ಕಥಾ ಸಂಗಾತಿ
ಅವಾಂಛಿತ
ತೆಲುಗು ಮೂಲ: ದೇಶರಾಜು ರವಿಕುಮಾರ್
ಅನುವಾದ :ಕೋಡೀಹಳ್ಳಿ ಮುರಳೀಮೋಹನ್
ಅವಾಂಛಿತ
ತೆಲುಗು – ದೇಶರಾಜುರವಿಕುಮಾರ್
ಕನ್ನಡಅನುವಾದ – ಕೋಡೀಹಳ್ಳಿಮುರಳೀಮೋಹನ್
ಛೀ..ಕೊಂಪದಲ್ಲಿ ಅಳಲು ನನಗೆ ಸ್ವಲ್ಪವೂ ಸ್ವಾತಂತ್ರ್ಯವಿಲ್ಲ..’ ತನ್ನ ನೈಟಿಯನ್ನು ಹೆಗಲ ಮೇಲಿಂದ ಮೇಲಕ್ಕೆ ಎಳೆದು ಕೊಂಡು, ತಲೆಬಗ್ಗಿಸಿ ಕೆನ್ನೆಯಮೇಲಿನ ಕಣ್ಣೀರನ್ನು ಒರೆಸುತ್ತಾ ಗೊಣಗಿದಳು.
ತಿಂದ ಟಿಫಿನ್ ಪ್ಲೇಟನ್ನು ಸಿಂಕ್ ನಲ್ಲಿಟ್ಟು ಕೈತೊಳೆದು ಹಿಂದೆ ತಿರುಗಿದಳು.
ಹಿಂದೆ ಬಂದಿದ್ದ ಅವನು ಅವಳು ಗೊಣಗುವುದನ್ನು ಕೇಳಿದನು.
ಅದು ಅವಳಿಗೆ ತಿಳಿಯುವ ಹಾಗೆ ತಟ್ಟೆಯನ್ನು ಸಿಂಕ್ ನಲ್ಲಿ ಬಿಸರಿ ಕೈ ತೊಳೆದುಕೊಂಡು ಅವಳೆಡೆಗೆ ಒಂದು ಚುಟುಕು ನೋಟ ಬೀರಿದ.
ಅವನ ನೋಟದ ತಾಪದಿಂದ ತಪ್ಪಿಸಿ ಕೊಳ್ಳಲು ಅವಳು ಮುಖ ತಿರುಗಿಸಿದಳು. ಅವನು ಹೋದನಂತರ, ಅವಳು ಹ್ಯಾಂಗರ್‌ನಿಂದ ನ್ಯಾಪ್ಕಿನ್ನನ್ನು ತೆಗೆದು ಕೊಂಡು ಭಾರವಾದ ನಿಟ್ಟುಸಿರಿನೊಂದಿಗೆ ತನ್ನ ಕೈಯನ್ನು ಒರೆಸಿದಳು.
ಯೋಚಿಸುತ್ತಾ ಕಾಫಿ ಮಾಡಲು ಮುಂದು ವರಿಸಿದಳು.
ಅವಳಿಗೆ ಈ ಹತಾಶೆಗಳು ಮಾಮೂಲು.
ಅದು ಸಾಮಾನ್ಯವಾಗುವ ಮೊದಲು ಅವಳು ತುಂಬಾ ನರ್ವಸ್ ಆಗುತ್ತಿದ್ದಳು. ಅವನ ತತ್ತ್ವವನ್ನು ತಿಳಿದರೂ ಅವಳಿಗೆ ತನ್ನ ಕಣ್ಣೀರನ್ನು ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಬರೀಸಾವು, ಖಾಯಿಲೆಗಳಲ್ಲ… ಅವರ ಇವರ ಕಷ್ಟಗಳನ್ನು ಕೇಳಿದಾಗಲೂ ಅವಳ ಕಣ್ಣಲ್ಲಿ ನೀರು ತುಂಬುತಿತ್ತು.
‘ಈಕೆಯ ಮನಸ್ಸು ತುಂಬಾ ಸೂಕ್ಷ್ಮ’ ಎನ್ನುತ್ತಾರೆ ಅವಳ ಸಂಬಂಧಿಕರು.
ಅಷ್ಟೇ ಆದರೇ ಹೋಗಲಿ ಬಿಡು ಎಂದು ಅವನು ಸುಮ್ಮನಾಗುತ್ತಿದ್ದ.
ಆದರೇ ನಿಜ ಜೀವನದ ಸಂದರ್ಭಗಳಲ್ಲಿ ಮಾತ್ರವಲ್ಲ, ಚಲನ ಚಿತ್ರಗಳಲ್ಲಿಯೂ ದುಃಖದ ದೃಶ್ಯಗಳನ್ನು ನೋಡಿದಾಗಲೂ ಅವಳ ಕಣ್ಣಲ್ಲಿ ಮುಂಗಾರು ಮಳೆ ದಟ್ಟವಾಗಿರುತಿತ್ತು. ಕೊನೆಗೆ ಟಿವಿ ಧಾರಾವಾಹಿಗಳು ನೋಡುವ ಸಮಯದಲ್ಲೂ ಅವಳು ಮೂಗು ಒರೆಸುವುದು ನೋಡಿ “ಮನೆಯಲ್ಲಿ ಯಾರೋ ಸತ್ತಿರವಂತೇ ಯಾಕೆ ಆ ಅಳುವು? ” ಎಂದು ಅವನು ಜೋರಾಗಿ ಕೂಗುತ್ತಿದ್ದ.
ಅದನ್ನು ಕೇಳಿ ಅವಳಿಗೆ ಅಳುವು ಜಾಗದಲ್ಲಿ ಕೋಪ ಬರುತ್ತಿತ್ತು.
“ನನ್ನ ಅಳು.. ನನ್ನಿಷ್ಟ. ನಿನಗೇನು…” ಎಂದು ಬೇಗಬೇಗವಾಗಿ ಹೊರಟು ಹೋಗುತ್ತಿದ್ದಳು.
ಈ ಕೋಪತಾಪಗಳು ಬಿಟ್ಟರೆ ಉಳಿದೆಲ್ಲ ವಿಷಯಗಳಲ್ಲಿ ಇಬ್ಬರೂ ಚೆನ್ನಾಗಿರುತ್ತಾರೆ.
ಇಬ್ಬರೂ ಸರ್ಕಾರಿ ಉದ್ಯೋಗಿಗಳು. ಇನ್‌ಕ್ರಿಮೆಂಟ್‌ಗಳು, ಅವುಗಳ ಪರಿಣಾಮಕಾರಿ ದಿನಾಂಕಗಳು, ತೆರಿಗೆ ಕಡಿತಗಳು ಇತ್ಯಾದಿಗಳಂತಹ ಸಣ್ಣ ಸಮಸ್ಯೆಗಳು ಅವರ ಸಂಬಳದಲ್ಲಿ ಕೆಲವೊಮ್ಮೆ ಒಬ್ಬೊಬ್ಬರಿಗೆ ಮೇಲುಗೈ ನೀಡುತ್ತದೆ. ಇಲ್ಲದಿದ್ದರೆ, ಎರಡೂ ವೇತನಗಳು ಸ್ವಲ್ಪ ಹೆಚ್ಚುಕಮ್ಮಿ ಸಮಾನವಾಗಿರುತ್ತದೆ. ಈಗ ಎಲ್ಲರಿಗೂ ಇದ್ದಹಾಗೆ ನಗರದ ಆ ಬದಿಯಲ್ಲಿ ಒಂದು ಪ್ಲಾಟ್ ಮತ್ತು ಈ ಭಾಗದಲ್ಲಿ ಒಂದು ಪ್ಲಾಟಿದೆ.
ಅವರು ವಾಸಿಸುವ ಫ್ಲಾಟ್ಕೂಡ ಬಹಳ ಸುಸಂಬದ್ಧ ಮತ್ತು ಸುಂದರವಾಗಿರುತ್ತದೆ. ಅದುಕೂಡ ಅವರದೇ. ಎಲ್ಲಿ ಮತ್ತು ಯಾವಾಗ ಏನನ್ನು ಖರೀದಿಸಬೇಕು ಎಂಬುದು ಮಾತ್ರವೇ ಅಲ್ಲ, ಮನೆಯನ್ನು ಅಲಂಕರಿಸು ವಾಗಲೂ ಇಬ್ಬರೂ ಪರಸ್ಪರರ ಅಭಿಪ್ರಾಯಗಳಿಗೆ ಬೆಲೆ ಕೊಡುತ್ತಾರೆ. ಆದರೆ, ಅವನ ಅಭಿಪ್ರಾಯಗಳಿಗೆ ಸ್ವಲ್ಪ ಬೆಲೆ ಹೆಚ್ಚು.
ಅವಳ ಅಳುವು ಒಂದೇ ಅವರ ನಡುವಿನ ಸಮಸ್ಯೆ- ಅಂದರೆ, ಅಲ್ಲ ಅಂತ ಹೇಳ ಬಹುದು.
ಇನ್ನೂ ಒಂದು ಇದೆ. ಆದರೆ, ಅವಳಿಗೆ ಅಂತಹ ಅಪೇಕ್ಷೆ ಇದೆ ಎಂದು ಅವನಿಗೆ ತಿಳಿದಿಲ್ಲ.
ಹೆಂಗಸರಿಗೆ ಇಂಥದ್ದೊಂದು ಆಸೆ ಇರುತ್ತದೆ ಎಂದು ಊಹಿಸಲು ಯಾರಿಗೂ ಸಾಧ್ಯವಿಲ್ಲ.
ಹೆಂಗಸರಿಗೆ ಒಡವೆ, ಸೀರೆ ಮತ್ತು ಅಲಂಕಾರಗಳನ್ನು ಬಿಟ್ಟು ಯಾವುದೇ ವೈಯಕ್ತಿಕ ಆಸೆ ಇಲ್ಲ ಎಂದು ಅನೇಕ ಹೆಂಗಸರೇ ಭಾವಿಸುತ್ತಾರೆ. ಹಾಗಾದರಿಂದ ಆ ಪುರುಷಪುಂಗವನ್ನು ಅನುಕೊಂಡು ಏನು ಪ್ರಯೋಜನ ಎಂದು ನಿಟ್ಟುಸಿರು ಬಿಡುತ್ತಾಳೆ.
ಕೆಲವು ಆಸೆಗಳು ಅಷ್ಟೇ, ನೀವು ಯಾರಿಗೂ ಹೇಳಲು ಸಾಧ್ಯವಿಲ್ಲ.
ತಮ್ಮನ್ನು ತಾವು ಪೂರೈಸಿಕೊಳ್ಳುವ ಬಯಕೆ ಇತರರಿಗೆ ಹುಚ್ಚುತನದಂತೆ ಕಾಣಿಸಬಹುದು. ಮೇಲ್ನೋಟಕ್ಕೆ ಆಧುನಿಕತೆಯ ಹೊರತಾಗಿ ಮನದಲ್ಲಿ ಸೌಂದರ್ಯ ಕಳೆದು ಕೊಂಡವರು ‘ಅದೇನು ಬೇಡಿಕೆ, ಅವತಾರ ಅಲ್ಲದಿದ್ದರೇ…’ ಎನ್ನಬಹುದು.
ಅದಕ್ಕೇ ‘ಆ ವಿಷಯವನ್ನು ಯಾರೇನಾದರೂ ಬಾಯಿ ತೆರೆದು ಹೇಗೆ ಹೇಳಬಹುದು?’’ ಎಂದು ಆಲೋಚಿಸುತ್ತಿದ್ದಾಳೆ. ಆದರೆ, ಮನಸ್ಸು ವಿರೋಧಿಸುತ್ತಲೇ ಇರುತ್ತದೆ.
ಈ ವಿಚಾರದಲ್ಲಿ ಅವಳ ದುಃಖಕ್ಕೆ ‘ಪ್ರತ್ಯಕ್ಷ’ ಹೊಣೆಗಾರನಲ್ಲದಿದ್ದರೂ ಪರೋಕ್ಷವಾಗಿ ಅವನೇ ಕಾರಣ ಎನ್ನುವುದನ್ನು ಹೇಳಬೇಕಾಗಿಲ್ಲ.
ಏಕೆಂದರೆ, ಆ ಆಸೆಯನ್ನು ಅವಳು ಈಡೇರಿಸಿ ಕೊಳ್ಳಲಾಗದೆ ಸದಾ ಅವನು ಆ ಕೋಣೆಯಲ್ಲಿಯೇ ಇರುತ್ತಾನೆ. ಹೋಗಲಿ, ಇನ್ನೊಂದು ಕೋಣೆಯಲ್ಲಿ ಎ.ಸಿ ರಿಪೇರಿ ಮಾಡುಸಿತ್ತಾನೆಯೇ ಅಂದರೇ ಅದೂ ಇಲ್ಲ. ಮಕ್ಕಳಿದ್ದಾಗ ಆ ರೂಮು, ಅದರಲ್ಲಿರುವ ಎ.ಸಿ. ಬಳಸುತ್ತಿದ್ದರು. ಓದಲು ಬೇರೆ ಊರುಗಳಿಗೆ ಹೋದಾಗ.. ರೂಮು, ಎಸಿ ಎರಡೂ ಉಪಯೋಗ ದಲ್ಲಿಲ್ಲ.
