ಕಾವ್ಯ ಸಂಗಾತಿ
ಅರ್ಚನಾ ಯಳಬೇರು
ಗಜಲ್
ಬಸಿರ ಹೊತ್ತ ಭಾವಗಳ ಪ್ರಸವಿಸಲು ನಾನು ಬರೆಯುತ್ತೇನೆ
ಮೌನದ ತುಮುಲಗಳ ಪ್ರವಹಿಸಲು ನಾನು ಬರೆಯುತ್ತೇನೆ
ಬಸವಳಿದ ಬದುಕಲಿ ಒಡಲ ಬೇಗೆಗಿಲ್ಲ ಕಿಂಚಿತ್ತೂ ಕಿಮ್ಮತ್ತು
ಚಿತ್ತದಿ ಬರೆದ ಚಿತ್ತಾರವ ರಂಗಾಗಿಸಲು ನಾನು ಬರೆಯುತ್ತೇನೆ
ನೆನಪುಗಳ ನೇವರಿಕೆಯು ನಿತ್ಯೋತ್ಸವ ನಡೆಸುತಿದೆ ಬಾಳಲ್ಲಿ
ಸ್ವಪ್ನಗಳ ಶೈಶವವ ಸ್ವರ್ಣವಾಗಿಸಲು ನಾನು ಬರೆಯುತ್ತೇನೆ
ನೋಡಬೇಕು ಆತ್ಮ ಸೌಂದರ್ಯವ ಅಂತರಂಗದ ಗವಾಕ್ಷಿ ತೆರೆದು
ಮನ್ವಂತರ ಬರೆವ ಮಸ್ತಕವ ಮಜ್ಜಿಸಲು ನಾನು ಬರೆಯುತ್ತೇನೆ
ಹೃದಯ ವೀಣೆಯ ಮೀಟುತಲಿ ನಾದ ಹೊಮ್ಮಿಸು ಗೆಳೆಯಾ
ಪ್ರೀತಿ ಸುಧೆಗೆ ಪದ ಪುಷ್ಪವ ಅರ್ಚಿಸಲು ನಾನು ಬರೆಯುತ್ತೇನೆ
ಚೆನ್ನಾಗಿದೆ