ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಬೆಳಗು-ಬೆಳಕು

ಪಾಲಕರೊಬ್ಬರು ತಮ್ಮ ಮಗನ ಬಗ್ಗೆ ಅಸಾಧ್ಯ ಕೋಪವನ್ನು ತಾಳಿ”ಎಷ್ಟು ಹೇಳಿದರೂ ಈ ಹುಡುಗ ಪ್ರತಿದಿನ ಏಳು ಗಂಟೆಗೆ ಏಳುತ್ತಾನೆ.ಬೆಳಗ್ಗೆ ಐದು ಗಂಟೆಗೆ ಏಳಲು ಏನು ದಾಡಿ?ಇವನಿಗೆ, ಎಷ್ಟು ಹೇಳಿದರೂ ಕೇಳೋದಿಲ್ಲ”ಎಂದು ಸಿಡಿಮಿಡಿಗೊಂಡರು.ಸಾಮಾನ್ಯವಾಗಿ ಆ ಮನೆಯಲ್ಲಿ ಏಳು ಗಂಟೆಗೆನೇ ಎಲ್ಲರೂ ಏಳುತಿದ್ದದ್ದು.ಚಿಕ್ಕ ವಯಸ್ಸಿನಿಂದ ಆ ಹುಡುಗನಿಗೂ ಅದೇ ಅಭ್ಯಾಸವಾಗಿ ಬಿಟ್ಟಿದೆ.ಈಗ ದಿಢೀರನೆ ಅವನನ್ನು ಬೆಳಗಿನ ಜಾವ ಏಳಲು ಹೇಳಿದರೆ ಏಳಲು ಸಾಧ್ಯವಾಗುವುದಿಲ್ಲ ಎಂದು ಅಪ್ಪನಿಗೆ ಅರ್ಥವಾಗಲಿಲ್ಲ. ಅದು ಮಾತ್ರವಲ್ಲ ಆ  ಮನೆಯಲ್ಲಿ ಎಲ್ಲರೂ ರಾತ್ರಿ ಹನ್ನೊಂದು -ಹನ್ನೆರಡು ಗಂಟೆಯವರೆಗೂ ಎಚ್ಚರವಾಗಿಯೇ ಇರುತ್ತಿದ್ದರು. ಮಾಯಪೆಟ್ಟಿಗೆಯ (ದೂರದರ್ಶನ )ಕಾರ್ಯಕ್ರಮ ವೀಕ್ಷಣೆ, ಯಾವುದೋ ಮಾತು, ಹರಟೆ, ಆಟ ನಡೆಯುತ್ತಲೇ ಇರುತಿತ್ತು. ಹೀಗಿದ್ದಾಗ ಬೆಳಿಗ್ಗೆ ಐದು ಗಂಟೆಗೆ ಏಳುವದು ಸಾಹಸವೇ…. ಸರಿ.

‘ಐದು ಗಂಟೆಗೆಲ್ಲಾ ಎದ್ದು ಏನು ಮಾಡಬೇಕು? ಪರೀಕ್ಷೆ ಇನ್ನು ದೂರವಿದೆ, ತಯಾರಾಗಿ ಶಾಲೆಗೆ ಹೋಗಲು ಅಷ್ಟು ಬೇಗ ಏಕೆ ಏಳಬೇಕು? ನಿಧಾನವಾಗಿ ಏಳುವುದರಿಂದ ಯಾರಿಗೆ ಯಾವ ನಷ್ಟವಿದೆ ‘ಎಂದು ಕೇಳುವ ಮಟ್ಟಕ್ಕೆ ನಮ್ಮ ಮಕ್ಕಳು ಬೆಳೆದಿದ್ದಾರೆ.
ನಿಜ ಸ್ವಲ್ಪ ವೈಚಾರಿಕತೆಗೆ  ಓ ರೆಹಚ್ಚಿದಾಗ ಭವಿಷ್ಯದ ನಿರ್ಮಾಪಕರಾದ ನಮ್ಮ ಕನಸಿಗೆ ಬಣ್ಣ ಬಳೆಯುವ ನಮ್ಮ ಮಕ್ಕಳ ಅಧ್ಯಯನಶೀಲತೆಗೆ ಸ್ಪಷ್ಟ ನಿಲುವಿನ ಅನಿವಾರ್ಯತೆ ಇದೆ.