“ಅದನ್ನು ರಿಪೇರಿ ಮಾಡಿಸಬಾರದೇ?” ಅವಳು ಒಮ್ಮೆ ಕೇಳಿದಳು.
ಅವನು ಆಶ್ಚರ್ಯದಿಂದ ಅವಳತ್ತ ನೋಡಿ, “ಇರುವುದು ಇಬ್ಬರೇ, ಎರಡೆರಡು ಕೋಣೆಯಲ್ಲಿ ಏಸಿ ಏಕೆ?”
ಅವಳಿಗೆ ಏನು ಉತ್ತರಿಸ ಬೇಕೆಂದು ತಿಳಿಯಲಿಲ್ಲ.
“ನೀನು ಮಾತ್ರ ತಂಪಾಗಿ ಕೋಣೆಯಲ್ಲಿ ಕೂತುರಿತ್ತೀಯಾ ನಾವು ಮಾತ್ರ ಬೆವರಿಳಿಸಿ ಸಾಯಬೇಕೇ?” ಎಂದು ಅವಳಿಗೆ ಬಾಯಿ ತೆರೆಯಲಾಗ ಲಿಲ್ಲ.
ಅವಳು ಕಾಫಿಲೋಟ ಹಿಡಿದು ಹಾಲ್‌ಗೆ ಬಂದಳು. ಹಾಲ್‌ನಲ್ಲಿದ್ದ ಫ್ಯಾನಿನ ಗಾಳಿ ಬೀಸಿದ ತಕ್ಷಣ ಅವಳಿಗೆ ಜೀವಬಂದಂತಾಯಿತು. ಇಂತಹ ಸಮಯದಲ್ಲಿ ಎ.ಸಿ.ಯ ಗಾಳಿ ಇಡೀ ದೇಹಕ್ಕೆ ತಗುಲಿದರೆ. ಆಕಲ್ಪನೆಗೆ ಅವಳ ಮನಸ್ಸು ನಡುಗಿತು. ಅಸಲೇ ಬೇಸಿಗೆ, ಅಲ್ಲದೇ ಮೇಲಿನ್ನಲಿರುವ ಫ್ಲಾಟ್. ಜೊತೆಗೆ, ಅಡುಗೆ ಮನೆದ ಬಿಸಿ. ಹತ್ತು ನಿಮಿಷ ಇದ್ದರೆ ಸಾಕು ಸ್ನಾನ ಮಾಡಿದಂತೆ ಬೆವರು ಸುರಿತ್ತಾಯಿದೆ.
ತನ್ನ ಮುಖದ ಬೆವರನ್ನು ನೈಟಿಯ ಕೈಗಳಿಗೆ ಒರೆಸಿ ಅವನಿಗಾಗಿ ನೋಡಿದಳು. ಅವನು ಬೆಡ್ರೂಮ್ ನಲ್ಲಿ ಎ.ಸಿ.ಯನ್ನು ‘ಎಂಜಾಯ್’ ಮಾಡುತ್ತಿದ್ದಾನೆ ಎಂದು ಅವಳಿಗೆ ತಿಳಿಯುತು. ಒಂದು ಎರಡುಸಲ ಕರೆದಳು. ಆದರೆ, ಒಳಗಿನಿಂದ ಉತ್ತರ ಬರಲಿಲ್ಲ.
ಅನಿವಾರ್ಯವಾಗಿ ಬೆಡ್ರೂಮ್ ಬಾಗಿಲನ್ನು ತಟ್ಟಿದಳು. ಸಾಮಾನ್ಯವಾಗಿ ಅವನು ಕೋಣೆಯಲ್ಲಿದ್ದರೆ ಅವಳು ಹಠಾತ್ತಾಗಿ ಒಳಗೆ ಹೋಗುವುದಿಲ್ಲ. ಯಾಕೆಂದರೆ ಅಲ್ಲಿನ ದೃಶ್ಯ ಏನು ಎಂಬುದು ಅವಳಿಗೆ ಗೊತ್ತು.
ಆದರೆ ಎರಡು ಮೂರು ಬಾರಿ ಕರೆ ಮಾಡಿದರೂ ಬರದಿದ್ದಾಗ, ಕಾಫಿ ತಣ್ಣಗಾದರೆ ಅಡುಗೆಮನೆಗೆ ಹೋಗಿ ಬೆವರು ಸುರಿಸಿ ಮತ್ತೆ ಕಾಯಿಸುವುದು ನೆನಪಾಗಿ ಬೆಡ್ರೂಮಿನ ಬಾಗಿಲು ತೆರೆಯ ಬೇಕಾಗಿ ಬಂತು.
ಅವಳು ಬಾಗಿಲು ತೆರೆದು ಒಳಗೆ ನೋಡದೆ “ಕಾಫಿ” ಎಂದಳು.
ಹಾಗಾದರೂ, ಅವನು ಕಾಣಿಸಿಕೊಂಡ. ಬೆಡ್‌ಗೆ ಅಡ್ಡವಾಗಿ ಮಲಗಿದ್ದವನು ದಿಗ್ಭ್ರಮೆಗೊಂಡು ಎದ್ದು.. ತನ್ನ ಲುಂಗಿಯನ್ನು ಸರಿಮಾಡಿಕೊಂಡ.” ಹೀಗೆಕೊಡು”ಎಂದ.
ಅವಳು ಕಾಫಿ ಲೋಟ ತೆಗೆದು ಕೊಂಡು ಅವನ ಕೈಗಿಟ್ಟು ಹಿಂತಿರುಗಿ ನೋಡದೆ ಹೊರಗೆ ಬಂದಳು.
“ಅದೃಷ್ಟವಂತ” ಮನದಲ್ಲೇ ಅವನನ್ನುನಿಂದಿಸಿದಳು.
