ಸುಧಾ ಪಾಟೀಲ್ ಗಜಲ್

ಕಾವ್ಯ ಸಂಗಾತಿ

ಅಸುಧಾ ಪಾಟೀಲ್

ಸುಧಾ ಪಾಟೀಲ್


ಗಜಲ್

ಬದುಕಿಗಾಗಿ ರೆಕ್ಕೆ ಬಡಿದು ದಣಿದೆನು ನಾನು
ನನ್ನ ಅಸ್ಮಿತೆಗಾಗಿ ಹಗಲಿರುಳು ಹೋರಾಡಿದೆನು ನಾನು

ಕೈಮೀರಿ ಹೋಗುತಿವೆ ಆಂತರ್ಯದ ದುಗುಡಗಳು
ಒಳಗಣ ದುಮ್ಮಾನಗಳು ಚಿಮ್ಮದಂತೆ ಅದುಮಿದೆನು ನಾನು

ಅವನ ಒಲವಿಗಾಗಿ ಅನವರತ ಪರಿತಪಿಸಿ ಸೋತುಹೋದೆ
ಹೃದಯದ ಹೆಪ್ಪುಗಟ್ಟಿದ ಮಾತುಗಳನ್ನು ಕಲ್ಲಾಗಿಸಿದೆನು ನಾನು

ಬೇರೂರಿ ಕುಳಿತ ಮನದ ಅಂಧಕಾರವನ್ನು ಹೊಡೆದೋಡಿಸಲಾರೆ
ಭಾವುಕಳಾದರೂ ಗುಟ್ಟು ಹೇಳಲು ಬೇಸರಿಸಿದೆನು ನಾನು

ಆಗ ನೀ ಬಂದೆ ಬಾಳಬೆಳದಿಂಗಳಿನಲ್ಲಿ ಶಶಿಯಂತೆ
ಸುಧೆಯಂತೆ ಹರಿದು ಮಿಲನಗೊಳ್ಳಲು ತವಕಿಸಿದೆನು ನಾನು


ಸುಧಾ ಪಾಟೀಲ್




ಕವಿ ಪರಿಚಯ:

ಸುಧಾ ಪಾಟೀಲ್ ಬೆಳಗಾವಿ ಕವಿಯಿತ್ರಿ… ಲೇಖಕಿಹಲವಾರು ಪುಸ್ತಕಗಳಲ್ಲಿ ಕವನಗಳು ಮತ್ತು ಲೇಖನಗಳು ಪ್ರಕಟಗೊಂಡಿವೆ.ಡಾ || ಜ . ಚ . ನಿ ಅವರ ಬಗೆಗೆ ” ಬದುಕು ಬರಹ ” ಕಿರುಹೊತ್ತಿಗೆ ಪ್ರಕಟಗೊಂಡಿದೆ.
ಚೇತನಾ ಫೌಂಡೇಶನ್…ಕನ್ನಡ ಪರ ಕಾಳಜಿ ಮತ್ತು ಸಾಮಾಜಿಕ ಸೇವೆಗಾಗಿ..ರಾಜ್ಯೋತ್ಸವ ಪ್ರಶಸ್ತಿ

—————————————[

Leave a Reply

Back To Top