ಪ್ರತಿದಿನದ ಹೊಸ ಬೆಳಗು ಅವರ ವಿದ್ಯಾರ್ಥಿ ಜೀವನಕೆ ಹೊಸ ಬೆಳಕಾಗಬೇಕು. ಸಾಮಾನ್ಯವಾಗಿ ಮುಂಜಾನೆ 4ಗಂಟೆಯಿಂದ 5.30ರ ವರೆಗೆ ಬ್ರಾಹ್ಮೀ ಮುಹೂರ್ತ ಇರುವುದರಿಂದ ತುಂಬಾ ಶುಭವಾಗುತ್ತೆ ಅಲ್ಲದೆ ಓದಲು ಪ್ರಶಾಂತವಾದ ವಾತಾವರಣ ಜೊತೆಗೆ ಓದಿದ ವಿಷಯ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಉಳಿಯುತ್ತೆ. ಮನಸು ಕೂಡ ದಿನಪೂರ್ತಿ ಆಹ್ಲಾದಕರವಾಗಿದ್ದು ಚೈತನ್ಯದಿಂದ ಕೂಡಿರುತ್ತದೆ.
ಹಿಂದೆ ನಮ್ಮ ಹಿರಿಯರು ಹೇಳುತ್ತಿದ್ದರು, ಬ್ರಾಹ್ಮೀ ಮುಹೂರ್ತದಲ್ಲಿ ಶಿವಪಾರ್ವತೀಯರು ನಂದಿ ಮೇಲೆ ಕುಳಿತು ಆಕಾಶದಿ ವಿಹಾರ ಮಾಡಲು ನಮ್ಮನ್ನು ಹರಸಿಯೇ ಹೋಗುತ್ತರೆಂದು. ಪ್ರಪಂಚದಲ್ಲಿ ಬೆಳ್ಳಂಬೆಳಗು ಏಳುವ ಸಂಸ್ಕೃತಿ ನಮ್ಮದು.’ಅರುಣೋದಯಕ್ಕೆ ಜಾಗೃತನಾಗು ‘ಎಂಬ ವಾಣಿಯಂತೆ ಅರುಣೋದಯಕ್ಕೆ ಮೊದಲೇ ಎದ್ದು ಪ್ರಾಥರ್ವಿಧಿಗಳನ್ನು ಮುಗಿಸಿಕೊಂಡು ಆಗಸದಲ್ಲಿ ಭಾಸ್ಕರ ಚಲ್ಲುವ  ವರ್ಣಜಾಲಗಳನ್ನು  ಕಾಣುವುದರಲ್ಲಿ ಪ್ರಕೃತಿ ಧನ್ಯತೆಯ ಭಾವ ಮನಕೆ ನವಿರಾಗಿ ನವಚೇತನವನ್ನೀಯುತ್ತದೆ. ದೇವರನ್ನು ಧ್ಯಾನಿಸುವವರು ಮೂರು ಗಂಟೆಗೆದ್ದು ಯೋಗ, ಪ್ರಾಣಾಯಾಮ ಮಾಡುವ ಸನಾತನ ಸಂಪ್ರದಾಯ ಕೂಡ ನಮ್ಮದಾಗಿದೆ.
ಬೆಳಗಿನ ಸಮಯ ಸುತ್ತ ಮುತ್ತಲೂ ಶಾಂತವಾದ  ಹಸಿರ ಪರಿಸರ. ಕೆಲ ಹೊತ್ತು ನಡಿಗೆ, ಓಡುವದು, ಸರಳ ವ್ಯಾಯಾಮಗಳನ್ನು ಮಾಡಿದಾಗ ಉತ್ತಮವಾದ ಆರೋಗ್ಯ ನಮ್ಮದಾಗುತ್ತದೆ.
ಪ್ರತಿದಿನ ನಾವು ರಾತ್ರಿ ಮಲಗುವಾಗ ಬೆಳಗಿನಿಂದ ಮಲಗುವವರೆಗಿನ ನಾವು ಮಾಡಿದ ಮಾತು ಕೃತಿಗಳ ಆತ್ಮಾ ವಲೋಕನ ಲೋಕನ  ಅವುಗಳಿಂದ ನೊಂದವರನ್ನು ನೆನೆದು ನಾಳೆಯ ಬೆಳಗನ್ನು ಮತ್ತೊಬ್ಬರ ಕಷ್ಟಕ್ಕೆ ಮಿಡಿಯುವ ಮೂಲಕ ಬೆಳಕಾಗಿಸುವ ಸಂಕಲ್ಪ ಮಾಡುವ ಆಂತರ್ಯ ನಮ್ಮದಾಗಬೇಕು.
ಪತ್ರಿಕೆ, ಕಥೆ ಪುಸ್ತಕ, ಮ್ಯಾಗಜಿನಗಳನ್ನು ಇದಕ್ಕೂ ಪೂರ್ವದಲ್ಲಿ ನಮ್ಮ ಮಹಾಕಾವ್ಯಗಳ ತಿರುಳನ್ನು ತಿಳಿದು ಎಲ್ಲಾ ಭಾಷೆ, ಧರ್ಮ, ಸಂಸ್ಕೃತಿಗಳನ್ನು ಗೌರವಿಸುವ ಸಂಸ್ಕಾರವನ್ನು ಬೆಳೆಸುವದು ಅವಶ್ಯವಾಗಿದೆ.