‘ಹಾಗೆ ಏಸಿಯ ತಂಪು ದೇಹವೆಲ್ಲಾ ತಗುಲು ವಂತೆ ಒಂದುಸಲ ಆಗಲಿ ಮಲಗಿ ಉರುಳಿದರೆ..’ ಅಂದುಕೊಂಡಳು.
ಅಷ್ಟರಲ್ಲೇ, “ಅವನನ್ನು ಅನ್ಕೊಂಡು ಏನು ಪ್ರಯೋಜನ? ನನಗೆ ಧೈರ್ಯವಿಲ್ಲ. ನಾನೊಬ್ಬ ಹೇಡಿ” ಎಂದು ತನ್ನನ್ನುತಾನೇ ಬೈದುಕೊಂಡಳು.
ಅವನಿಲ್ಲ ದಾಗವಾದರೂ ತನ್ನನ್ನು ‘ಹಾಗೆ’ ನೋಡುವ ಕಾತರ. ಈವಯಸ್ಸಿ ನಲ್ಲೂ ಆಕಲ್ಪನೆ ಬಂದರೆ ಅವಳ ಕಾಲು, ಕೈಗಳು ಆಡುವುದಿಲ್ಲ. ಈಗಕೂಡ ಅಷ್ಟೆ.
ಯವ್ವನ ಬಂದಿರುವ ಹೊಸದಲ್ಲಿ ಅಂತ ಆಸೆ ಇದ್ದರೂ ಆಗ ಅಟ್ಯಾಚ್ಡ್ ಬಾತ್ ರೂಂಗಲಿರಳಿಲ್ಲ. ತರಾತುರಿ ಯಲ್ಲಿ ಎರಡು ತೊಂಬಿಗೆ ನೀರು ಸುರಿದು ಓಡುವುದೇ . ಅಷ್ಟರ ಒಳಗೆ ಅಮ್ಮ ಹೊರಗಿನಿಂದ ‘ಬೇಗಬಾ’ ಎಂದು ಎರಡೆರಡುಬಾರಿ ಕೂಗುತ್ತಿದ್ದಳು. ಕನ್ನಡಿಗಳ ಬಗ್ಗೆ ಹೇಳಬೇಕಾಗಿಲ್ಲ. ತಲೆಬಾಚಲು ಮತ್ತು ಸುಂದರಗೊಳಿಸಲು ಕಟ್ಟಿಗೆಯಕನ್ನಡಿ ಮಾತ್ರ ಇತ್ತು.
ಹೊಸದಾಗಿ ಮದುವೆಯಾದ ಸಮಯದಲ್ಲಿ ಒಮ್ಮೆ ಹೋಟೆಲ್‌ನಲ್ಲಿ ಇಳಿದುಕೊಂಡಿದ್ದರು.
ಎಂದಿನಂತೆ ಗಬಗಬ ಸ್ನಾನ ಮುಗಿಸಿ ಟವೆಲ್ ತೆಗೆದುಕೊಂಡಾಗ ಕನ್ನಡಿಯಲ್ಲಿ ತನ್ನಎದೆಯ ತನಕ ಕಾಣಿಸಿತ್ತು. ಅಷ್ಟೇ, ಒಮ್ಮೆಲೇ ಹೆದರಿತ್ತು. ಯಾರೋ ಅಪರಿಚಿತರ ಕಣ್ಣಿಗೆ ಬಿದ್ದವರಂತೆ ದೇಹದಲ್ಲಿ ಒಂದೇ ನಡುಗು. ಸಂಜೆಯಾದರೂ ಮರೆಯಲಾಗಲಿಲ್ಲ.
ಈಗ ಮನೆಯೆಲ್ಲ ಕನ್ನಡಿಗಳಿವೆ. ಬಾತ್ರೂಮಿನಲ್ಲಿ ಬಸ್ಟ್ ಗಾತ್ರದ ಕನ್ನಡಿ, ಬೆಡ್ರೂಮಿನಲ್ಲಿ ಫುಲ್ ಸೈಜ್ ಕನ್ನಡಿಗಳು ಇವೆ. ಅವನೊಂದಿಗೆ ಸಂತೋಷದ ಕ್ಷಣಗಳಲ್ಲಿ ಬೆಡ್ ಬಲ್ಬಿನ ಬೆಳಕಿನಲ್ಲಿ ಗುಟ್ಟಾಗಿ, ಸಂಕೋಚವಾಗಿ ತನ್ನನ್ನು ನೋಡುತಿದ್ದಳು.
ಈ ಅನುಭವಗಳಿಂದಲೇ ಎಸಿಯ ತಂಪನ್ನು ಮೈಮೇಲೆ ಹೊದ್ದಿಸುಕೊಳ್ಳುವ ಆಸೆಹುಟ್ಟಿತೋ ಎಂಬ ಅನುಮಾನ ಅವಳಿಗೆ. ಅವಳ ಸುಪ್ತ ಆಸೆಯು ಕೆಲವೊಮ್ಮೆ ಚಿಗುರೊಡೆಯಲು ಅವನೇಕಾರಣ. ಅವನು ಎಂಜಾಯ್ ಮಾಡುತ್ತಿದ್ದಾನೆ ಎಂದು ಗೊತ್ತಾದಾಗಲೆಲ್ಲ ಅವಳಿಗೆ ತಾನು ಖುಷಿ ಪಡದೇ ಇರುವುದು ನೆನಪಿಗೆ ಬರುತ್ತದೆ.
“ಅವನಿಗಿರುವ ಸ್ವಾತಂತ್ರ್ಯ ನನಗೆ ಯಾಕೆ ಇಲ್ಲ? ನನ್ನ ದೇಹವನ್ನು ಏಕೆ ತೃಪ್ತಿಯಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ? ನಾನು ನನ್ನದೇಹಕ್ಕೆ ಹಂಬಲಿಸುವ ನಾಜೂಕಾದ ಪ್ರತಿಕ್ರಿಯೆಗಳನ್ನು ಏಕೆ ನೀಡಲು ಸಾಧ್ಯವಿಲ್ಲ? ಎಲ್ಲವೂ ಪ್ರಶ್ನೆಗಳೇ. ಯಾರನ್ನೂ ಕೇಳಲಾಗದ ಪ್ರಶ್ನೆಗಳು” ಯೋಚಿಸುತ್ತಾ ತಲೆ ಬಿಸಿ ಹತ್ತಿದೆ.
