ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಸಾಧನೆಯ ಹಾದಿ

ಸಾಧನೆ ಎಂಬ ಪದ ಚಿಕ್ಕದು ಆದರೆ ಅದರ ಅರ್ಥ ಪರಿಶ್ರಮದ ಫಲ. ಒಂದೇ ದಿನದ ಪ್ರಯತ್ನ ಅಲ್ಲ, ನಿರಂತರತೆಯ ಕ್ರಿಯಾಶೀಲತೆ, ಸಂತಸದ ಕ್ಷಣಗಳ ಭಾವಪರವಶತೆ ನೆಮ್ಮದಿಯ ನಿಟ್ಟುಸಿರು ಆತ್ಮದ ಆನಂದದ ಭಾಷ್ಪ ಕಣ್ಣಂಚಲಿ ಜಿನುಗಿದ ಅನುಭವ, ಅಂದುಕೊಂಡಿದ್ದನ್ನು ಸಾಧಿಸಿದ ಮೇಲೆ ಮತ್ತೆ ಮತ್ತೆ ಕಾರ್ಯಪ್ರವೃತ್ತರಾಗುವ ತುಡಿತ.

ತಮ್ಮ ಆಸೆಗಳನ್ನು ಮಕ್ಕಳ  ಮೇಲೆ ಹೇರುವ ಹೆತ್ತವರು ಮಕ್ಕಳ ಮೇಲೆ ಒತ್ತಡ ಹೇರುವದುಂಟು.
ಒಮ್ಮೆ ಶಾಲೆಯಿಂದ ಮನೆಗೆ  ತೆರಳುವಾಗ ಸಂಜೆ  ಆತ್ಮೀಯರೊಬ್ಬರ ಮನೆಗೆ ಆಕಸ್ಮಿಕವಾಗಿ ಭೇಟಿಯಾಗುವ ಪ್ರಸಂಗ ಬಂದಿತು. ಬಹಳ  ದಿನಗಳಿಂದ ಅವರ ಕರೆಗೆ ಇವತ್ತು ಕಾಲ  ಕೂಡಿ  ಬಂದಿತು. ಕುಶಲೋಪರಿ ವಿಚಾರಿಸಿದರು.ಬಿಸಿ ಬಿಸಿ ಕಾಫಿ ಮನಕ್ಕೆ ಮುದ ನೀಡಿತು. ಅವರು ತಮ್ಮ ಮಗನಿಗೆ ವೈದ್ಯಕೀಯ ವ್ಯಾಸಂಗ ಮಾಡಲೆನ್ನುವ ತಮ್ಮ ಮಹದಾಶೆಯನ್ನು ವ್ಯಕ್ತ ಪಡಿಸಿದಾಗ “ತುಂಬಾ ಸಂತೋಷ ಹಾಗೆ  ಮಾಡಿ “ಎಂದಾಗ ಆದರೆ ಅವನಿಗೆ  ಇಷ್ಟವಿಲ್ಲ, ಅಂದರು. ಆಗ ಅವನನ್ನು ಕರೆದು ಹೆತ್ತವರ ಒತ್ತಾಸೆಯನ್ನು ತಿಳಿಸಿದಾಗ ಅವನು “ನನಗೆ ಇಷ್ಟವಿಲ್ಲ, ನಾನು ಇಂಜನಿಯರಿಂಗ ಮಾಡಿ ಗೇಟ್ ಎಕ್ಸಾಮ್ ಬರೆಯುವೆ ಅದರಲ್ಲೇ ಸಾಧನೆ ಮಾಡುವೆ “ಇಂಗಿತವನ್ನು ವ್ಯಕ್ತ ಪಡಿಸಿದಾಗ  ಆ  ಬಾಲಕನ ಕಣ್ಣಲ್ಲಿ ಸಾಧಿಸುವ ತೇಜಸ್ಸು ದಟ್ಟವಾದದನ್ನು ಕಂಡು ಅವನ ಒತ್ತಾಸೆಗೆ  ಸ್ಪಂದಿಸುವ ನುಡಿಗಳನ್ನು ಅಂದು ಅನಾವರಣ ಮಾಡಿದರು.
ಇಲ್ಲಿ ನಿಶ್ಚಿತವಾದ ಗುರಿ, ಖಚಿತ ವಾದ ಅಭಿಲಾಷೆ ಭವಿಷ್ಯದ ಕನಸುಗಳಿಗೆ  ಬೆಂಬಲ ಅವರ ಹಂಬಲಕ್ಕೆ ಆಧಾರವಾಗಿ ಸಾಧನೆಯ ಹಾದಿಗೆ ಅಣಿಯಾ ಗಲು ಹರಸಿದಂತಾಯ್ತು.

