ಸುಕುಮಾರ ಕಾಫಿಯಾನ ಗಜ಼ಲ್

ಸಂಗಾತಿ ವಾರ್ಷಿಕ ವಿಶೇಷಾಂಕ

ಸುಕುಮಾರ

ಕಾಫಿಯಾನ ಗಜ಼ಲ್

ಕಣ್ಣಿನ ಭಾಷೆಗಿಂತ ಮನದ ಇಂಗಿತದ ತಂತಿಯನು ಮೀಟಿಬಿಡು
ಹೆಣ್ಣಿನ ನೋಟಕ್ಕಿಂತ ಮಿಡಿದ ಹೃದಯದ ಭಾಷೆಯನು ಅರಿತುಬಿಡು

ಹೊಂಬಣ್ಣದ ಕಾಯದ ಮೆರಗು ಕಾಮನೆಯ ಅಲೆಗಳಿಗೆ ಬಲೆಬೀಸಿದೆ
ಹೊನ್ನಿನ ವರ್ಣಕ್ಕಿಂತ ಕಾಡಿದ ಮೋಹದ ತೃಷೆಯನು ಸವಿದುಬಿಡು

ಸೃಷ್ಠಿಯ ವೃಷ್ಠಿಯನು ಸೆರೆಹಿಡಿದು ಬಂಧಿಸುವ ಹಸ್ತಗಳ ಸ್ಪರ್ಶಿಸು
ಜೇನಿನ ಹನಿಗಿಂತ ಕಾವ್ಯದ ಮಾಧುರ್ಯದ ಖನಿಯನು ಹಿಡಿದುಬಿಡು

ರೋಮ-ರೋಮವು ನಿಮಿರಿ ನಿಂತಿವೆ ಒಲವ ವ್ಯಾಕರಣದ ವ್ಯಾಕುಲಕೆ
ಮಣ್ಣಿನ ಘಮಲಿಗಿಂತ ಕಣದ ಮೊರೆತದ ನುಡಿಯನು ಆಲಿಸಿಬಿಡು

ಹೊಲದ ಮೆತ್ತನೆಯ ಮೆದೆ ಎದೆತುಂಬಿ ಕರೆಯುತ್ತಿದೆ ಮಿಲನಕೆ
ಹುಣ್ಣಿನ ಕಂದರಕ್ಕಿಂತ ಧಣಿದ ದೇಹದ ಗುಣಿಯನು ಮುಚ್ಚಿಬಿಡು


ಸುಕುಮಾರ

2 thoughts on “ಸುಕುಮಾರ ಕಾಫಿಯಾನ ಗಜ಼ಲ್

  1. ಕೊನೆಯಸಾಲು ಅರ್ಥೈಸಿಕೊಳ್ಳದಾದೆ. ಸಾಧ್ಯ ವಾದರೆ/ ಬಿಡುವಾದರೆ ತಿಳಿಸಿ
    9481476302

  2. ನಾವು ಸದಾ ನಮ್ಮ ದೇಹದಲ್ಲಿರುವ ಊನವನ್ನು ಮುಚ್ಚುವುದರಲ್ಲೇ ತಲ್ಲೀನರಾಗಿರುತ್ತೇವೆ ಆದರೇ ನಮ್ಮ ದಣಿದ ದೇಹಕ್ಕೆ, ಮನಸ್ಸಿಗಾದ ಗಾಯವನ್ನು ವಾಸಿ ಮಾಡಿಕೊಳ್ಳಲು ಹೋಗುವುದಿಲ್ಲ, ಅಲ್ಲವೇ?

Leave a Reply

Back To Top