ಸಾವಿತ್ರಮ್ಮಓಂ ಅರಸೀಕೆರೆ -ನಾ ಸಾಮಾನ್ಯ ರೀ

ಕಾವ್ಯ ಸಂಗಾತಿ

ನಾ ಸಾಮಾನ್ಯ ರೀ

ಸಾವಿತ್ರಮ್ಮಓಂ ಅರಸೀಕೆರೆ

ಜ್ಞಾನ ಭಂಡಾರವೇ
ಮನೆಯಲ್ಲಿರುವಾಗ
ಒಂದಲ್ಲ ಎರಡಲ್ಲ
ಅನೇಕ ಕ್ಷೇತ್ರದಲ್ಲಿ
ಕಾರ್ಯನಿರ್ವಹಿಸಿ
ಸಾಧಿಸಿರುವವ
ಸಾಮಾನ್ಯರಲ್ಲಿ ಸಾಮಾನ್ಯನಂತೆ/

ಅವಳ ಬಗ್ಗೆ
ಸಂಕಲನ ಗಟ್ಚಲೆ ಬರೆದಿರುವಾಗ
ಆಕೆಯ ಬಗ್ಗೆ ಏನೂ
ಅರಿಯದ ಮುಗ್ದನೆನ್ನುವನಿವ
ಸಾಮಾನ್ಯರಲ್ಲಿ ಸಾಮಾನ್ಯನಂತೆ//

ತನ್ಮ ಪುಸ್ತಕದ ಮೇಲೆ
ಅನೇಕ ಆಸಕ್ತರು
ಧೀರ್ಘ ಅಧ್ಯಯನ
ಮಾಡಿ ಡಾಕ್ಟರೇಟ್
ಪಡೆದಿರುವಾಗ
ಏನೂ ಅರಿಯದ
ಸಾಮಾನ್ಯರಲ್ಲಿ ಸಾಮಾನ್ಯವಂತೆ//

ಇರುವ ವಿಚಾರವ
ಪದಗಳಲ್ಲಿ ಸೇರಿಸಿ
ಬರೆದರೆ ಹೆಚ್ಚು
ಹೊಗಳಿದರೆ ಜಂಭ
ಬರುವದೆನ್ನುವನಿವ
ಸಾಮಾನ್ಯರಲ್ಲಿ ಸಾಮಾನ್ಯನಂತೆ//

ಪ್ರಯಾಣ ಮಾಡುವಾಗ
ಯಾರ ತಂಟೆ ಬೇಡವೆಂದು
ಕಾರಿನಲಿ ಕುಳಿತು
ಚಾಲಕ ಚಾಲನೆ‌ ಮಾಡುವಾಗ
ಸುತ್ತಮುತ್ತಲ
ದೃಶ್ಯಗಳ ‌ನೋಡಿಯೋ
ಬರೆಯುತ್ತಲೋ
ಓದುತ್ತಲಿರುವನಿವ
ಸಾಮಾನ್ಯರಲ್ಲಿ ಸಾಮಾನ್ಯನಂತೆ//

ಸಾವಿರಾರು
ವಿದ್ಯಾರ್ಥಿಗಳ ಮನ
ಗೆಲ್ಲುವಂತೆ ಪಾಠ
ಮಾಡಿದವ
ಭಾಷಣಕ್ಕೆ ನಿಂತರೆ
ಕ್ಷಣಾರ್ಧದಲ್ಲಿ
ಎಲ್ಲರ ಗಮನ ತನ್ನೆಡೆ
ಸೆಳೆಯುವಂತೆ
ಮಾತಾಡುವನಿವ
ಸಾಮಾನ್ಯರಲ್ಲಿ ಸಾಮಾನ್ಯನಂತೆ//

ಸಾಹಿತ್ಯದಲ್ಲೇ
ಕೈಲಾಸ ಕಾಣುತ್ತಿರುವ
ಅನೇಕರ ಪ್ರೇರಣೆ
ನೀಡುವ ಕೇವಲ
ಹುಲು ಮಾನವ ನಾನು
ಎನ್ನುವನಿವ
ಸಾಮಾನ್ಯರಲ್ಲಿ ಸಾಮಾನ್ಯನಂತೆ//

ತನಗಿಡಿಸದ
ವಿಚಾರವ ಕಡ್ಡಿ
ತುಂಡಾಗುವಂತೆ
ಖಂಡಿಸುವ
ಅದ್ಭುತ ಶೈಲಿಯಲಿ
ಸಾಹಿತ್ಯ ರಚನೆಯ
ಚತುರನಿವ
ಏನೂ ಗೊತ್ತಿಲ್ಲದ
ಸಾಮಾನ್ಯರಲ್ಲಿ ಸಾಮಾನ್ಯನಂತೆ//


ಸಾವಿತ್ರಮ್ಮಓಂ ಅರಸೀಕೆರೆ

One thought on “ಸಾವಿತ್ರಮ್ಮಓಂ ಅರಸೀಕೆರೆ -ನಾ ಸಾಮಾನ್ಯ ರೀ

  1. ತುಂಬಾ ಮನಮುಟ್ಟುವ ಹಾಗೆ ಬರೆದಿರುವಿರಿ ಮೇಡಂ. ಅಭಿನಂದನೆಗಳು.
    ಹಮೀದಾ ಬೇಗಂ. ಸಂಕೇಶ್ವರ.

Leave a Reply

Back To Top