ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಿದ್ದಲಿಂಗಪ್ಪ ಬೀಳಗಿ

ತನಗಗಳು

೧
ಫಲಾಪೇಕ್ಷೆಯಿಲ್ಲದೆ
ಅರಳುತಿವೆ ಸುಮ
ಜಗದೊಳಾವುದಿಲ್ಲ
ತಾಯಿ ತ್ಯಾಗಕೆ ಸಮ
೨
ನಾ ಮೇಲಿನವನೆಂದು
ಮಾಡಬೇಡ ಧಿಮಾಕ
ಇದ್ದಾರೆ ಭುವಿಯಲ್ಲಿ
ನಿನಗಿಂತ ಅಧಿಕ
೩
ವಿಶ್ರಾಂತಿ ಇಲ್ಲವದು
ಲೋಕ ವ್ಯವಹಾರಕೆ
ಎಲ್ಲವೂ ಆಗುತಿದೆ
ಈಗ ಕಲಬೆರಿಕೆ
೪
ಆತ್ಮರತಿ ರೋಗಕೆ
ಇಲ್ಲ ಯಾವುದೇ ಮದ್ದು
ಅಪಹಾಸ್ಯಕ್ಕೀಡಾಯ್ತು
ಅರೆಗೊಡದ ಸದ್ದು
೫
ಏನೆಲ್ಲ ಪಡೆಯಲು
ಎಲ್ಲರದೂ ಧಾವಂತ
ಯಾಂತ್ರಿಕ ಬದುಕಲಿ
ನೆಮ್ಮದಿಯು ಕ್ಷಣಿಕ


ಸಿದ್ದಲಿಂಗಪ್ಪ ಬೀಳಗಿ.ಹುನಗುಂದ

About The Author

Leave a Reply

You cannot copy content of this page

Scroll to Top