ಅಂಕಣ ಬರಹ

ಜಸೀಲಾ ಕೋಟೆ

ಮಹಿಳೆ ಮತ್ತು ಸಮಾಜ

ಮಹಿಳೆಯರ ಸ್ಥಾನಮಾನ ಅಂದುಇಂದು.

‘ನಮ್ಮಸಮಾಜದಲ್ಲಿನಡೆಯುವಮಹಿಳಾದೌರ್ಜನ್ಯಕ್ಕೆಕೊನೆಇಲ್ಲವೇ ?’ಇದುಬಹುಶ: ಶತಶತಮಾನಗಳಿಂದಕೇಳಿಬರುತಿದ್ದಗಂಭೀರಪ್ರಶ್ನೆ. ಆದರೆಈಪ್ರಶ್ನೆಗೆಇಂದೂಸಮರ್ಪಕಉತ್ತರಇಲ್ಲಮತ್ತುಮಹಿಳೆಯರಮೇಲೆಒಂದಿಲ್ಲೊಂದುಕಡೆಅನಾಚಾರ,ಅತ್ಯಾಚಾರನಡದೇಇರುತ್ತದೆಅನ್ನೋದೆನಾಗರಿಕಸಮಾಜನಾಚಿತಲೆತಗ್ಗಿಸಬೇಕಾದವಿಷಯ.
ನಗರಪ್ರದೇಶಗಳಮಹಿಳೆಯರುಸಂಪೂರ್ಣಸುರಕ್ಷರಲ್ಲದಿದ್ದರೂಅಲ್ಪಸ್ವಲ್ಪವಾದರೂಜಾಗರೂಕರಾಗಿದ್ದುಅನ್ಯಾಯದವಿರುದ್ಧ,ದಬ್ಬಾಳಿಕೆಯವಿರುದ್ಧಆಗಾಗಧ್ವನಿಏರಿಸುವಅಥವಾತಾನೇಜಾಗರೂಕಳಾಗಿರಲುಶಕ್ತಳಿರಬಹುದು. ಆದರೆಗ್ರಾಮೀಣ, ಹಳ್ಳಿಗಾಡಿನಮಹಿಳೆಯರಪಾಡುಮಾತ್ರಹಿಂದಿನಂತೆದಯನೀಯವಾಗಿರುವುದುಒಟ್ಟುನಮ್ಮಜಡ್ಡುಗಟ್ಟಿಹೋಗಿರುವವ್ವವಸ್ಥೆಯೇಕಾರಣ. ಇಲ್ಲಿಹೆಣ್ಣಿನಶೋಷಣೆಗೆಕೇವಲಗಂಡಸರಲೋಕಕಾರಣಅಂತಹೇಳುವಂತಿಲ್ಲ. ಅಷ್ಟೇಹೊಣೆಗಾರಿಕೆಗಂಡುಸಮಾಜಒಡ್ಡುವಅಂಧಶೃದ್ಧೆಗೆಸಾಥ್ನೀಡುವಹೆಂಗಸರಮಂದಬುದ್ಧಿಯೋಅತೀಬುದ್ಧಿವಂತಿಕೆಯೋಕಾರಣವಾಗಿರುತ್ತದೆ.
ಇಂದುಜಗತ್ತುಶರವೇಗದಲ್ಲಿಬದಲಾವಣೆಕಾಣುತ್ತಿದೆ. ಆದರೂಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರುತಮ್ಮವಿರುದ್ಧವೇಇರುವಹತ್ತುಹಲವುಗೊಡ್ಡು ಸಂಪ್ರದಾಯ,ಕಟ್ಟುಕಟ್ಟಳೆಯಲ್ಲಿತಮಗರಿವಿಲ್ಲದೆಬಂಧಿಯಾಗಿರುತ್ತಾರೆ. ತನ್ನ ಜೀವಮಾನವಿಡೀಈ ಕಟ್ಟುಪಾಡುಗಳೊಂದಿಗೆ ಬದುಕನ್ನು ಸವೆಸುತ್ತಾಳೆ. ಆಕೆಗೆತನ್ನವ್ಯಕ್ತಿತ್ವದಪರಿಚಯವೇಇರದು. ತನ್ನಸಂಪೂರ್ಣಬದುಕನ್ನುತನ್ನವರಹಿತಕ್ಕಾಗಿಬಾಳುವುದು.ಅವಳಜೀತದದುಡಿಮೆಗೆಬೆಲೆಇಲ್ಲ, ಗೌರವದೂರದಮಾತು. ಶಿಕ್ಷಣವಂಚಿತಳಾಗಿ,ಆರ್ಥಿಕವಾಗಿಪರಾವಲಂಬಿಯಾಗಿಯೇಇದ್ದುಬಿಡುವಳು.ಆಕೆಗೆಸಮಾನತೆಯಬದುಕಿನಹಕ್ಕಿನಅರಿವೇಇರುವುದಿಲ್ಲ.ಇದ್ದರೂಏನೂಮಾಡುವಂತಿಲ್ಲ.

