ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ-
ಗಾಂಧಿ ಮಹಾತ್ಮ
ಗಾಂಧಿ ಎಂಬ ಮಹಾತ್ಮನೀತ
ಸತ್ತ್ಯತೆಯಲಿ ಹುತಾತ್ಮನೀತ//
ನ್ಯಾಯ ನೀತಿ ನಿಷ್ಠೆಗಳ ಕಲಿಸಿಕೊಟ್ಟವ
ದ್ವೇಷ ಅನೀತಿ ಅಹಿಂಸೆಗಳ ಮೆಟ್ಟಿನಿಂತವ
ಮೇಲುಕೀಳುಗಳಾ ಸಹಿಸದೆ ಕಿತ್ತು ಎಸೆದ
ಎಕತೆಯಲಿ ಜಗವ ನೋಡಬಯಸಿದವ//
ಸರಳತೆಯಲಿ ಸರಳರಾಗಿ ಬದುಕು ಕಟ್ಟಿದ
ತ್ಯಾಗ ಸಹಕಾರಗಳ ಬೀಜ ಬಿತ್ತಿದವ
ಮನುಜಮತ ವಿಶ್ವಪಥ ಸಾರಿ ಹೇಳಿದವ
ಶಾಂತಿ ಮಾರ್ಗದಿ ಬ್ರಿಟಿಷರ ಎದೆ ನಡುಗಿಸಿದವ//
ಅಸ್ಪೃಶ್ಯತೆಯ ಅಳಿಸಿಹಾಕಲು ಪಣತೊಟ್ಟವ
ಜಾತಿ ಭೇದ ಮರೆಸಲು ಹಗಲಿರುಳು ದುಡಿದವ
ಉಪವಾಸ ಸತ್ಯಾಗ್ರಹಗಳಲಿ ತೊಡಗಿಸಿದವ
ಬ್ರಿಟಿಷರನು ಶಾಂತದಿ ನಡುರಾತ್ರಿ ಓಡಿಸಿದ//
ಸ್ವಂತ ದುಡಿಮೆ ಸ್ವಯತ್ತತೆಯಲಿ ಮನವಿಟ್ಟವ
ಸಸ್ಯಾಹಾರವೇ ಅತ್ಯುತ್ತಮವೆಂದು ಹೇಳಿದವ
ಭಾರತ ದೇಶದ ಘನತೆಯ ಎತ್ತಿ ಹಿಡಿದವ
ಭಾರತದ ಸಂಸ್ಕೃತಿಯ ಜಗಕೆ ಸಾರಿದವ//
ಕೈಲಿ ಖಡ್ಗ ಹಿಡಿಯದವ ಅನ್ಯಾಯ ಸಹಿಸದವ
ನ್ಯಾಯಕ್ಕಾಗಿ ಉಸಿರನ್ನಿಟ್ಟು ಮರೆಯಾದವ
ಕೆಟ್ಟದ್ದ ಕೇಳದಿರು ನೋಡದಿರು ಮಾಡದಿರು
ಹೆತ್ತ ಭುಮಿಯ ಋಣ ತೀರಿಸುವ ಮಾಗ೯ತೊರಿದವ//
ಡಾ ಅನ್ನಪೂರ್ಣ ಹಿರೇಮಠ