ಸಾಧಕರಿಗೆ ಬೇಕು ಆತ್ಮೀಯತೆಯ ಧನಾತ್ಮಕವಾದ ಪ್ರೋತ್ಸಾಹ.
ಯಾವುದೇ ವ್ಯಕ್ತಿ ತಾನು ಕೈಗೊಂಡ ಕಾರ್ಯದಲ್ಲಿ ಸಾಧನೆ ಮಾಡಲು ಸತತ ಪ್ರಯತ್ನ ಬೇಕೇ ಬೇಕು.ಒಂದು ಕೆಲಸದಲ್ಲಿ ಯಶಸ್ಸು ಕಾಣಲು ತಾನು ಎಷ್ಟರ ಮಟ್ಟಿಗೆ ಯತ್ನಿಸಿದ್ದೇನೆ ಎನ್ನುವುದರ ಪರಾಮರ್ಶೆ ಅಗತ್ಯ. ಸಾಧನೆಯ  ಹಾದಿಯಲ್ಲಿ ಹಲವು ಸಮಸ್ಯೆಗಳೆದುರಾದರೂ ಹಿಡಿದ ಕೆಲಸವನ್ನು ಅರ್ಧಕ್ಕೆ ಬಿಡಬಾರದು. ಕೆಲವರು ಸಮಸ್ಯೆಗಳಿಗೆ ವಿಮುಖರಾಗಿ ತಮ್ಮ ಕೆಲಸವನ್ನು ಅರ್ಧಕ್ಕೆ ಕೈ ಬಿಡುತ್ತಾರೆ. ಆದರೆ ಕೆಲವರು ತಾವು ಹಿಡಿದ ಕೆಲಸವನ್ನು ಎಷ್ಟೇ ಅಡ್ಡಿ ಆತಂಕಗಳೊದಗಿ  ಬಂದರೂ ಮಾಡಿ ಮುಗಿಸಿ ಯಶಸ್ಸು ಕಾಣುತ್ತಾರೆ. ಏನಿದರ ರಹಸ್ಯ? ಕೆಲವರು ಹೇಗೆ ಯಶಸ್ಸು ಕಾಣುತ್ತಾರೆ? ಮತ್ತೆ ಕೆಲವರು ಏಕೆ ಸೋಲುತ್ತಾರೆ? ಸೋಲೇ ಗೆಲುವಿನ ಸೋಪಾನ ಎಂದೇಕೆ ತಿಳಿಯುವದಿಲ್ಲ? ಈ ಪ್ರಶ್ನೆಗಳು ಸಾಮಾನ್ಯವಾಗಿ ಮೂಡಿಬರುತ್ತವೆ. ತಮ್ಮ ಕೆಲಸದಲ್ಲಿ ಯಶಸ್ವಿಯಾದವರನ್ನು ತಮ್ಮ ಯಶಸ್ಸಿಗೇನು ಕಾರಣ ಎಂದು ಯಾರಾದರೂ ಕೇಳಿದಾಗ ಸತತ ಪ್ರಯತ್ನದಿಂದಲೇ ಇದು ಸಾಧ್ಯವಾಯಿತು ಎಂದು ಹೇಳುವದನ್ನು ನೋಡುತ್ತೇವೆ. ಜೊತೆಗೆ ಅವರ ಶಿಸ್ತಿನ ಜೀವನವು ಕಾರಣವಾಗಿರುತ್ತದೆ .

