ಮಾಜಾನ್ ಮಸ್ಕಿ-ಗಜಲ್

ಕಾವ್ಯಸಂಗಾತಿ

ಮಾಜಾನ್ ಮಸ್ಕಿ

ಗಜಲ್

ಹೃದಯ ಬಡಿತ ಮಿಡಿದೈತಿ ನಿನ್ನ ಹೆಜ್ಜಿ ಸಪ್ಪಳಕ
ನವಿಲಿನಂಗ ಜೀವ ಕುಣಿದೈತಿ ನಿನ್ನ ಹೆಜ್ಜಿ ಸಪ್ಪಳಕ

ಸೋತ ಆಸೆಗಳನು ಚತುರತೆಯೊಳಗ ಪಳಗಿಸಿದೆ
ಸವಿ ನೆನಪುಗಳ ಸಿಹಿ ಸವಿದೈತಿ ನಿನ್ನ ಹೆಜ್ಜಿ ಸಪ್ಪಳಕ

ವರುಷಗಳ ಉರುಳ್ಯಾವ ನಿನ್ನಗಲಿಕೆಯ ಬಾಧೆಯಲ್ಲಿ
ತುಂತುರು ಹನಿಗೆ ತನು ನೆನಿದೈತಿ ನಿನ್ನ ಹೆಜ್ಜಿ ಸಪ್ಪಳಕ

ನಿನ್ನ ನಗು ಚೆಲ್ಯಾದ ನನ್ನೊಳಗ ಪೌರ್ಣಿಮೆ ಬೆಳದಿಂಗಳು
ಮಾರಿಮ್ಯಾಲೆ ಅಮವಾಸ್ಯೆ ಕಳೆದೈತಿ ನಿನ್ನ ಹೆಜ್ಜಿ ಸಪ್ಪಳಕ

ಒಣಹುಲ್ಲು ಹಸಿರಾಗೈತಿ ನೀನು ಬರೋ ಹಾದ್ಯಾಗ
ಒಲವಿನಲ್ಲಿ “ಮಾಜಾ”ಳ ಮನ ಕಾದೈತಿ ನಿನ್ನ ಹೆಜ್ಜಿ ಸಪ್ಪಳಕ


ಮಾಜಾನ್ ಮಸ್ಕಿ

Leave a Reply

Back To Top