ಡಾ.ರೇಣುಕಾತಾಯಿ.ಸಂತಬಾ.-ಗಜಲ್

ಕಾವ್ಯ ಸಂಗಾತಿ

ಡಾ.ರೇಣುಕಾತಾಯಿ.ಸಂತಬಾ.

ಗಜಲ್

ನಾ ಯಶೋಧರೆ ಕೇಳುವೆನೀಗ ಮನದ ಮಾತು ಹೇಳದವನು ನೀ ಸಿದ್ಧಾರ್ಥ್
ನಾ ಯಶೋಧರೆ ಕೇಳುವೆನೀಗ ಹೃದಯ ಬಡಿತ ನಿಲ್ಲಿಸಿದವನು ನೀ ಸಿದ್ಧಾರ್ಥ//

ಮಧ್ಯರಾತ್ರಿ ತ್ಯಜಿಸುವಾಗ ಹಿಂಸೆಯ ಕಲ್ಪನೆ ಕಾಣಲಿಲ್ಲವೇಕೆ ಸಿದ್ಧಾರ್ಥ
ನಾ ಯಶೋಧರೆ ಕೇಳುವೆನೀಗ ಅಹಿಂಸೆ ಚಕ್ರವನೀಗ ತಿರುಗಿಸಿದವನು ನೀ ಸಿದ್ಧಾರ್ಥ//

ಬೋಧಿ ವೃಕ್ಷದಡಿಯಲಿ ಸತಿಸುತರ ನೆನಪು ಕಾಡಲಿಲ್ಲವೇಕೆ ಸಿದ್ಧಾರ್ಥ
ನಾ ಯಶೋಧರೆ ಕೇಳುವೆನೀಗ ರಾಹುಲನ ಮಮತೆ ಮರೆತವನು ನೀ ಸಿದ್ಧಾರ್ಥ //

ಲೋಕದ ನೋವಿಗೆ ಮುಲಾಮು ಹಚ್ಚಲು ನಡುರಾತ್ರಿಯೆ ಹೋಗಬೇಕಿತ್ತೆ ಸಿದ್ಧಾರ್ಥ್
ನಾ ಯಶೋಧರೆ ಕೇಳುವೆನೀಗ ಪ್ರಶ್ನೆಗಳಿಗೆಲ್ಲ ಉತ್ತರಿಸದವನು ನೀ ಸಿದ್ಧಾರ್ಥ್

ಬದುಕಿನಾರ್ಥ ಜಗಕೆ ಅರುಹುವ ಮುನ್ನ ಈ ತಾಯಿನ ಮರೆತೆಯೇನು ಸಿದ್ಧಾರ್ಥ
ನಾ ಯಶೋಧರೆ ಕೇಳುವೆನೀಗ ಬಯಲು ಆಲಯಕ್ಕಷ್ಟೆ ಬೆಳಕಾದವನು ನೀ ಸಿದ್ಧಾರ್ಥ//


ಡಾ.ರೇಣುಕಾತಾಯಿ.ಸಂತಬಾ.ರೇಮಾಸಂ

ಕವಿ ಪರಿಚಯ:

ಡಾ. ರೇಣುಕಾತಾಯಿ. ಎಂ.ಸಂತಬಾ. ರೇಮಾಸಂ ಹಿಂದಿ ಭಾಷಾ ಅಧ್ಯಾಪಕಿ.
ರಾಜ್ಯ ಸಂಪನ್ಮೂಲ ವ್ಯಕ್ತಿ, ಪ್ರಭಾರಿ ಉಪ ಪ್ರಾಂಶಪಾಲರುಎಸ್ ಆರ್ ಎಸ್ ಕರ್ನಾಟಕ ಪಬ್ಲಿಕ್ ಸ್ಕೂಲ್ ರಾಯನಾಳ ವಾಸಸ್ಥಳ-ಹುಬ್ಬಳ್ಳಿ


Leave a Reply

Back To Top