ಸಂಗಾತಿ ವಾರ್ಷಿಕ ವಿಶೇಷಾಂಕ

ಸವಿತಾ ಮುದ್ಗಲ್-

ಜಾಲತಾಣಗಳ ಬಳಕೆಯಿಂದ

ಮಹಿಳೆಯರ ಜೀವನದ ದೃಷ್ಟಿಕೋನಗಳು

ಬದಲಾಗಿವೆಯೇ ಹಾಗಿದ್ದರೆ

 ಜಾಲತಾಣಗಳ ಬಳಕೆಯಿಂದ ಮಹಿಳೆಯರ ಜೀವನದ ದೃಷ್ಟಿಕೋನಗಳು ಬದಲಾಗಿವೆಯೇ ಹಾಗಿದ್ದರೆ ಅವು ಧನಾತ್ಮಕವೊ- ಋಣಾತ್ಮಕವೊ

ಧನಾತ್ಮಕವಾಗಿ..

 ಈ ಮೇಲಿನ ವಿಷಯಕ್ಕೆ ತಕ್ಕಂತೆ ಜಾಲತಾಣವೆಂಬುದು ಕಿರಿಯ ವಯಸ್ಸಿನಿಂದ ಹಿಡಿದು ಹಿರಿಯರವರೆಗೂ ಜಾಲತಾಣದ ಸಮೂಹದಲ್ಲಿ ಬಂಧಿಯಾಗಿದ್ದೇವೆ. ಜಾಲತಾಣದ ಸಮೂಹದಲ್ಲಿ ಅನೇಕ ಸಾಹಿತ್ಯದ ಗುಂಪುಗಳು, ಪತ್ರಿಕೆ ರಂಗಗಳು, ಜ್ಞಾನ ವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ರೀತಿಯ ಗುಂಪುಗಳು ತುಂಬಿಕೊಂಡಿವೆ. ಈ ಎಲ್ಲಾ ಗುಂಪುಗಳಲ್ಲಿ ಮಹಿಳೆಯರ ಪ್ರಧಾನ್ಯತೆ ಹೆಚ್ಚಿದೆ ಎನ್ನಬಹುದು. ಗೃಹಿಣಿಯರಿಗೆ ತಮ್ಮ ಅಭಿರುಚಿಗೆ ತಕ್ಕಂತೆ ಸಾಹಿತ್ಯದಲ್ಲಿ, ಸಂಗೀತದಲ್ಲಿ ಹಾಗೂ ಇನ್ನಿತರ ಪ್ರತಿಭೆಗಳು ಅವರಲ್ಲಿ ಅಡಗಿರುವ ಕಾರಣ ಅವರಿಗೆ ಸರಿಯಾದ ವೇದಿಕೆ ಮನೆಯಲ್ಲಿ ಇದ್ದುಕೊಂಡು ಭಾಗವಹಿಸಲು ಸಿಗುವಂತಹ ಒಂದು ವೇದಿಕೆ ಎಂದರೆ ಅದು ಜಾಲತಾಣವೆಂದು ಹೇಳಬಹುದು. ಏಕೆಂದರೆ ಹಲವಾರು ಮಹಿಳೆಯರು ಬರೆಯಬೇಕು ತಮ್ಮ ಮನಸ್ಸಿನ ಭಾವನೆಗಳನ್ನು ಹೊರಹೊಮ್ಮಿಸಲು ಹಲವಾರು ರೀತಿಯಲ್ಲಿ ಹೊರಗಡೆ ಬಂದು ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವಿರುವುದಿಲ್ಲ ಆದರೆ ಇಂಥ ಜಾಲತಾಣಗಳಲ್ಲಿ ಸಿಗುವ ಹಲವಾರು ಸಾಹಿತ್ಯಕ ಗುಂಪುಗಳಲ್ಲಿ ಗೃಹಿಣಿಯರು,ಮಹಿಳೆಯರು ಭಾಗವಹಿಸಿ ತಮ್ಮದೇ ಆದ ಚಾಪನ್ನು ಜಾಲತಾಣಗಳಲ್ಲಿ ಮೂಡಿ ಕವಿಯಿತ್ರಿಯರಾಗಿ ಹೊರಹೊಮ್ಮಿದ್ದಾರೆ. ಎಲ್ಲಾ ರಂಗಗಳಲ್ಲಿ ಇರತಕ್ಕಂತಹ ಅಸಮಾಧಾನ ಗುಂಪುಗಾರಿಕೆ ಸಾಹಿತ್ಯದ ಗುಂಪುಗಳಲ್ಲಿ ಇಲ್ಲ ಎಂದುಕೊಂಡಿದ್ದೆ ಆದರೂ ಇತ್ತೀಚಿಗೆ ಗಮನಿಸಿದಂತೆ ಇಲ್ಲಿಯೂ ಕೂಡ ಹಲವಾರು ಗುಂಪುಗಳು ಸಾಹಿತ್ಯದ ಸೇವೆಯನ್ನು ಮರೆತು ವೈಯಕ್ತಿಕವಾದ ಕಾರಣಕ್ಕೆ ಹಿಂದೇಟು ಹಾಕುತ್ತಲಿವೆ.

