ಅಂಕಣ ಸಂಗಾತಿ
ಸುಜಾತಾ ರವೀಶ್
ಹೊತ್ತಿಗೆಯೊಂದಿಗೆ ಒಂದಿಷ್ಟು ಹೊತ್ತು
ಸೋನಪಾಪಡಿ : ಶಿಶುಗೀತೆಗಳು
ಸೋನಪಾಪಡಿ : ಶಿಶುಗೀತೆಗಳು
ಲೇಖಕರು : ರಾಜಶೇಖರ ಕಕ್ಕುಂದ
ಪ್ರಕಾಶಕರು : ಕನ್ನಡನಾಡು ಪ್ರಕಾಶನ ಕಲಬುರಗಿ
ಮೊದಲ ಪ್ರಕಟಣೆ : ೨೦೨೧
ಶ್ರೀ ರಾಜಶೇಖರ ಅಲ್ಲೂರಕರ್ ಅವರು ರಾಜಶೇಖರ ಕುಕ್ಕುಂದಾ ಕಾವ್ಯನಾಮದಲ್ಲಿ ಬರೆಯುವವರು. ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಕಾಗಿಣೆ ನದೀ ತೀರದ ಕುಕ್ಕುಂದಾ ಗ್ರಾಮದವರಾಗಿದ್ದು ಪ್ರಸ್ತುತ ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಇನ್ ಸ್ಟ್ರುಮೆಂಟೇಶನ್ ವಿಭಾಗದಲ್ಲಿ ಸಂಯೋಜಿತ ಪ್ರಾಧ್ಯಾಪಕರು ಶಿಶು ಕಾವ್ಯದಲ್ಲಿ ಬಾಲ್ಯದಿಂದಲೇ ಆಸಕ್ತಿ ತಮ್ಮ ರಮ್ಯಾ ವಿಶಿಷ್ಟ ಕಾವ್ಯ ಪ್ರಯೋಗಗಳಿಂದ ಕಾವ್ಯ ಲೋಕದಲ್ಲಿ ತಮ್ಮ ಛಾಪು ಮೂಡಿಸಿ ಮಿನುಗುತ್ತಿರುವ ಅವರು ಸಂಧ್ಯಾ ಗೆಳೆಯರ ಬಳಗದ ಮೂಲಕ ಮಕ್ಕಳ ಸಾಹಿತ್ಯಾಸಕ್ತಿಯ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವವರು ಇವರ ಕವಿತೆಗಳು ಹಲವಾರು ಶಿಶುಗೀತೆಗಳ ಆಲ್ಬಮ್ ಗಳಲ್ಲಿ ಸೇರಿವೆ ಆಕಾಶವಾಣಿಯಲ್ಲಿ ಮಕ್ಕಳ ಧಾರಾವಾಹಿ ಮತ್ತು ಕವಿತೆಗಳು ಪ್ರಸಾರವಾಗಿವೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಪಠ್ಯಪುಸ್ತಕಗಳಲ್ಲಿ ಬೆಳಕು ಕಂಡಿವೆ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಪ್ರಜಾವಾಣಿ ಪತ್ರಿಕೆಯ ದೀಪಾವಳಿ ಶಿಶುಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಶಿವಮೊಗ್ಗ ಕರ್ನಾಟಕ ಸಂಘವು ಮಕ್ಕಳ ಸಾಹಿತ್ಯಕ್ಕೆ ನೀಡುವ ನೇ ಸಾಲಿನ ಡಿ ಸೋಜಾ ಪುರಸ್ಕಾರ ನೇ ಸಾಲಿನ ಅಮ್ಮ ಪುರಸ್ಕಾರ ಇವರಿಗೆ ಸಂದಿವೆ ಇವರ ಪ್ರಕಟಿತ ಮಕ್ಕಳ ಕವಿತಾ ಸಂಕಲನಗಳು ಚೆಲುವ ಚಂದಿರ ಗೋಲಗುಮ್ಮಟ ಹಾಗೂ ಪುಟಾಣಿ ಪ್ರಾಸಗಳು ನಾಯಿಮರಿ ನಾಯಿಮರಿ ತಿಂಡಿಬೇಕೆ ಕಾಗೆಯೊಂದು ಹಾರಿಬಂದು ಅಜ್ಜನ ಕೋಲಿದು ನನ್ನಯ ಕುದುರೆ ಬಾಲ್ಯದಲ್ಲಿ ನಾವೆಲ್ಲ ಹಾಡಿ ನಲಿದ ಗೀತೆಗಳು ಪಠ್ಯದಲ್ಲಿ ಇದ್ದ ಪದ್ಯಗಳೆಲ್ಲವೂ ಬಾಯಿಪಾಠ ವಾಗುತ್ತಿದ್ದವು ಹೀಗೆ ಹಾಡುತ್ತ ಕಲಿತ ಪಾಠಗಳು ಹೃದ್ಗತವಾಗಿದ್ದ ದೀರ್ಘಕಾಲದವರೆಗೂ ನೆನಪಿಡುವುದಕ್ಕೆ ಅವುಗಳಲ್ಲಿನ ಸರಳತೆ ಸಹಜ ಪ್ರಾಸ ಗೇಯತೆ ಮಕ್ಕಳಿಗೆ ಇಷ್ಟವಾಗುವ ವಸ್ತು ವೈವಿಧ್ಯ ಇವೇ ಕಾರಣ ನವ್ಯ ಕನ್ನಡ ಸಾಹಿತ್ಯದ ಆರಂಭದಲ್ಲಿ ಪಂಜೆ ಮಂಗೇಶರಾಯರು ರಾಜರತ್ನಂ ಮುಂತಾದವರು ವಿಪುಲ ಮಕ್ಕಳ ಸಾಹಿತ್ಯ ರಚಿತವಾಗಿತ್ತು ಮುಂದಣ ದಿನಗಳಲ್ಲಿ ಆ ಹರಿವು ವಿರಳವಾಗುತ್ತಾ ಬರುತ್ತಿದೆ ಮತ್ತೆ ಶಿಶುಸಾಹಿತ್ಯದ ಬೆಳೆ ಹುಲುಸಾಗಿ ಸುವ ಪ್ರಯತ್ನಗಳು ನಡೆದಿದ್ದು
ಆ ದಿಕ್ಕಿನಲ್ಲಿ ರಾಜಶೇಖರ ಕುಕ್ಕುಂದಾ ಅವರ ಶಿಶು ಸಾಹಿತ್ಯ ಕೃಷಿ ಗಮನಾರ್ಹ ಹಾಗೂ ಶ್ಲಾಘನೀಯ ಮತ್ತೊಂದು ಅಂಶವೆಂದರೆ ಮನರಂಜನೆ ಹಾಗೂ ಜ್ಞಾನಾರ್ಜನೆಗೆ ಯಥೇಚ್ಛ ವಿಧಾನಗಳಿರುವ ಈ ಯುಗದ ಮಕ್ಕಳ ಬಾಲ್ಯ
ನಮ್ಮ ಬಾಲ್ಯ ಗಳಿಗಿಂತ ವಿಭಿನ್ನ ಹೀಗೆ ಬದಲಾವಣೆಗೊಂಡ ಸಾಮಾಜಿಕ ವ್ಯವಸ್ಥೆಗಳನ್ನು ಗುರಿಯಲ್ಲಿಟ್ಟುಕೊಂಡು ಇಂದಿನ ಮಕ್ಕಳು ತೆರೆದುಕೊಂಡಿರುವ ಪ್ರಪಂಚಕ್ಕೆ ಪರಿಚಿತ ಪರಿಭಾಷೆ ಪರಿಕರಗಳಿಂದ ಕವನ ಕಟ್ಟಿದರೆ ಅವು ಮಕ್ಕಳ ಮನ ಮುಟ್ಟಲು ಸಾಧ್ಯ ಈ ಸವಾಲನ್ನು ಇಲ್ಲಿ ಕವಿಗಳು ಎದುರಿಸಿ ಯಶಸ್ವಿಯಾಗಿದ್ದಾರೆ ಹಾಗಾಗಿಯೇ ಇಲ್ಲಿ ಕಂಡ ಸೋನ್ ಪಪ್ಪಡಿ ಸವಿಯುತ್ತಾ ಲ್ಯಾಪ್ಟಾಪನ್ನು ಉಪಯೋಗಿಸುತ್ತಿದ್ದಾನೆ ಕಾಲಾಂತರದ ಸಮಕಾಲೀನತೆಯ ಸಾಕ್ಷಿಗೆ ಇದು 1ನಿದರ್ಶನ .
