ಡಾ ಡೋ.ನಾ.ವೆಂಕಟೇಶ-ಕಾಯಕ ಋಷಿ

ಸಂಗಾತಿ ವಾರ್ಷಿಕ ವಿಶೇಷ

ಡಾ ಡೋ.ನಾ.ವೆಂಕಟೇಶ-

ಕಾಯಕ ಋಷಿ

ನಾ ಕಂಡ ರೈತ ನೀವು
ತಿಳಿದ ಹಾಗಲ್ಲ!

ಇಷ್ಟ ಬಂದ ತಿನಿಸು ಉಣ್ಣುತ್ತ
ಅಗತ್ಯವಾದ ದಿರಿಸು ಧರಿಸುತ್ತ
ನನ್ನಂತೆ ನಿಮ್ಮಂತೆಯೇ ಇರುವ
ಶ್ರೀಸಾಮಾನ್ಯ!

ಆದರೆ ಅಸಾಮಾನ್ಯ ಈತ
ತಾ ಉಂಡು ನಿಮಗೂ ಬಡಿಸುವಷ್ಟು
ಶ್ರೀಮಂತ

ಅಷ್ಟೇ ಅಲ್ಲ ಬಲು ಧೀಮಂತ
ತನ್ನ
ಬಳಗದ ಮಕ್ಕಳ ಅಗ್ರ
ಪಂಕ್ತಿಯ ಜ಼್ನಾನಾರ್ಜನೆಗೆ
ಸಲಹುವಷ್ಟು ಹೃದಯವಂತ

ಈಗೈದು ದಶಕಗಳ ಮುನ್ನಿನ
ರೈತ ಈಗ
‘ಮೆಟ ಮಾರ್ಫಸಿಸ್’

ಕಂಬಳಿಹುಳ ತೆಗೆದೊಗೆದು
ತನ್ನ ಕಂಬಳಿಯ
ಉಂಬಳಿಯಲ್ಲಿ ಬಂದ
ಮನಮೋಹಕ ದೃಶ್ಯ,
ಸಂಮೋಹಕ ಚಿಟ್ಟೆ

ಆನಂದಿಸು
ಬಲು ಚೆಂದದಿಂದ
ಬಣ್ಣಿಸು ಆ ಕಾಯಕವ
ಆ ಶ್ರಮಜೀವಿಯ ಶ್ರಮವ

ಬಯಸು ಆ ರೈತಾಪಿ ಮನುಜನ
ನಿಷ್ಕಾಮ ಕರ್ಮದ ಧ್ಯೇಯ
ಧನ್ಯ ರೈತನ ಶ್ರೇಯ!

ಧನ್ಯೋಸ್ಮಿ!!


ಡಾ ಡೋ.ನಾ.ವೆಂಕಟೇಶ


4 thoughts on “ಡಾ ಡೋ.ನಾ.ವೆಂಕಟೇಶ-ಕಾಯಕ ಋಷಿ

  1. ನಮ್ಮೆಲ್ಲರಿಗೂ ಆಹಾರವನ್ನು ಒದಗಿಸಲು
    ರೈತರು ಮಾಡುವ ಶ್ರಮದ ಬಗ್ಗೆ ಬಹಳ ಸುಂದರವಾದ ಕವನ. ಅವರ ಸಮರ್ಪಣೆಗೆ ನಾವು ಕೃತಜ್ಞರಾಗಿರಬೇಕು. ಬಹಳ ಅರ್ಥಪೂರ್ಣ ಕವಿತೆ “ಕಾಯಕ ಋಷಿ”

Leave a Reply

Back To Top