಿ ಗಾಂಧೀಜಿಯೊಂದಿಗೆ ಮೈಲಾರ ಮಹಾದೇವರಿಗೂ 6 ತಿಂಗಳ ಕಾರಾಗೃಹ ಶಿಕ್ಷೆಯಾಯಿತು.

ಶಿಕ್ಷೆಯ ನಂತರ ಮರಳಿ ಕರ್ನಾಟಕಕ್ಕೆ ಬಂದು ಸ್ವಾತಂತ್ರ್ಯಂದೋಲನದಲ್ಲಿ ಚಳುವಳಿ ನಡೆಸಿದ್ದರಿಂದ ಮಹಾದೇವರಿಗೂ ಶಿಕ್ಷೆಯಾಗಿ ಹಿಂಡಲಗಾ ಜೈಲಿಗೆ ತಳ್ಳಲ್ಪಟ್ಟರು. ಇವರ ಜೊತೆ ಒಂದೇ ಕುಟುಂಬದ ತಾಯಿ ಮಗ ಸೊಸೆ ಎಲ್ಲರೂ ಜೈಲುವಾಸ ಅನುಭವಿದಿದ್ದರು. ಇತಂಹ ದೇಶಪ್ರೇಮ ಎಂಬ ಹೆಗ್ಗಳಿಕೆಗೆ ಇವರ ಕುಟುಂಬ ಸಾಕ್ಷಿಯಾಗಿದೆ.

ಇಂದಿನ ಹಾವೇರಿ ಜಿಲ್ಲೆಯ ಕೊರಡೂರಿನಲ್ಲಿ ತಮ್ಮದೇ ಆದ ಒಂದು ಗ್ರಾಮ ಸೇವಾಶ್ರಮವನ್ನು (1937) ಪ್ರಾರಂಭಿಸಿದರು. ಧಾರವಾಡ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ನೇತೃತ್ವವನ್ನು ಮೈಲಾರಪ್ಪ ತಾವೇ ಹೊತ್ತಿದ್ದರು. ಬ್ರಿಟಿಷ್ ಸರ್ಕಾರ ಕಂದಾಯ ಸಂಗ್ರಹಿಸುವ, ಕೊಡದವ ಮೇಲೆ ದೌರ್ಜನ್ಯ ಎಸಗುವುದನ್ನು ಸಹಿಸದ ಮೈಲಾರರು, ಕಂದಾಯವನ್ನು ರೈತರಿಗೆ ಹಿಂದಿರುಗಿಸಲು ಸರ್ಕಾರಕ್ಕೆದೊಂದಿಗೆ ಎದುರಾಳಿಯಾಗಿದ್ದರು.

1943ರ ಎಪ್ರಿಲ್ ಒಂದರಂದು ಮೈಲಾರರು ಹೊಸರಿತ್ತಿ ಕಂದಾಯ ವಸೂಲಿ ಕಚೇರಿಯ ಮೇಲೆ ದಾಳಿ ನಡೆಸುವ ಯೋಜನೆ ಹಾಕಿಕೊಂಡರು. ಅಲ್ಲಿ ನಡೆದ ಬ್ರಿಟಿಷ್ ಅಧಿಕಾರಿಗಳ ಜತೆಗಿನ ಕಾಳಗದಲ್ಲಿ ಕೇವಲ 23ರ ಹರೆಯದ ಧೀಮಂತ ವೀರ ದೇಶಭಕ್ತ ಮೈಲಾರ ಮಹಾದೇವರು (1911-1943) ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಬಲಿದಾನಗೈದರು. ಅಂದು ಮಹದೇವರ ಜತೆಗೆ ತಿರುಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ಎಂಬ ದೇಶಭಕ್ತರು ಕೂಡಾ ಬಲಿದಾನ ಮಾಡಿದರು.


2 thoughts on “ಸಾವಿಲ್ಲದ ಶರಣರು ಮಾಲಿಕೆ-ಅಪ್ರತಿಮ ಸ್ವಾತಂತ್ರ ವೀರ ಮೈಲಾರ ಮಹಾದೇವ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಪೂನಾ.

  1. ಒಂದು ತಿದ್ದುಪಡಿ 1911 ರಿಂದ 1943 ತಮ್ಮ 33 ವಯಸ್ಸಿನಲ್ಲಿ ಲಿಂಗೈಕ್ಯರಾದರು

    ಡಾ ಶಶಿಕಾಂತ ಪಟ್ಟಣ

Leave a Reply

Back To Top