ಅಕ್ಷತಾ ಜಗದೀಶ ಕವಿತೆ-ಮನೆಯಂಗಳದಿ ಗುಬ್ಬಚ್ಚಿ

ಸಂಗಾತಿ ವಾರ್ಷಿಕ ವಿಶೇಷಾಂಕ

ಅಕ್ಷತಾ ಜಗದೀಶ ಕವಿತೆ

ಮನೆಯಂಗಳದಿ ಗುಬ್ಬಚ್ಚಿ

ಮನೆಯಂಗಳದ ಗಿಡದಿ
ಹಬ್ಬಿದ ಲತೆಯ ಮೇಲೆ
ಕುಳಿತೆನ್ನಾ ನೋಡುತ್ತಿರುವ ಓ..
ಮುದ್ದು ಗುಬ್ಬಿ ಮರಿಯೇ
ನಿನಗಿಲ್ಲ ಸಾವಿರ ಚಿಂತೆ
ಪ್ರಸ್ತುತ ದಿನದ ಅರಿವೇ
ನೀ ಸುತ್ತುವ ಸಂತೆ..
ಹಾರುತ್ತಿರುವೆ ಚೆಲುವೆ
ನೀ ಬಯಸಿದಂತೆ…..

ಹಾರುತ್ತಿರುವೆ ತಾ ಬಯಸಿದಂತೆ
ಹಬ್ಬಿದ ಬಳ್ಳಿಯ ಮೇಲೆ ಕುಳಿತು
ತನ್ನ ಬುತ್ತಿಯ ತಾ ಹುಡುಕುವ
ತವಕದಲ್ಲಿ…
ಜಗದ ಪರಿವಿಲ್ಲದೆ ಹಾರಿದೆ
ಸ್ವಚಂದ ಆಕಾಶದಲ್ಲಿ
ಮನಬಿಚ್ಚು ಹಾರಾಡಿದೆ, ತೆಲಾಡಿದೆ
ಆ ನೀಲ ಬಾನಿಗೆ..

ಮನೆಯಂಗಳದ ಓ ಎನ್ನ ಗುಬ್ಬಿ
ರೆಕ್ಕೆ ಬಲಿತ ಮೇಲೆ
ಮತ್ತಷ್ಟು ಮೇಲೆ ಹಾರುವೆ
ಹೊಸತೊಂದು ಬದುಕ ಅರಿಸಿ
ಪ್ರೀತಿಯ ಹೊಸದಾರಿ ಬಯಸಿ..
ಸ್ವತಂತ್ರ ಬದುಕಿನ
ಪ್ರತಿಬಿಂಬ ನೀನು
ಸಾರ್ಥಕ ಬದುಕಿನ
ಅನುಷ್ಠಾನ ನೀನು….


ಅಕ್ಷತಾ ಜಗದೀಶ.

Leave a Reply

Back To Top