ಅಮ್ಮನಿಗೊಂದು ನಮಸ್ಕಾರ
ಪ್ರಜ್ವಲಾ ಶೆಣೈ
ತಾಯ ಮಡಿಲು
ನನ್ನಮ್ಮನ ಮಡಿಲಲ್ಲಿ ನಾ
ಮಲಗಿದ್ದೆ ಮಗುವಾಗಿ
ನೂರು ಕಷ್ಟಗಳ ಮರೆಯಲು
ದುಃಖ ದುಮ್ಮಾನಗಳ ಅಳಿಸಲು
ನನ್ನಮ್ಮನ ಒಡಲಲ್ಲಿ ನಾ
ಅವಿತಿದ್ದೆ ಭ್ರೂಣವಾಗಿ
ರಕ್ತ ಮಾಂಸಗಳ ಸೇರಲು
ಕರುಳ ಬಳ್ಳಿಯ ಬೆಸೆಯಲು
ನನ್ನಮ್ಮನ ನೆರಳಲ್ಲಿ ನಾ
ಬೆಳೆದಿದ್ದೆ ಶಿಶುವಾಗಿ
ಮಾತೃ ಪ್ರೇಮವ ಸುರಿಸಲು
ಸ್ಪರ್ಶ ಸುಖವನು ಸವಿಯಲು
ನನ್ನಮ್ಮನ ಸೆರಗಲ್ಲಿ ನಾ
ಅಡಗಿದ್ದೆ ಕಂದನಾಗಿ
ಅಪ್ಪುಗೆಯ ಬಯಸಲು
ತಬ್ಬುಗೆಯ ಹೊಂದಲು
ಪ್ರಜ್ವಲಾ ಶೆಣೈ
Good to read….. all the best
Nice one! beautiful memory!
ತಾಯಿಯ ಕ್ಷಮಾ ಗುಣ, ಆಕೆಯ ತಾಳ್ಮೆ, ಮಕ್ಕಳ ಅಭಿವೃದಿಗಾಗಿ ಆಕೆಯ ತಪಸ್ಸು ಎಲ್ಲವೂ ವರ್ಣಿಸಲಾಸಾಧ್ಯ ಜೈ ಮಹಾತಾಯಿ ಪ್ರತ್ಯಕ್ಷ ದೇವರು