ಇಂದೂಸಹನಮ್ಮಹಳ್ಳಿಗಳಲ್ಲಿಹಿಂದುಳಿದಬಡಮಹಿಳೆಯರಪರಿಸ್ಥಿತಿಇದಕ್ಕಿಂತಭಿನ್ನವಿಲ್ಲ.
ಹೌದು,ನಗರಪಟ್ಟಣಗಳಮಹಿಳೆಯರಬದುಕಿನಚಿತ್ರಣಈರೀತಿಇಲ್ಲ. ಪ್ರಸ್ತುತಸಮಾಜದ ಮಹಿಳೆಗ್ರಾಮೀಣಮಹಿಳೆಯರಿಗಿಂತಹಲವು ಹೆಜ್ಜೆ ಮುಂದೆ ಹೋಗಿ, ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವಳು. ಇದಕ್ಕೆಮುಖ್ಯಕಾರಣಉನ್ನತೋನ್ನತಶಿಕ್ಷಣ. ಆಮೂಲಕಲಭ್ಯವಾಗುವಉದ್ಯೋಗ, ಉದ್ಯೋಗನೀಡುವಆರ್ಥಿಕಸ್ವಾವಲಂಬನೆ, ಗೌರವ.
ಸಣ್ಣಉದಾಹರಣೆಎಂದರೆ ಇಡೀ ವಿಶ್ವವೇಭಾರತದತ್ತಕೌತುಕದಿಂದ ನೋಡಿದ ಚಂದ್ರಯಾನಉಡಾವಣೆ. ಇಸ್ರೋತಂಡದಲ್ಲಿನೂರಕ್ಕೂಅಧಿಕ ಮಹಿಳಾ ವಿಜ್ಞಾನಿಗಳುಈಚಂದ್ರಯಾನಉಡಾವಣೆಯಒಂದಿಲ್ಲೊಂದುಹಂತದಲ್ಲಿಸಕ್ರಿಯಭಾಗಿಯಾಗಿದ್ದಾರೆನ್ನುವುದುಮಹಿಳೆಯರಿಗೆಎಷ್ಟುಹೆಮ್ಮೆಯವಿಷಯ!
ಒಂದು ಕಡೆಇದು ಹೆಮ್ಮೆ,ಖುಷಿಪಡುವವಿಷಯ.ಆದರೆ ಇನ್ನೊಂದು ಕಡೆ ಕೆಲವುಗೊಡ್ಡು ಸಾಮಾಜಿಕ ಕಟ್ಟುಪಾಡುಗಳಉರುಳಿಗೆಸಿಲುಕಿಒದ್ದಾಡುವಹೆಣ್ಮಕ್ಕಳಅಸಹಾಯಕಗೋಳಿನಕಥೆ.
ಇವರಸಮಸ್ಯೆಗಳನ್ನು ಕಣ್ಣಾರೆಕಂಡಾಗಮನಸ್ಸುಮುದುಡಿ ಮೌನಕ್ಕೆ ಜಾರುತ್ತದೆ. ಒಂದುಚಿಕ್ಕಘಟನೆಹೇಳುತ್ತೇನೆ. ನಮ್ಮ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ ನಾಗನಹಳ್ಳಿ ಎಂಬ ಗ್ರಾಮದಲ್ಲಿ ಅಂತರ್ಜಾತಿ ವಿವಾಹವಾದ ಇಬ್ಬರು ಹೆಣ್ಣು ಮಕ್ಕಳುಪಟ್ಟವ್ಯಥೆಯಿದು.ಅಂತರ್ಜಾತಿವಿವಾಹವಾದರೆಂದು (ಅಂತರ್ಧರ್ಮವಲ್ಲಗಮನಿಸಿ)ಇಬ್ಬರೂಹೆಣ್ಣುಮಕ್ಕಳನ್ನುಪರಿವಾರದಿಂದಹೊರಹಾಕುವರು.ಮದುವೆಯಾಗಿಕೆಲವುಸಮಯದಲ್ಲಿಮಕ್ಕಳತಂದೆತೀರಿಹೋಗುವರು.