 ಜಾಲತಾಣಗಳ ಬಳಕೆಯಿಂದ ಮಹಿಳೆಯರ ಜೀವನದ ದೃಷ್ಟಿಕೋನಗಳು ಅಷ್ಟೇನು ಬದಲಾಗಿಲ್ಲ, ಅವರಿಗೆ ಧಾತ್ಮಕವಾಗಿವೆ ಎಂದು ಹೇಳಲು ಬಯಸುತ್ತೇನೆ.
 ಒಬ್ಬ ವ್ಯಕ್ತಿ ಸರಿಯಾಗಿರಲು ಸರಿಯಾದ ದಾರಿಯಲ್ಲಿ ನಡೆಯುತ್ತಿರುವಾಗ ಅವನಿಗೆ ಈ ಸಾಹಿತ್ಯದ ಗುಂಪುಗಳು ಅವನಿಗೆ ಒಂದು ಅವಕಾಶವನ್ನು ಒದಗಿಸಿ ಕೊಟ್ಟಾಗ ಆ ಒಂದು ಮಹಿಳೆಯರು ಅದನ್ನು ಸದುಪಯೋಗಪಡಿಸಿಕೊಂಡು ಮುಂದೆ ಬಂದಿದ್ದಾರೆ ಎನ್ನಬಹುದು.
 ಮಹಿಳೆಯರಿಗೆ ಧನಾತ್ಮಕವಾಗಿ ಚಿಂತನೆ ಹೆಚ್ಚಿರುವುದರಿಂದ ಅವರು ಜಾಲತಾಣಗಳಲ್ಲಿ ತಮ್ಮ ವೈಯಕ್ತಿಕ ಬದುಕಿಗೆ ತಕ್ಕಂತೆ ಹಾಗೂ ಇನ್ನಿತರ ವಿಷಯಕ್ಕೆ ಸಂಬಂಧಿಸಿದಂತೆ ತುಂಬಾ ಎಚ್ಚರಿಕೆಯಿಂದ ಭಾಗವಹಿಸಿ ಧನಾತ್ಮಕ ಭಾವನೆಯನ್ನು ಹೊಂದಿದ್ದಾರೆ ಎನ್ನಬಹುದು.

