ಡಾ.ದಾನಮ್ಮ ಝಳಕಿ-ಅಪ್ಪ

ಡಾ.ದಾನಮ್ಮ ಝಳಕಿ-ಅಪ್ಪ

ಹಗಲಿರಳು ದುಡಿದು
ಮಕ್ಕಳ ಭವಿಷ್ಯರೂಪಿಸಿ
ಕಷ್ಟಗಳನು ನುಂಗಿ
ಮೊಗದಲ್ಲಿ ನಗೆ ತುಂಬಿ
ಮಕ್ಕಳಿಗೆ ರಾಜ, ರಾಣಿ ಎನುತಾ
ಶಕ್ತಿ ತುಂಬಿ, ಛಲ ಮೂಡಿಸಿ
ಬದುಕಿಗೆ ದಾರಿ ಕಟ್ಟಿಕೊಟ್ಟು
ಹೆಗಲ ಮೇಲೆ ಜಗವ ತೋರಿಸಿ
ಜಗದ ಗೊಡವೆ ಬದಿಗೆ ಸರಿಸಿ
ಸುಖಸಂಪತ್ತಿನ ಅಂಗಿ ತೊಡಿಸಿ
ಭದ್ರತೆಯ ಆಸರೆಯಾಗಿ
ಜೀವನದಲ್ಲಿ ಪ್ರೀತಿತುಂಬಿದ
ಅಪ್ಪನ ನೆನೆಯಲು
ಒಂದೇ ದಿನ ಸಾಕೇ?
ಪಾಶ್ಚಾತೀಕರಣದ ಆಟದಲಿ
ಅಪ್ಪನ ದಿನದ ಆಚರಣೆಯಲಿ
ಸ್ಟೇಟಸ್ ದಲಿ ಮಿಂಚುವ ಅಪ್ಪ
ಮಕ್ಕಳ ಪ್ರೀತಿ ಕಾತುರದಲಿ
ವೃದ್ಧಾಶ್ರಮದಲಿ ನೋಡುತಿರುವಾ
ಬೇಡ ಒಂದು ದಿನದ ಆಚರಣೆ
ಜಿವನವಿಡೀ ನೆನೆದರೂ ತೀರದು
ನಮ್ಮ ಬಾಳಿನ ಭದ್ರತೆಗೆ ಕಾರಣ
ಅಪ್ಪನೆಂಬುದು ಮರೆಯದಿರಿ
ವೃದ್ಧಾಶ್ರಮಕೆ ದೂಡದಿರಿ

———————


Leave a Reply

Back To Top