ಕಾವ್ಯಸಂಗಾತಿ
ಸುಧಾ ಪಾಟೀಲ
ಭಾವನೆಗಳ ಸಂತೆ
ಭಾವನೆಗಳ ಸಂತೆಯಲ್ಲಿ
ಕಳೆದುಹೋದೆ ನಾನು
ನನ್ನತನದ ಪರಿವೆಯಿಲ್ಲದೆ
ಹುಡುಕಿಕೊಡುವಿರಾ ನನ್ನನು
ಭಾವನೆಗಳ ಸಂತೆಯಲ್ಲಿ
ಮಿಂದುಹೋದೆ ನಾನು
ಶುಭ್ರಳಾಗಿ ಹೊರಬರಲಾರದೆ
ಸಹಾಯ ಮಾಡುವಿರಾ ನನಗೆ
ಭಾವನೆಗಳ ಸಂತೆಯಲ್ಲಿ
ಮಿಂಚುಹುಳುವಿನಂತೆ ಚಡಪಡಿಸಿದೆ
ಒಮ್ಮೆ ಮಿಂಚಿ, ಒಮ್ಮೆ ಸುಮ್ಮನಿದ್ದು ತಡಕಾಡಿದೆ
ಕೈ ಎತ್ತಿ ಹಿಡಿಯುವಿರಾ ನನ್ನನು
ಭಾವನೆಗಳ ಸಂತೆಯಲ್ಲಿ
ಶಬ್ದಗಳದೇ ಕಾರುಬಾರು
ಎಲ್ಲಿ ನೋಡಿದರಲ್ಲಿ
ಸದ್ದು ಗದ್ದಲದ ಭರಾಟೆ
ಶಾಂತಿಯ ದಯಪಾಲಿಸುವಿರಾ ಎನಗೆ.