ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಡಾ.ಸುರೇಖಾ ರಾಠೋಡ್

ಜೈವಿಕ ತಂತ್ರಜ್ಞೆ ಮಂಜು ಶರ್ಮಾ (1940)

ಮಂಜು ಶರ್ಮಾ ಅವರು ಒಬ್ಬ ಭಾರತೀಯ ಜೈವಿಕ ತಂತ್ರಜ್ಞಾನಿಯಾಗಿದ್ದಾರೆ. ಇವರು 13 ಡಿಸೆಂಬರ್ 1940ರಲ್ಲಿ ಜನಿಸಿದರು. ಇವರು ಶಿಕ್ಷಣ ತಜ್ಞರು ಹಾಗೂ ರಾಜಕಾರಣಿಯಾಗಿದ್ದ ಮದನ್ ಮೋಹನ ಮಾಳವಿಯವರ ಮೊಮ್ಮಗಳಾಗಿದ್ದಾರೆ. ಇವರು ಕೀಟ ಶಾಸ್ತ್ರಜ್ಞ ಹಾಗೂ ಮಲೇರಿಯಾಜಿಸ್ಟ್ ಆಗಿರುವ ವಿನೋದ ಪ್ರಕಾಶ ಶರ್ಮಾರನ್ನು ವಿವಾಹವಾದರು. ಇವರ ಮಗ ಅಮಿತ್ ಶರ್ಮಾರವರು ಪ್ರೋಟೀನ್ ಸ್ಫಟಿಕ ಶಾಸ್ತ್ರಜ್ಞರಾಗಿದ್ದಾರೆ.
ಮಂಜು ಶರ್ಮಾರವರು ಲಕ್ನೋ ವಿಶ್ವವಿದ್ಯಾಲಯದಿಂದ ಫಸ್ಟ್ ರ್ಯಾಂಕ್‍ನಲ್ಲಿ ಪದವಿಯನ್ನು ಪಡೆದಿದ್ದರಿಂದ ‘ಬಿರ್ಲಾ ಶೈನ್ ಮೆಮೋರಿಯಲ್ ಗೋಲ್ಡ್ ಮೆಡಲ್’ನ್ನು ಪಡೆದುಕೊಂಡರು. 1961ರಲ್ಲಿ ಲಕ್ನೋ ವಿಶ್ವವಿದ್ಯಾಯದಿಂದ ಪಿಎಚ್‍ಡಿ ಪದವಿಯನ್ನು ಪಡೆದ ನಂತರ ಪೋಸ್ಟ್ ಡಾಕ್ಟರಲ್ ಸಂಶೋಧಕರಾಗಿ ಪಡ್ರ್ಯೂ ವಿಶ್ವವಿದ್ಯಾಲಯದಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸಿದರು.
ಮಂಜು ಅವರು ಎ ಕಾರ್ಲ್ ಲಿಯೋಪೊಲ್ಡ್ ಮತ್ತು ರಿಚರ್ಡ್ ಹಾಲ್ ಅವರ ಸಹಾಯದಿಂದ ಲ್ಯಾಟೆಕ್ಸ್ ಉತ್ಪಾದನೆಯನ್ನು ಹೆಚ್ಚಿಸುವುದರ ಕುರಿತಾಗಿ ಮಲೇಷಿಯಾದ ರಬ್ಬರ್ ತೋಟಗಳಿಗೆ ಬೇಕಾದ ಹಲವಾರು ಉಪಯುಕ್ತ ಮಾಹಿತಿಯನ್ನು ಕಂಡುಹಿಡಿದಿರುವರು. ನಂತರ ಡೆಹ್ರಾಡೂನ್‍ನಲ್ಲಿರುವ ಅರಣ್ಯ ಸಂಶೋಧನಾ ಸಂಸ್ಥೆಗೆ ಸೇರಿ, ಅಲ್ಲಿ ಮರಗಳ ಬಗ್ಗೆ ಸಂಶೋಧನೆ ನಡೆಸಿ, ಸಿಲಿಕಾ ಹಾಗೂ ಮರದ ಕಠಿಣತೆಯ ನಡುವಿನ ಸಂಬಂಧವನ್ನು ಕಂಡುಹಿಡಿದರು.
ಮಂಜು ಅವರು ದೆಹಲಿಯಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‍ನಲ್ಲಿ ಸಂಶೋಧಾನ ಅಧಿಕಾರಿಯಾದರು. ಅಲ್ಲಿ ಔಷಧೀಯ ಸಸ್ಯಗಳ ಕುರಿತು ಸಂಶೋಧನೆಯನ್ನು ಪ್ರಾಂಭಿಸಿದರು. 1974ರಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಹಿರಿಯ ವೈಜ್ಞಾನಿಕ ಅಧಿಕಾರಿಯಾಗಿ ಸೇರಿದರು. 1990ರಲ್ಲಿ ಹಿರಿಯ ಸಲಹೆಗಾರರಾದರು. 1996ರಲ್ಲಿ ಸರ್ಕಾರಿ ಸಂಸ್ಥೆಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಬಯೋಟೆಕ್ನಾಲಜಿ ಸಂಶೋಧನೆಯ ವಾಣಿಜ್ಯೀಕರಣವನ್ನು ಉತ್ತೇಜಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವವಾದ ಬಯೋಟೆಕ್ ಕನ್ಸೋರ್ಟಿಯಮ್ ಇಂಡಿಯಾ ಲಿಮಿಟೆಡ್ ಸ್ಥಾಪಸುವಲ್ಲಿ ಇವರ ಪಾತ್ರವು ಪ್ರಮುಖವಾಗಿದೆ.
2004ರಲ್ಲಿ ಮಂಜುರವರು ವಿಜ್ಞಾನ ಮತ್ತು ತಂತ್ರಜ್ಞಾನದ ಸಲಹೆಗಾರರಾಗಿ ನೇಮಕಗೊಂಡರು. 2006ರಲ್ಲಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‍ನ್ನು ಸ್ಥಾಪಿಸಿದರು. ಸಸ್ಯವಿಜ್ಞಾನ, ಮಾನವ ಆರೋಗ್ಯ ಮತ್ತು ಬಯೋಇನ್‍ಫಮ್ರ್ಯಾಟಿಕ್ಸ್‍ನಲ್ಲಿ ಉನ್ನತ ಶಿಕ್ಷಣ ಒದಗಿಸಲು ಭಾರತದಲ್ಲಿರುವ ಪುರಿ ಫೌಂಡೇಷನ್ ಫಾರ್ ಎಜುಕೇಶನ್ ದತ್ತಿ ಸಹಾಯದಿಂದ ಸಂಶೋಧನೆ ಮಾಡುವವರಿಗೆ ಸಹಾಯ ಮಾಡಿದರು.
ಆರನೇ ಪಂಚವಾರ್ಷಿಕ ಯೋಜನೆಯಲ್ಲಿ (1980-1985) ಮಹಿಳಾ ವಿಜ್ಞಾನ ಮತ್ತು ತಂತ್ರಜ್ಞಾನದ ಅಧ್ಯಾಯವೊಂದನ್ನು ಎಂ. ಎಸ್ ಸ್ವಾಮಿನಾಥನ್ ಪ್ರಾರಾಂಭಿಸಿದಾಗ, ಮಂಜು ಶಾರ್ಮಾ ನೇತೃತ್ವದ ತಂಡವು ಮಹಿಳಾ ಮತ್ತು ಅಭಿವೃದ್ಧಿಯ ಕುರಿತಾದ ಯೋಜನೆಯನ್ನು, ದಾಖಲಾತಿಯ ವರದಿಯನ್ನು ಸಿದ್ಧಪಡಿಸಿದರು. ಇವರು ಸಿದ್ಧ ಪಡಿಸಿದ ಯೋಜನೆಯನ್ನು ಅಧಿಕೃತ ಯೋಜನೆಯಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಮುಂದುವರೆಸಿಕೊಂಡು ಹೋಗುತ್ತಿದೆ.