ಮುಖ್ಯವಾಗಿ ಸಾಧನೆಯ ಹಾದಿಯಲ್ಲಿ ಎದುರಾಗುವ ಸಮಸ್ಯೆಗಳ ನಿವಾರಣೆಗೆ ನಾವು ಯತ್ನಿಸಬೇಕಾಗುತ್ತದೆ. ಸಾಸಿವೆಯಷ್ಟು ಕಷ್ಟಕ್ಕೆ ಸಾಗರದಷ್ಟು ವ್ಯಾಪ್ತಿಯ ಸಮಸ್ಯೆಯನ್ನಾಗಿ ಭಾವಿಸುವದು ತರವಲ್ಲ. ಯಾವ ಜೀವವೂ ಸಮಸ್ಯೆಗಳಿಂದ ಮುಕ್ತವಲ್ಲ. ಎಷ್ಟೋ ಸಮಸ್ಯೆಗಳಿಗೆ ನಮಗೆ ಪರಿಹಾರ ದೊರಕದಿದ್ದರೂ ಪ್ರತಿಯೊಂದು ಸಮಸ್ಯೆಯನ್ನು ಸಮರ್ಥನೀಯವಾಗಿ ಎದುರಿಸಲು ಸಾಧ್ಯವಿರುತ್ತದೆ. ಹೆಲೆನ್ ಕೆಲರಳಿಗೆ ಆಕೆಯ ಅಂಧತ್ವ, ಕಿವುಡುತನ ಸಮಸ್ಯೆಯಾಗಲೇ ಇಲ್ಲ. ಆಕೆ ಅಪಾರ ಯಶಸ್ಸನ್ನು ಸಾಧಿಸಿದಳು. ಆಧುನಿಕ ಭಾರತದ ನಿರ್ಮಾಪಕರಲ್ಲೊಬ್ಬರಾದ ಡಾ. ಮುತ್ತುಲಕ್ಷ್ಮಿ ರೆಡ್ಡಿಯವರು ಭಾರತದಲ್ಲಿ ವೈದ್ಯಕೀಯ ಪರೀಕ್ಷೆ ಕುಳಿತು ವೈದ್ಯಕೀಯ ಪದವಿ ಪಡೆದ ಪ್ರಥಮ ಮಹಿಳೆ. ಮುಂದೆ ಇವರು ಸಾಧಿಸಿದ್ದು ಅಪೂರ್ವ. ಅನಾಥ ಮಕ್ಕಳಿಗಾಗಿ ಅವ್ವೆ ಅನಾಥಾಲಯವನ್ನು ತಮ್ಮ ಜೀವನ ಪರ್ಯಂತ ನಡೆಸಿದರು.
ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರು ಬೀದಿ ದೀಪದ ಬೆಳಕಿನಲ್ಲಿ ಓದಿ ಸಾಧನೆ ಮಾಡಿದವರು. ಬಡತನ ಅವರಿಗೆ ಸಮಸ್ಯೆ ಎನಿಸಲಿಲ್ಲ. ಅಚ್ಚುಕಟ್ಟುತನ, ಕಾಲಕ್ಕೆ ಬೆಲೆಕೊಟ್ಟು ಕೆಲಸ ಮಾಡುವದು, ಶಿಸ್ತು, ಸಂಯಮ, ಆತ್ಮಗೌರವ ಇವು ವಿಶ್ವೇಶ್ವರಯ್ಯನವರ ಸಾಧನೆಗೆ ಯಶಸ್ಸಿನ ಸೂತ್ರಗಳು.
ಯಾವ ಸಮಸ್ಯೆಯನ್ನು ಅಲಕ್ಷಿಸುವಂತಿಲ್ಲ. ಚಿಕ್ಕದಿರಬಹುದು, ದೊಡ್ಡದಿರಬಹುದು. ಸಮಸ್ಯೆ ತಮಗೂಬ್ಬರಿಗೆ ಇಲ್ಲ ಬೇರೆಯವರಿಗೂ ಇದೆ ಎಂಬುದನ್ನು ಅರಿತು ಅದನ್ನು ಸಮರ್ಥವಾಗಿ ಎದುರಿಸುವ ಮಾರ್ಗವನ್ನು ಒತ್ತಡರಹಿತವಾಗಿ ಕಂಡುಕೊಳ್ಳಬೇಕು.
ಸುಧಾ ಚಂದ್ರನ್ ಒಬ್ಬ ನ್ರತ್ಯಗಾತಿ ಅವರು ಅಪಘಾತದಲ್ಲಿ ತಮ್ಮ ಒಂದು ಕಾಲನ್ನು ಕಳೆದುಕೊಂಡರೂ ದೃ ತಿಗೆಡದೆ ಕೃತಕ ಕಾಲು ಧರಿಸಿ ಸಾಧನೆ ಮಾಡಿದ್ದಾರೆ.

ಸೋಮಾರಿತನ ಬಿಟ್ಟು ತನ್ನನ್ನು ತಾನು ಸದಾ ತೊಡಗಿಸಿಕೊಂಡು ಪ್ರಯತ್ನದಿಂದ ಕಾರ್ಯ ಪ್ರವೃತ್ತನಾದ ವ್ಯಕ್ತಿ ಸೋಲಲು ಅಸಾಧ್ಯ.
ಉಲ್ಲಾಸ ಉತ್ಸಾಹಗಳಿಂದ ತಾಳ್ಮೆಯ ಅಡಿಪಾಯದ ಮೇಲೆ ಸಮಯಪಾಲನೆ ಯೊಂದಿಗೆ ನಮ್ಮ ಗುರಿಯನ್ನು ತಲುಪಿ ನಮ್ಮ ನಿಸ್ವಾರ್ಥ ಸೇವೆಯನ್ನು ಸಮಾಜಕ್ಕೆ ನೀಡುವ ಮೂಲಕ ಮಾನವೀಯತೆ ಬಾಂಧವ್ಯದಿ ಸಾಧನೆಯ ಹಾದಿಯನ್ನು ಕ್ರಮಿಸೋಣವೇ?


ಭಾರತಿ ನಲವಡೆ

ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ

2 thoughts on “

  1. ಈ ಲೇಖನ ತುಂಬಾ ಉತ್ತಮವಾಗಿದೆ ಟೀಚರ್

Leave a Reply

Back To Top