ಅನಿತಾ ಪಿ.ತಾಕೊಡೆ ಕವಿತೆ-ಮರ

ಸಂಗಾತಿ ವಾರ್ಷಿಕ ವಿಶೇಷಾಂಕ

ಅನಿತಾ ಪಿ.ತಾಕೊಡೆ ಕವಿತೆ

ಮರ

ಜೀವನ ಸಂಪ್ರೀತಿಯಲಿ ತೂಗಿ ಬಾಗಿ
ಜೀವ ಭಾವಗಳ ಬೆಸೆದು ಹೊಸೆವ
ಮರ ಮರದ ಹಾಗಿರದೆ
ರೆಂಬೆ ಕೊಂಬೆ ಟಿಸಿಲುಗಳಲಿ ಒಂದೊಂದಾಸೆ

ಮುಂಜಾನೆಯ ಮುಂಬಾಗಿಲಲಿ,
ಬಂಗಾರದೂರಿನೊಡೆಯನ ತೋಳ್ಸೆರೆಯಲಿ
ಕುಡಿಗಣ್ಣ ಬಣ್ಣ ಹಸಿರೆಸಳುಗಳ ಕೂಡಿ
ಮಣಿ ಮಂಜನು ಹೀರಿ ಉಲ್ಲಾಸ ಕೊನರಿ
ಚೆಲುವಾದವು ಮರದ ಚಿಗುರು ಕನಸುಗಳು

ಮುಸ್ಸಂಜೆ ರಾಗಕೆ ಅದರದೇ ಹಾಡು
ಮರಿಹಕ್ಕಿ ರೆಕ್ಕೆ ಬಿಚ್ಚಿದರೆ ಊರುಗೋಲು
ಒಡಲಲಿ ಸೂರು ಕಟ್ಟಿಕೊಂಡವರೆಂದು ಬಂದಾರು?
ನಿಶೆಯ ಜೋಗುಳದಲಿ ಸಂಸಾರ ಸಾರ ಜೀಕುತಿರುವಾಗ
ಅಲ್ಲೊಂದು ನಿರಾಳತೆಯ ಉಸಿರು

ಸುಡುಬಿಸಿಲು ಬಿರುಗಾಳಿ ಜಡಿಮಳೆಗೆ
ಅತಿಯಾಸೆಯ ಕೈಗಳ ಚಡಿಯೇಟಿಗೆ
ಮೈ ಸೆಟೆದು ನಿಂತ ಮರ… ಕುಂದಿಲ್ಲ ಕುಸಿದಿಲ್ಲ

ದಣಿವೆಂದು ಬಳಿ ಬಂದು ನೆರಳಲಿ ನಿಂದು
ಮುಂದಡಿಯಿಟ್ಟ ಮಂದಿ
ಎಷ್ಟು ಕತೆಯನೊರೆದು ಹೋದರೋ
ಸೋಲು ಗೆಲುವು ನೋವು ನಲಿವಿನದು…!
ಹಸಿರು ಮಾಗುತ್ತಲೇ ಇವೆ
ಹಣ್ಣೆಲೆ ಉದುರಿ ಮತ್ತೆ ಚಿಗುರುತ್ತಲೇ ಇವೆ


ಅನಿತಾ ಪಿ.ತಾಕೊಡೆ

10 thoughts on “ಅನಿತಾ ಪಿ.ತಾಕೊಡೆ ಕವಿತೆ-ಮರ

    1. ಮರ ಮರದ ಹಾಗಿರದೆ……ಸುಂದರ ಕವನ ಅನಿತಾ ಅಭಿನಂದನೆಗಳು.

  1. ಸಂಗಾತಿ ವಾರ್ಶಿಕಾ ವಿಶೇಷಾಂಕ ಸುಂದರವಾದ ಕವಿತೆ, ಹಾಗೂ ನೀವು ನಮ್ಮ ಮನಸ್ಸಿಗೆ ಪುನ: ಪುನ: ನೋಡಬೇಕೆನಿಸುವ ನಿಮ್ಮ ಸುಂದರವಾದ ಆ ಧ್ರಶ್ಟಿಕೋನ, ನಿಮಗೆ ದೆವರೇ ನೀಡಿರುವ ಒಂದು ವರ,ಅಭಿನಂದನೆಗಳು ನಿಮಗೆ ಅನಿತರವರೆ, ದೇವರು ನಿಮಗೆ ಸದಾ ಆರೋಗ್ಯಾ ದಯಾ ಪಾಲಿಸಲಿ, ಹಾಗೂ ಆಶೀರ್ವಾಧಿಸಲಿ

  2. Thee *Excellently* curated poetry … much related to livelihoods. .. may learning nurture furtherance ever. .. shubhamh

  3. ನಿಮ್ಮ ಕವಿತೆ “ಮರ” ತುಂಬಾ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು ಅನಿತರವರೆ.
    Adv R.M. Bhandari, Mumbai.

  4. ಹಸಿರು ಸಿರಿಯಂತೇ ಸೊಗಸಾದ ಕವನ! ಅಭಿನಂದನೆ, ಅನಿತಾ.

Leave a Reply

Back To Top