ಮಾರುತೇಶ್ ಮೆದಿಕಿನಾಳ ಕವಿತೆ-ಯಾಕೆ ಬೇಕು ಯುದ್ಧ

ಕಾವ್ಯ ಸಂಗಾತಿ

ಮಾರುತೇಶ್ ಮೆದಿಕಿನಾಳ ಕವಿತೆ

ಯಾಕೆ ಬೇಕು ಯುದ್ಧ

ಯಾಕೆ ಬೇಕು ಈ ಯುದ್ಧ ಮಾನವರ ವಿರುದ್ಧ
ದೇಶ ದೇಶಗಳು ದ್ವೇಷ ಕಾರುತ್ತಿವೆ ತದ್ವಿರುದ್ಧ
ಯಾವ ಸಾಧನೆಗೆ ಈ ಕೆಟ್ಟ ಕ್ರೌರ್ಯ ಪ್ರಮಾದ
ಈ ರಾಕ್ಷಸ ಪ್ರವೃತ್ತಿಗೆ ಇರಲಿ ಪ್ರತಿಯೊಬ್ಬರ ವಿರೋಧ!

ಯಾವ ಪೌರುಷಕ್ಕಾಗಿ ಬೇಕೋ ಬೀಭತ್ಸ ಸಮರ
ಅಮಾನುಷವಾಗಿ ಹತ್ಯೆಗಳಾಗುತ್ತಿವೆ ಬರ್ಬರ
ಮಾರಣಹೋಮ ನಡೆಯುತ್ತಿದೆ ಘನಘೋರ
ಬೇಡೆಲವೋ ಈ ಮನೋವಿಕಾರ ಕೆಟ್ಟಕ್ರೌರ್ಯ!

ರಕ್ಕಸ ಉಗ್ರವಾದ ಅಟ್ಟಹಾಸ ಮೆರೆಯುತ್ತಿದೆ
ಬದುಕಿಬಾಳೋ ಜೀವಗಳ ಕೊಲ್ಲಿ ಕೇಕೆ ಹಾಕುತ್ತಿದೆ
ಅರಿಯದ ಮುಗ್ಧರ ಮಾರಣಹೋಮ ನಡೆದಿದೆ
ಕಂಡು ಕಂಡೂ ವಿಶ್ವಸಂಸ್ಥೆ ಸುಮ್ಮನೆ ಯಾಕಿದೆ!

ದ್ವೇಷ ಶತ್ರುತ್ವ ವೈರತ್ವ ಯಾರಿಗೆ ಬೇಕಾಗಿದೆ
ಶಾಂತಿಪ್ರೀತಿ ಸ್ನೇಹ ವಿಶ್ವಭ್ರಾತೃತ್ವ ಸಾರಬೇಕಿದೆ
ಇರುವಷ್ಟು ದಿನ ವಿವೇಕದಿಂದ ಬದುಕಬೇಕಿದೆ
ಬೇಡ ಸಮರ ಮರಮರ ಮನ ನೋಯುತ್ತಿದೆ!


ಮಾರುತೇಶ್ ಮೆದಿಕಿನಾಳ

Leave a Reply

Back To Top