ಕಾವ್ಯ ಸಂಗಾತಿ
ಅಂಬಮ್ಮ ಪ್ರತಾಪ್ ಸಿಂಗ್ ಮಾನ್ವಿ-
ಗಜಲ್
ಮುಳ್ಳುಗಳ ಹಾದಿಯಲಿ ಹೂವುಗಳ ಹಾಸಿದವನು ನನ್ನ ಸಖ
ಒಲವ ಪಯಣದಲಿ ಕೈ ಹಿಡಿದು ನಡೆಸಿದವನು ನನ್ನ ಸಖ
ನಂಬುಗೆಯ ದೋಣಿಯಲಿ ದಡ ಸೇರಿದೆವು ಜೊತೆಯಾಗಿ
ಬದುಕು ಬೆಳಗಲು ವಿಧಿಯೊಂದಿಗೆ ಹೋರಾಟ ಮಾಡಿದವನು ನನ್ನ ಸಖ
ಜೀವಕ್ಕೆ ಜೀವ ಬೆರೆತು ಅದ್ವೈತ ವಾಗಿರುವೆವು ಬಾಳಿನಲಿ
ಪ್ರೇಮದ ಕುಡಿ ಚಿಗುರೊಡೆಯಲು ವ್ರತಗೈದವನು ನನ್ನ ಸಖ
ನಿಶಬ್ದವಾಗಿ ಬಾಳಗೀತೆ ರಚಿಸಿ ಕಿವಿಯಲಿ ಗುನುಗಿದನು ರಾತ್ರಿಯಲಿ
ರಾಗ ಬೆರೆಸಿ ಜಗ ಕೇಳುವಂತೆ ಹಾಡಿದವನು ನನ್ನ ಸಖ
ಜೀವನದಲಿ ಕಹಿಯ ಉಣಿಸದೆ ವನಿತಾನಾಮ ಜಪಿಸಿ ಒಡಲು ತುಂಬಿಸಿಕೊಂಡನು
ಜೇನ ಮಳೆ ಸುರಿಸಿ ಅನುರಾಗ ಸುಧೆಯಲಿ ಮೀಯಿಸಿದವನು ನನ್ನ ಸಖ
ಅಂಬಮ್ಮ ಪ್ರತಾಪ್ ಸಿಂಗ್ ಮಾನ್ವಿ-