ಹೆಣ್ಣು ಜಗದ ಕಣ್ಣು ಮಮತಾರವೀಶ್ ಪಡ್ಡಂಬೈಲು

ಸಂಗಾತಿ ವಾರ್ಷಿಕ ವಿಶೇಷಾಂಕ

ಮಮತಾರವೀಶ್ ಪಡ್ಡಂಬೈಲು

ಹೆಣ್ಣು ಜಗದ ಕಣ್ಣು

ಹೆಣ್ಣು ಜಗದ ಪ್ರೀತಿಯ ಕಣ್ಣು
ಪ್ರಕೃತಿಯ ರೂಪಕೆ ಇವಳೇ ಹೊನ್ನು
ಆಗಬೇಕಿದೆ ಅವಳ ರಕ್ಷಣೆ ಇಂದು
ಸಾರ್ಥಕ್ಯ ಪಡೆಯುವುದು ಮುಂದು..

ಪ್ರತಿ ಹೆಜ್ಜೆಯಲ್ಲೂ ಸ್ತ್ರೀ ಗೆ ಆರತಿ
ಅವಳೇ ಸರ್ವರ ಬಾಳಿನ ರತಿ
ತೋರುತ ಸಂಸಾರದಲಿ ನಾನಾ ರೂಪ
ಸಲಹುವಳು ಸರ್ವರ ಸಮರೂಪ..

ಸರ್ವರಂಗದಲೂ ಇವಳದೇ ಮೇಲುಗೈ
ಸಾಧನೆಯ ತೋರುತಲಿ ಹಾಕುವರು ಜೈ
ಸ್ತ್ರೀ ಗೆ ಹಾಕುವರು ಅಲ್ಲಲ್ಲಿ ಮಣೆ
ನಡೆಯುತಿದೆ ಅಲ್ಲಲ್ಲಿ ಶೋಷಣೆ..

ಹೆಣ್ಣೆಂದರೆ ಅಬಲೆಯಲ್ಲ ಸಬಲೆ
ಆದರೂ ನಡೆಯುತಿದೆ ನಿತ್ಯ ಕೊಲೆ
ಪ್ರೀತಿ ಪ್ರೇಮ ಬಂಧನದ ಸಂಕೋಲೆ
ಆಗಬೇಕಿದೆ ಪ್ರತಿರಂಗದಲ್ಲೂ ಸಬಲೆ

ಹೆಣ್ಣಿನ ಜನನಕೆ ತಾತ್ಸಾರದ ರೂಪ
ಗಂಡು ಹೆಣ್ಣು ಆಗಬೇಕಿದೆ ಸಮರೂಪ
ಹೆಣ್ಣೆಂದರೆ ಬಣ್ಣ ಹೊನ್ನು ವೈಯ್ಯಾರ
ಇವಳೇ ಸರ್ವಕಾಲಕೂ ಸಾಕ್ಷಾತ್ಕಾರ..

ಸ್ತ್ರೀ ಎಂದರೆ ಪ್ರಕೃತಿಯಂತೆ ಹಸಿರು
ನಿತ್ಯ ತೊಡಿಸ ಬೇಕಿದೆ ಹೂವಿನ ತೇರು
ಹೆಣೆಯಬಾರದು ಅವಳಿಗೆ ಚಾರಿತ್ರ್ಯದ ಬೆಲೆ
ಅರ್ಪಿಸೋಣವೆಂದು ಪೂಜನೀಯ ನೆಲೆ..

ಮಮತಾರವೀಶ್ ಪಡ್ಡಂಬೈಲು

Leave a Reply

Back To Top