ಚಪ್ಪರಿಸುವ ಮುನ್ನ ಎನ್ನುವ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕವಿಗಳು ನಡೆದಿರುವ ಈ ಮಾತು ತುಂಬಾ ಪ್ರಸ್ತುತ ಸಾಹಿತ್ಯ ಯಾರದ್ದೇ ಇರಲಿ ಅದು ಎಷ್ಟೇ ಡಾಣಾಡಂಗುರ ಮಾಡಿ ಪ್ರಚುರಪಡಿಸಿ ರಲ್ಲಿ ಮಕ್ಕಳು ಓದಿ ಖುಷಿಪಟ್ಟು ಎದೆಗಪ್ಪಿಕೊಪ್ಪಿಕೊಳ್ಳದ ಹೊರತು ಅದು ಮಕ್ಕಳ ಸಾಹಿತ್ಯವಾಗುವುದಿಲ್ಲ ಇಪ್ಪತ್ತೈದು ಮಧ್ಯಮ ಪುಟ್ಟಪುಟ್ಟ ಕವನಗಳಲ್ಲಿ ಶೀರ್ಷಿಕೆಯ ಹೆಸರು ಹೊತ್ತ ಸೋನ್ ಪಾಪಡಿ ಮಾತ್ರ ಸ್ವಲ್ಪ ದೀರ್ಘ ಕವನ ತನ್ನ ಸೈಕಲ್ಲನ್ನು
ಬಾಲಮನ ವರ್ಣಿಸುವ ಪರಿ
ಪೆಟ್ರೋಲ್ ಕುಡಿಯೋದಿಲ್ಲ
ಹೊಗೆ ಉಗುಳೋದಿಲ್ಲಯಾರು ಅಡ್ಡ ಬರಬೇಡಿ
ಮೇಲೆ ಬಂದರೆ ಬೈಬೇಡಿ
ಸರಳ ಸುಲಲಿತ ಓಡುವ ಪದ್ಯದ ಕಡೆಯಲ್ಲಿ ಬಾಲ ವಿನೋದ ಮುಗುಳು ನಗೆ ತರಿಸುತ್ತದೆ . ಹಾಗೆಯೇ ಮಳೆಯ ಆಗಮನ ಕೋರುವ “ಮೋಡ ತೇಲಿ ಬರಲಿ” ಕವನ ಯಾವ ಕಾಲಕ್ಕೂ ಮಕ್ಕಳ ಆಸೆ ಯಾದ ಶಾಲೆಯ ಸೂಟಿಯನ್ನು ಬಯಸಿ ನಮ್ಮನ್ನು ಬಾಲ್ಯಕ್ಕೆ ಕೊಂಡೊಯ್ಯುತ್ತದೆ. “ಸ್ಕೂಲೇ ಇರ್ಬಾರ್ದು” ಕವನದ ಆಶಯವೂ ಇದೇ. ಅದರೂ ಕರೋನ ನಿಮಿತ್ತ ಮನೆಯಲ್ಲೇ ಕೂತು ಬಿಟ್ಟಿರುವ ಮಕ್ಕಳು ಈಗ ಶಾಲೆ ಬಾಗಿಲು ತೆರೆಯಲಿ ಎಂದು ಪ್ರಾರ್ಥಿಸ್ತಿದಾರೆ.