 ಜಾಲತಾಣಗಳಲ್ಲಿ ಇತ್ತೀಚಿಗೆ ಮಹಿಳೆಯರು ನಿರ್ಭಯವಾಗಿ ಭಾಗವಹಿಸುವುದು ಹೆಚ್ಚಾಗಿದೆ ಅನ್ನಬಹುದು. ಜಾಲತಾಣಗಳ ಮೂಲಗಳಾದ ಈ ಫೇಸ್ಬುಕ್,ಯೂಟ್ಯೂಬ್, ಹಲವಾರು ಬ್ಲಾಗುಗಳ ಮುಖಾಂತರ ತಮ್ಮ ಬರಹಗಳನ್ನು ಪ್ರಕಟಿಸಿ ಹೆಮ್ಮೆಪಡುತ್ತಿದ್ದಾರೆ.
 ಹಲವಾರು ವರ್ಷಗಳ ಹಿಂದೆ ಈ ರೀತಿಯ ಫೇಸ್ಬುಕ್ ಬಳಕೆಗಳನ್ನು ಮಾಡುವುದು ಕಡಿಮೆ ಪ್ರಮಾಣದಲ್ಲಿ ಮಹಿಳೆಯರಿದ್ದಿಲ್ಲ ಎನ್ನಬಹುದು ಆದರೆ ಕಾಲಕ್ರಮೇಣ ಇದರ ಬಳಕೆ ಹೆಚ್ಚಾಗುತ್ತಾ ಮಹಿಳೆಯರಲ್ಲಿ ಧನಾತ್ಮಕ ಭಾವನೆ ಹೆಚ್ಚಾಗಿದೆ ಎನ್ನಬಹುದು.
 ಎಲ್ಲಾ ಮಹಿಳೆಯರು ಹೊರಗಡೆ ಹೋಗಿ ವೇದಿಕೆಗಳಲ್ಲಿ ಭಾಗವಹಿಸುವುದು ಅವರಿಗಾಗಿ ವೇದಿಕೆ ದೊರೆಯುವುದು ಕಡಿಮೆ ಆದರೆ ಈಜಾಲ ತಾಣಗಳಲ್ಲಿ ಸುಲಭವಾಗಿ ಹಲವಾರು ಸಾಹಿತ್ಯದ ಗುಂಪುಗಳು ಇರೋದ್ರಿಂದ ಅವರಿಗೆ ಒಂದು ಸೂಕ್ತ ವೇದಿಕೆ ಸಿಕ್ಕಿದೆ ಎಂತಲೂ ಅವರು ನಿರ್ಭಯವಾಗಿ ಭಾಗವಹಿಸುವುದರ ಜೊತೆಗೆ ಅವರಿಗೆ ತಕ್ಕ ರೀತಿಯ ಗೌರವೂ ಕೂಡ ಇದರಿಂದ ದೊರೆಯುತ್ತದೆ ಎಂದಾಗ ಮಹಿಳೆಯರಿಗೆ ತಾನಾಗಿಯೇ ಧನಾತ್ಮಕ ಭಾವನೆ ಹೆಚ್ಚಾಗಿದೆ ಎನ್ನಬಹುದು.
 ಈ ಸಾಹಿತ್ಯದ ಗುಂಪುಗಳಲ್ಲಿ ಮಹಿಳೆಯರೇ ನಿರ್ವಹಿಸುತ್ತಿರುವುದು ಹೆಚ್ಚಾಗಿದೆ. ತಮ್ಮ ಮನೆ ಜವಾಬ್ದಾರಿಯ ಜೊತೆಗೆ ಇನ್ನಿತರ ಸಾಹಿತ್ಯದ ಗುಂಪುಗಳಲ್ಲಿ ನಿರ್ವಹಾಕಿಯರಾಗಿ ಪಾಲ್ಗೊಂಡು ಅದರ ಕನ್ನಡದ ಸೇವೆಯನ್ನು ಮಾಡುತ್ತಿರುವುದು ವಿಶೇಷವಾಗಿದೆ.

 ಹಿರಿಯ ಕವಿಗಳ ಪ್ರಕಾರ ಜಾಲಾತಾಣಗಳಲ್ಲಿ ಕವನಗಳನ್ನು ಪ್ರಕಟಿಸುವುದರಿಂದ ಇದರ ಮೌಲ್ಯವು ಕಡಿಮೆಯಾಗಿದೆ ಎನ್ನುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ, ಏಕೆಂದರೆ ಇಲ್ಲಿ ತಮ್ಮ ಭಾವನೆಗಳ ರೂಪವನ್ನು ವ್ಯಕ್ತವಾಗಿ ಬರಹ ರೂಪದಲ್ಲಿ ಪ್ರಕಟಿಸಿ ಆನಂದ ಪಡುವುದರ ತಪ್ಪೇನಿಲ್ಲ. ಒಬ್ಬ ನಿಜವಾದ ಓದುಗಾರನಿದ್ದಾಗ ಬರಹಗಾರರಿಗೆ ತಮ್ಮದೇ ಆದ ಮೌಲ್ಯಗಳು ಇದ್ದೇ ಇರುತ್ತವೆ, ಅವು ಎಂದಿಗೂ ಕ್ಷೀಣಿಸುವುದಿಲ್ಲ.
 ನಿಜವಾದ ಬರಹಗಾರರು ಯಾರೊಬ್ಬರ ಪ್ರೋತ್ಸಾಹಕ್ಕೆ ಮಣಿದು ಬರೆಯುವುದಿಲ್ಲ ಬರಹಗಾರರು ತಮಗೆ ತಮ್ಮದೇ ಆದ ಮೌಲ್ಯದೊಂದಿಗೆ ನಿತ್ಯ ಬರಹದಲ್ಲಿ ತೊಡಗಿಸಿಕೊಂಡವರು ಅನೇಕರಿದ್ದಾರೆ.
 ಜಾಲತಾಣದಲ್ಲಿ ಇತ್ತೀಚಿಗೆ ಹೊಸ ಬರಹಗಾರರು ಕವಿ,ಕವಿಯಿತ್ರಿಗಳು ಅನೇಕರಿದ್ದಾರೆ ಆದರೆ ಗಟ್ಟಿತನದ ಬರಹಗಾರರ ಸಿಗುವುದು ಅಪರೂಪವಾದರೂ ಜಾಲತಾಣಗಳ ಮುಖಾಂತರ ಹಲವಾರು ಮಹಿಳೆಯರಿಗೆ ಇದು ಧನಾತ್ಮಕ ಭಾವನೆಯನ್ನು ತಂದೊಡ್ಡಿದೆ ಎನ್ನಬಹುದು.

