ರೋಹಿಣಿ ಯಾದವಾಡ-ಚೋಟಿ ಬೆಹರ್ ಗಜಲ್

ಕಾವ್ಯ ಸಂಗಾತಿ

ಚೋಟಿ ಬೆಹರ್ ಗಜಲ್

ರೋಹಿಣಿ ಯಾದವಾಡ

ಬದುಕಿಗಾಗಿ ರೆಕ್ಕೆ ಬಡಿದು ದಣಿದೆನು ನಾನು
ಒಲವ ಪ್ರೀತಿಗೆ ಹಂಬಲಿಸಿ ಬಂದಿಹೆನು ನಾನು

ಬಿದ್ದೆನೆಂದರೆ ಸಾಕು ಎದ್ದು ನಿಲ್ಲವುದು ಕಠಿಣ
ತುಳಿದ ಗರಿಕೆಯಂತೆ ಚಿಗ್ರಿ ನಿಲ್ಲುವೆನು ನಾನು

ಪ್ರೀತಿಯೇ ಬಾಳಿನ ಬೆಳಕು ಎಂಬುದು ಸುಳ್ಳೇನು
ಹಿಡಿ ಪ್ರೀತಿಗಾಗಿ ಕಣವರಿಸಿ ನೊಂದಿಹೆನು ನಾನು

ದೇಹ ಮಣ್ಣಾದರೂ ಪ್ರೀತಿ ಅಮರ ಎಂದಿಹರು
ಜೊತೆಗೂಡಿ ಬಾಳ ಪಥದಿ ಸಾಗುವೆನು ನಾನು

ಬಾನ ಹಕ್ಕಿಗಳಂತೆ ಹಾರಾಡಿ ನಲಿಯೋಣ ಬಾ
ನಿನೆಂಬ ನಶೆಯು ಹುಸಿಯಾಗಲು ಬಿಡೆನು ನಾನು

ನೋವ ನುಂಗಿ ಕಲ್ಲಾಗಿ ಕುಳಿತಿರುವೆ ನಾನಿಲ್ಲಿ
ಪ್ರೀತಿಯ ಆಸರೆ ಬಯಸಿ ನಿಂದಿಹೆನು ನಾನು

ರೋಹಿಯ ಒಲವೆಲ್ಲ ನಿನಗೆ ಧಾರೆ ಎರೆದಿರಲು
ಇನಿತು ಕಾಲವೂ ನಿನ್ನನು ಬಿಟ್ಟಿರೇನು ನಾನು.

———————————

ರೋಹಿಣಿ ಯಾದವಾಡ

Leave a Reply

Back To Top