ಇಂದಿರಾ ಮೋಟೆಬೆನ್ನೂರ ಕವಿತೆ-
ಮತ್ತೆ ಹಾಡಿತು ಕೋಗಿಲೆ
ಬಹು ದಿನದ ನಂತರ
ಮತ್ತೆ ಹಾಡಿತು ಮಾಮರದಿ
ಕೋಗಿಲೆ ಒಂದು
ಕುಹೂ ಕುಹೂ
ಇಂಚರದಿ ಮೈ ಮನದಿ
ಮಿಂಚ ಸಂಚಾರ ತಂದು..
ಮೌನದ ಮೊರೆ
ಹೊಕ್ಕ ಕೋಗಿಲೆ ಮನದುಂಬಿ
ಮತ್ತುಲಿಯಿತು ಇಂದು
ವಸಂತ ಋತು ಗಾನ
ತಳಿರ ಪ್ರೀತಿಗೆ
ಮನಸೋತು ತಾನಿಂದು…
ಕಾಯುತ್ತಿತ್ತು ಮಾಮರ
ಕೋಗಿಲೆ ಸಿರಿ ಕಂಠ
ಇಂಪ ತಂಪಿಗೆಂದು
ಎತ್ತಣ ಮಾಮರ
ಎತ್ತಣ ಕೋಗಿಲೆ
ಬಿಡಿಸಲಾಗದ ಭಾವಬಂಧ ಸಿಂಧು..
ಕುಕಿಲ ಗಾನ ಮಾಮರ
ತೊರೆಯಲಾಗದ
ಅನುಬಂಧ ಪ್ರೀತಿ ಗಂಧ ಮಿಂದು…
ಯುಗದ ನಂತರ ಸೊಗದಿ
ಮೂಡಿ ಕವನ ಮುದದಿ
ಮನದ ಕದವ ತೆರೆಯಿತಿಂದು
ಇಂದಿರಾ ಮೋಟೆಬೆನ್ನೂರ.