ಮಮತಾ ಶೃಂಗೇರಿ ಕವಿತೆ-ಅವಿನಾಶಿಯಾಗಲಿ.

ಕಾವ್ಯ ಸಂಗಾತಿ

ಅವಿನಾಶಿಯಾಗಲಿ.

ಮಮತಾ ಶೃಂಗೇರಿ.

ನಾಶವಾಗಲಿ ದುರುಳತನ ದುಷ್ಟತನ,
ಮಾನವೀಯತೆ ಮರೆತ ದುಷ್ಟ ಪ್ರವೃತ್ತಿ.
ನಾಶವಾಗಲಿ ಕೆಟ್ಟ ಮನಸ್ಥಿತಿ,
ನಾಶವಾಗಲಿ ಕಾಮ ಕ್ರೋಧ ಮೋಹ,
ಲೋಭ ಮದ ಮತ್ಸರ.

ನಾಶವಾಗಲಿ ಕೀಳರಿಮೆ, ಸ್ವಪ್ರತಿಷ್ಟೇ,
ಅಹಂಕಾರ, ಆಸ್ತಿಅಂತಸ್ತಿನ ಅತೀ ಬಯಕೆ.
ನಾಶವಾಗಲಿ ಇನ್ನು ಬೇಕು ಮತ್ತು ಬೇಕೆಂಬ ದುರಾಸೆ.
ನಾಶವಾಗಲಿ ತಾನೊಬ್ಬನೇ ಸುಖವಾಗಿರಬೇಕು,
ಎಂಬ ಮನೋಭಿಲಾಷೆ.

ಅವಿನಾಶಿಯಾಗಲಿ ಸ್ನೇಹ ಪ್ರೀತಿ ಕಾಳಜಿ,
ಇನ್ನೊಬ್ಬರಿಗೆ ನೆರವಾಗುವ ಮನೋಭಾವ. ಅವಿನಾಶಯಾಗಲಿ ಎಲ್ಲವೂ ಆ ಭಗವಂತ,
ಕೊಟ್ಟ ಭಿಕ್ಷೆ, ತೃಣ ಮಾತ್ರವಾದರೂ ತಿರುಗಿ,
ನಾವು ಕೊಡೋಣ ಎಂಬ ಆಕಾಂಕ್ಷೆ.

ಅವಿನಾಶಿಯಾಗಲಿ ಉತ್ತಮ ಗುಣ,
ಸನ್ನಡತೆ, ಸಂವೇದನೆ,
ಅವಿನಾಶಿಯಾಗಲಿ ದೇವರು,
ಗುರು ಹಿರಿಯರಲ್ಲಿ ಭಯ ಭಕ್ತಿ,
ಕಿರಿಯರಲಿ ಪ್ರೀತಿ ಕಾಳಜಿ.
ನಾಶವಾಗುವ ಈ ನಮ್ಮ ಜೀವನ,
ನಮ್ಮ ಉತ್ತಮ ನಡವಳಿಕೆಯಿಂದ,
ಅವಿನಾಶಯಾಗಲಿ ಈ ಜಗದಲ್ಲಿ.


ಮಮತಾ ಶೃಂಗೇರಿ.

2 thoughts on “ಮಮತಾ ಶೃಂಗೇರಿ ಕವಿತೆ-ಅವಿನಾಶಿಯಾಗಲಿ.

Leave a Reply

Back To Top