ಸಂಗಾತಿ ವಾರ್ಷಿಕ ವಿಶೇಷಾಂಕ
ಡಾ ಸಾವಿತ್ರಿ ಮಹಾದೇವಪ್ಪ
ಬರದ ಮಳೆ
ಬರದ ಮಳೆಗೆ
ಭಾವನೆಗಳೇ
ಸುಟ್ಟು ಕರಕಲಾಗಿ
ಬಾಂಧವ್ಯ ಮರೆತು
ಬೇಯುತ್ತಿದೆ ಜೀವ
ಬಿಕ್ಕುವ ಎದೆಯೊಳಗೆ
ಕರುಣೆಯ ಹೂ ಕುಸುಮ
ಅರಳಲೊಲ್ಲದು
ನೊಂದ ರೈತನ ಕಂಬನಿಯು
ಕಾರ್ಮೋಡವಾಗಿ
ಸುರಿದು ಬೀಳಲೊಲ್ಲದು
ಕಾಯದಲ್ಲಿ ಕಾಯಕ
ಕಲಿಸಿದ ಅಪ್ಪ ಬಸವಣ್ಣನನು
ನೆನೆ ನೆನೆದು ಬಿತ್ತಲಿ ಬೆಳೆ
ಹರುಷ ಉಕ್ಕಿ ಬರಲಿ
ಬಾಳಿಗೆ ಮಳೆ
ಅವನಿಲ್ಲದ ನೆಲೆ ಇಲ್ಲ
ಅವನಿಲ್ಲದೆ ಬೆಳೆ ಇಲ್ಲ
ಸಮ ಸಮಾಜದ
ಅರಿವು ನೈಜ ವಾಗಿರಲಿ
ಪ್ರಾರ್ಥಿಸುವೆನು
ವರುಣದೇವ
ಕಠುಕರೆದೆಯನು ಕರಗಿಸಿ
ಒಮ್ಮೆಸುರಿದು ಬೀಳಲಿ ಭಾವವು
ಮುಂಗಾರಿನ ಗುಡುಗು ಸಿಡಿಲಿನಾವೇಶಕ್ಕೆ
ಭಯಗೊಳ್ಳದಿರಲಿ ತನುವು
——————-,—–
ಡಾ ಸಾವಿತ್ರಿ ಮಹಾದೇವಪ್ಪ