ಕಾವ್ಯ ಸಂಗಾತಿ
ಶಾಲಿನಿ ರುದ್ರಮುನಿ
ಹನಿಗಳು
೧ ಮಳೆ
ನೆಲದ ಬಿಕ್ಕು
ಪ್ರೀತಿ ಉಣಿಸಿ ಬಾನು
ಹಸಿರಾಗಿದೆ…
೨,ಹೇಮಂತ ಋತು
ತೇವಗೊಂಡಿದೆ
ಮತ್ತೆ ಆರುವ ಮುನ್ನ
ಹೇಮಂತ ಋತು…
೩ ನಿರಾಳ
ಕಣ್ಣ ಹನಿಯ
ಪರದೆ ಜಾರುತಿದೆ
ಬತ್ತಲಾಗಲು…
೪ ಪ್ರೀತಿ
ಮನದ ನೋವು
ವಿರಸ ತೊರೆಯಲು
ಹೊಂಚು ಹಾಕಿದೆ…
೫ ಪ್ರೀತಿ
ಕಣ್ಣ ಹೊಳಪು
ಕಾದಿದೆ ಸನ್ನೆಮಾಡಿ
ಸರಸಕೆಂದು…
೬ ಪ್ರತಿಷ್ಠೆ
ಗುಂಗು ಹಿಡಿದು
ಬಿದ್ದಿದೆ ಲೋಕದಲ್ಲಿ
ಪ್ರತಿಷ್ಠೆ ಪಥ…
೭ ಭ್ರಷ್ಟಾಚಾರ
ಮೋಟು ಗೋಡೆಯ
ಹಿಂದಿದೆ ಆದರ್ಶದ
ಹೆದ್ದಾರಿ ಅಂಚು…
೮ ವರ್ಷ ಋತು
ಹಸಿರುಸಿರ
ಮುಳೆಯ ಋತು ಗಾನ
ಗಿರಿ ಕಾನದಿ…
೯ ಮಳೆ
ಒಲವು ತಾಗಿ
ಹಸಿರೂಡಿದೆ ಇಳೆ
ಮಳೆಯನುಂಡು…
೧೦ ಸೂರ್ಯೋದಯ
ಉದಿಪ ಸೂರ್ಯ
ಸಿಂಧೂರವಾಗುತಿದೆ
ಬುವಿಹಣೆಗೆ…
ಶಾಲಿನಿ ರುದ್ರಮುನಿ