ಎಸ.ಎ.ಮುದ್ದೇಬಿಹಾಳ-“ಏಕೆ ದೂರಾದೆ “

ಕಾವ್ಯ ಸಂಗಾತಿ

ಎಸ.ಎ.ಮುದ್ದೇಬಿಹಾಳ-

“ಏಕೆ ದೂರಾದೆ “

॥೧॥
ಏಕೆ ದೂರಾದೆ
ಸ್ನೇಹ ಸಂಬಂಧದಿಂದ
ಬಿಟ್ಟುಬಿಡಲಾಗದ ಗೆಳೆತನದಿಂದ
ಮಧುರವಾದ ಕ್ಷಣದಿಂದ.
॥೨॥
ನಗುವ ಹಿಂದಿನ ನೂ
ಮೌನದ ಹಿಂದಿನ ಮಾತು
ಕೋಪದ ಹಿಂದಿನ ಪ್ರೀತಿ
ಅರ್ಥ ಮಾಡಿಕೊಳ್ಳುತ್ತಿದ್ದೆ
॥೩॥
ಪ್ರತ್ಯಕ್ಷ ಪರೋಕ್ಷ ಸಹಾಯ ಮಾಡಿದವ ನೇ
ಕರುಣೆ ಸಹನೆ ಹೊಂದಿದವ ನೇ
ಸಜ್ಜನ ವ್ಯಕ್ತಿತ್ವದಿಂದ ನಡೆದವ ನೇ
ಸೋದರತ್ವ ಗುಣ ಹೊಂದಿದವ ನೇ.
॥೪॥
ಹುಡುಕುವ ಪ್ರೀತಿಗಿಂತ
ಸ್ನೇಹವೇ ಚಂದ ಅಂದವ ನೇ
ನಾವು ಕಾಣುವ ಕನಸಿಗಿಂತ
ಕಾಣದಿರುವ ಕಲ್ಪನೆ ಚಂದ ಅಂದವ ನೇ.
॥೫॥
ಬದುಕು ಕಡಿಲಿನಂತೆ
ಬಂದುಹೋಗುವ ಅಲೆಗಳಂತೆ
ಅಪ್ಪಳಿಸಿದ ರಭಸಕ್ಕೆ ನೋ-ನಲಿವು ತಾತ್ಕಾಲಿಕ
ಕೊನೆಗೆ ಶೇಷ ಮಾತ್ರ ಗೆಳೆಯ.
॥೬॥
ಬಡತನ ಶಾಶ್ವತವಲ್ಲ
ಸಿರಿತನ ಶಾಶ್ವತವಲ್ಲ
ನಿನ್ನಲ್ಲಿರುವ ಮಾನವೀಯತೆಯ ಶಾಶ್ವತ
ಸ್ನೇಹವೇ ಸುಂದರ ಕವನ ಗೆಳೆಯ.


ಎಸ.ಎ.ಮುದ್ದೇಬಿಹಾಳ.

6 thoughts on “ಎಸ.ಎ.ಮುದ್ದೇಬಿಹಾಳ-“ಏಕೆ ದೂರಾದೆ “

Leave a Reply

Back To Top