ಈಹೆಣ್ಣುಮಕ್ಕಳಿಗೆತಂದೆಯಅಂತ್ಯಸಂಸ್ಕಾರದಲ್ಲಿಪಾಲುಗೊಳ್ಳಲುಅವರಸಮುದಾಯಬಿಡುವುದಿಲ್ಲ.
ದುರಾದೃಷ್ಟವೆಂಬಂತೆಇತ್ತೀಚೆಗೆಮಕ್ಕಳತಾಯಿಯೂತೀರಿಹೋದಾಗಕಂಗಾಲಾದಮಕ್ಕಳಿಗೆಈದು:ಖತಡೆಯಲಾಗುವುದಿಲ್ಲ. ಅಂತ್ಯಸಂಸ್ಕಾರದಲಿಭಾಗಿಯಾಗಲುಇಬ್ಬರೂಓಡೋಡಿಬರುವರು. ಆದರೆಅವರ ಸಮುದಾಯಮಾತ್ರ ಈ ಹೆಣ್ಣು ಮಕ್ಕಳನ್ನುಶವಸಂಸ್ಕಾರದಲ್ಲಿಭಾಗಿಯಾಗಲುಸುತಾರಾಂಬಿಡುವುದಿಲ್ಲ.ಈ ಹೆಣ್ಣು ಮಕ್ಕಳು ಬಂದು ಶವಸಂಸ್ಕಾರ ಮಾಡಿದರೆ ನಾವು ಮತ್ತುನಮ್ಮ ಸಮಾಜದಇತರಪರಿವಾದವರುಶವ ಸಂಸ್ಕಾರಕಾರ್ಯದಿಂದ ಹಿಂದೆ ಸರಿಯುತ್ತೇವೆಎಂದುನಿರ್ಬಂಧಹೇರುತ್ತಾರೆ.ಮತ್ತುಅವರಸಮುದಾಯದ40 ಕುಟುಂಬದ ಒಬ್ಬರೂ ಕೂಡಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ದಿಕ್ಕುಕಾಣದಹೆಣ್ಮಕ್ಕಳು ಇತರೆ ಸಮುದಾಯದ ಜನರದುಂಬಾಲುಬಿದ್ದು ಶವಸಂಸ್ಕಾರದ ವಿಧಿ ವಿಧಾನಗಳನ್ನು ಮಾಡುತ್ತಾರೆ.
ಸ್ವಲ್ಪಮಟ್ಟಿಗೆಲೋಕಜ್ಞಾನವುಳ್ಳಈ ಹೆಣ್ಣು ಮಕ್ಕಳು ತಮಗಾದ ಈಅಪಮಾನ, ನೋವನ್ನುನಮ್ಮ ‘ಸಾಂತ್ವನ’ ಸಂಸ್ಥೆಯವರಲ್ಲಿ ಹೇಳಿಕೊಂಡರು.ತಮ್ಮ ಸಮುದಾಯದವರಅಂಧಶೃದ್ಧೆದೂರಮಾಡಿ, ಅವರಲ್ಲಿಅರಿವು ಮೂಡಿಸಿ, ಇಂತಹ ಸಮಸ್ಯೆ ಮತ್ತೆ ನಮ್ಮ ಗ್ರಾಮದಲ್ಲಿ ಆಗದಂತೆ ತಡೆಯಿರಿ ಎಂದು ಅಂಗಲಾಚುತ್ತಾರೆ.
ನಮ್ಮದೇಶದಮಾಜಿಪ್ರದಾನಿಮಾನ್ಯವಾಜಪೇಯಿಯವರು ಮರಣ ಹೊಂದಿದಾಗ,ಅವರಇಚ್ಛೆಯಂತೆಅವರ ದತ್ತು ಮಗಳಕೈಯಿಂದ ಅಂತ್ಯ ಸಂಸ್ಕಾರಮಾಡಲಾಯಿತು.ದೇಶದಎಲ್ಲಾಪ್ರಮುಖಪತ್ರಿಕೆಗಳಮುಖಪುಟದಲ್ಲಿ,ದೃಶ್ಯ ಮಾಧ್ಯಮಗಳಲ್ಲಿಈಸುದ್ದಿಚಿತ್ರಸಮೇತಬಿತ್ತರಗೊಂಡಿತ್ತು.