ಕುಡಿದ ಕಾಫಿಯ ಲೋಟವನ್ನು ಹಣೆಯ ಮೇಲೆ ಇಟ್ಟುಕೊಂಡು, ಕಣ್ಣುಮುಚ್ಚಿ ಕೋಪವನ್ನು ತಣಿಸಿ ಕೊಳ್ಳುತ್ತಾ..’ನನಗೇನು ಕಡಿಮೆ? ಶಿಕ್ಷಣ, ಸಂಪಾದನೆ… ಎಲ್ಲವೂ ಇದೆ. ಆದರೆ..ಅನುಭವಿಸುವ ಯೋಗವಿಲ್ಲ’ ಎಂದು ಯೋಚಿಸಿ ನಿಟ್ಟುಸಿರು ಬಿಟ್ಟಳು.
ಫೋನ್ ರಿಂಗಾಯಿತು, ಅವಳನ್ನು ತನ್ನ ಆಲೋಚನೆಗಳಿಂದ ಹೊರ ಹಾಕಿತು. ಇದು ಅವಳ ತಂಗಿಯಿಂದ ಬಂದಿರುವ ಫೋನ್.
“ಹೇಳು. ಡ್ರೆಸ್ಗಳು ಬಂದಿವೆಯೇ? ಫೋಟೋಗಳು ಇಡು ” ಎಂದಳು.
“ಅದಕ್ಕಾಗೆ ಕರೆ ಮಾಡಿದೆ. ಅವುಗಳು ಬಂದಿವೆ, ಆದರೆ ಇನ್ನೂ ತೆಗೆದು ಕೊಂಡಿಲ್ಲ, ”ಎಂದು ತಂಗಿ ಹೇಳಿದರು.
“ಅದ್ಯಾಕೆ?”
“ಬೇರೇನೂ ಅಲ್ಲ, ಅವನುಡ್ರೆ ಸ್‌ಗಳನ್ನು ತಂದನು. ಆದರೆ ಅವನ ಹತ್ತಿರ ಚಿಲ್ಲರೆ ಇಲ್ಲವಂತೆ. ನನ್ನ ಬಳಿ ಎಲ್ಲಾ ಐನೂರರ ನೋಟು ಗಳಿವೆ. ಅವನೇನೋ ಎಸ.ಎಂ.ಎಸ. ಕಳುಹಿಸುತ್ತೇನೆ, QR ಕೋಡ್ ಕೊಡುತ್ತೇನೆ, ಸ್ಕಾನ್ ಮಾಡಿ ಎನ್ನುತ್ತಾನೆ. ನನಗೆ ಅದೆಲ್ಲ ಗೊತ್ತಿಲ್ಲ. ನಿನ್ನ ನಂಬರನ್ನು ಆತನಿಗೆ ತಿಳಿಸುತ್ತೇನೆ. ಸ್ವಲ್ಪ ಪೇ ಮಾಡೇ. ಆ ಮೇಲೆ ಕೊಡುತ್ತೇನೆ” ಎಂದು ತಂಗಿ ಗಬಗಬ ಹೇಳಿದಳು.
“ನಾನು ಎಷ್ಟುಬಾರಿ ಹೇಳಿದರೂ ಗೂಗಲ್ ಪೇ ಅಥವಾ ಫೋನ್ ಪೇ ಇಕ್ಕೋದಿಲ್ಲ. ಸರಿ ಕಳುಹಿಸು. ನಾನು ಪಾವತಿ ಮಾಡುತ್ತೇನೆ,” ಅವಳು ಹೇಳಿದಳು.
“ಅವೆಲ್ಲ ನನ್ನ ಫೋನ್‌ನಲ್ಲಿ ಇದ್ದರೆ, ನಾನು ಅನಗತ್ಯವಾಗಿ ಹಣವನ್ನು ಕಳೆದು ಕೊಳ್ಳುತ್ತೇನೆ ಎಂದು ನಮ್ಮವರ ಅನುಮಾನ ” ಎಂದು ತಂಗಿ ಹೇಳಿದಳು. ಅದು ಸುಳ್ಳೆಂದು ಇಬ್ಬರಿಗೂ ಗೊತ್ತಿತ್ತು.
“ಗೂಗಲ್ ಪೇ ಮತ್ತು ಫೋನ್ ಪೇ ಕೂಡ ಕೊಟ್ಟರೆ ಹೆಂಡತಿನ ಕಂಟ್ರೋಲ್ ಮಾಡುವುದು ಕಷ್ಟ ಅಂತ ಅವನ ಭಾವನೆ. ಇಲ್ಲದಿದ್ದರೆ ಮೋಸ ಹೋಗಲು ನನ್ನ ತಂಗಿ ಏನಾದರು ಮೂರ್ಖಳೆ?” ಎಂದು ಮನದಲ್ಲಿ ಅನುಕುಂದಳು.
“ಏನೇ? ನೀನು ಏನು ಮಾತನಾಡುತ್ತೀಲ್ಲ? ಯಾಕೆ ಇಷ್ಟು ಯೋಚನೆ ಮಾಡುತ್ತಿದ್ದೀಯಾ?” ಎಂದಳು ತಂಗಿ.
ಅದರೊಂದಿಗೆ ಅವಳು ಮತ್ತೆ ಮಾತನಾಡ ತೊಡಗಿದಳು.
“ಹೋಗಲಿ ಒಂದು ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳೇ. ಆನ್ ಲೈನ್ ಪೇಮೆಂಟುಗಳು ಸುಲಭವಾಗಿ ಮಾಡ ಬಹುದು” ಎಂದಳು.
“ಯಾಕೇಳೇ. ನನಗಿದೇ ಸುಲಭ. ಕ್ರೆಡಿಟ್ ಕಾರ್ಡ್ ಆದರೂ , ಬಿಲ್ ಕಟ್ಟುವ ಸಮಯದಲ್ಲಿ ಎಂದು ನೂರಾತೊಂಬತ್ತು ಪ್ರಶ್ನೆಗಳನ್ನು ಕೇಳಿ ಪ್ರಾಣ ತೆಗೆಯುತ್ತಾನೆ. ನಿಮ್ಮ ಯಜಮಾನರಾದರೆ ನಿನ್ನ ಕಣ್ಣಲ್ಲಿ ನೀರು ತುಂಬುವದು ನೋಡಲಾರ, ಆದರೆ ನಮ್ಮವರು ಹಾಗಲ್ಲ. ಆದರೂ ನಿನಗೇನಾದರೂ ಹೊಸತೇ?” ತಂಗಿ ಎಂದಳು.
