ನಾಗರಾಜ ಜಿ. ಎನ್. ಬಾಡ-ಸಾವಿನ ಹೊಸ್ತಿಲಲ್ಲಿ….

ಸಂಗಾತಿ ವಾರ್ಷಿಕ ವಿಶೇ‍ಷಾಂಕ

ನಾಗರಾಜ ಜಿ. ಎನ್. ಬಾಡ

ಸಾವಿನ ಹೊಸ್ತಿಲಲ್ಲಿ….

ನನ್ನ ಕೊನೆಯ ಕ್ಷಣಗಳು ಕಣ್ಣಮುಂದೆ ಕುಳಿತಿದೆ
ಹೋಗುವ ಕಾಲಕ್ಕೆ ಕಣ್ಣೀರು ಬರಿದಾಗಿದೆ
ಸಾವಿನ ಹೊಸ್ತಿಲಲ್ಲಿ ಕುಳಿತು ಈಗಾಗಲೇ ನಾಲ್ಕು ತಿಂಗಳು ಕಳೆದಿದೆ
ವೈದ್ಯರು ಹೇಳಿದಂತೆ ಇನ್ನೂ ಕೆಲವು ದಿನ ವಾರಗಳಷ್ಟೇ ಬಾಕಿ ಉಳಿದಿದೆ
ಸಾವಿಗಾಗಿ ಭಯಪಡುವ ದಿನಗಳು
ದೂರ ಸರಿದು ಹೋಗಿವೆ
ಇರುವಷ್ಟು ಕ್ಷಣಗಳನ್ನು ನೆಮ್ಮದಿಯಿಂದ ಕಳೆಯುವುದು ಅಷ್ಟೇ ಬಾಕಿ ಉಳಿದಿದೆ ಸಾವನ್ನ ನಗುನಗುತ ಅಪ್ಪಿಕೊಳ್ಳಲು ಸಿದ್ಧಗೊಂಡಾಗಿದೆ
ಹತಾಶೆ ನೋವು ಭಯಗಳನ್ನ ಮರೆತು ನಮ್ಮವರ ಕಣ್ಣಲ್ಲಿ ಭರವಸೆಯ ತುಂಬಿ ಸಾಗಬೇಕಿದೆ
ಒಲವಿನ ಜಗದಲ್ಲಿ ಕಳೆದ ಕ್ಷಣಗಳ ಸವಿ ನೆನಪುಗಳು ಎಂದು ಎಂದೆಂದೂ ಮಾಸದಾಗಿದೆ
ನನ್ನ ಕನಸುಗಳೆಲ್ಲ ಕರಗಿ ಹೋಗಿವೆ
ನನ್ನ ಪ್ರೀತಿ ಪಾತ್ರರು ಕೊಟ್ಟ ಒಲವ ಕ್ಷಣಗಳು ಹಾಗೆಯೇ ಉಳಿದಿದೆ
ಪ್ರೀತಿಯೊಂದಿಗೆ ಕಳೆದ ಕ್ಷಣಗಳು ಆವಿಯಾಗಿ ಹೋಗಿದೆ
ಪ್ರೀತಿಯೊಂದಿಗೆ ನಿಮಗೆ ವಿದಾಯ ಹೇಳುವ ಸಮಯ ಹತ್ತಿರ ಬಂದಿದೆ
ಸಾವ ಸೋಲಿಸುವ ಕ್ಷಣಗಳು ಮುಗಿದು ಹೋಗಿದೆ
ನಿಮ್ಮೊಂದಿಗೆ ನನ್ನ ಒಲವ ಪಯಣ ಮುಗಿದಿದೆ
ಎಲ್ಲವನ್ನು ತೊರೆದು ಬೇರೆಯೊಂದು ಲೋಕಕ್ಕೆ ಪಯಣ ಸಾಗಬೇಕಿದೆ
ಪ್ರೀತಿಯ ಉಣ ಬಡಿಸಿದ ನಿಮಗೆ ನನ್ನ ಪ್ರೀತಿಯ ವಂದನೆ
ನೆಮ್ಮದಿಯ ಅಂತಿಮ ಕ್ಷಣಕ್ಕಾಗಿ ನನ್ನಯ ಪ್ರಾರ್ಥನೆ


ನಾಗರಾಜ ಜಿ. ಎನ್. ಬಾಡ


2 thoughts on “ನಾಗರಾಜ ಜಿ. ಎನ್. ಬಾಡ-ಸಾವಿನ ಹೊಸ್ತಿಲಲ್ಲಿ….

  1. ಸಾವು ಅನಿಶ್ಚಿತ ಜೊತೆಗೆ ಅನಿವಾರ್ಯ. ಬದುಕು ಜೀವಿತ. ಉಸಿರು ಆರಾಧಿಸುವ ಜಗವೇ ಜೀವನ. ಅಲ್ಲೊಂದು ಪುಟ್ಟ ನೆಮ್ಮದಿ. ಹೃದಯ ಗೆದ್ದ ಭಾವಗಳೆಲ್ಲಾ ನೆನಪುಗಳು. ಆರಾಧ್ಯವಾಗುವ ಉಸಿರ ಅಂತ್ಯವ ನಾವು ಊಹಿಸುವುದು ಕಷ್ಟ. ಆದರೂ ಅದು ನಿಶ್ಚಿತ. ಬದುಕಿರುವ ಕ್ಷಣಗಳು ಅಮೂಲ್ಯ. ಸಾಲುಗಳೇ ಕಥೆಯ ಹೇಳಿವೆ……….. ಇಲ್ಲಿ….. ಬದುಕುವುದು ಉಸಿರು……. ನೆರಳಾಗಿ, ಉಪಕಾರಿಯಾಗಿ, ಋಣಿಯಾಗಿ…………ಸದಾ….

    1. ಬದುಕು ಅನಿಶ್ಚಿತ… ಸಾವಿನ ಹಾಸಿಗೆಯಲ್ಲಿ ಮಲಗಿರುವ ಒಬ್ಬ ವ್ಯಕ್ತಿಯ ಮನದಲ್ಲಿ ಯಾವ ಭಾವನೆಗಳು ಮೂಡಬಹುದು ಅದನ್ನು ಕಲ್ಪಿಸಿಕೊಂಡು ಬರೆದಿದ್ದೇನೆ …. ಸಾವು ಯಾಕೋ ತುಂಬಾ ಕಾಡುತ್ತೆ….

Leave a Reply

Back To Top