ವೇಳೆಯೇ ಹೋಗುತ್ತಿಲ್ಲ ಎನ್ನುವವರು ಬೆಳಿಗ್ಗೆ ಬೇಗನೆ ಏಳುವ ರೂಢಿಯನ್ನು ಬೆಳೆಸಿಕೊಂಡರೆ ಮನದಲ್ಲಿ ಪ್ರಸನ್ನತೆ ಸೂಸಿ ನವ ಕಾರ್ಯ ಕನಸುಗಳಿಗೆ ಅಡಿಪಾಯ ಹಾಕಿದಾಗ ವೇಳೆ ಕಳೆದದ್ದೇ ಗೊತ್ತಾಗುತ್ತಿಲ್ಲ ಎಂದು ಸದಾ ಕಾಯಕದಿ ಮುಳುಗಿ ತಮ್ಮ ಕಾರ್ಯ ಸಾಧನೆಗೆ ಹಾ ತೋರಿಯುತ್ತಾರೆ.

ಜೀವನದ ಏರಿಳಿತಗಳಲ್ಲೂ ಕಳೆದ ದುಃಖದ ದಿನಗಳ ಮರೆತು ನಾಳಿನ ಹೊಸ ಬೆಳಗಿಗೆ ಹೊಸ ಘಳಿಗೆಗೆ ಹೊಸ ವಿಚಾರದೊಂದಿಗೆ ಕಾರ್ಯೋನ್ಮುಖರಾಗಬೇಕಿದೆ.

“ಇರುವ ಭಾಗ್ಯವ ನೆನೆದು ಬಾರೆ ನೆಂಬುದನು  ಬಿಡು /ಹರುಷಕಿದು ದಾರಿಯಲೋ ಮಂಕು ತಿಮ್ಮ /ಎಂಬ ಡಿ ವಿ ಗುಂಡಪ್ಪನವರ ಕವಿವಾಣಿಯಂತೆ ಹೊಸ ಬೆಳಗಿಗೆ ಹೊಸ ಕನಸ ಹೊಸೆದು ಬೆವರ ಬಸಿದು ಭವಿಷ್ಯದ ಬೆಳಕ ಆರಸೋಣ ಅಲ್ಲವೇ?


ಭಾರತಿ ನಲವಡೆ

ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ

3 thoughts on “

Leave a Reply

Back To Top