ಹೌದು ನಿಜ. ಕೆಲಸ ಮಾಡುತ್ತಿದ್ದರೂ ಅವಳ ಹತ್ತಿರ ಎಟಿಎಂ ಕಾರ್ಡ್ ಇಲ್ಲ. ಅವಕಾಶ ಸಿಕ್ಕಾಗಲೆಲ್ಲಾ ಅವಳ ಗಂಡ ಅವಳ ಖಾತೆ ಯಿಂದಲೇ ತಿಂಗಳಿಗೆ ಬೇಕಾಗುವಷ್ಟು ಹಣ ತೆಗೆಯುತ್ತಾನೆ. ಅದನ್ನೇ ಬಳಸು ಬೇಕು .ಬೇಕಿದ್ದರೆ ಕೊಡುವುದಿಲ್ಲ ವೆಂದಲ್ಲ, ತನ್ನ ದುಡ್ಡಿಗಾಗಿ ಭಿಕ್ಷೆ ಬೇಡಬೇಕೆನ್ನುವ ‘ಇರ್ರಿಟೇಶನ್’ ಅವಳಂತಹ ಪರಿಸ್ಥಿತಿ ಯಲ್ಲಿ ಸಿಕ್ಕಿದವರಿಗೆ ಮಾತ್ರ ಅರ್ಥವಾಗುತ್ತದೆ.
“ಈ ಗಂಡಂದಿರು ಹೆಂಡತಿಯರ ಮೇಲೆ ಏನೋ ಒಂದು ರೀತಿಯ ಅಧಿಕಾರ ಚಲಾಯಿಸ ಬೇಕಂತ ನೋಡುತ್ತಾರೆ..” ಎಂದು ಯೋಚಿಸುತ್ತಾ ಟಿವಿಯತ್ತ ಗಮನ ಹರಿಸಿದಳು.
ಯೋಚನೆ ಯಲ್ಲಿರುವಾಗಲೇ ’ಮತ್ತೆ ಟ್ಯಾಪ್ ತೆರೆದಿದ್ದೀಯಾ’ ಎಂದು ಹಾಲ್‌ಗೆ ಬರುತ್ತಲೇ ಕೇಳಿದ.
“ನನಗೆ ಇನ್ನೇನು ಕೆಲಸ ವಿಲ್ಲ ಮತ್ತೆ ,” ಎಂದು ಅವಳು ಎದ್ದು ಫೋನ್ಹಿಡಿದು ಕೊಂಡು ಬಿರುಸಾಗಿ ಅಡುಗೆಮನೆಗೆ ಹೋದಳು.
ಅಕ್ಕಪಕ್ಕ ದವರ ಹುಳಿ ರುಚಿಯಂತೆ ಎದುರು ಮನೆಯವರ ಗಂಡ ಎಲ್ಲರಿಗೂ ಒಳ್ಳೆಯುವನಂತೆ ಕಾಣುತ್ತಾನೆ.
‘ನೀನು ಕಣ್ಣೀರು ಸುರಿಸಿದರೆ ನಿಮ್ಮ ಯಜಮಾನರು ತಡೆಯಲಾರೆ ’ಎಂದು ಎಲ್ಲರೂ ಹೊಗಳುತ್ತಾರೆ.
ಆದರೆ ಅವನು ಆ ನೆಪದಲ್ಲಿ ಚಲಾಯಿಸುವ ಅಧಿಕಾರದ ಬಗ್ಗೆ ಅವರಲ್ಲಿ ಯಾರಿಗೂ ತಿಳಿದಿಲ್ಲ. ಈ ಅಳುವ ಕಾದಾಟ ಈಗಿನದಲ್ಲ.
ಅಪ್ಪ-ಅಮ್ಮ ನನ್ನುಬಿಟ್ಟು ಅವನ ಜೊತೆ ಬರುವಾಗ ಅಳುತ್ತಿದ್ದರೆ ”ಗಂಡನೊಂದಿಗೆ ಕಾಪುರಕ್ಕೆ ಬಂದರೆ ಸಂತೋಷ ವಾಗಿರ ಬೇಕಾಗಲಿ, ಅಳುತ್ತಾರೆ ?” ಅವನ ಪ್ರಶ್ನೆಗೆ ಏನುಉತ್ತರಿಸಬೇಕೆಂದು ತೋಚದೆ ಅವಳ ದುಃಖದ ನಡುವೆಯೂ ನಗು ಉಕ್ಕಿದಳು.
ಅಂದಿನಿಂದ ಪ್ರತಿ ಕಣ್ಣೀರಿನ ಸಂದರ್ಭದಲ್ಲೂ ಅವನ ಪ್ರಶ್ನೆಗಳಿಗೆ ನಗಲು, ಅಳಲು ಸಾಧ್ಯವಾಗದ ಅವಳ ಅವಸ್ಥೆ ಬೇರೆಯವರಿಗೂ ಅರ್ಥವಾಗುತ್ತಿರಲಿಲ್ಲ.
ಅಜ್ಜಿ ಹೋದರು ಎಂದು ತಾಯಿನವರು ಫೋನ್ನಲ್ಲಿ ತಿಳಿಸಿದಾಗ ಅಳುತ್ತಿದ್ದರೆ-
“ಮುದುಕಿ ಎಷ್ಟುಕಾಲ ಉಳಿಯುತ್ತದೆ? ನಾವು ಮಾತ್ರ ಶಾಶ್ವತವಾಗಿ ಉಳಿಯುತ್ತೇವೆ ಎಂದು ನೀನು ಭಾವಿಸುತ್ತೀಯಾ ? ಯಾರೊಂದಿಗೂ ಮಾಡಿಸಿಕೊಳ್ಳದೆ ಕೈ ಕಾಲುಗಳು ಚೆನ್ನಾಗಿ ಇರುವಾಗಲೇ ಹೋದಳು. ಸಂತೋಷವಾಗಿ ಇಲ್ಲದೆ ಏಕೆ ಅಳುವುದು ?” ಎಂದ.
ಮಗಳು ದೊಡ್ಡವಳಾಗಿದ್ದರೆ.. ಎಲ್ಲ ಮುನ್ನೆಚ್ಚರಿಕೆಗಳನ್ನು ಹೇಳಿ ಮೊದಲ ದಿನಶಾಲೆಗೆ ಕಳುಹಿಸಿದಾಗ ಅವಳ ಕಣ್ಣುಗಳು ತೇವಗೊಂಡವು.
ಆಗ “ಇದು ಸಹಜ ವಿಷಯ, ಇದಕ್ಕೂ ಅಳಬೇಕಾ?” ಎಂದನು.
