ಕಾಡಜ್ಜಿ ಮಂಜುನಾಥ-“ಮರೆಯದ ಮಾಣಿಕ್ಯ ಅಪ್ಪ!!

ಕಾವ್ಯ ಸಂಗಾತಿ

“ಮರೆಯದ ಮಾಣಿಕ್ಯ ಅಪ್ಪ!!”

ಕಾಡಜ್ಜಿ ಮಂಜುನಾಥ

ಮನೆಯ ಭಾರವ
ಹೊತ್ತು ನಡೆವ
ನಸುನಗೆಯ
ಮೂರ್ತಿ;
ಜೇನುಗೂಡಿನಂತೆ
ಕಷ್ಟದ ಪರಿಧಿಯಲಿ
ತಾನು ಬೆಂದರೂ,
ಮಧುವಂಚುವ
ಸಹನಾಮೂರ್ತಿ;
ಕರ್ಮದ ಬೆವರಲಿ
ಕಾಯವ ಸವೆಸಿ
ನೋವನುಂಡರೂ
ಮನೆಯ ನಡೆಸುವ
ಕರುಣೆಯ ಕೀರ್ತಿ;
ರಟ್ಟೆಯ ಶಕ್ತಿಯಲಿ
ಬುದ್ದಿಯ ಯುಕ್ತಿಯಲಿ
ಜೀವನ ಮೌಲ್ಯದ
ಸ್ವಯಂ ಸಿದ್ದಾಂತವ ಪಾಲಿಸಿದ
ದಕ್ಷಿಣಾಮೂರ್ತಿ;
ಹಣ ಅಂತಸ್ತಿನ ಮೋಹವ
ತೊರೆದು ಶಿಕ್ಷಣವೆಂಬ
ಮಂತ್ರದಿ ಮಕ್ಕಳ
ಭವಿಷ್ಯ ರೂಪಿಸಿದ
ಅಕ್ಷರ ಮೂರ್ತಿ;
ಪರರ ಧನವ ಬಯಸದ ಮನ
ದುಡಿದು ತಿನ್ನುವ ಮೈಮನ
ಕೈಯೊಡ್ಡಿ ಬೇಡದೆ
‌ಸಹಾಯಹಸ್ತದ
ಮೌಲ್ಯವ ಬೆಳೆಸಿದ
ಕರುಣೆಯ ಮೂರ್ತಿ;
ಪದಗಳಲಿ ವರ್ಣಿಸಲಾಗದ
ಮಾತಿನಲಿ ಹೇಳಲಾಗದ
ಜೀವನದಿ ಎಂದೂ
ಮರೆಯಲಾಗದ ಮಾಣಿಕ್ಯ
ನನ್ನಪ್ಪ!!!!


Leave a Reply

Back To Top