ಹಾಗೆಯೇಹೆಸರಾಂತಸಿನೆಮಾತಾರೆಯರು ಮರಣ ಹೊಂದಿದಾಗ ಅವರ ಹೆಣ್ಣು ಮಕ್ಕಳು ಅಂತ್ಯ ಸಂಸ್ಕಾರ ನಿರ್ವಹಿಸಿದ್ದನ್ನು ನಾವುಕೇಳಿದ್ದೇವೆ,ಆಗಾಗಗಮನಿಸಿದ್ದೇವೆ.ಇದುನಿಜಕ್ಕೂಸಮಾಜದಇತರರಿಗೂಮಾದರಿಆಗಬೇಕು.ಇಂತಹವುಗಳುಬದಲಾದಸಮಯದೊಂದಿಗೆಅಗತ್ಯಬದಲಾಗಬೇಕಾದಸಾಮಾಜಿಕಕಟ್ಟುಕಟ್ಟಳೆಗಳು.
ಸಮಾಜದಜನರು ಮತ್ತವರ ಸಾಮಾಜಿಕ ದೃಷ್ಟಿಕೋನಗಳು ಬದಲಾಗದೆ ಯಾವ ಸಬಲೀಕರಣದ ಮಾತುಗಳು ಯಾವ ದೊಡ್ಡ ದೊಡ್ಡ ಭಾಷಣಗಳು ಮಹಿಳೆಯ ಜೀವನದಲ್ಲಿ ಯಾವುದೇಮಹತ್ತರವಾದಬದಲಾವಣೆಯನ್ನುತರಲಾರದು ಎಂಬುದನ್ನು ಪದೇಪದೇ ನಮ್ಮ ಕಣ್ಮುಂದೆ ನಡೆಯುವಮಹಿಳಾದೌರ್ಜನ್ಯದಿಂದ ಕಾಣುತ್ತಿದ್ದೇವೆ.
ಹೆಣ್ಣುಮುಖ್ಯವಾಗಿಗ್ರಾಮೀಣಭಾಗದಬಡಹೆಣ್ಮಕ್ಕಳುಮತಧರ್ಮದಭೇದವಿಲ್ಲದೆಅನುಭವಿಸುವನಾನಾದೌರ್ಜನ್ಯಒಂದೇಎರಡೇ. ಒಟ್ಟಾರೆಯಾಗಿ ಸಮಾಜದಲ್ಲಿಆಳವಾಗಿಬೇರುಬಿಟ್ಟಿರುವತಾರತಮ್ಯ, ಕೀಳರಿಮೆಮತ್ತು ಹೆಣ್ಣುಮಕ್ಕಳಿಗಾಗಿಯೇಮಾಡಿರುವಮತಿಹೀನ ಕಟ್ಟುಪಾಡುಗಳನ್ನುಮೀರುವನಿಟ್ಟಿನಲ್ಲಿಜನಜಾಗೃತಿಯಕೆಲಸಆಗಬೇಕು.ಅದುಹೆಣ್ಣುಮಕ್ಕಳಿಂದಲೇಶುರುವಾಗಬೇಕು.ಕೇವಲಸರಕಾರ, ಕಾನೂನುಅಂತಕಾಯದೆ,ಸಾಮಾಜಿಕಸೇವಾನಿರತಸಂಸ್ಥೆಗಳುಮುಂದೆಬಂದುಜನರಿಗೆನಿರಂತರಅರಿವುಮೂಡಿಸುವಕಾರ್ಯಕ್ರಮಆಯೋಜಿಸಬೇಕು. ಪ್ರತಿಹೆಣ್ಣುಮಗುವಿಗೆಆದಷ್ಟುಶಿಕ್ಷಣ, ಮಾಡಲುಯೋಗ್ಯಉದ್ಯೋಗಇವೆರಡುದೊರಕಿದ್ದಲ್ಲಿಖಂಡಿತಪ್ರತಿಮಹಿಳೆಯಸ್ವಾವಲಂಭನೆಬದುಕುಸಾಕಾರವಾಗುವುದು. ನಮ್ಮಗ್ರಾಮೀಣಭಾಗದಹೆಣ್ಮಕ್ಕಳಬದುಕಿನಲ್ಲಿಇಂತಹಪರಿವರ್ತನೆಯ ಪರ್ವಕಾಲ ಕಾಣಲುಅದೆಷ್ಟುಕಾಯಬೇಕೋ…