ಸಿನಿಮಾ ಮತ್ತು ಧಾರಾವಾಹಿಗಳು ನೋಡುತ್ತಿದ್ದಾಗ ಅದರಲ್ಲಿ ಲೀನವಾಗುತ್ತಾಳೆ.
ಅವಳು ಭಾವನೆಗಳನ್ನು ನಿಗ್ರಹಿ ಸಲ್ಲ. ಅವನು ಕೋಪಿಸಿ ಕೊಳ್ಳದೇ ಇರುವುದಿಲ್ಲ.
ಅಲ್ಲಿಗೂ ಅವಳು ತನಗೆ ಗೊತ್ತಿರುವ ರೀತಿಯಲ್ಲಿ ಹೇಳಲು ಪ್ರಯತ್ನಿಸಿದಳು.
“ನಕ್ಕರೂ ಅಥವಾ ಅಳಿದರೂ, ಕಣ್ಣೀರೇ ಬರುತ್ತದೆ ಅಂತಾರೆ ” ಆದಾಗ್ಯೂ, ಒಳ್ಳೆಯ ಅಥವಾ ಕೆಟ್ಟದ್ದಕ್ಕೆ ಪ್ರತಿಕ್ರಿಯಿಸದ ನಾವು ಕಲ್ಲುಗಳಾ? ಮನುಷ್ಯರಲ್ಲವೇ ” ಎಂದಳುಒಮ್ಮೆ.
“ಆ ಸಿನಿಮಾದ ಡೈಲಾಗುಗಳು ನನ್ನ ಹತ್ತಿರ ಮಾತನಾಡ ಬೇಡ. ಹಣಕ್ಕಾಗಿ ಏನು ಬೇಕಾದರೂ ಬರೆಯುತ್ತಾರೆ. ಆದರೂ ಎಲ್ಲದಕ್ಕೂ ಅಳುವ ಮುಖ ಹಾಕಿದರೆ ಹೇಗೆ?” ಎಂದ.
“ಎಲ್ಲದಕ್ಕೂ ಎಲ್ಲಿದೆ? ಕೆಲವೊಮ್ಮೆ ಮನಸ್ಸು ಭಾರವಾದಂತಾಗುತ್ತದೆ. ಕೆಲವೊಮ್ಮೆಕಣ್ಣುಗಳು ತೇವವಾಗುತ್ತವೆ. ಕೆಲವೊಮ್ಮೆ ನನಗೆ ಅಳಲು ಅನಿಸುತ್ತದೆ.ಆದಾಗ್ಯೂ, ಅಳಿದಾಗ ನಮಗೆ ಎಷ್ಟು ಸಮಾಧಾನವಾಗುತ್ತದೆ ಎಂದು ತಿಳಿದಿದೆಯೇ?”ಅಳುವುದು ಕೂಡ ಒಂದು ಆಶೀರ್ವಾದ” ಎಂದು ಅವಳು ಹೇಳಿದಳು.
ಅಷ್ಟು ವಿವರವಾಗಿ ಹೇಳಲು ಅವಳಿಗೆ ಮುಜುಗರ ವಾಯಿತು.
ಅದ್ಯಾವುದಕ್ಕೂ ತಲೆ ಕೆಡಿಸಿ ಕೊಳ್ಳದವನಂತೆ ವ್ಯಂಗ್ಯವಾಗಿ “ಅಳುವುಗಳಲ್ಲಿ ಇಷ್ಟು ರಕಗಳು ಇದೆಯಾ?” ಎಂದು ತೆಗೆದು ಹಾಕಿದನು.
‘ಇಂತಹ ಚಿಕ್ಕಚಿಕ್ಕ ಭಾವೆದ್ವೇಗಗಳನ್ನೇ ನಿಯಂತ್ರಿಸುವವನು, ತನ್ನ ಮನದೊಳಗಿನ ಅಸಲು ಆಸೆಗಳನ್ನು ಹೊರಪೆಡಿಸಿದರೆ ಇನ್ನೇನಾದರೂ ಇದೆಯಾ?’ ಅಂದುಕೊಂಡಳು.
“ಎಲ್ಲದಕ್ಕೂ ಅಳುತ್ತಿಯಾ ಅಳುತ್ತಿಯಾ ಅಂತ ನನ್ನನ್ನು ಅಳುವಂತೆ ಮಾಡುತ್ತಿದ್ದೀಯಾ. ನಾಳೆ ನೀನು ಸತ್ತರೆ.. ಅಳುವುದಿಲ್ಲ ನೋಡು” ಎಂದು ಕೋಪದಿಂದ ಕಿರಿಚಿದಳು.
ಅವನು ತುಂಬಾ ಸರಳವಾಗಿ, “ನಾನು ಸತ್ತಮೇಲೆ ನೀನು ಅಳುವುದು ಹೇಗೆ ನೋಡಲಿ ” ಎಂದು ಸಣ್ಣ ನಗುವಿನೊಂದಿಗೆ ಹೊರಟನು.
ಅವನ ಪ್ರತಿಕ್ರಿಯೆ ಬೆಂಕಿಗೆ ಆಜ್ಯವನ್ನು ಮಾತ್ರವಲ್ಲದೆ ಗಾಳಿಯನ್ನೂ ಸೇರಿಸಿದಂತೆ ಅವಳು ತೂಗಾಡಿದಳು.
“ನೋಡುತ್ತಿರು, ನಾನು ನಿಜವಾಗಿಯೂ ಅಳವುದಿಲ್ಲ” ಎಂದು ಅವಳು ಕೂಗಿದಳು.
ಕೆಲವು ವರ್ಷಗಳನಂತರ ಆ ದಿನ ಬಂದೇಬಿಡಿತು.
ಆ ಕ್ಷಣದಲ್ಲಿ ತಾನು ಮಾಡಿದ ಪ್ರತಿಜ್ಞೆ ಅವಳಿಗೆ ನಿಜವಾಗಿಯೂ ನೆನಪಿರಲಿಲ್ಲ.
ಆದರೆ ಆಸಂದರ್ಭದಲ್ಲಿ ಅವಳಿಗೆ ಏತಕ್ಕೋ ಅಳುವು ಬರಲಿಲ್ಲ. ವಯಸ್ಸು ತಂದ ನಿರ್ಲಿಪ್ತತೆ, ಅನಿರೀಕ್ಷಿತ ಆಘಾತದಲ್ಲಿ ದುಃಖ ಅವಳಿಂದ ಮೂಡಲಿಲ್ಲ.