“ಔತಣ” ಕವನ ತಲೆಗೆ ಹೇನು ಹತ್ತಿರುವ ಪಾಡನ್ನು ಹಾಸ್ಯಮಯವಾಗಿ ಚಿತ್ರಿಸುತ್ತದೆ . ಹಾಗೆಯೇ ಗುಬ್ಬಿ ಗುಬ್ಬಿ ಕವನವೂ ದ್ವಿರುಕ್ತಿಗಳಿಂದ ಕಂಗೊಳಿಸಿ ಮಕ್ಕಳ ಮನ ಮುದಗೊಳಿಸುತ್ತದೆ.
ಟಿವ್ಟಿವ್ ಅಂತ
ಹಾಡೋದೇನು
ಪುರ್ರ ಪುರ್ರಂತ
ಹಾರೋದೇನು
ಮಕ್ಕಳಿಗೆ ಪ್ರಿಯವಾದ ಆಟವಾಡುವುದನ್ನು ವರ್ಣಿಸುವ “ಅಟಕ್ಹೋಗೋಣ್ವಾ” ಪದ್ಯ ಸುಂದರ . “ಜಾರುಬಂಡೆ” ಕವನದ ಸಾಲುಗಳನ್ನು ನೋಡಿ
ಜಾರುಬಂಡೆ ಜುರುಕ್
ಜಾರುಬಂಡೆ ಚುರುಕ್
ಜರ್ರಂತ ಜಾರುವಾಗ
ಪುರುಕ್ ಪುರುಕ್ ಪುರುಕ್
ಹಾಗೆ ಅಜ್ಜಿ ಮೊಮ್ಮಗನ ಸಂವಾದ ಹಾಸ್ಯದ ಬುಗ್ಗೆ ಉಕ್ಕಿಸಿದರೆ ಚಿಂಟು ಮಾಮಾ ಕವನ ಮಕ್ಕಳ ಮನದ ಭಾವನೆ ಬಿತ್ತರಿಸುತ್ತದೆ.
ಶೀರ್ಷಿಕೆ ಗೀತೆಯಾದ “ಸೋನ್ ಪಾಪಡಿ” ಶಿಶು ಗೀತೆಯಷ್ಟೇ ಆಗದೆ ಮಕ್ಕಳ ದೃಷ್ಟಿಯಲ್ಲಿ ದೊಡ್ಡವರ ವರ್ಣನೆಯಾಗುತ್ತಾ ಸಾಗಿ ಕಡೆಗೆ ಪ್ರಸಕ್ತ ಆನ್ಲೈನ್ ಕಲಿಕೆಗೆ ಬಂದು ನಿಲ್ಲುವ ಪರಿ ವಿಶೇಷ . ಮಗು ತಿನ್ನುವ ಸೋನ್ ಪಾಪಡಿಯನ್ನು ತಂದವರು ಯಾರು ಎಂಬುದನ್ನು ಹೀಗೆ ಕೇಳುತ್ತದೆ
ಸೋನ್ ಪಾಪಡಿ
ಸೋನ್ ಪಾಪಡಿ
ತಂದವರ್ಯಾರು?
ಊರಿನ ಸುದ್ದಿ ಮಾತಾಡೋ ಅಮ್ಮನ ಫ್ರೆಂಡೋ, ಪುರಾಣ ಹೇಳ್ತಾ ಕುಳಿತುಕೊಳ್ಳುವ ಅಪ್ಪನ ಫ್ರೆಂಡೋ, ಹುಬ್ಬು ಏರಿಸಿ ಬರುವ ಅಕ್ಕನ ಫ್ರೆಂಡೋ, ಬೈಕು ಹಿಡಿದು ಸುತ್ತುವ ಅಣ್ಣನ ಫ್ರೆಂಡೋ ಎಂದು ಪ್ರಶ್ನಿಸುತ್ತದೆ
ಸೋನ ಪಾಪಡಿ
ಸೋನ ಪಾಪಡಿ
ತಿಂದವರ್ಯಾರು ?
