ಕಾವ್ಯ ಸಂಗಾತಿ
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ
ಗಜಲ್
ಮೊಸಕ್ಕೆ ಮೊಸವೇ ಉತ್ತರ ನೀಡುವುದು ತಾಳು.
ದ್ರೋಹಕೆ ದ್ರೋಹವೆ ಫಲಿತಾಂಶ ಹೇಳುವದು ತಾಳು.
ದಾರಿ ಬಿಟ್ಟರೆ ಗುರಿ ತಲುಪಲಾಗುದೇನು ಹೇಳು.
ನೀ ಬದಲಿಸಿದ ದಾರಿಯೇ ಮುಳ್ಳಾಗುದು ತಾಳು
ಕಣ್ಣಿಗೆ ಬಟ್ಟಿ ಕಟ್ಟಿ ಎಷ್ಟಂತ ಆಟ ಆಡುವೆ ನೀನು
ಕುಣಿಯುವ ಕಾಲೆ ತಗ್ಗಿನಲ್ಲಿ ಕೆಡುವುದು ತಾಳು.
ಸುಳ್ಳು ಬಿತ್ತಿ ಸತ್ಯ ಬಯಸುವುದು ಎಷ್ಟು ಸರಿ.
ಬಿತ್ತಿದ ಸುಳ್ಳೆ ಮುಳ್ಳಾಗಿ ಚುಚ್ಚುವುದು ತಾಳು.
ಬದುಕಿನ ಮುಖಪುಟ ಚಂದಿದ್ದರೇನು ಬಂತು.
ಒಳಪುಟವನು ನಿನ್ನಿಂದಲೇ ಓದಿಸಲಾಗುವುದು ತಾಳು.
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಕೊಪ್ಪ