ಅವನ ಪಾರ್ಥಿವ ಶರೀರ ದ್ವಾರದ ಹೊರಗಿನ ಕಾರಿಡಾರ್‌ನಲ್ಲಿದೆ. ಅವಳು ಬಾಗಿಲಿನ ಒಳಗಿನ ಕುರ್ಚಿಯಲ್ಲಿ ಶಾಂತವಾಗಿ ಕುಳಿತಿದ್ದಾಳೆ. ಒಳ್ಳೆ ಬೇಸಿಗೆಕಾಲ..ಹಗಲು ರಾತ್ರಿ ಒಂದೇ ತಾಪ. ಯಾರೋ ಬಕೆಟ್ ನೀರು ಸುರಿದಂತೆ ಸುರಿದಂತೆ ಬೆವರು. ಅವಳೂ ಆಕುರ್ಚಿಯಲ್ಲಿ ಕುಳಿತು ಬೆವರಿಗೆ ಒದ್ದೆಯಾಗುತ್ತಿದ್ದಾಳೆ. ರಾತ್ರಿಯಲ್ಲಿ ಮಧ್ಯ ಮಧ್ಯ ಬೀಸುತ್ತಿದ್ದ ಗಾಳಿ ಅವಳನ್ನು ತಣ್ಣಗಾಗಿಸುತ್ತಿತ್ತು.
ವಿಷಯ ತಿಳಿದ ತಕ್ಷಣ ಮೊದಲು ಊರಿನಲ್ಲೇ ಇದ್ದ ತಂಗಿ ಬಂದಳು. ಆಕೆ ಗಂಡ ಜೊತೆ ಮಾತಾಡಿದನಂತರ ಮಾಡಬೇಕಾದ ವ್ಯವಸ್ಥೆ ನೋಡುತ್ತಿದ್ದಾಳೆ. ಒಂದು ಮಗು ತಡರಾತ್ರಿ ಮತ್ತು ಒಂದು ಬೆಳಗಾದನಂತರ ಬಂದಿತು. ಅಕ್ಕಪಕ್ಕದ ಜನರು, ನಗರದಲ್ಲಿ ಸಂಬಂಧಿಕರು ಒಬ್ಬೊಬ್ಬರಾಗಿ ಬರುತ್ತಿದ್ದಾರೆ.
ಎಲ್ಲರೂ ಬರುತ್ತಿದ್ದಂತೆ ತಂಗಿ, ಮಕ್ಕಳು ಬಂದು ಅವಳನ್ನ ಬಲವಂತವಾಗಿ ಎಬ್ಬಿಸಿದರು.
“ಒಳಗೆಹೋಗಿ ಆ ನೈಟಿ ಬದಲಾಯಿಸಿ ಸೀರೆ ಕಟ್ಟಿಕೊ. ಎಲ್ಲರೂ ಬರುತ್ತಿದ್ದಾರೆ” ಎಂದಳುತಂಗಿ. ಅದೂ ಅಲ್ಲದೆ ಅವಳ ಕೈಹಿಡಿದು ಬೆಡ್ರೂಮಿಗೆ ಕರೆದುಕೊಂಡು ಹೋದಳು. ಮಗಳು ಕಬೋರ್ಡ್ನಿಂದ ಸೀರೆ ಮತ್ತು ಬಟ್ಟೆಗಳನ್ನು ತೆಗೆದು ಹಾಸಿಗೆಯ ಮೇಲೆ ಇಟ್ಟು ಬಾಗಿಲು ಮುಚ್ಚಿ ಹೊರಗೆ ಹೋದಳು.
ಏರ್ ಕಂಡಿಷನರ್ ಯಿಡೀರಾತ್ರಿ ಆನ್ ಆಗಿರುವಂತೆ ತೋರುತ್ತಿದೆ. ಕೊಠಡಿ ತಣ್ಣಗಾಗಿ ನಡುಕು ಬರುತ್ತಿದೆ. ಬೆವರಿನಿಂದ ಅವಳು ಬಿಸಿ ಯಾಗಿರ ಬಹುದೇನೋ.. ತಂಪು ಮೆಲ್ಲಮೆಲ್ಲಗೆ ಅವಳ ಮೈಮೇಲೆಲ್ಲ ಹರಿದಾಡುತ್ತಿದೆ.
ಸೀರೆ ತೆಗೆದು ಕೊಳ್ಳುತ್ತಾ ನೈಟಿಬಿಚ್ಚಿದಳು. ಇದ್ದಕ್ಕಿದ್ದಂತೆ ತಣ್ಣನೆಯ ಎಸಿಗಾಳಿ ಎಲ್ಲೆಲ್ಲೋ ಒದ್ದೆಯಾಯಿತು. ಅವಳು ಮಳೆಯಲ್ಲಿ ಕೊಂಬೆಯಂತೆ ನಡುಗಿದಳು. ಅವಳಲ್ಲಿ ರೋಮಾಂಚನ ಮೂಡಿತು.
ಭಾವನೆಗಳು ಉತ್ತುಂಗಕ್ಕೇರಿದವು. ವ್ರತ ಭಂಗವಾಗುತ್ತಿತ್ತೋ, ಬಹುಕಾಲದ ಆಸೆಯೂ ಹೀಗೆ ಮುಗಿಯುತ್ತಿತ್ತೋ ಏನೋ ಎಂಬ ದುಃಖ ಅವಳಲ್ಲಿ ಸುಳಿಯಿತು. ಕಂಠದಿಂದ ದೊಡ್ಡ ಶಬ್ದಹೊರಬಂತು. ಅವಳು ಕಣ್ಣೀರಿನಲ್ಲಿ ಹಾಸಿಗೆಯಮೇಲೆ ಕುಸಿದಳು.
ರೂಮಿನ ಹೊರಗಿದ್ದ ಮಕ್ಕಳು ‘ಪಾಪ , ಅಮ್ಮ ಅಳುತ್ತಿರುವಂತಿದೆ’ ಎಂದುಕೊಂಡರು.
“ಪಾಪ , ಅಂದಿ ನಿಂದ ಬಿಗಿಯಾಗಿದಾಳೆ. ಇನ್ನ ಅವಳ ವಶವಾಗಿಲ್ಲ ..” ಎಂದು ತಂಗಿ ಕಣ್ಣೀರಿಟ್ಟರು.
ಏನೋ? ಅದು ನಿಜವೇನೋ ಯಾರಿಗೆ ಗೊತ್ತು?