ತಂದವರು ಯಾರು ಎಂದು ಗೊತ್ತಾಗದಿದ್ದರೂ
ಆನ್ ಲೈನ್ ಪಾಠ
ನಡೀತಿರುವಾಗ
ನಾನೇ ಮತ್ಯಾರು?
ಎಂಬ ಉತ್ತರ ಮಾತ್ರ ಸಿಕ್ಕಿ ಬಿಡುತ್ತದೆ.
ಹೀಗೆ ಎಳೆಮನದ ತುಡಿತ ಕೌತುಕ ಅಪೇಕ್ಷೆಗಳನ್ನು ತುಂಬಾ ಜತನದಿಂದ ಪದಗಳಿಗಿಳಿಸಿರುವ ಇಪ್ಪತ್ತೈದು ಕುಸುಮಗಳ ಹೂ ಹಾರವಿದು. ಸೋನ್ ಪಾಪಡಿಯನ್ನು ಸಣ್ಣ ಚೂರಾಗಿ ಮಾಡಿ ಬಾಯಿಗೆ ಹಾಕಿಕೊಂಡಾಗ ಮೆಲ್ಲನೆ ಅದು ಕರಗಿ ನೀಡುವ ಸವಿಯ ಸ್ವಾದವೇ ಈ ಕವಿತೆಗಳ ಸಾಲು ಸಾಲುಗಳಲ್ಲಿ ಅಡಗಿದೆ. ಹಿರಿಯ ಕವಿ ಡಾಕ್ಟರ್ ಚಿಂತಾಮಣಿ ಕೊಡ್ಲೆಕೆರೆಯವರು ಬೆನ್ನುಡಿಯಲ್ಲಿ ಬರೆದಂತೆ “ಈ ಪದ್ಯಗಳಲ್ಲಿ ಕವಿ ಮಕ್ಕಳ ಮನಸ್ಸಿನಲ್ಲಿ ಹುಟ್ಟುವ ಚಿತ್ರ ವಿಚಿತ್ರ ಕಲ್ಪನೆ ವಿಚಾರಗಳನ್ನು ಅಷ್ಟೇ ರಂಜಕವಾಗಿ ಚಿತ್ರಿಸಿದ್ದಾರೆ. “
ಮಕ್ಕಳಿಗೆ ಪ್ರಿಯವಾದ ಪ್ರಾಸ ಹಾಗೂ ಗೇಯತೆ ಹೊಂದಿರುವ ಈ ಕವನಗಳು ಅಬಾಲವೃದ್ಧರಾದಿಯಾಗಿ ಗುನುಗಿಕೊಳ್ಳುವ ಹಾಗಿವೆ .
ಮಕ್ಕಳ ಸಾಹಿತ್ಯದ ಕೊರತೆ ತಲೆದೋರಿರುವ ಈ ಕಾಲದಲ್ಲಿ ಇಂತಹ ಮತ್ತಷ್ಟು ಶಿಶುಗೀತೆಗಳು ಬಂದು ಮಕ್ಕಳ ಸವಿಗೊರಳ ಹಾರವಾಗಲಿ ಹಾಡಾಗಲಿ ಎಂಬ ಹಾರೈಕೆ . ಸೋನಪಾಪಡಿಯ ಸಿಹಿಯ ಸವಿಯನ್ನು ಕನ್ನಡದ ಮಕ್ಕಳೆಲ್ಲ ಚಪ್ಪರಿಸುವಂತಾಗಲಿ; ನಾಡಿನ ಮಕ್ಕಳ ಮನೆ ಮಾತಾಗಲಿ .
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು
ಪ್ರಕಟಣೆಗಾಗಿ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು.
ಸುಜಾತಾ ರವೀಶ್