ಕಲಾವಿದರ ಬಾಳು ಶೋಚನೀಯ ಗೋಳು-ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ

ವಿಶೇಷ ಲೇಖನ

ಕಲಾವಿದರ ಬಾಳು ಶೋಚನೀಯ ಗೋಳು-

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ

ಅನಾದಿ ಕಾಲದಿಂದಲ್ಲೂ ಇಂದಿನ ಕಾಲದವರೆಗೂ ಕಲೆ ಸಾಹಿತ್ಯ ಜಾನಪದ ಉಳಿದಿರಲು ಕಾರಣ ಗ್ರಾಮೀಣ ಪ್ರದೇಶದ ಜನರಲ್ಲಿ ಅಡಕವಾಗಿರುವ ಜಾನಪದ ಕಲೆಗಳಾದ ಶೋಭಾನೆಪದ , ಲಾವಣಿ ಹಾಡು , ಪೂಜಾ ಕುಣಿತ , ಡೊಳ್ಳು ಕುಣಿತ , ಕೋಲಾಟ , ದೊಣ್ಣೆವರಸೆ , ಕಂಸಾಳೆ ಪದ , ಜಾನಪದ ನೃತ್ಯ , ಜಾನಪದ ತತ್ವಪದ , ಗಾಯನ , ಬೀದಿ ನಾಟಕ ಹಾಗೂ ಹವ್ಯಾಸಿ ನಾಟಕ ,, .
ಕಲಾವಿದರ , ಗಾಯಕರ , ಇವರನ್ನೇ ನಂಬಿರುವ ವಾದ್ಯ ವೃಂದಗಳು , ಸೀನರಿಗಳು ಹೀಗೆ.., ಅನೇಕರ ಆರ್ಥಿಕ ಸ್ಥಿತಿ ಇಂದಿಗೂ ಶೋಚನೀಯವಾಗಿದೆ , ಕಲೆಯೇ ಜೀವಾಳವಾಗಿ ಕಲಾ ಶಾರದೆಯ ಸೇವೆ ಎಂದು ಬದುಕುತ್ತಿರುವ ಕಲಾವಿದರ ಗೋಳು ಕೇಳುವವರು ಯಾರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ .
ಕಲೆಯೇ ನಮ್ಮ ಸಂಸ್ಕೃತಿ , ಜೀವಾಳವೆಂದು ಬದುಕುತ್ತಿರುವ ಎಷ್ಟು ಕುಟುಂಬಗಳು ಕಷ್ಟದಲ್ಲಿ ನೊಂದು ಬೆಂದು ಬದುಕು ಕಟ್ಟಿಕೊಳ್ಳಲಾಗದೇ ನಿರಾಶ್ರಿತರಾಗಿದ್ದಾರೆ , ಆದರೆ , ನಾಡು ನುಡಿ ಉಳಿಯಲು ನಮ್ಮಲ್ಲಿ ಅಡಗಿರುವ ಕಲೆಯೇ ಮುಖ್ಯವಲ್ಲವೇ , ಕಲೆ ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ , ಆಗ ಕಲಾವಿದರು ಉಳಿಯುವರು , ಸಾಹಿತಿ , ಕಲಾವಿದರಿಗಾಗಿ ಸರ್ಕಾರದ ಅಧೀನ ಸಂಸ್ಥೆಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದ್ದರು ಸಹ , ಎಷ್ಟೋ ಬಡ ಹವ್ಯಾಸಿ ಕಲಾವಿದರು – ಸಾಹಿತಿಗಳು ಮಾತ್ರ ಅವಕಾಶ ವಂಚಿತರಾಗಿದ್ದಾರೆ , ಎಲ್ಲರನ್ನು ಪ್ರೋತ್ಸಾಹಿಸ ಬೇಕಾದ ಇಲಾಖೆ ಏಕೋ ಪಾರದರ್ಶಕತೆಯಿಂದ ದೂರವಾದಂತೆ ಕಾಣುತ್ತಿದೆ . ಜೀವನವನ್ನೇ ಕಲೆಗಾಗಿ ಮುಡಿಪಾಗಿಟ್ಟಿರುವ ಕಲಾವಿದರ ಸಾಹಿತಿಗಳ ಜೀವನ ಬದುಕು ತುಂಬಾ ದುಸ್ತರವಾಗಿದೆ , ಅಕಾಡೆಮಿಗೆ ಸರ್ಕಾರ ನೀಡುವ ಪ್ರೋತ್ಸಾಹ ಧನ ಎಲ್ಲರಿಗೂ ಸಿಗ್ಗುತ್ತಿಲ್ಲ , ಸಿಗುವಂತೆಯಾಗಲಿ , ಹಾಗೇ ಅವರ ಸಂಸಾರದ ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹ ಧನ , ೫0 ವರ್ಷ ದಾಟಿದ ಪ್ರತಿಯೊಬ್ಬ ಸಾಹಿತಿ ಕಲಾವಿದರಿಗೂ ಪಿಂಚಣಿ ಯೋಜನೆ , ಸಾಲ ಸೌಲಭ್ಯ ಅತೀ ಶೀಘ್ರದಲ್ಲಿ ಜಾರಿಯಾಗಲಿ . ಸಾಹಿತಿಗಳಿಗೆ ಕಲಾವಿದರಿಗೆ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರಿಗೂ ಬೇಗನೇ ವಿತರಣೆ ಮಾಡುವಂತೆಯಾಗಲಿ , ಸಾಹಿತಿಗಳು ಕಲಾವಿದರು ನಡೆಸುವ ಕನ್ನಡ ಪರ ಕಾರ್ಯಕ್ರಮಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾಮಂದಿರ , ರಂಗ ಮಂದಿರ , ರಂಗಾಯಣ , ಟೌನ್ ಹಾಲ್ ಇತ್ಯಾದಿ .., ಸ್ಥಳಗಳು ರಿಯಾಯಿತಿ ದರದಲ್ಲಿ ಸಿಗುವಂತೆಯಾಗಿ ಕಲೆ ಕಲಾವಿದರು ಉಳಿಯುವಂತೆಯಾಗಲಿ , ಕಲೆಯೇ ಜೀವನ ಎಂದು ಬದುಕುವ ಕಲಾವಿದರ ಬಾಳು ಹಸನಾಗಲಿ , ಸ್ವತಂತ್ರವಾಗಿ ಎಲ್ಲರಂತೆ ಗೌರವವಾಗಿ ಜೀವನ ನಡೆಸಲು , ಇನ್ನಾದರೂ ಕರ್ನಾಟಕ ಸರ್ಕಾರ ಬಡ ಕಲಾವಿದರಿಗೆ ಆಸರೆಯಾಗಲೆಂದು ಆಶಿಸುತ್ತ , ಈ ನನ್ನ ಪುಟ್ಟ ಬರಹಕ್ಕೆ ವಿರಾಮ ನೀಡುತ್ತಿದ್ದೇನೆ ..!!

———————————–[

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ

Leave a Reply

Back To Top