ಕಾವ್ಯ ಸಂಗಾತಿ
ಸುಧಾ ಪಾಟೀಲ
ನಕ್ಕು ಬಿಡು ನೋವ ಮರೆತು
ಹೃದಯದ ಕೋಣೆಯ
ತೆರೆದು ಭಾವನೆಗಳ
ಗರಿಗೆದರಲು ಬಿಟ್ಟು
ನಕ್ಕು ಬಿಡು ನೋವ ಮರೆತು
ವರ್ತಮಾನದಿ ನೀನಿದ್ದು
ಭೂತದ ಭವಿಷ್ಯದ ಚಿಂತೆಯ
ಬಿಟ್ಟು ನಕ್ಕು ಬಿಡು ನೋವ
ಮರೆತು
ಬಣ್ಣಬಣ್ಣದ ಕುಂಚದಿ
ಮನವ ಸಿಂಗರಿಸಿ
ನೀರಿನ ಜುಳು ಜುಳು
ನಿನಾದದಿ ನಕ್ಕು ಬಿಡು
ನೋವ ಮರೆತು
ಒಳಗಣ ತುಮುಲವ
ಉಕ್ಕಿ ಉಕ್ಕಿ ಬರುವ
ದುಃಖವ ಮರೆತು
ನಕ್ಕು ಬಿಡು ನೋವ
ಮರೆತು
ಹಿಡಿದಿಟ್ಟ ಭಾವನೆಗಳ
ಕೊನೆಗೊಂಡ ಆಸೆಗಳ
ಹರಿಯಬಿಡು ನಿಧಾನದಿ
ಅದ ಕಂಡು ನಕ್ಕು ಬಿಡು
ನೋವ ಮರೆತು
ಸುಧಾ ಪಾಟೀಲ