ಜಸೀಲಾ ಕೋಟೆ

ಜಸೀಲ ಕೋಟೆ,ಹೆಚ್ ಡಿ ಕೋಟೆಯ ಹೊಸತರವಳ್ಳಿ ಗ್ರಾಮ ಹುಟ್ಟಿದವರು, ತಂದೆ ಸೆನುದ್ದೀನ್, ತಾಯಿ ಜಮೀಲಾ, ವಿವಾಹಿತೆ,ಪತಿ- ಮುನಿರ್ ಪಾಶ,ಒಬ್ಬಳು ಮಗಳು ಇಂಜಿನಿಯರಿಂಗ್ ಓದುತ್ತಿದ್ದಾಳೆ ಸಾನಿಯಾ.
ಶಿಕ್ಷಣ..M.A.sociology.. .Diploma ,ಜರ್ನಲಿಸಂ ಮಹಿಳಾ ಆಪ್ತ ಸಮಾಲೋಚಿಕಿ. ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಮಹಿಳಾ ಹೋರಾಟಗಾತಿ, ನೊಂದ ಮಹಿಳೆಯರ ಆಶಾಕಿರಣ ಮೈಸೂರಿನ ಹೆಣ್ಣು ಹುಲಿ ಎಂದೇ ಪ್ರಖ್ಯಾತಿ.ಕೋಟಂಬಿಕ ದೌರ್ಜನ್ಯಕ್ಕೆ ಒಳಪಟ್ಟ ಮಹಿಳೆಯರಿಗೆ ಅರಿವು ಕಾರ್ಯಕ್ರಮ ಕಾನೂನು ಮಾಹಿತಿಗಳನ್ನು ಕೊಡುವುದು ಬಾಲ್ಯ ವಿವಾಹವನ್ನು ತಡೆಗಟ್ಟುವುದು, ಮಹಿಳೆಯರ ಸಮಸ್ಯೆಗಳಿಗೆ ಧ್ವನಿಯಾಗಿ ಅವರಿಗೆ ಸಲಹೆ ನೀಡುವುದು.ಸಾಮಾಜಿಕ ಕ್ಷೇತ್ರದ ಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ದೊರಕಿದೆ.

Leave a Reply

Back To Top