ಋಣಾತ್ಮಕವಾಗಿ..

ಮಹಿಳೆಯರಿಗಿಲ್ಲಿ ಒಮ್ಮೊಮ್ಮೆ ಜಾಲತಾಣಗಳಲ್ಲಿ ಭಾಗವಹಿಸೋದು ಅಷ್ಟೇ ಕಷ್ಟವೆನ್ನಬಹುದು ಏಕೆಂದರೆ ಎಲ್ಲರೂ ಇಲ್ಲಿ ಫ್ರೆಂಡ್ ಅಂತ ಲಿಸ್ಟ್ನಲ್ಲಿರೋರೆಲ್ಲ ಪ್ರತಿಶತ 90ರಷ್ಟು ಅಪರಿಚಿತರೆ ತುಂಬಿರುತ್ತಾರೆ. ಹಲವಾರು ಹೆಸರಿನಲ್ಲಿ ಫೇಸ್ಬುಕ್ ಫೇಕ್ ಖಾತೆಯೊಂದಿ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಅನುಚಿತ ವರ್ತನೆ ತೋರುವುದು, ಸುಮ್ಮನೇ hi hello, ಊಟ, ತಿಂಡಿ ಆಯ್ತಾ ಅನ್ನೋದು ಹೀಗೆ ನಾವೇನು ಅವರಿಗೆ ತುಂಬಾ ಗೊತ್ತಿರುವವರೆ ಅಥವಾ ತುಂಬಾ ಆತ್ಮೀಯರೇ ಅನ್ನುವ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡೋದು, ಇನ್ನು ಮೆಸ್ಸಂಜೆರ್ ಮೂಲಕ ನಿತ್ಯ ಮಹಿಳೆಯರಿಗೆ ಮೆಸೇಜ್ ಮಾಡಿ ಕಾಡಿಸೋದು ಇಂತಹ ದುರ್ವರ್ತನೆ ತೋರೋದು ಇಂತಹ ಜಾಲತಾಣಗಳಲ್ಲಿ ವಿಡಿಯೋ ಕಾಲ್ ಮಾಡೋದು, ಬ್ಲಾಕ್ಮೇಲ್ ಮಾಡೋದು ಕೂಡ ಅಷ್ಟೇ ಇವರಿಗೆ ವಸ್ತ್ರವಾಗಿದೆ.
ಮಹಿಳೆ ಎನ್ನುವ ಹೆಸರಿನಿಂದ ಗಂಡು ಮಕ್ಕಳು ಖಾತೆ open ಮಾಡಿ ಮಹಿಳೆಯರಿಗೆ ತೊಂದರೆ ಕೊಡುವುದು ಒಂದು ದೊಡ್ಡ ಗುಂಪು ಇದೆ ಎನ್ನಬಹುದು. ಇಂತಹ ಹಲವಾರು ದುಷ್ಟರ ನಡುವೆ ಗೃಹಿಣಿಯರಿಗೆ ಇದೊಂದು ಸವಾಲು ಎನ್ನುವ ಜೊತೆಗೆ ತಮ್ಮ ಬರಹಗಳ ಮೂಲಕ ಹೊರ ಹೊಮ್ಮವುದು ಒಂದು ಸಾಧನೆ ಎನ್ನಬಹುದು.


ಸವಿತಾ ಮುದ್ಗಲ್

2 thoughts on “

  1. ಸಂಗಾತಿ ಬಳಗದಲ್ಲಿ ಇರುವ ಸಮಸ್ತ ಬರಹಗಾರರಿಗೆ, ಕಾರ್ಯ ನಿರ್ವಹಿಸುತ್ತಿರುವ ಎಲ್ಲರಿಗೂ ಸಿಬ್ಬಂದಿ ವರ್ಗಕ್ಕೂ, ಸಂಗಾತಿ ಸಂಪಾದಕರಿಗು ಸಂಗಾತಿಯ ಐದನೇ ವರ್ಷದ ವಾರ್ಷಿಕೋತ್ಸವದ ಶುಭಾಶಯಗಳು

Leave a Reply

Back To Top