ಮಂಜುರವರಿಗೆ ದೊರೆತ ಪ್ರಶಸ್ತಿಗಳು:
1. 1991 ರಲ್ಲಿ ದಿ ಚಂದಬೆನ್ ಮೋಹನಬಾಯಿ ಪಟೇಲ್ ಇಂಡಸ್ಟ್ರಿಯಲ್ ಅವಾರ್ಡ್ ಫಾರ್ ಮಮೆನ್ ಸೈನ್‍ಟಿಸ್ಟ್
2. 1995 ರಲ್ಲಿ ದಿ ಬೊರ್ಲಾಗ್ ಅವಾರ್ಡ್.
3. 1995-96 ರಲ್ಲಿ ದಿ ಫಸ್ಟ್ ವುಮೆನ್ ಪ್ರೆಸಿಡೆಂಟ್ ಆಫ್ ದ ನ್ಯಾಷನಲ್ ಅಕಾಡಮಿ ಆಫ್ ಸೈನ್ಸ್‍ಸ್.
4. 1999 ರಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್.
5. 2001 ರಲ್ಲಿ ದಿ. ಡಾ.ಬಿ.ಪಿ.ಪಾಲ್ ಮೆಮೊರಿಯಲ್ ಅವಾರ್ಡ್ ಫ್ರಮ್ ದ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್.
6. 2002 ರಲ್ಲಿ ಜಿ. ಎಂ ಮೋದಿ ಸೈನ್ಸ್ ಅವಾರ್ಡ್.
7. 2007 ರಲ್ಲಿ ಪದ್ಮಭೂಷಣ ಪ್ರಶಸ್ತಿ.
8. 2012 ರಲ್ಲಿ ಹಾನರರಿ ಡಾಕ್ಟರೇಟ್, ಪಡ್ರ್ಯೂ ಯುನಿವರ್ಸಿಟಿಯಿಂದ ಪಡೆದಿರುವರು.
9. ಫೆಲೊ ದ ವಲ್ಡ್ ಅಕಾಡಮಿ ಆಫ್ ಸೈನ್ಸ್‍ಸ್.
10. ಹಾನರರಿ ಫೆಲೊ, ಇಂಡಿಯನ್ ಸೊಸೈಟಿ ಆಫ್ ಅಗ್ರಿಕಲ್ಚರಲ್ ಬೈಯೋಕೆಮಿಸ್ಟ್ರಿಯಿಂದ ಪಡೆದಿರುವರು.
ಮಂಜುರವರು ಅನೇಕ ಸಂಶೋಧನಾ ಲೇಖನಗಳನ್ನು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.


ಡಾ.ಸುರೇಖಾ ರಾಠೋಡ್

ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ

Leave a Reply

Back To Top