ಕಾವ್ಯ ಸಂಗಾತಿ
ನಿತ್ಯ ಜಗನ್ನಾಥ್ ನಾಯ್ಕ್-
ಗುರು ಮಂಜುನಾಥರಿಗೆ
ಜ್ಞಾನದ ಹಸಿವನ್ನು ನೀಗಿಸಿದಿರಿ
ಉತ್ತಮ ಮೌಲ್ಯಗಳನ್ನು ಬೆಳೆಸಿದಿರಿ
ತಿಳಿ ಹೇಳಿ ಬೆನ್ನ ತಟ್ಟಿ ನಿಲ್ಲಿಸಿದಿರಿ
ನನ್ನ ಬದುಕಿಗೆ ಸತ್ಪ್ರೇರಣೆಯಾದಿರಿ
ಸೌಜನ್ಯತೆಯ ಮಾತಿನ ಸ್ನೇಹ ಮೂರ್ತಿ
ಶಾಂತ ಸ್ವಭಾವದ ಸರಳ ಜೀವಿ
ಮಾತಲ್ಲೇ ಗಮನ ಸೆಳೆಯುವ ವಾಗ್ಮಿ
ಅಕ್ಷರಗಳಿಗೆ ಜೀವ ತುಂಬಿದ ನಿರ್ಮಲ ಹೃದಯದವರು
ಶಿರವೆತ್ತಿ ಬದುಕ ಸಾಗಿಸಲು ಕಲಿಸಿ
ಜೀವನ ಎದುರಿಸುವ ಪಾಠವ ಬೋಧಿಸಿ
ಕರುಣಾಮಯಿ ಬಾಳ ರೂಪಿಸಿ
ಆಗಿರುವಿರಿ ಬದುಕಿಗೆ ದಾರಿದೀಪ
ಮಾಡಲು ಅಸಾಧ್ಯ ನಿಮ್ಮ ಗುಣಗಾನ
ಬಾಳಲ್ಲಿ ದೈವ ನೀಡಿದ ದೊಡ್ಡ ಬಹುಮಾನ
ಭವಿಷ್ಯಕ್ಕೆ ಬುನಾದಿ ಹಾಕಿದ
ಗುರು ಮಂಜುನಾಥರಿಗೆ ಕೋಟಿ ಕೋಟಿ ನಮನಗಳು
ನಿತ್ಯ ಜಗನ್ನಾಥ್ ನಾಯ್ಕ್